ಚಿರತೆ ಸಿಗದೆ ಆತಂಕ, ಶೋಧ ಕಾರ್ಯಾಚರಣೆ : ಬೆಳಗಾವಿಯ 22 ಶಾಲೆಗಳಿಗೆ ರಜೆ ಘೋಷಣೆ

ಬೆಳಗಾವಿ: ಇಲ್ಲಿನ ಜಾಧವ ನಗರದಲ್ಲಿ ಚಿರತೆ ಕಾಣಿಸಿಕೊಂಡ ಬಳಿಕ ಕಳೆದ ಮೂರು ದಿನಗಳಿಂದ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಗಾಲ್ಫ್ ಮೈದಾನದ ಒಂದು ಕಿ.ಮೀ. ವ್ಯಾಪ್ತಿಯ 22 ಶಾಲೆಗಳಿಗೆ ಇಂದು, ಸೋಮವಾರ ರಜೆ ಘೋಷಿಸಲಾಗಿದೆ. ಇವುಗಳಿಗೆ ಡಿಡಿಪಿಐ ಮೌಖಿಕ ಸೂಚನೆ ಮೇರೆಗೆ ಬೆಳಗಾವಿ ನಗರ, ಗ್ರಾಮೀಣ ಬಿಇಒ … Continued

ಪ್ರವೀಣ ಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ ನೆಟ್ಟಾರ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಾವೂರು ನಿವಾಸಿ ಅಬಿದ್ (22) ಹಾಗೂ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ (28) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಇವರಿಬ್ಬರ ಬಂಧನದಿಂದ ಪ್ರವೀಣ ನೆಟ್ಟಾರ … Continued

ದಕ್ಷಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಆಗಸ್ಟ್ 14ರ ವರೆಗೆ ವಿಸ್ತರಣೆ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ನಡೆದ ಸರಣಿ ಕೊಲೆ ಹಾಗೂ ನಂತರ ಉಂಟಾದ ಪ್ರಕ್ಷುಬ್ದ ಪರಿಸ್ಥಿತಿಯ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿ ಮಾಡಲಾಗಿರುವ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ನು ಆಗಸ್ಟ್ 14ರ ವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಗುಂಪು ಸೇರುವುದು, ಸಾರ್ವಜನಿಕ … Continued

ರಾಜ್ಯದಲ್ಲಿ ಭಾನುವಾರ 1,837 ಮಂದಿಗೆ ಕೊರೊನಾ ಸೋಂಕು, 4 ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು, ಭಾನುವಾರ ಹೊಸದಾಗಿ 1,837 ಕೊರೊನಾ ಸೋಂಕು ವರದಿಯಾಗಿದ್ದು, ಸೋಂಕಿಗೆ 4 ಮಂದಿ ಸಾವಿಗೀಡಾಗಿದ್ದಾರೆ. ನಿನ್ನೆ, ಶನಿವಾರ 1,694 ಪ್ರಕರಣಗಳಿಗೆ ಹೋಲಿಸಿದರೆ ಇಂದು, ಭಾನುವಾರ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಇದೇವೇಳೆ ಇಂದು ರಾಜ್ಯದಲ್ಲಿ 1,290 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ರೇಟ್ ಶೇ. 6.24ಕ್ಕೆ … Continued

ಹುಬ್ಬಳ್ಳಿ: ದರ್ಗಾದ ಗೋಡೆಗೆ ಗುದ್ದಿದ ಕಾರ್, ಒಂದೇ ಕುಟುಂಬದ ಮೂವರ ಸಾವು

ಹುಬ್ಬಳ್ಳಿ: ಬೆಂಗಳೂರು-ಹುಬ್ಬಳ್ಳಿ ‘ರಾಷ್ಟ್ರೀಯ ಹೆದ್ದಾರಿ ಮೇಲೆ ಕುಂದಗೋಳ ತಾಲೂಕಿನ ಜಗಳೂರ ಗ್ರಾಮದ ಸಮೀಪ ರಸ್ತೆಯ ಪಕ್ಕದಲ್ಲಿರುವ ಹಜರತ್ ಸಯ್ಯದ್ ಪತೇಶಾವಲಿ ದರ್ಗಾಗೆ ಕಾರ್ ಗುದ್ದಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿ, ಓರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಕಾರಿನಲ್ಲಿದ್ದ ಹನಮಂತಪ್ಪ ಬೇವಿನಕಟ್ಟಿ ( 76 ವರ್ಷ), ಪತ್ನಿ ರೇಣುಕಾ (75 ವರ್ಷ) ಅಳಿಯ ರವೀಂದ್ರ … Continued

ಬಸವರಾಜ ಹೊರಟ್ಟಿ ಕಾರು-ಬೈಕ್‌ ಡಿಕ್ಕಿ: ದ್ವಿಚಕ್ರ ವಾಹನ ಸವಾರನಿಗೆ ಗಾಯ

ಹುಬ್ಬಳ್ಳಿ:ನಗರದ ಬಿವಿಬಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ಕಾರು ಅಪಘಾತಕ್ಕೀಡಾಗಿದೆ. ಹೊರಟ್ಟಿಯವರ ಕಾರು ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಬೈಕ್‌ ಸವಾರ ಕೆಂಚಪ್ಪ ಗೂಡಣ್ಣನವರ ಎಂಬವರಿಗೆ … Continued

ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದ ಬೋಟ್ ಮುಳುಗಡೆ

ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದ ಬೋಟ್ ಮುಳುಗಡೆಗೊಂಡ ಘಟನೆ ಇಂದು, ಭಾನುವಾರ ನಡೆದಿದೆ. ಮಂಗಳೂರಿನಿಂದ ಆಳಸಮುದ್ರದಲ್ಲಿ ಮೀನುಗಾರಿಕೆಗೆ 11 ಜನ ಮೀನುಗಾರನ್ನು ಹೊತ್ತೊಯ್ದ ಜೈ ಶ್ರೀರಾಮ ಎನ್ನುವ ಬೋಟ್ ಸಮುದ್ರದ ಮಧ್ಯೆ ಮುಳುಗಡೆಯಾಗಿದೆ. ಪಣಂಬೂರು ಕರಾವಳಿಯಿಂದ 90 ನಾಟಿಕಲ್ ಮೈಲು ದೂರದಲ್ಲಿ ಬೋಟ್‌ ಮುಳುಗಡೆಗೊಂಡಿದ್ದು, ಹಡಗಿನಲ್ಲಿ 11 ಮಂದಿ ಮೀನುಗಾರರರಿದ್ದರು. ಬೋಟ್​​ನಲ್ಲಿದ್ದ 11 ಜನರು … Continued

ಪರೀಕ್ಷೆಯಲ್ಲಿ ಅಕ್ರಮ ಹಾವಳಿ ತಡೆಗೆ ಪರೀಕ್ಷಾರ್ಥಿಗಳ ಶರ್ಟಿನ ಉದ್ದ ತೋಳಿಗೆ ಬಿತ್ತು ಕತ್ತರಿ…!

ಕೊಪ್ಪಳ: ರಾಜ್ಯಾದ್ಯಂತ ಇಂದು, ಭಾನುವಾರ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಉದ್ದ ತೋಳಿನ ಅಂಗಿ ಹಾಕಿಕೊಂಡು ಬಂದಿದ್ದ ಅಭ್ಯರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿ ತೋಳು ಕತ್ತರಿಸುವ ಮೂಲಕ ಶಾಕ್ ನೀಡಿದ್ದಾರೆ. . ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ ಇತರ ನೇಮಕಾತಿ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ನಿಯಮ ವಿಧಿಸಲಾಗಿದೆ. ಇಂದು, ಭಾನುವಾರ ನಡೆಯುತ್ತಿರುವ ಪರೀಕ್ಷೆಗೆ ಉದ್ದ ತೋಳಿನ … Continued

ಬಳ್ಳಾರಿ:ಅಂಕನಾಳದಲ್ಲಿ ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಬಳ್ಳಾರಿ: ಕಲುಷಿತ ನೀರು ಸೇವನೆಯಿಂದ ಜನ ಅಸ್ವಸ್ಥಗೊಂಡ ಮತ್ತೊಂದು ಘಟನೆಯಲ್ಲಿ ಸಂಡೂರು ತಾಲೂಕಿನ ಅಂಕನಾಳದ 50ಕ್ಕೂ ಹೆಚ್ಚು ಗ್ರಾಮಸ್ಥರು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಬಳ್ಳಾರಿ ಜಿಲ್ಲೆಯಲ್ಲಿ ಹದಿನೈದು ದಿನಗಳ ಅಂತರದಲ್ಲಿ ನಡೆದ ಎರಡನೇ ಘಟನೆಯಾಗಿದೆ. ಅಂಕನಾಳದ ಜನರು ಕಲುಷಿತ ನೀರನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ ಎಂದು ಲ್ಯಾಬ್ ವರದಿಗಳು ತಿಳಿಸಿವೆ. ಆಡಳಿತವು ಈಗ ಅಶುದ್ಧ ನೀರಿನ … Continued

ಮಳೆಗೆ ಕೊಟ್ಟಿಗೆ ಗೋಡೆ ಕುಸಿತ: ಶೆಡ್‌ನಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸಾವು

ರಾಮನಗರ: ನಿರಂತರ ಮಳೆಗೆ ಕೊಟ್ಟಿಗೆ ಗೋಡೆ ಕುಸಿದಿದ್ದು, ಪಕ್ಕದಲ್ಲೇ ಮಲಗಿಕೊಂಡಿದ್ದ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತ ಮಕ್ಕಳನ್ನು ಪರ್ಭಿನ್(4), ಇಷಿಕಾ(3) ಎಂದು ಗುರುತಿಸಲಾಗಿದೆ. ಗೋಡೆ ಕುಸಿದ ಪರಿಣಾಮ ಶೆಡ್‍ನಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸಾವಿಗೀಡಾಗಿದ್ದು, ಮತ್ತಿಬ್ಬರಿಗೆ ಗಾಯವಾಗಿದೆ. ನೇಪಾಳ ಮೂಲದ … Continued