ವೇತನ ಮಟ್ಟ-ರ್‍ಯಾಂಡ್‌ಸ್ಟಡ್‌ನ‌ ಸ್ಯಾಲರಿ ಟ್ರೆಂಡ್‌ ವರದಿ: ಕಿರಿಯ-ಮಧ್ಯಮ ಮಟ್ಟದ ವೇತನ ಶ್ರೇಣಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ

2021ರ ರ್‍ಯಾಂಡ್‌ಸ್ಟಡ್‌ನ‌ (Randstad) ಸ್ಯಾಲರಿ ಟ್ರೆಂಡ್‌ ವರದಿಯ ಆವೃತ್ತಿಯು ಭಾರತದ ಐಟಿ ರಾಜಧಾನಿ ಬೆಂಗಳೂರು ಟೈರ್‌-I ನಗರಗಳಲ್ಲಿ ಜೂನಿಯರ್ ಮತ್ತು ಮಧ್ಯಮ ಹಂತದ ವೇತನ ಶ್ರೇಣಿಗಳಲ್ಲಿ ಉದ್ಯೋಗ ಮಟ್ಟದ ಶ್ರೇಣಿಯಲ್ಲಿ ಅತಿ ಹೆಚ್ಚು ಸಂಬಳ ನೀಡುವುದರಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಹೇಳಿದೆ. ಆದಾಗ್ಯೂ, ಸೀನಿಯರ್‌ ಮಟ್ಟದಲ್ಲಿ ಅತಿ ಹೆಚ್ಚು ವೇತನ ನೀಡುವ ನಗರವೆಂದರೆ ಮುಂಬೈ ಎಂದು … Continued

ಬುಲ್ಲಿ ಬಾಯಿ’ ಆ್ಯಪ್ ಪ್ರಕರಣ: ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧಿಸಿದ ಮುಂಬೈ ಪೊಲೀಸರು:ವರದಿ

ಮುಂಬೈ: ‘ಬುಲ್ಲಿ ಬಾಯಿ’ ಅಪ್ಲಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಸೈಬರ್ ಸೆಲ್ ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸೋಮವಾರ ಬಂಧಿಸಿದೆ‌ ಎಂದು ಎನ್‌ಡಿಟಿವಿ.ಕಾಮ್‌ ವರದಿ ಮಾಡಿದೆ. ಬೆಂಗಳೂರಿನಿಂದ ಬಂಧಿತನಾಗಿರುವ ಶಂಕಿತನ ವಯಸ್ಸನ್ನು ಹೊರತುಪಡಿಸಿ ಮುಂಬೈ ಪೊಲೀಸರು ಇನ್ನೂ ಆತನ ಗುರುತನ್ನು ಬಹಿರಂಗಪಡಿಸಿಲ್ಲ. ಪೊಲೀಸರು ಅಪರಿಚಿತ ಅಪರಾಧಿಗಳ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ … Continued

ಭಾರತೀಯ ಸೇನಾಪಡೆಯಿಂದ ಶ್ರೀನಗರದಲ್ಲಿ ಎಲ್​ಇಟಿ ಉನ್ನತ ಕಮಾಂಡರ್, ಪಾಕಿಸ್ತಾನಿ ಉಗ್ರನ ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಶಾಲಿಮಾರ್‌ನಲ್ಲಿ ಭದ್ರತಾ ಪಡೆಗಳು ಸೋಮವಾರ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಉಗ್ರರಲ್ಲಿ ಒಬ್ಬನಾದ ಸಲೀಂ ಪರ್ರೆ ಎಂಬಾತ ಲಷ್ಕರ್ ಇ ತೈಬಾ (ಎಲ್‌ಇಟಿ) ಕಮಾಂಡರ್ ಆಗಿದ್ದ. ಇನ್ನೊಬ್ಬ ಭಯೋತ್ಪಾದಕನನ್ನು ಪಾಕಿಸ್ತಾನದ ಹಫೀಜ್ ಅಲಿಯಾಸ್ ಹಮ್ಜಾ ಎಂದು ಗುರುತಿಸಲಾಗಿದ್ದು, ಆತ ಬಂಡಿಪೋರಾದಲ್ಲಿ ಇಬ್ಬರು ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. … Continued

ತಾಲಿಬಾನಿಗೆ ಆರ್‌ಎಸ್‌ಎಸ್ ಹೋಲಿಕೆ ಮಾಡಿ ಹೇಳಿಕೆಗೆ ತಮ್ಮ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆ ವಜಾ ಕೋರಿ ಥಾಣೆ ಕೋರ್ಟಿಗೆ ಅರ್ಜಿ ಸಲ್ಲಿಸಿದ ಅಖ್ತರ್‌

ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ನೊಂದಿಗೆ ಹೋಲಿಸಿದ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸುವಂತೆ ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಸೋಮವಾರ ಪಕ್ಕದ ಥಾಣೆ ಜಿಲ್ಲೆಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 76 ವರ್ಷ ವಯಸ್ಸಿನ ಕವಿ-ಗೀತರಚನೆಕಾರ ಅಖ್ತರ್‌ ಮೊಕದ್ದಮೆಯನ್ನು ಮಾನನಷ್ಟಕ್ಕೆ ಅರ್ಹವಲ್ಲದ” ಎಂದು ಪ್ರಕರಣ ಎಂದು ಹೇಳಿದ್ದಾರೆ. ಪ್ರಕರಣವನ್ನು ತಮ್ಮನ್ನು”ಬೆದರಿಸಲು ಮತ್ತು ತೊಂದರೆ ಕೊಡಲು … Continued

ಮಹಾರಾಷ್ಟ್ರದಲ್ಲಿ ಸೋಮವಾರ 12,160 ಹೊಸ ಕೋವಿಡ್ ಪ್ರಕರಣಗಳು ದಾಖಲು

ಮುಂಬೈ: ಸೋಮವಾರ, ಜನವರಿ 3 ರಂದು ಮಹಾರಾಷ್ಟ್ರದಲ್ಲಿ 12,160 ಹೊಸ ಕೋವಿಡ್‌-19 ಪ್ರಕರಣಗಳು ದಾಖಲಾಗಿವೆ. ಇದೇ ಸಮಯದಲ್ಲಿ 1,748 ರೋಗಿಗಳು ಬಿಡುಗಡೆಯಾಗಿದ್ದಾರೆ; 65,14,358 ಕೋವಿಡ್‌-19 ರೋಗಿಗಳು ಪೂರ್ಣ ಚೇತರಿಕೆಯ ನಂತರ ಇಂದಿನವರೆಗೆ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಇಂದು 11 ಕೋವಿಡ್ ಸಾವುಗಳು ವರದಿಯಾಗಿವೆ. ಪ್ರಕರಣದ ಸಾವಿನ ಪ್ರಮಾಣವು ರಾಜ್ಯದಲ್ಲಿ 2.1% ಆಗಿದೆ. ಮಹಾರಾಷ್ಟ್ರದಲ್ಲಿ ಈಗ ಸೋಂಕಿನ 52,422 … Continued

ಲಖಿಂಪುರ್ ಖೇರಿ ಪ್ರಕರಣ: ಆಶಿಶ್ ಮಿಶ್ರಾ ಪ್ರಧಾನ ಆರೋಪಿ, 5,000 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು

ಲಖಿಂಪುರ ಖೇರಿ (ಯುಪಿ): ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಜನರ ಮೇಲೆ ವಾಹನ ಹರಿಸಿ ಅವರ ಹತ್ಯೆಗೆ ಕಾರಣವಾದ ಲಖಿಂಪುರ್ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 5,000 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ … Continued

ತಾಯಿ ಅಂತ್ಯಕ್ರಿಯೆಗೂ ಬಾರದ ಪುತ್ರರು: ಪುತ್ರಿಯರಿಂದಲೇ ಅಂತಿಮ ವಿಧಿವಿಧಾನ

ಪುರಿ: ಒಡಿಶಾದ ಪುರಿಯಲ್ಲಿ ತಮ್ಮ ಇಬ್ಬರು ಸಹೋದರರು ಅಂತ್ಯಕ್ರಿಯೆಗೆ ಬಾರದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರು ತಮ್ಮ ತಾಯಿಯ ಮೃತದೇಹವನ್ನು 4 ಕಿಲೋಮೀಟರ್ ವರೆಗೆ ಸ್ಮಶಾನಕ್ಕೆ ಭುಜದ ಮೇಲೆ ಹೊತ್ತುಕೊಂಡು ಹೋಗಿ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾರೆ. ಗಂಡು ಮಕ್ಕಳು ಪೋಷಕರ ಅಂತ್ಯಕ್ರಿಯೆಯನ್ನು ನೆರವೇರಿಸುವುದು ಹಿಂದೂ ಧರ್ಮದಲ್ಲಿ ಸಮಾನ್ಯವಾಗಿರುವ ಸಂಪ್ರದಾಯ. ತಂದೆ ತಾಯಿಯ ಶವಕ್ಕೆ ಹೆಗಲು ನೀಡಿ ನಂತರ … Continued

ಮೊದಲನೇ ದಿನವೇ 15-18 ವರ್ಷ ವಯಸ್ಸಿನ 40 ಲಕ್ಷಕ್ಕೂ ಹೆಚ್ಚು ಮಕ್ಕಳು ಕೋವಿಡ್-19 ಲಸಿಕೆ

ನವದೆಹಲಿ: 15-18 ವರ್ಷದೊಳಗಿನ 40 ಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ ಮೊದಲ ಡೋಸ್ ಕೋವಿಡ್‌-19 ಲಸಿಕೆಯನ್ನು ವರ್ಗಕ್ಕೆ ಲಸಿಕೆ ಅಭಿಯಾನದ ಮೊದಲ ದಿನದಂದು ರಾತ್ರಿ 8 ಗಂಟೆ ವರೆಗೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಕೋವಿಡ್-19 ವಿರುದ್ಧ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಸೋಮವಾರದಿಂದ ದೇಶಾದ್ಯಂತ … Continued

2 ಸಾವಿರಕ್ಕೂ ಅಧಿಕ ಪ್ರಯಾಣಿಕರಿದ್ದ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ 66 ಮಂದಿಗೆ ಕೊರೋನಾ ಸೋಂಕು; ಪೂರ್ಣ ಹಡಗು ಐಸೋಲೇಟ್​ !

ಮುಂಬೈ: 2000ಕ್ಕೂ ಅಧಿಕ ಪ್ರಯಾಣಿಕರು ಇದ್ದ ಮುಂಬೈ-ಗೋವಾ ಐಷಾರಾಮಿ ಕ್ರೂಸ್​ ಹಡಗಿನಲ್ಲಿ ಒಬ್ಬ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಉಳಿದ ಪ್ರಯಾಣಿಕರನ್ನು ಅಲ್ಲಿಯೇ ಐಸೋಲೇಟ್ ಮಾಡಿ, ಎಲ್ಲರಿಗೂ ಆರ್​ಟಿ-ಪಿಸಿಆರ್​ ಟೆಸ್ಟ್ ಮಾಡಲಾಗುತ್ತಿದೆ. ಅದರ ವರದಿಯೂ ಬರುತ್ತಿದ್ದು, ಸದ್ಯ ಈ ಕಾರ್ಡೆಲಿಯಾ ಕ್ರೂಸಸ್​ ಐಷಾರಾಮಿ ಹಡಗಿನಲ್ಲಿ 66 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಬ್ಬರಲ್ಲಿ ಕೊವಿಡ್ … Continued

ತೆಲಂಗಾಣ ಬಿಜೆಪಿ ಮುಖ್ಯಸ್ಥ, ಸಂಸದ ಬಂಡಿ ಸಂಜಯ್​ ಕುಮಾರಗೆ 14 ದಿನಗಳ ನ್ಯಾಯಾಂಗ ಬಂಧನ

ತೆಲಂಗಾಣ: ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯಕುಮಾರ್​ ಅವರನ್ನು ನಿನ್ನೆ (ಜ.2) ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ. ಈ ಕ್ರಮವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಲವಾಗಿ ಖಂಡಿಸಿದ್ದು, ಇದು ಅಮಾನವೀಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತೆಲಂಗಾಣದಲ್ಲಿ ಪ್ರಜಾಪ್ರಭುತ್ವ ಸತ್ತುಹೋಗಿದೆ ಎಂದು ಕಿಡಿಕಾರಿದ್ದಾರೆ. … Continued