ಪಶ್ಚಿಮ ಬಂಗಾಳ: ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ-ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಕೋಲ್ಕತ್ತಾ ಹೈಕೋರ್ಟ್ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯಿಂದ ತನಿಖೆಗೆ ಆದೇಶಿಸಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಪೊಲೀಸರಿಗೆ ಸೂಚಿಸಿದೆ. ಸಿಬಿಐ ಈ ಪ್ರಕರಣವನ್ನು ನ್ಯಾಯಯುತ ತನಿಖೆಗೆ ತೆಗೆದುಕೊಳ್ಳಬೇಕು ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ಸ್ಥಳೀಯ ಮತ್ತು … Continued

ಮುಂಬೈ – ಅಹಮದಾಬಾದ್ ಹೈ-ಸ್ಪೀಡ್ ರೈಲು: ಭಾರತೀಯ ಪರಿಸ್ಥಿತಿಗಳಿಗೆ ಬುಲೆಟ್ ರೈಲು ಮಾರ್ಪಡಿಸುವ ಜಪಾನ್‌, 2026 ರಿಂದ ಟ್ರಯಲ್‌ ಆರಂಭ

ಜಪಾನ್‌ನ ಹೈ-ಸ್ಪೀಡ್ ಶಿಂಕನ್‌ಸೆನ್ ರೈಲುಗಳನ್ನು ದೇಶದ ಮಹತ್ವಾಕಾಂಕ್ಷೆಯ ‘ಬುಲೆಟ್ ರೈಲು ಯೋಜನೆ’ಗಾಗಿ ಭಾರತಕ್ಕೆ ಕಳುಹಿಸುವ ಮೊದಲು ತಾಪಮಾನ, ಧೂಳು ಮತ್ತು ತೂಕದಂತಹ ಭಾರತೀಯ ಪರಿಸ್ಥಿತಿಗಳಿಗೆ ಮಾರ್ಪಡಿಸಲಾಗುತ್ತದೆ ಕಂಪನಿ ಹೇಳಿದೆ. ನ್ಯಾಶನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ, ಯೋಜನೆಯು ಸೂರತ್-ಬಿಲ್ಲಿಮೊರಾ ನಡುವಿನ 48 ಕಿಮೀ ವಿಭಾಗವನ್ನು 2027 ರಲ್ಲಿ … Continued

ಐಎನ್ಎಸ್ ವಿಕ್ರಾಂತ್ ಹಣ ದುರುಪಯೋಗ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಬಾಂಬೆ ಹೈಕೋರ್ಟ್‌ ಮೊರೆ ಹೋದ ಬಿಜೆಪಿಯ ಕಿರೀಟ್ ಸೋಮಯ್ಯ

ಮುಂಬೈ: ಮುಂಬೈ ಪೊಲೀಸರು ದಾಖಲಿಸಿರುವ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕಿರೀಟ್‌ ಸೋಮಯ್ಯ ಅವರು ಬಾಂಬೆ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತನ್ನು ನೌಕಾ ಸೇವೆಯಿಂದ ನಿವೃತ್ತಿಗೊಳಿಸಿದ ನಂತರ ಕಳಚಿಹಾಕದೆ ರಕ್ಷಿಸಿ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲು ಸಂಗ್ರಹಿಸಿದ್ದ ₹ 50 ಕೋಟಿಗೂ … Continued

ವಿದ್ಯಾರ್ಥಿಗಳು ಇನ್ಮುಂದೆ 2 ಡಿಗ್ರಿ ಕೋರ್ಸ್‌ಗಳನ್ನು ಏಕಕಾಲದಲ್ಲಿ ಮುಂದುವರಿಸಬಹುದು: ಯುಜಿಸಿ ಅಧ್ಯಕ್ಷರು ನೀಡಿದ ಮಾಹಿತಿ ಇಲ್ಲಿದೆ

ನವದೆಹಲಿ: ಮಾಧ್ಯಮದೊಂದಿಗಿನ ವರ್ಚುವಲ್ ಸಭೆಯಲ್ಲಿ ಯುಜಿಸಿ (UGC) ಅಧ್ಯಕ್ಷ ಎಂ. ಜಗದೇಶಕುಮಾರ್ ಅವರು ವಿದ್ಯಾರ್ಥಿಗಳಿಗೆ ಪೂರ್ಣ ಸಮಯದ ಪದವಿ ಕೋರ್ಸ್‌ಗಳು ಸೇರಿದಂತೆ ಎರಡು ಏಕಕಾಲಿಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದುವರಿಸಲು ಅವಕಾಶ ನೀಡುವ ಯುಜಿಸಿಯ ಇತ್ತೀಚಿನ ಯೋಜನೆ ಕುರಿತು ಬಹಿರಂಗಪಡಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಅನುಸಾರವಾಗಿ, ಇತ್ತೀಚಿನ ಕ್ರಮವು ಉನ್ನತ ಶಿಕ್ಷಣದ ನಮ್ಯತೆ ಮತ್ತು ವೈಯಕ್ತೀಕರಣವನ್ನು … Continued

ನಿರ್ಬಂಧಗಳಿಗೆ ಒಳಗಾಗಿರುವ ರಷ್ಯಾಕ್ಕೆ 2 ಶತಕೋಟಿ ಡಾಲರ್‌ನಷ್ಟು ಹೆಚ್ಚು ರಫ್ತು ಮಾಡಲು ಭಾರತದ ಯೋಚನೆ

ನವದೆಹಲಿ: ಉಕ್ರೇನ್‌ನ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ರಷ್ಯಾದ ಮೇಲೆ ವ್ಯಾಪಕವಾದ ಅಂತಾರಾಷ್ಟ್ರೀಯ ನಿರ್ಬಂಧಗಳ ನಡುವೆ ದ್ವಿಪಕ್ಷೀಯ ವ್ಯಾಪಾರವನ್ನು ಮುಂದುವರಿಸಲು ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ವ್ಯವಸ್ಥೆ ಮಾಡಲು ಎರಡು ರಾಷ್ಟ್ರಗಳು ಕೆಲಸ ಮಾಡುತ್ತಿರುವುದರಿಂದ ಭಾರತವು ರಷ್ಯಾಕ್ಕೆ ಹೆಚ್ಚುವರಿ 2 ಶತಕೋಟಿ ಅಮೆರಿಕನ್‌ ಡಾಲರ್‌ನಷ್ಟು ರಫ್ತು ಹೆಚ್ಚಿಸಲು ಯೋಜಿಸುತ್ತಿದೆ ಎಂದು ೀ ಬಗ್ಗೆ ಮಾಹಿತಿ ಇರುವವರು ಹೇಳಿದ್ದಾರೆ ಎಂದು … Continued

ಪ್ರಧಾನಿ ಮೋದಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ

ನವದೆಹಲಿ: ಏಪ್ರಿಲ್ 24ರಂದು 80ನೇ ವಾರ್ಷಿಕ ಮಾಸ್ಟರ್ ದೀನನಾಥ ಮಂಗೇಶ್ಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿ 92ನೇ ವಯಸ್ಸಿನಲ್ಲಿ ನಿಧನರಾದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಮಾಸ್ಟರ್ ದೀನನಾಥ … Continued

ಉತ್ತರ ಪ್ರದೇಶ ವಿಧಾನ ಪರಿಷತ್‌ ಚುನಾವಣೆ: 36 ಸ್ಥಾನಗಳಲ್ಲಿ 33ರಲ್ಲಿ ಬಿಜೆಪಿಗೆ ಗೆಲುವು, ಆದರೆ ಮೋದಿ ಕ್ಷೇತ್ರದಲ್ಲಿ ಸೋಲು, ಸಮಾಜವಾದಿ ಪಕ್ಷದ ಶೂನ್ಯ ಸಾಧನೆ..!

ಲಕ್ನೋ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಗೆಲುವಿನ ನಂತರ ಈಗ ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ನಡೆದ ದ್ವೈವಾರ್ಷಿಕ ಚುನಾವಣೆಗಳಲ್ಲಿ, ದಾಖಲೆಯ ಗೆಲುವು ದಾಖಲಿಸಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರವಾದ ವಾರಣಾಸಿಯಲ್ಲಿ ಪಕ್ಷವು ಸೋತಿದೆ. ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಒಟ್ಟು 36 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ 33 ಸ್ಥಾನಗಳನ್ನು ಗೆದ್ದಿದೆ. … Continued

ತಿರುಪತಿ ದೇವಸ್ಥಾನದಲ್ಲಿ ಭಕ್ತರ ನೂಕು ನುಗ್ಗಲು, ಮೂವರಿಗೆ ಗಾಯ, ದರ್ಶನಕ್ಕೆ ಟೋಕನ್ ವಿತರಣೆ ಸ್ಥಗಿತ…ವೀಕ್ಷಿಸಿ

ಹೈದರಾಬಾದ್: ತಿರುಪತಿಯ ತಿರುಮಲ ದೇಗುಲದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸರ್ವದರ್ಶನ ಟಿಕೆಟ್ ಪಡೆಯಲು ದೇಗುಲದ ಟಿಕೆಟ್ ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು.ತಿರುಪತಿಯ ತಿರುಮಲದಲ್ಲಿನ ಟಿಕೆಟ್ ಕೌಂಟರ್‌ಗಳಲ್ಲಿ ಸರ್ವದರ್ಶನ ಟಿಕೆಟ್ ಪಡೆಯಲು 10,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು … Continued

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣ: ನೀರವ್ ಮೋದಿಯ ಆಪ್ತನನ್ನು ಈಜಿಪ್ಟಿನಲ್ಲಿ ಬಂಧಿಸಿ ಮುಂಬೈಗೆ ಕರೆತಂದ ಸಿಬಿಐ

ನವದೆಹಲಿ: ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ ಅವರನ್ನು ಕೈರೋದಲ್ಲಿ ಬಂಧಿಸಿದ ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂಬೈಗೆ ಕರೆತಂದಿದೆ. ಪ್ರಮುಖ ಕಾರ್ಯಾಚರಣೆಯಲ್ಲಿ ಸಿಬಿಐ ಶಂಕರ ಅವರನ್ನು ಬಂಧಿಸಿದೆ. 2018ರಲ್ಲಿ ಪ್ರಕರಣ ದಾಖಲಾದಾಗಿನಿಂದ ಶಂಕರ ಪರಾರಿಯಾಗಿ ಕೈರೋದಲ್ಲಿ ತಲೆಮರೆಸಿಕೊಂಡಿದ್ದ. ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅವರನ್ನು ಮುಂಬೈ … Continued

100 ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ಶಿಕ್ಷಕ : ಪ್ರಜ್ಞಾಹೀನರಾದ 7 ವಿದ್ಯಾರ್ಥಿನಿಯರು..!

ಒಡಿಶಾದ ಬೋಲಂಗಿರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಶಿಕ್ಷೆಯ ರೂಪದಲ್ಲಿ ಬಸ್ಕಿ ತೆಗೆಸಿದ ನಂತರ ಏಳು ವಿದ್ಯಾರ್ಥಿನಿಯರು ಪ್ರಜ್ಞಾಹೀನರಾಗಿದ್ದು, ನಂತರ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು. ಬೋಲಂಗಿರ್ ಜಿಲ್ಲೆಯ ಪಟ್ನಾಗರ್ ಪ್ರದೇಶದ ಬಾಪೂಜಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕನನ್ನು ಬಿಕಾಶ್ ಧರುವಾ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಪ್ರಾರ್ಥನಾ ಅವಧಿ ಮುಗಿದ ನಂತರ ತಡವಾಗಿ ಶಾಲೆಗೆ … Continued