ಕರ್ನಾಟಕದಲ್ಲಿ ಇಂದು ಓಮಿಕ್ರಾನ್‌ ಸೋಂಕಿನ 12 ಹೊಸ ಪ್ರಕರಣಗಳು ದೃಢ: ರಾಜ್ಯದಲ್ಲಿ ಒಟ್ಟು ಸಂಖ್ಯೆ 31ಕ್ಕೆ ಏರಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಸೋಂಕು ಇಂದು, ಗುರುವಾರ ಒಂದೇ ದಿನ 12 ಜನರಿಗೆ ದೃಢಪಟ್ಟ ವರದಿಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 20 ವರ್ಷ ಯುವತಿ (ಬೆಂಗಳೂರು), 56 ವರ್ಷದ ಪುರುಷ, (ಬೆಂಗಳೂರು) 54 ವರ್ಷ ಮಹಿಳೆ … Continued

ಮೊಬೈಲ್​ ಕದ್ದ ಆರೋಪ: ಮಂಗಳೂರಲ್ಲಿ ಮೀನುಗಾರನ ತಲೆಕೆಳಗು ಮಾಡಿ ತೂಗು ಹಾಕಿ ಅಮಾನವೀಯತೆ !

ಮಂಗಳೂರು: ಮೊಬೈಲ್ ಕಳ್ಳತನ ಮಾಡಿರುವ ಆರೋಪದಡಿ ಮೀನುಗಾರನೋರ್ವನನ್ನು ತಲೆಕೆಳಗೆ ಮಾಡಿ ನೇತು ಹಾಕಿ ಶಿಕ್ಷೆ ನೀಡಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಲ ಶೀನು ಎಂಬ ಮೀನುಗಾರನನ್ನೇ ಈ ರೀತಿ ಅಮಾನವೀಯವಾಗಿ ತಲೆಕೆಳಗು ಮಾಡಿ ನೇತುಹಾಕಲಾಗಿದೆ. ವೈಲ್​ ಶೀನು ಆಂಧ್ರಪ್ರದೇಶದ ಮೂಲದ ಮೀನುಗಾರನಾಗಿದ್ದು, ಮಂಗಳೂರಿನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಮಂಗಳೂರಿನ ಧಕ್ಕೆಯಲ್ಲಿ ಮೀನುಗಾರರೊಬ್ಬರ … Continued

ಧಗಧಗನೆ ಹೊತ್ತಿ ಉರಿದ ಶಾಲಾ ಬಸ್

ಮೈಸೂರು: ಶಾಲಾ ಬಸ್ ಏಕಾಏಕಿ ಹೊತ್ತಿ ಉರಿದ ದುರ್ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಖಾಸಗಿ ಶಾಲಾ ಆವರಣದಲ್ಲಿ ನಡೆದಿದೆ. ಒಂದು ಬಸ್ ಬೆಂಕಿಗಾಹುತಿ ಆಗಿದ್ದು, ಕೆಲ ಬಸ್‌ಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಮಕ್ಕಳನ್ನು ‌ಕೆಳಗಿಳಿಸಿ ಶಾಲಾ ಆವರಣದಲ್ಲಿ ಬಸ್ ನಿಲ್ಲಿಸಲಾಗಿತ್ತು. ಈ ಕಾರಣದಿಂದ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ … Continued

ಕರ್ನಾಟಕದಲ್ಲಿ ಎಂಇಎಸ್​​ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ಡಿ. 31ರಂದು ಕರ್ನಾಟಕ ಬಂದ್​

ಬೆಂಗಳೂರು: ಎಂಇಎಸ್- ಶಿವಸೇನೆಯ ಪುಂಡಾಟಿಕೆಯ ವಿರುದ್ಧ ಕನ್ನಡಪರ ಸಂಘಟನೆಗಳು ಗುಡುಗಿದ್ದು, ಇದೇ ಡಿಸೆಂಬರ್ 31 ರಂದು ಕರ್ನಾಟಕ ಬಂದ್​​​ಗೆ ಕರೆ ನೀಡಿವೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಬೆಳಗಾವಿ ರಾಜಕಾರಣಿಗಳು ಮರಾಠಿಗರ ಗುಲಾಮರಾಗಿದ್ದಾರೆ. ಬೆಳಗಾವಿ ಎಲ್ಲ ಸರ್ಕಾರಗಳು ಇವರನ್ನು ಪೋಷಿಸತ್ತಾ ಬೆಳೆಸುತ್ತಾ ಬಂದಿದ್ದಾರೆ ಎಂದು ಕಿಡಿಕಾರಿದರು. ಡಿ. 31ರಂದು ಕರ್ನಾಟಕ ಬಂದ್​ ಕರೆಬೆಳಗ್ಗೆ … Continued

19 ಲಕ್ಷ ಮಂದಿ ಇ-ಕ್ರಮ ಪೋರ್ಟಲ್ ವ್ಯಾಪ್ತಿಗೆ : ಸಚಿವ ಹೆಬ್ಬಾರ

ಬೆಳಗಾವಿ: ಇ-ಕ್ರಮ ಪೋರ್ಟಲ್ ವ್ಯಾಪ್ತಿಗೆ 19 ಲಕ್ಷ ಜನರನ್ನು ತರಲಾಗಿದೆ ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವರ್ಷದ ಒಟ್ಟು ಉತ್ಪನ್ನದಲ್ಲಿ ಶೇ.10ರಷ್ಟನ್ನು ಕಾರ್ಮಿಕರ ಕಲ್ಯಾಣಕ್ಕೆ ನೀಡಬಹುದಾಗಿದೆ ಎಂದು ತಿಳಿಸಿದರು. ಕಾರ್ಮಿಕ ಇಲಾಖೆಯಲ್ಲಿ ಎಲ್ಲ ಕಾರ್ಮಿಕರನ್ನು ನೋಂದಣಿ … Continued

ಡ್ರಾಯಿಂಗ್ ಗ್ರೇಡ್’ ಪರೀಕ್ಷೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಬೆಂಗಳೂರು : 2022ರ ಜನವರಿ ತಿಂಗಳಿನಲ್ಲಿ ನಡೆಯಲಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಇತರೆ ಪರೀಕ್ಷೆಗಳ ವಿಭಾಗದಿಂದ ಜನವರಿ ತಿಂಗಳಿನಲ್ಲಿ ನಡೆಯುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ … Continued

ಅದ್ಧೂರಿ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಬ್ರೇಕ್ : ಹೊಸ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು : ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅದ್ಧೂರಿ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಬಂಧಿಸಿದಂತೆ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಅದ್ಧೂರಿ ನೂತನ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಸಾರ್ವಜನಿಕ … Continued

ಭಾರತದ ಪ್ರಕೃತಿ ಕೃಷಿಗೆ ಪೂರಕವಾಗಿದ್ದು ಅದಕ್ಕೇ ಆದ್ಯತೆ ನೀಡಬೇಕಿದೆ: ಗೋವಿಂದಾಚಾರ್ಯ

ಯಾದಗಿರಿ: ಭಾರತ ಸಂಪನ್ಮೂಲ ಭರಿತ ದೇಶವಾಗಿದ್ದು, ಅದನ್ನು ಸದ್ಬಳಕೆ ಮಾಡಬೇಕಾಗಿದೆ ಎಂದು ಖ್ಯಾತ ಚಿಂತಕ ಹಾಗೂ ಭಾರತ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್. ಗೋವಿಂದಾಚಾರ್ಯ ಹೇಳಿದರು. ಲಕ್ಷೀ ನಗರದ ಶ್ರೀ ಲಕ್ಷೀ ಮಾರುತಿ ದೇವಸ್ಥಾನದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಪ್ರಕೃತಿ ಕೇಂದ್ರಿತ ವಿಕಾಸ ಚಿಂತನಾ … Continued

ದಿ. ಆರ್.ಎಸ್ ಹುಕ್ಕೇರಿಕರ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಧಾರವಾಡ: ಕಾಲಕಾಲಕ್ಕೆ ಹಲವಾರು ಪ್ರಾತಸ್ಮರಣಿಯರು ಜನ್ಮತಾಳುತ್ತಾರೆ. ಅವರ ಆಗಮನದಿಂದ ದೇಶ ರಾಜ್ಯ ಸುಭಿಕ್ಷೆ ಕಾಣುತ್ತದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಜನಿಸಿದ ರಾಮರಾವ್ ಹುಕ್ಕೇರಿಕರವರು ಅಂತಹ ಮಹನೀಯರಲ್ಲಿ ಒಬ್ಬರು. ಅವರು ಅಂದು ಸ್ಥಾಪಿಸಿದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಇಂದು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದದಿಂದ ಪ್ರತಿವರ್ಷ ಸಾವಿರಾರು ಮಕ್ಕಳ ವಿದ್ಯಾರ್ಜನೆಗೆ ದಾರಿಯಾಗಿದೆ ಎಂದು ಜೆ.ಎಸ್.ಎಸ್ ಸಂಸ್ಥೆ … Continued

ಸಿದ್ದಾಪುರ: ಶೇಲೂರಿನಲ್ಲಿ ಕರಡಿ ದಾಳಿಯಿಂದ ವ್ಯಕ್ತಿಗೆ ಗಾಯ

ಸಿದ್ದಾಪುರ; ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಶೇಲೂರಿನಲ್ಲಿ ಮಂಗಳವಾರ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ಮಾಡಿದೆ. ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಶೇಲೂರು ಗ್ರಾಮದ ದತ್ತಾತ್ರೇಯ ನಾಗಾ ನಾಯ್ಕ(೫೫) ಕರಡಿ ದಾಳಿಗೆ ಒಳಗಾದವರಾಗಿದ್ದು … Continued