ಹೃದಯ ವಿದ್ರಾವಕ ಘಟನೆ….ಆಸ್ಪತ್ರೆಯೊಳಗೆ ನುಗ್ಗಿ ವಾರ್ಡ್‌ ಹಾಸಿಗೆಯಲ್ಲಿ ಮಲಗಿದ್ದ ಮೂರು ದಿನದ ಮಗುವನ್ನು ಹೊತ್ತೊಯ್ದು ಸಾಯಿಸಿದ ನಾಯಿಗಳು…!

ಚಂಡೀಗಡ: ಹರ್ಯಾಣದ ಪಾಣಿಪತ್ ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬೀದಿ ನಾಯಿಗಳು 3 ದಿನದ ನವಜಾತ ಶಿಶುವನ್ನು ಕೊಂದು ಹಾಕಿವೆ. ನಾಯಿಗಳು ಆಸ್ಪತ್ರೆಗೆ ಪ್ರವೇಶಿಸಿ ತಾಯಿ ಪಕ್ಕದಲ್ಲಿ ಮಲಗಿದ್ದ ಮೂರು ದಿನದ ಹೆಣ್ಣುಶಿಶುವನ್ನು ಕಚ್ಚಿಕೊಂಡು ಹೋಗಿವೆ. ನಂತರ ಆಸ್ಪತ್ರೆ ಪಕ್ಕದ ಜಾಗದಲ್ಲಿ ಮಗುವಿನ ಶವ ಪತ್ತೆಯಾಗಿದೆ. ದೊರೆತ ಮಾಹಿತಿಯ ಪ್ರಕಾರ, ಸೆಕ್ಟರ್ 13-17 ಪೊಲೀಸ್ … Continued

ಬಹುಮತ ಕಳೆದುಕೊಂಡ ಉದ್ಧವ್ ಠಾಕ್ರೆ, ಬಹುಮತ ಪರೀಕ್ಷೆ ಎದುರಿಸಲೇಬೇಕು: ರಾಜ್ಯಪಾಲರಿಗೆ ಬಿಜೆಪಿ ಪತ್ರ

ಮುಂಬೈ: ನಾವು ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ ಮತ್ತು ಶಿವಸೇನೆಯ 39 ಶಾಸಕರು ಕಾಂಗ್ರೆಸ್-ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದರರ್ಥ ಅವರು ಸರ್ಕಾರದ ಜೊತೆ ಇಲ್ಲ” ಎಂದು ದೇವೇಂದ್ರ ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದರು. . “ನಾವು ರಾಜ್ಯಪಾಲರಿಗೆ ಪತ್ರವನ್ನು ನೀಡಿದ್ದೇವೆ, ಅದರಲ್ಲಿ ಶಿವಸೇನೆಯ 39 ಶಾಸಕರು ತಾವು ಸೇನೆಯೊಂದಿಗೆ ಇಲ್ಲ … Continued

ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿದ್ದಕ್ಕೆ ಅಂಗಡಿಯವನ ಶಿರಚ್ಛೇದ ಮಾಡಿದ ಇಬ್ಬರ ಬಂಧನ

ಉದಯಪುರ: ಉದಯಪುರದಲ್ಲಿ ಮಂಗಳವಾರ ಹಗಲು ಹೊತ್ತಿನಲ್ಲಿ ಅಂಗಡಿಯವನೊಬ್ಬನನ್ನು ಕೊಲೆ ಮಾಡಲಾಗಿದ್ದು, ನಗರದಲ್ಲಿ ಉದ್ವಿಗ್ನತೆ ಉಂಟಾಗಿದೆ. ಇಬ್ಬರು ವ್ಯಕ್ತಿಗಳು ಕನ್ಹಯ್ಯಾ ಲಾಲ್ ಎಂಬ ಅಂಗಡಿಯವನ ತಲೆ ಕೊಯ್ದು ಕೊಲೆ ಮಾಡಿದ್ದಾರೆ ಮತ್ತು ನಂತರ ವ್ಯಕ್ತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಂಗಳವಾರ ರಾತ್ರಿ ರಾಜ್‌ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಇಬ್ಬರು … Continued

ಸಂಜಯ್ ರಾವತ್‌ಗೆ ಹಾಜರಾಗಲು ಜುಲೈ 1ಕ್ಕೆ ಹೊಸ ಸಮನ್ಸ್ ನೀಡಿದ ಇಡಿ

ನವದೆಹಲಿ: ಶಿವಸೇನಾ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಮಾಡಿದ ಮನವಿಯನ್ನು ಸ್ವೀಕರಿಸಿದ ಜಾರಿ ನಿರ್ದೇಶನಾಲಯವು ಇಂದು, ಮಂಗಳವಾರ ಜುಲೈ 1 ರಂದು ತನ್ನ ಮುಂದೆ ಹಾಜರಾಗುವಂತೆ ಮತ್ತೊಂದು ಸಮನ್ಸ್‌ ನೀಡಿದೆ. ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣ ಮತ್ತು ಅವರ ಪತ್ನಿ ಮತ್ತು ಸ್ನೇಹಿತರನ್ನು ಒಳಗೊಂಡ ಇತರ ಸಂಬಂಧಿತ ಹಣಕಾಸು ವ್ಯವಹಾರಗಳ ಆಪಾದಿತ … Continued

ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಂಗಡಿಯವನ‌ ತಲೆ ಕಡಿದರು : ಪ್ರಧಾನಿ ಮೋದಿಗೂ ಬೆದರಿಕೆ

ಉದಯಪುರ: ಉದಯಪುರದಲ್ಲಿ ಮಂಗಳವಾರ ಹಗಲು ಹೊತ್ತಿನಲ್ಲಿ ಅಂಗಡಿಯವನೊಬ್ಬನನ್ನು ಕೊಲೆ ಮಾಡಲಾಗಿದ್ದು, ನಗರದಲ್ಲಿ ಉದ್ವಿಗ್ನತೆ ಉಂಟಾಗಿದೆ. ಕನ್ಹಯ್ಯಾ ಲಾಲ್ ಎಂಬ ಅಂಗಡಿಯವನನ್ನು ಇಬ್ಬರು ವ್ಯಕ್ತಿಗಳು ಆತನ ತಲೆ ಕತ್ತರಿಸಿ ಕೊಲೆ ಮಾಡಿದ್ದಾರೆ ಮತ್ತು ನಂತರ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ವ್ಯಕ್ತಿಯನ್ನು ಕೊಂದಿರುವುದಾಗಿ ಹೇಳಿಕೊಂಡ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ … Continued

ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ 4 ದಿನಗಳ ಪೊಲೀಸ್ ಕಸ್ಟಡಿ

ನವದೆಹಲಿ: ಆಲ್ಟ್ ನ್ಯೂಸ್‌ನ ಫ್ಯಾಕ್ಟ್ ಚೆಕಿಂಗ್ ಸೈಟ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ದೆಹಲಿ ನ್ಯಾಯಾಲಯವು ಮಂಗಳವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ 2018 ರ ಟ್ವಿಟ್ಟರ್ ಪೋಸ್ಟ್‌ಗಾಗಿ ದೆಹಲಿ ಪೊಲೀಸರು ನಿನ್ನೆ, ಸೋಮವಾರ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಯಾವುದೇ ನೋಟಿಸ್ … Continued

ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಖೇಶ್ ಅಂಬಾನಿ ರಾಜೀನಾಮೆ, ಅಧ್ಯಕ್ಷರಾಗಿ ಮಗ ಆಕಾಶ್ ನೇಮಕ

ಮುಂಬೈ: ಮುಖೇಶ ಅಂಬಾನಿ ಅವರು ಜೂನ್ 27 ರಿಂದ ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಿಲಯನ್ಸ್ ಜಿಯೋ ಮಂಗಳವಾರ ತನ್ನ ಮಂಡಳಿಯು ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಪ್ರಕಟಿಸಿದೆ. ಅವರನ್ನು ರಿಲಯನ್ಸ್ ಜಿಯೋದ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿಯೂ ನೇಮಿಸಲಾಗಿದೆ. … Continued

ಯುಎನ್, ಟರ್ಕಿ, ಇರಾನ್, ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಿದ ಭಾರತ

ನವದೆಹಲಿ: ವಿಶ್ವಸಂಸ್ಥೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಅಧಿಕೃತ ಖಾತೆಗಳನ್ನು Twitter ಇಂಡಿಯಾ ನಿಷೇಧಿಸಿದೆ. ಇದಕ್ಕೂ ಮೊದಲು, ಟ್ವಿಟರ್ ಪಾಕಿಸ್ತಾನದ ರಾಷ್ಟ್ರೀಯ ಪ್ರಸಾರಕ – ರೇಡಿಯೋ ಪಾಕಿಸ್ತಾನದ ಖಾತೆಯನ್ನು ಸಹ ತಡೆಹಿಡಿದಿದೆ. ಭಾರತದಲ್ಲಿ ಈ ಅಧಿಕೃತ ಖಾತೆಗಳನ್ನು ತಡೆಹಿಡಿಯಲಾದ ನಂತರ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಕ್ಷಣವೇ ಖಾತೆಗಳನ್ನು ಮರುಸ್ಥಾಪಿಸುವಂತೆ ಟ್ವಿಟರ್‌ಗೆ … Continued

G-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಳಿಗೆ ನಡೆದುಬಂದ ಅಮೆರಿಕ ಅಧಕ್ಷ ಬೈಡನ್‌, ತದನಂತರ….| ವೀಕ್ಷಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಿ 7 ಶೃಂಗಸಭೆಯಲ್ಲಿ ಇತರ ನಾಯಕರ ಜೊತೆ ಸಮೂಹ ಫೋಟೋ ತೆಗೆದುಕೊಳ್ಳಲು ಸಿದ್ಧವಾಗುತ್ತಿದ್ದಂತೆಯೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತದ ಪ್ರಧಾನಿ ಬಳಿಗೇ ತೆರಳಿ, ಅವರ ಭುಜಗಳನ್ನು ತಟ್ಟಿದರು, ಮತ್ತು ಕ್ಯಾಮೆರಾಗಳು ಇಬ್ಬರ ನಡುವೆ ವ್ಯಕ್ತವಾದ ಕ್ಷಣವನ್ನು ಸೆರೆಹಿಡಿದವು. ನಾಯಕರು ಪರಸ್ಪರ ಶುಭಾಶಯ ಕೋರಿದರು. ಕೆನಡಾದ ಪ್ರಧಾನಿ ಜಸ್ಟಿನ್ … Continued

ಅಯೋಧ್ಯೆ ಕಂಟೋನ್ಮೆಂಟ್ ಪ್ರದೇಶದ ಪೊದೆಗಳಲ್ಲಿ 18 ಜೀವಂತ ಕೈ ಗ್ರೆನೇಡ್‌ಗಳು ಪತ್ತೆ

ಲಕ್ನೋ: ಪ್ರಮುಖ ಭದ್ರತಾ ಲೋಪದ ಘಟನೆಯೊಂದರಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಸುರಕ್ಷಿತ ಅಯೋಧ್ಯೆ ಸೇನಾ ಕಂಟೋನ್ಮೆಂಟ್‌ನಲ್ಲಿ ಸೇನಾ ಅಧಿಕಾರಿಗಳ ಮೆಸ್ ಬಳಿಯ ನಿರ್ಮಲಿ ಕುಂಡ್ ಪ್ರದೇಶದಲ್ಲಿ ಶನಿವಾರ ರಾತ್ರಿ 18 ಜೀವಂತ ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾಗಿವೆ. ಘಾಘ್ರಾ ನದಿಯ ದಡದಲ್ಲಿರುವ ಈ ಪ್ರದೇಶವು ನದಿ ದಂಡೆಯ ಉದ್ದಕ್ಕೂ ವಾಸಿಸುವ ನಾಗರಿಕರ ಸಣ್ಣ ಜನಸಂಖ್ಯೆಯನ್ನು ಹೊಂದಿದೆ. ಪೊದೆಗಳಲ್ಲಿ … Continued