ಬಾಗಲಕೋಟೆ : ಉರುಸ್​ನಲ್ಲಿ ಪ್ರಸಾದ ಸೇವಿಸಿದ 48 ಮಂದಿ ಅಸ್ವಸ್ಥ

ಬಾಗಲಕೋಟೆ: ತಾಲೂಕಿನ ಡೋಮನಾಳ ಗ್ರಾಮದಲ್ಲಿ ಉರುಸು ಕಾರ್ಯಕ್ರಮದಲ್ಲಿ ಪ್ರಸಾದ ಸೇವನೆಯಿಂದ ಸುಮಾರು 48 ಜನ ಅಸ್ವಸ್ಥಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಡೋಮನಾಳ ಗ್ರಾಮದಲ್ಲಿ ಮಂಗಳವಾರ ನಡೆದ ಉರುಸು ನಿಮಿತ್ಯ ಸಾಮೂಹಿಕವಾಗಿ ಪ್ರಸಾದ ಸೇವೆ ಮಾಡಿದ್ದರು. ಸಂಜೆ ವೇಳೆ ಗ್ರಾಮಸ್ಥರಲ್ಲಿ ವಾಂತಿ ಭೇದಿ ಉಂಟಾದ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಯಿಂದ 5 ಅಂಬುಲೆನ್ಸ್ ಕಳುಹಿಸಿ ಅಸ್ವಸ್ಥಗೊಂಡ 80 … Continued

ಬೆಳಗಾವಿ: ಉದ್ಯಮಿ ಪತಿಯ ಕೊಲೆಗೆ 10 ಲಕ್ಷ ರೂ.ಸುಪಾರಿ ನೀಡಿದ್ದ ಪತ್ನಿ…! ಮೂವರ ಬಂಧನ

ಬೆಳಗಾವಿ: ಮಾರ್ಚ್​ 15ರಂದು ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ನಡೆದಿದ್ದ ಉದ್ಯಮಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಉದ್ಯಮಿ ಕೊಲೆಗೆ ಉದ್ಯಮಿಯ ಎರಡನೇ ಪತ್ನಿ ಸುಪಾರಿ ಕೊಟ್ಟಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಉದ್ಯಮದ ಪಾಲುದಾರರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯಮಿ ರಾಜು ದೊಡ್ಡಬೊಮ್ಮನವರ (41) ಅವರನ್ನು ಮಂಡೋಳಿ ರಸ್ತಯಲ್ಲಿ … Continued

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ; ಸಚಿವ ಸೋಮಣ್ಣಗೆ ಜನಪ್ರತಿನಿಧಿಗಳ ಕೋರ್ಟ್ ಸಮನ್ಸ್

ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಸಲ್ಲಿಸಿರುವ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದ್ದು, ಏಪ್ರಿಲ್‌ 16ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಬೆಂಗಳೂರಿನ ಮೂಡಲಪಾಳ್ಯದ ರಾಮಕೃಷ್ಣ ಅವರು ಸಲ್ಲಿಸಿದ್ದ ಖಾಸಗಿ … Continued

ಕೆರೆಯಲ್ಲಿ ಮೀನು ಹಿಡಿಯಲು ಹೋದ ಬಾಲಕರಿಬ್ಬರು ನೀರುಪಾಲು

ಯಾದಗಿರಿ: ಕೆರೆಯಲ್ಲಿ ಮೀನು ಹಿಡಿಯಲು ಹೋದ ವಿದ್ಯಾರ್ಥಿಗಳಿಬ್ಬರು ನೀರು ಪಾಲಾದ ಘಟನೆ ಯಾದಗಿರಿ ನಗರದಲ್ಲಿ ಮಂಗಳವಾರ ನಡೆದ ಬಗ್ಗೆ ವರದಿಯಾಗಿದೆ. ಮೃತ ಬಾಲಕರನ್ನು ನಕುಲ್(12) ಮತ್ತು ನಿಹಾಲ್ ಸಿಂಗ್​(12) ಎಂದು ಗುರುತಿಸಲಾಗಿದೆ. ಯಾದಗಿರಿ ನಗರದ ಅಮರ್ ಲೇಔಟ್​ನಲ್ಲಿ ನಾಲ್ವರು ಬಾಲಕರು ಕಟ್ಟೆ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಈ ವೇಳೆ ನಕುಲ್​ … Continued

ಬಸ್‌-ಕಾರಿನ​ ನಡುವೆ ಭೀಕರ ಅಪಘಾತ: ಐವರು ವಿದ್ಯಾರ್ಥಿಗಳು ಸಾವು

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿ ಸಮೀಪ ಹಾಸನ – ಬೇಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಆಲ್ಟೊ ಕಾರು ನಡುವೆ ಡಿಕ್ಕಿ ಸಂಭವಿಸಿ ಐವರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತಪರನ್ನು ವಿದ್ಯಾರ್ಥಿಗಳಾದ ಅಕ್ಮಲ್(18), ಜಿಲಾನಿ(19), ತೋಹಿದ್(18), ಕೈಫ್ (18) ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ರಿಹಾನ್ (19) ಆಸ್ಪತ್ರೆಗೆ ಸಾಗಿಸುವಾಗ … Continued

ಶ್ರೀಪಾದ ಭಟ್ಟರಿಗೆ ಅಭಿನಯ ಭಾರತಿ ರಂಗ ಪ್ರಶಸ್ತಿ

ಹುಬ್ಬಳ್ಳಿ: ನಾಡಿನ ಹೆಸರಾಂತ ರಂಗಕರ್ಮಿ, ನಿರ್ದೇಶಕ ಡಾ. ಶ್ರೀಪಾದ ಭಟ್ಟ ಅವರಿಗೆ ಪ್ರಸಕ್ತ ಸಾಲಿನ  ಧಾರವಾಡದ ಅಭಿನಯ ಭಾರತಿ ರಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಧಾರವಾಡ ರಂಗಾಯಣದ ಸಹಯೋಗದೊಂದಿಗೆ ಸಂಸ್ಕೃತಿ ಸಮುಚ್ಚಯ ಭವನದಲ್ಲಿ ಮಾರ್ಚ್ 27ರಂದು ಬೆಳಿಗ್ಗೆ10:30 ಗಂಟೆಗೆ ಪ್ರದಾನ ಮಾಡಲಾಗುತ್ತದೆ. ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಶ್ರೀಪಾದ‌ ಭಟ್ಟರು ನಂತರ ಸ್ವಯಂ ನಿವೃತ್ತಿ ಪಡೆದು ಪೂರ್ಣಾವಧಿ … Continued

ಎಸಿಬಿ ದಾಳಿ ವೇಳೆ ಬಿಡಿಎ ಮಧ್ಯವರ್ತಿ ಮನೆಯಲ್ಲಿ 4.5 ಕೆಜಿ ಚಿನ್ನ ಪತ್ತೆ..!

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಲಂಚ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಆರೋಪದ ಮೇಲೆ ಒಂಬತ್ತು ಮಂದಿ ಖಾಸಗಿ ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶೋಧ ನಡೆಸುತ್ತಿದೆ. ಮೋಹನ್ ವಿರುದ್ಧ ಭ್ರಷ್ಟಾಚಾರ, ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಆರ್.ಟಿ.ನಗರದ ಮನೋರಾಯನಪಾಳ್ಯದಲ್ಲಿರುವ ಅವರ ಮನೆ … Continued

ಪುನೀತ ರಾಜಕುಮಾರಗೆ ಮೈಸೂರು ವಿವಿಯಿಂದ ಮರಣೋತ್ತರ ಡಾಕ್ಟರೇಟ್ ಪ್ರದಾನ

ಮೈಸೂರು ವಿ.ವಿ ಘಟಿಕೋತ್ಸವ: ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ ಮೈಸೂರು: ವಿಜ್ಞಾನಿ ‌ಡಾ.ವಿ.ಕೆ.ಆತ್ರೆ, ನಟ ಪುನೀತ್‌ ರಾಜ್‌ಕುಮಾರ್‌ (ಮರಣೋತ್ತರ) ಹಾಗೂ ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿ ಅವರಿಗೆ ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಮಂಗಳವಾರ ಕ್ರಾಫರ್ಡ್‌ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಪ್ರದಾನ ಮಾಡಿದರು. ಪುನೀತ್‌ ಪರವಾಗಿ … Continued

ಮಾತು ಬಾರದ, ಕಿವಿ ಕೇಳದ ಯುವಕನ ವರಿಸಿದ ಪದವೀಧರ ಯುವತಿ

ನರಗುಂದ (ಗದಗ): ಕಂಕಣ ಬಲ ಕೂಡಿಬಂದರೆ ಯಾರೂ ತಡೆಯಲು ಸಾಧ್ಯವಿಲ್ಲ ಎಂಬಂತೆ ಪಟ್ಟಣದಲ್ಲಿ ಸೋಮವಾರ ಮಾತು ಬಾರದ, ಕಿವಿಯೂ ಕೇಳದ ಯುವಕನನ್ನು ಪದವೀಧರ ಯುವತಿಯೊಬ್ಬರು ವರಿಸಿದ್ದಾರೆ. ನರಗುಂದ ಪಟ್ಟಣದ ದಂಡಾಪುರ ಬಡಾವಣೆಯ ಲಾಲಮಹಮ್ಮದ್, ಆರೀಫಾಭಾನು ದಂಪತಿ ಪುತ್ರ ಮಹಮ್ಮದ್ ಸಾಧಿಕ್ ಹಾಗೂ ಗದುಗಿನ ಗಂಗಿಮಡಿ ಬಡಾವಣೆಯ ಮಲೀಕಸಾಬ್-ಮಮತಾಜ್‌ಬೇಗಂ ಪಲ್ಲೇದ ದಂಪತಿ ಪುತ್ರಿ ಸುಮಯ್ಯಾ ಸುಮಯ್ಯಾ ಭಾನುವಾರ … Continued

ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ: ಕರಾವಳಿ, ಮಲೆನಾಡಲ್ಲಿ ಹೈ ಅಲರ್ಟ್‌..!

ಬೆಂಗಳೂರು: ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾರ್ಚ್‌ 24ರ ವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ … Continued