ಮತಾಂತರ ನಿಷೇಧ ಕಾಯ್ದೆಗೆ ಸಚಿವ ಸಂಪುಟ ಅನುಮೋದನೆ, ನಾಳೆಯೇ ಅಧಿವೇಶನದಲ್ಲಿ ಮಂಡನೆ ಬಹುತೇಕ ಖಚಿತ

ಬೆಳಗಾವಿ : ಮತಾಂತರ ನಿಷೇಧ ಮಸೂದೆಗೆ ಕರ್ನಾಟಕ ಸರಕಾರದ ಕ್ಯಾಬಿನೆಟ್ ಸೋಮವಾರ ಅನುಮೋದನೆ ನೀಡಿದ್ದು, ಡಿಸೆಂಬರ್ 21 ರಂದು ವಿಧಾನಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಮತಾಂತರ ನಿಷೇಧ ಕಾಯ್ದೆ … Continued

‌ಪಾಕಿಸ್ತಾನಕ್ಕೆ ಸೇರಿದ ದೋಣಿಯಲ್ಲಿದ್ದ 400 ಕೋಟಿ ರೂ.ಗಳ ಮೌಲ್ಯದ ಹೆರಾಯಿನ್ ವಶಕ್ಕೆ

‌ಅಹಮದಾಬಾದ್:ದೇಶದೊಳಗೆ ಸುಮಾರು 400 ಕೋಟಿ ರೂಪಾಯಿ ಮೌಲ್ಯದ 77 ಕೆಜಿ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ ಪಾಕ್ ಮೂಲದ ದೋಣಿ ಹಾಗು ಅದರಲ್ಲಿದ್ದ 6 ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸï) ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಗುಜರಾತ್ ಸಮುದ್ರಲ್ಲಿ ಕೋಸ್ಟ್ ಗಾರ್ಡ್ ರಾಜ್ಯ ಎಟಿಎಸ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ … Continued

ವಿಧಾನಸಭೆಯಲ್ಲಿ ವಿಪಕ್ಷಗಳ ಕೋಲಾಹಲ, ಗದ್ದಲ

ಬೆಳಗಾವಿ: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರ ಭೂ ಹಗರಣದ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರು ಇಂದು, ಸೋಮವಾರ ಸಹ ವಿಧಾನಸಭೆಯಲ್ಲಿ ಧರಣಿ ಮುಂದುವರೆಸಿದರು. ಜೆಡಿಎಸ್ ಸದಸ್ಯರು ಎಂಇಎಸ್‌ನ ಪುಂಡಾಟಿಕೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತಾದರೂ ಈ ಗದ್ದಲದ ನಡುವೆಯೇ ಸಭಾಧ್ಯಕ್ಷರು … Continued

ಮಠದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆ

ನೆಲಮಂಗಲ: ಮಠದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಶವಪತ್ತೆಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಸೋಲೂರು ಬಳಿಯ ಸಿದ್ದಗಂಗ ಮಠದ ಶಾಖಾ ಮಠ ಚಿಲುಮೆ ಮಠದ ಶ್ರೀಗಳ ಮೃತದೇಹ ನೇಣುಬಿಗಿದ ಸ್ಥತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಶ್ರೀ ಬಸವಲಿಂಗ ಸ್ವಾಮೀಜಿ(59) ಮೃತ ಸ್ವಾಮೀಜಿ. 1982ರಲ್ಲಿ ಸ್ವಾಮೀಜಿ ಸನ್ಯಾಸ ಸ್ವೀಕರಿಸಿದ್ದರು. … Continued

ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿದ ಡ್ರೈವರ್- ಅವಳಿ ಮಕ್ಕಳು, ತಾಯಿ ದುರ್ಮರಣ

ಹಾಸನ: ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಅವಳಿ ಮಕ್ಕಳು, ತಾಯಿ ದಾರುಣವಾಗಿ ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ತಂದೆ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತ ಅವಳಿ ಪುಟಾಣಿಗಳನ್ನು ಪ್ರಣತಿ (3) ಹಾಗೂ ಪ್ರಣವ್(3) ಎಂದು ಗುರುತಿಸಲಾಗಿದ್ದು, ತಾಯಿಯನ್ನು ಜ್ಯೋತಿಎಂದು ಗುರುತಿಸಲಾಗಿದೆ. ತಂದೆ ಶಿವಾನಂದ್ … Continued

ಕರ್ನಾಟಕದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ಸೋಂಕು ದೃಢ : ರಾಜ್ಯದಲ್ಲಿ 19ಕ್ಕೆ ಏರಿದ ಸೋಂಕಿತರ ಸಂಖ್ಯೆ

ಬೆಂಗಳೂರು : ರಾಜ್ಯವನ್ನು ನಿಧಾನವಾಗಿ ಓಮಿಕ್ರಾನ್ ಸೋಂಕು ಹೆಚ್ಚುತ್ತಿದೆ. ಇಂದು, ಸೋಮವಾರ ಮತ್ತೆ ಐವರಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ. ಮೊನ್ನೆಯಷ್ಟೇ 5 ಮಂದಿಗೆ ಸೋಂಕು ಹರಡಿತ್ತು, ಇದೀಗ ಧಾರವಾಡ, ಉಡುಪಿ, ಭದ್ರಾವತಿ, ಮಂಗಳೂರಿನಲ್ಲಿ ಸೋಂಕು ದೃಢಪಟ್ಟಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ ಅವರು ಟ್ವೀಟ್‌ ಮಾಡಿದ್ದಾರೆ. … Continued

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ:ಮೂವರ ಬಂಧನ

ಬೆಳಗಾವಿ :ಅನಗೋಳ ಭಕ್ತ ಕನಕದಾಸ ಕಾಲೊನಿ ಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಮಧ್ಯರಾತ್ರಿ ನಂತರ ಅನಗೋಳ ಭಕ್ತ ಕನಕದಾಸ ಕಾಲೊನಿಯಲ್ಲಿ ಇಡಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಹಾನಿಗೊಳಿಸಿ ಭಗ್ನಗೊಳಿಸಲಾಗಿತ್ತು. ಇದನ್ನು ಖಂಡಿಸಿ ರಾಜ್ಯಾದ್ಯಂತ ಸಂಗೊಳ್ಳಿ ರಾಯಣ್ಣ ಭಕ್ತರು ಹಾಗೂ ಕನ್ನಡಾಭಿಮಾನಿಗಳು … Continued

ಜೀವಂತ ಇರುವವರನ್ನು ಮಾತನಾಡಿಸಿ…ನಾನು ನಾಲ್ಕು ದಿನಗಳ‌ ಹಿಂದೆಯೇ ಸತ್ತು ಹೋಗಿದ್ದೇನೆ: ರಮೇಶಕುಮಾರ್

ಬೆಳಗಾವಿ: ನಾನು‌ ಈಗ ಜೀವಂತ ಇಲ್ಲ, ನಾಲ್ಕು ದಿನಗಳ‌ ಹಿಂದೆಯೇ ಸತ್ತು ಹೋಗಿದ್ದೇನೆ. ನೀವು ಜೀವಂತ ಇರುವವರನ್ನು ಮಾತನಾಡಿಸಿ” ಎಂದು ಎಂಇಎಸ್ ಪುಂಡಾಟಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಶಾಸಕ ರಮೇಶಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸದೆ ಕೈ ಮುಗಿದ ಅವರು ಅವರು, “ನೀವು ಜೀವಂತ ಇರುವವರನ್ನು ಮಾತನಾಡಿಸಿ, ನಾನು‌ ಜೀವಂತ … Continued

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಅಶೋಕ್‌ ಹಾರನಹಳ್ಳಿ ಆಯ್ಕೆ

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಅಶೋಕ್‌ ಹಾರನಹಳ್ಳಿ ಆಯ್ಕೆಯಾಗಿದ್ದಾರೆ. ಅಶೋಕ ಹಾರನಹಳ್ಳಿ ಅವರು 455 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶೋಕ್‌ ಹಾರನಹಳ್ಳಿ, ಎಸ್‌. ರಘುನಾಥ್ ಮತ್ತು ಆರ್‌. ಲಕ್ಷ್ಮೀಕಾಂತ್ ಸ್ಪರ್ಧಿಸಿದ್ದರು. ಅಶೋಕ್‌ ಹಾರನಹಳ್ಳಿ 4,424 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿಗಳಾದ ಎಸ್‌. ರಘುನಾಥ್ 3,969 ಮತಗಳು … Continued

ಹುಬ್ಬಳ್ಳಿ: ಚಲಿಸುವ ರೈಲಿನಿಂದ ಇಳಿಯುವಾಗ ಬಿದ್ದು ಬಿಬಿಎಂಪಿ ಎಂಜಿನಿಯರ್ ಸಾವು

ಹುಬ್ಬಳ್ಳಿ: ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಬಿದ್ದು, ಬಿಬಿಎಂಪಿ ಇಂಜಿನಿಯರ್ ಸಾವಿಗೀಡಾದ ದುರ್ಘಟನೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಮೃತ ದುರ್ದೈವಿಯನ್ನು ರಂಗರಾಜು ಎಸ್.ಎ (59) ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ಹೋಗಬೇಕಾದ ರೈಲು ಹತ್ತುವ ಬದಲು ಅವರು ಬೆಳಗಾವಿಗೆ ಹೋಗುವ ರೈಲು ಹತ್ತಿದ್ದರು. ತಾನು ಬೇರೆ ರೈಲು ಹತ್ತಿರುವುದು ಗೊತ್ತಾಗುತ್ತಿದ್ದಂತೆಯೇ ರಂಗರಾಜು ಅವರು … Continued