2611 : ಈ ಬೈಕ್ ಸಂಖ್ಯೆಗಾಗಿ ₹ 5,000 ಹೆಚ್ಚುವರಿ ಹಣ ನೀಡಿದ್ದ ಉದಯಪುರ ಟೈಲರ್‌ ಹಂತಕರು…!

ಉದಯಪುರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನೊಂದಿಗೆ ಉದಯ್‌ಪುರ ಹಂತಕರ ಸಂಪರ್ಕವನ್ನು ರಾಜಸ್ಥಾನ ಪೊಲೀಸರು ಬಹಿರಂಗಪಡಿಸಿದ ಕೆಲವೇ ದಿನಗಳ ನಂತರ ಇಂದು ಪೊಲೀಸರು ಪ್ರಕರಣದಲ್ಲಿ ಮತ್ತೊಂದು ಸಂಚಲನವನ್ನು ಬಹಿರಂಗಪಡಿಸಿದ್ದಾರೆ. ಹಂತಕರಲ್ಲಿ ಒಬ್ಬನಾದ ರಿಯಾಜ್ ಅಖ್ತರಿ ತನ್ನ ಮೋಟಾರ್‌ಸೈಕಲ್‌ಗೆ 2611 ಎಂದು ಬರೆದ ನಂಬರ್ ಪ್ಲೇಟ್ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿಸಿದ್ದಾನೆ. ಮುಂಬೈ ತನ್ನ ಭೀಕರ ಭಯೋತ್ಪಾದನಾ ದಾಳಿ … Continued

ಸ್ವದೇಶಿ ನಿರ್ಮಿತ ಮಾನವ ರಹಿತ ಯುದ್ಧ ವಿಮಾನದ ಮೊದಲ ಹಾರಾಟ ಯಶಸ್ವಿಯಾಗಿ ನಡೆಸಿದ ಭಾರತ | ವೀಕ್ಷಿಸಿ

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಶುಕ್ರವಾರ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಿಂದ ಮಾನವ ರಹಿತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು. ಡಿಆರ್‌ಡಿಒ ಅಧಿಕಾರಿಗಳು, “ಮಾನವರಹಿತ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುವಲ್ಲಿನ ಪ್ರಮುಖ ಯಶಸ್ಸಿನಲ್ಲಿ, ಆಟೊನಾಮಸ್‌ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನ ಪ್ರದರ್ಶನಕಾರರ ಮೊದಲ ಹಾರಾಟವನ್ನು ಇಂದು ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ … Continued

ಚಿರತೆಯೊಂದು ಮರದ ಮೇಲೆ ಮಂಗನ ಮರಿ ಬೇಟೆಯಾಡಿದ ಅಪರೂಪದ ದೃಶ್ಯದ ವೀಡಿಯೊ‌ ವೈರಲ್

ಚಿರತೆಯೊಂದು ಬೇಟೆಯಾಡುವ ಅಪರೂಪದ ದೃಶ್ಯ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆಯಾಗಿದೆ. ಚಿರತೆ ಮಂಗನ ಮರಿಯನ್ನು ಬೇಟೆಯಾಡುತ್ತಿರುವುದು ಕಂಡುಬಂದಿದೆ. ಬೇಟೆಯ ವೀಡಿಯೊವನ್ನು ಪನ್ನಾ ಟೈಗರ್ ರಿಸರ್ವ್ನವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ. ವೀಡಿಯೊ ಕ್ಲಿಪ್‌ನಲ್ಲಿ ಚಿರತೆಯೊಂದು ಕೋತಿ ಮರಿಯನ್ನು ಹಿಡಿಯಲು ಮರವನ್ನು ಏರುವುದನ್ನು ನೋಡಬಹುದು. ನಂತರ ಮಂಗನ ಮರಿ ಇರುವ ಇನ್ನೊಂದರ ಮರದ … Continued

ಮನೀಶ್ ಸಿಸೋಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ ಕೋವಿಡ್ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಗುತ್ತಿಗೆ ನೀಡುವಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಮಾಡಿದಕ್ಕೆ ಅವರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮನೀಶ ಸಿಸೋಡಿಯಾ ಅವರು ಪಿಪಿಇ ಕಿಟ್‌ಗಳ ಗುತ್ತಿಗೆಯನ್ನು … Continued

ಟಿವಿಯಲ್ಲಿ ಇಡೀ ರಾಷ್ಟ್ರದ ಕ್ಷಮೆ ಕೇಳಬೇಕು, ದೇಶಾದ್ಯಂತ ಭಾವನೆ ಕೆರಳಿಸಲು ನೀವೇ ಏಕಮಾತ್ರ ಹೊಣೆ: ಪ್ರವಾದಿ ಹೇಳಿಕೆ ಬಗ್ಗೆ ನೂಪುರ್ ಶರ್ಮಾರಿಗೆ ಸುಪ್ರೀಂಕೋರ್ಟ್‌ ತೀವ್ರ ತರಾಟೆ

ನವದೆಹಲಿ: ದೊಡ್ಡ ವಿವಾದಕ್ಕೆ ಕಾರಣವಾಗಿದ್ದ ಪ್ರವಾದಿ ಮೊಹಮ್ಮದ್‌ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೂರದರ್ಶನದಲ್ಲಿ ನೂಪುರ್ ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ದೇಶಾದ್ಯಂತ ಕಿಚ್ಚು ಹೊತ್ತಿಸಲು ನೂಪುರ್‌ ಶರ್ಮಾ ಏಕೈಕ … Continued

ಡೈಮಂಡ್ ಲೀಗ್ : ಜಾವೆಲಿನ್‌ನಲ್ಲಿ ತನ್ನದೇ ದಾಖಲೆ ಮುರಿದು ಹೊಸ ರಾಷ್ಟ್ರೀಯ ದಾಖಲೆ ಮಾಡಿದ ನೀರಜ್ ಚೋಪ್ರಾ

ಸ್ವೀಡನ್ : 2020 ರ ಒಲಿಂಪಿಕ್ ನಲ್ಲಿ ಭಾರತಕ್ಕೆ ಚಿನ್ನ ತಂದು ಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಜೂನ್ 30 ರಂದು ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ನಲ್ಲಿ 89.94 ಮೀ. ಜಾವೆಲಿನ್‌ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಮಾಡಿದ್ದು, ಆದರೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಜೂನ್‌ ತಿಂಗಳ ಆರಂಭದಲ್ಲಿ … Continued

ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಬಾಳ್ ಠಾಕ್ರೆ ಫೋಟೊ ಹಾಕಿಕೊಂಡ ನೂತನ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ

ಮುಂಬೈ: ಶಿವಸೇನೆಯ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಒಂಬತ್ತು ದಿನಗಳ ಬಂಡಾಯದ ನಂತರ ನಿನ್ನೆ, ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ, ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ರಾಜಕೀಯ ಉತ್ತರಾಧಿಕಾರಿ ಎಂಬ ಸೂಕ್ಷ್ಮ ಸಂದೇಶವನ್ನು ರವಾನಿಸಿದ್ದಾರೆ. ಪ್ರಮಾಣವಚನ ಸಮಾರಂಭದ ನಂತರ, ಶಿಂಧೆ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನ ಪ್ರೊಫೈಲ್ ಚಿತ್ರವನ್ನು ಬಾಳಾಸಾಹೇಬ್ … Continued

19 kg ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರುಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದೆ. ಇಂದು, ಸಿಲಿಂಡರ್ ದೆಹಲಿಯಲ್ಲಿ 198 ರೂ.ಗಳಷ್ಟು ಕಡಿಮೆಯಾಗಿದೆ. ಸಿಲಿಂಡರ್ ದರ ಕೋಲ್ಕತಾದಲ್ಲಿ 182 ರೂ., ಮುಂಬೈನಲ್ಲಿ 190.50 ರೂ., ಚೆನ್ನೈನಲ್ಲಿ 187 ರೂ.ಇಳಿಕೆಯಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ವಾಣಿಜ್ಯ ಸಿಲಿಂಡರುಗಳ ದರವನ್ನು ಕಡಿತಗೊಳಿಸಿದೆ. ಗೃಹಬಳಕೆಯ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರುಗಳ ದರದಲ್ಲಿ … Continued

ತಮ್ಮ ಪಕ್ಷ ವಿಲೀನಗೊಳಿಸಿ ಬಿಜೆಪಿ ಸೇರಲು ಸಿದ್ಧರಾದ ಕ್ಯಾಪ್ಟನ್ ಅಮರಿಂದರ್ ಸಿಂಗ್..?

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್‌ ಸಿಂಗ್ ಅವರು ಲಂಡನ್‌ನಿಂದ ಹಿಂದಿರುಗಿದ ನಂತರ ಬಿಜೆಪಿಗೆ ಔಪಚಾರಿಕವಾಗಿ ಸೇರ್ಪಡೆಗೊಳ್ಳಲಿದ್ದಾರೆ, ಅಲ್ಲಿ ಅವರು ಕಳೆದ ವಾರ ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ವಾರದ ಕೊನೆಯಲ್ಲಿ ಅವರು ಭಾರತಕ್ಕೆ ಮರಳುವ ಸಾಧ್ಯತೆಯಿದೆ, ಆಗ ಅವರ ಸೇರ್ಪಡೆಯ ಪ್ರಕ್ರಿಯೆಯು ಪ್ರಾರಂಭವಾಗಲಿದೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ. … Continued

ದೇವೇಂದ್ರ ಫಡ್ನವಿಸ್ ಬದಲು ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ ಶಿಂಧೆ ಆಯ್ಕೆಯ ಹಿಂದಿರುವ ಕಾರಣಗಳು..

ಮುಂಬೈ: ಗುರುವಾರ ಸಂಜೆ 7 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಸ್ವಾಗತಿಸಲು ಮಹಾರಾಷ್ಟ್ರ ಬಿಜೆಪಿ ಸಿದ್ಧತೆ ನಡೆಸುತ್ತಿರುವಾಗ, ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆಂಬ ಸುದ್ದಿ ಅನೇಕರಲ್ಲಿ ಅಚ್ಚರಿಗೆ ಕಾರಣವಾಯಿತು. ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ್ ಶಿಂಧೆ ಅವರು ರಾಜಭವನದಲ್ಲಿ ರಾಜ್ಯಪಾಲ ಬಿಎಸ್ ಕೋಶ್ಯಾರಿ ಅವರನ್ನು ಭೇಟಿ … Continued