ಪನ್ವೇಲ್‌ ಫಾರ್ಮ್‌ಹೌಸ್‌ನಲ್ಲಿ ಹಾವಿನಿಂದ ಕಚ್ಚಿಸಿಕೊಂಡ ನಟ ಸಲ್ಮಾನ್ ಖಾನ್

ಮುಂಬೈ: ನಟ ಸಲ್ಮಾನ್ ಖಾನ್ ಅವರಿಗೆ ಪನ್ವೇಲ್‌ ಫಾರ್ಮ್‌ಹೌಸ್‌ನಲ್ಲಿ ಹಾವು ಕಚ್ಚಿದೆಯಂತೆ. ಇಂದು ಬೆಳಗ್ಗೆ (ಭಾನುವಾರ) ಈ ಘಟನೆ ನಡೆದಿದೆ. ಎಂಜಿಎಂ ಆಸ್ಪತ್ರೆಯಲ್ಲಿ ಸಲ್ಮಾನ್ ಖಾನ್ ಚಿಕಿತ್ಸೆ ಪಡೆದಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಲ್ಮಾನ್ ಖಾನ್ ಕೈಗೆ ಹಾವು ಕಚ್ಚಿದ್ದು, ಈಗ ಸಲ್ಮಾನ್ ಆರೋಗ್ಯ ಚೆನ್ನಾಗಿದೆ ಎಂದು ಹೇಳಲಾಗಿದೆ. ಮನೆಯಲ್ಲಿ … Continued

ಅನಂತ್‌ನಾಗ್‌ ಜಿಲ್ಲೆಯಲ್ಲಿ ಐಎಸ್‌ಜೆಕೆ ಉಗ್ರನ ಹೊಡೆದುರುಳಿಸಿದ ಸೇನೆ

ಅನಂತ್‌ನಾಗ್: ಜಮ್ಮು ಮತ್ತು ಕಾಶ್ಮೀರದ ಶ್ರೀಗುಫ್ವಾರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಮತ್ತು ಕಾಶ್ಮೀರದ (ಐಎಸ್‌ಜೆಕೆ) ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್-ಜನರಲ್ ನೀಡಿದ ಮಾಹಿತಿ ಪ್ರಕಾರ, ಮೃತ ಉಗ್ರನನ್ನು ಕಡಿಪೋರಾ ಪ್ರದೇಶದ ನಿವಾಸಿ ಫಹೀಂ ಭಟ್ ಎಂದು … Continued

ಕೋವಿಡ್-19: ಹಲವಾರು ರಾಜ್ಯಗಳಲ್ಲಿ ಆರ್‌ ಮೌಲ್ಯವು 1 ದಾಟಿದೆ…ಇದು ಯಾಕೆ ಕಳವಳಕ್ಕೆ ಕಾರಣ…? ಮಾಹಿತಿ ಇಲ್ಲಿದೆ..

ನವದೆಹಲಿ: ಪ್ರಕರಣಗಳು ಕಡಿಮೆಯಾಗುತ್ತಲೇ ಇರುತ್ತವೆ ಮತ್ತು ಎರಡು ಲಸಿಕೆಗಳು ಕೋವಿಡ್‌-19 ಹರಡುವುದನ್ನು ತಡೆಯಲು ಸಹಾಯ ಮಾಡುತ್ತವೆ ಎಂಬ ಭರವಸೆಯೊಂದಿಗೆ 2021 ವರ್ಷ ಪ್ರಾರಂಭವಾಯಿತು. ಆದಾಗ್ಯೂ, ಡೆಲ್ಟಾ ರೂಪಾಂತರದ ಆಗಮನ ಮತ್ತು ಕೆಟ್ಟ ಎರಡನೇ ಅಲೆಯು ರಾಷ್ಟ್ರವನ್ನು ಕೆಟ್ಟದಾಗಿ ಬಡಿದು ಅನೇಕ ಸಾವುಗಳಿಗೆ ಕಾರಣವಾಯಿತು. ಈಗ ವರ್ಷದ ಅಂತ್ಯದ ವೇಳೆಗೆ, ಓಮಿಕ್ರಾನ್ ರೂಪಾಂತರವು ಮತ್ತೊಮ್ಮೆ ಜಾಗತಿಕವಾಗಿ ಭೀತಿ … Continued

12ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆ ಕೋವಾಕ್ಸಿನ್‌ನ ತುರ್ತು ಬಳಕೆಗೆ ಡಿಜಿಸಿಐ ಅನುಮೋದನೆ

ನವದೆಹಲಿ: 12ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ ಕೋವಾಕ್ಸಿನ್‌ನ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಶನಿವಾರ ಅನುಮೋದನೆ ನೀಡಿದೆ. ಮೊದಲ ಮತ್ತು ಎರಡನೇ ಡೋಸ್‌ ನಡುವೆ 28 ದಿನಗಳ ಅಂತರದಲ್ಲಿ ಮಕ್ಕಳಿಗೆ ಕೋವಾಕ್ಸಿನ್ ಅನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ … Continued

ದಾಖಲೆ ಬರೆದ ತಿರುಪತಿ ತಿಮ್ಮಪ್ಪ: ಕೇವಲ 80 ನಿಮಿಷಗಳಲ್ಲಿ 4.6 ಲಕ್ಷ ದರ್ಶನ ಟಿಕೆಟ್ಟುಗಳು ಬುಕ್..!

ಅಮರಾವತಿ: ಖ್ಯಾತ ಯಾತ್ರಾ ಸ್ಥಳ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲದ ಆನ್ ಲೈನ್ ದರ್ಶನ ಟಿಕೆಟುಗಳು ದಾಖಲೆ ಅವಧಿಯಲ್ಲಿ ಬುಕ್ ಆಗಿವೆ. ಜನವರಿ ತಿಂಗಳ ಸುಮಾರು 4.6ಲಕ್ಷ ದರ್ಶನ ಟಿಕೆಟ್ ಗಳು ಕೇವಲ 80 ನಿಮಿಷದಲ್ಲೇ ಬುಕ್ ಆಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದ … Continued

ಪ್ರವಾದಿ ಮುಹಮ್ಮದ್‌ ಕುರಿತ ವಸೀಂ ರಿಜ್ವಿ ಬರೆದ ಪುಸ್ತಕ ನಿಷೇಧಿಸಲು ಕೋರಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಶಿಯಾ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿಯವರ ‘ಮುಹಮ್ಮದ್’ ಕೃತಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ನಿರ್ವಹಣೆಯ ಆಧಾರದಲ್ಲಿ ತಿರಸ್ಕರಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ತಿಳಿಸಿದೆ. ಇತ್ತೀಚೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಕೇಂದ್ರ ಶಿಯಾ ವಕ್ಫ್ ಮಂಡಳಿಯ ಮಾಜಿ ಸದಸ್ಯ ಮತ್ತು ಅಧ್ಯಕ್ಷರಾಗಿದ್ದ ರಿಜ್ವಿ, ಜಿತೇಂದ್ರ ನಾರಾಯಣ … Continued

60+, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್‌ ಡೋಸ್‌; 15-18 ವರ್ಷ ವಯಸ್ಸಿನವರಿಗೆ ಜನವರಿ 3ರಿಂದ ಲಸಿಕೆ : ಪ್ರಧಾನಿ ಮೋದಿ ಮಹತ್ವದ ಘೋಷಣೆ

ನವದೆಹಲಿ: 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3 (ಸೋಮವಾರ) ರಿಂದ ಲಸಿಕೆ ನೀಡಲಾಗುವುದು ಮತ್ತು ಆರೋಗ್ಯ ಮತ್ತು ಮುಂಚೂಣಿಯಲ್ಲಿರುವ ಕಾರ್ಯಕರ್ತರು ಮತ್ತು ಇತರ ಆರೋಗ್ಯ ಸಮಸ್ಯೆಗಳಿರುವ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್ಮಸ್‌ ದಿನವಾದ ಶನಿವಾರ ಘೋಷಿಸಿದ್ದಾರೆ. ಇಂದು ಮುಂಜಾನೆ, ಔಷಧ ನಿಯಂತ್ರಕದಿಂದ 12 … Continued

ಗೂಢಚಾರಿಕೆಗಾಗಿ ಪಾಕಿಸ್ತಾನದ ಜೈಲಿನಲ್ಲಿದ್ದು ಬಿಡುಗಡೆಯಾಗಿ 29 ವರ್ಷಗಳ ನಂತರ ಭಾರತಕ್ಕೆ ಬಂದ ಕುಲದೀಪ್ ಸಿಂಗ್

ಜಮ್ಮು: ಪಾಕಿಸ್ತಾನದ ಜೈಲಿನಲ್ಲಿ 29 ವರ್ಷಗಳನ್ನು ಕಳೆದ ನಂತರ, ಕಥುವಾ ನಿವಾಸಿ ಕುಲದೀಪ್ ಸಿಂಗ್ ಶುಕ್ರವಾರ ರಾತ್ರಿ ಇಲ್ಲಿ ತಮ್ಮ ತವರಿಗೆ ಆಗಮಿಸಿದಾಗ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ನಂತರ ಅವರು “ದೇಶಕ್ಕಾಗಿ ಯಾವುದೇ ತ್ಯಾಗದಿಂದ ಹಿಂದೆ ಸರಿಯಬೇಡಿ” ಎಂದು ಯುವಕರನ್ನು ಕೇಳಿದರು. ಔರಂಗಾಬಾದ್‌ನ ಮೊಹಮ್ಮದ್ ಗುಫ್ರಾನ್ ಅವರೊಂದಿಗೆ ಕಥುವಾ ನಿವಾಸಿ ಕುಲದೀಪ್ ಸಿಂಗ್ ಸಿಂಗ್ … Continued

ಓಮಿಕ್ರಾನ್ ಸಾಂಕ್ರಾಮಿಕ: ಆನ್‌ಲೈನ್‌ ವಿವಾಹಕ್ಕೆ ಅನುವು ಮಾಡಿಕೊಟ್ಟ ಕೇರಳ ಹೈಕೋರ್ಟ್

ಓಮಿಕ್ರಾನ್ ಸಾಂಕ್ರಾಮಿಕ ರೋಗದಿಂದಾಗಿ ವಿವಾಹವಾಗಲು ತೊಂದರೆ ಅನುಭವಿಸುತ್ತಿದ್ದ ದಂಪತಿಯ ನೆರವಿಗೆ ಕೇರಳ ಹೈಕೋರ್ಟ್ ಬಂದಿದೆ. ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದ ವಕೀಲ ಅನಂತ ಕೃಷ್ಣನ್‌ ಹರಿಕುಮಾರನ್‌ ನಾಯರ್‌ ಹಾಗೂ ಕೋಯಿಕ್ಕೋಡ್‌ ನಿವಾಸಿಯಾದ ವಕೀಲೆ ರಿಂಟು ಥಾಮಸ್‌ ಇದೇ ಡಿ. 23ರಂದು ವಿವಾಹವಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಅನಂತ ಕೃಷ್ಣನ್‌ ಅವರು ಡಿ. 22ರಂದು ವಿಮಾನದ ಟಿಕೆಟ್‌ ಬುಕ್‌ … Continued

ಕಾಶ್ಮೀರದಲ್ಲಿ 2 ಪ್ರತ್ಯೇಕ ಎನ್‌ಕೌಂಟರ್‌: ನಾಲ್ವರು ಉಗ್ರರ ಹೊಡೆದುರುಳಿಸಿದ ಸೇನೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಪಿಯಾನ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಹೊಡೆದುರುಳಿಸಿದರೆ, ಪುಲ್ವಾಮಾದಲ್ಲಿ ಇಬ್ಬರು ಗುರುತು ಪತ್ತೆಯಾಗದ ಉಗ್ರರನ್ನು ಕೊಲ್ಲಲಾಗಿದೆ. ಶೋಪಿಯಾನ್‌ನ ಚೌಗಮ್ ಗ್ರಾಮ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ … Continued