ಜಂತರ್ ಮಂತರ್ ಪ್ರತಿಭಟನೆ ವೇಳೆ ಮುಸ್ಲಿಂ ವಿರೋಧಿ ಘೋಷಣೆ: ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ, ಇತರ ಐವರ ಬಂಧನ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಶ್ವಿನಿ ಉಪಾಧ್ಯಾಯ ಮತ್ತು ಇತರ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಐವರನ್ನು ವಿನೋದ್ ಶರ್ಮಾ, ದೀಪಕ್ ಸಿಂಗ್, ವಿನಿತ್ ಕ್ರಾಂತಿ, ಪ್ರೀತ್ ಸಿಂಗ್ ಮತ್ತು ದೀಪಕ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಭಾನುವಾರ ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಅವರನ್ನು … Continued

ಭಾರತದಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು ಈಗ ಲಸಿಕೆ ಪಡೆಯಲು ಅರ್ಹರು

ನವದೆಹಲಿ: ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಈಗ ಭಾರತದಲ್ಲಿ ಲಸಿಕೆ ಹಾಕಲು ಅನುಮತಿ ನೀಡಲಾಗುವುದು ಎಂದು ಸರ್ಕಾರ ಸೋಮವಾರ ಹೇಳಿದೆ. ಕೋವಿಡ್ -19 ರಿಂದ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳಿಗೆ ಲಸಿಕೆ ತೆಗೆದುಕೊಳ್ಳಲು ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ. ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ … Continued

ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಡಿಐಸಿಜಿಸಿ ಮಸೂದೆ ಲೋಕಸಭೆಯಲ್ಲೂ ಅಂಗೀಕಾರ

ನವದೆಹಲಿ: ಬ್ಯಾಂಕ್​ಗಳಲ್ಲಿ ಹಣ ಠೇವಣಿ ಇಡುವ ಸಣ್ಣ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಮಹತ್ವದ ಮಸೂದೆಗೆ ಇಂದು (ಸೋಮವಾರ) ಲೋಕಸಭೆ ಒಪ್ಪಿಗೆ ನೀಡಿದೆ. ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್(ತಿದ್ದುಪಡಿ) ಮಸೂದೆ -2021 (ಡಿಐಸಿಜಿಸಿ)ಕ್ಕೆ ಲೋಕಸಭೆ ಸೋಮವಾರ ಒಪ್ಪಿಗೆ ನೀಡಿದೆ. ಇದು ಜಾರಿಯಾಗುವುದರಿಂದ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಣೆಯಾಗಲಿದ್ದು, ಬ್ಯಾಂಕ್​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು … Continued

ಪೆಗಾಸಸ್‌ ವಿವಾದ: ಎನ್‌ಎಸ್‌ಒ ಜೊತೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ಪ್ರತಿಪಕ್ಷದ ಪ್ರಶ್ನೆಗೆ ಉತ್ತರಿಸಿದ ರಕ್ಷಣಾ ಸಚಿವಾಲಯ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಅಡ್ಡಿಪಡಿಸುತ್ತಿರುವ ದೊಡ್ಡ ರಾಜಕೀಯ ಚಂಡಮಾರುತ ಪೆಗಾಸಸ್ ಮಿಲಿಟರಿ ದರ್ಜೆಯ ಸ್ಪೈವೇರ್ ಮಾರಾಟಗಾರರೂ ಆಗಿರುವ ಇಸ್ರೇಲ್ ಸಂಸ್ಥೆ ಎನ್‌ಎಸ್‌ಒ(NSO)ನೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಇಂದು (ಸೋಮವಾರ) ರಾಜ್ಯಸಭೆಯಲ್ಲಿ ಸಚಿವಾಲಯವು ಡಾ. ವಿ. ಶಿವದಾಸನ್ ಅವರ ಪ್ರಶ್ನೆಗೆ ಉತ್ತರಿಸಿದೆ. ಎನ್ ಎಸ್ ಒ ಗ್ರೂಪ್ ಟೆಕ್ನಾಲಜೀಸ್ ನೊಂದಿಗೆ … Continued

ದೇಶದ 9.75 ಕೋಟಿ ರೈತರ ಖಾತೆಗೆ 19.5 ಸಾವಿರ ಕೋಟಿ ರೂ. ಜಮೆ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ದೇಶದ 9.75 ಕೋಟಿ ರೈತರಿಗೆ 19,5೦೦ ಕೋಟಿ ರೂ.ಗಳನ್ನು ಇಂದು (ಸೋಮವಾರ) ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಸಭೆಯ ಮೂಲಕ ಹಣ ಪಾವತಿಗೆ ಚಾಲನೆ ನೀಡಿದರು. ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ ಆರು ಸಾವಿರ ರೂ.ಗಳನ್ನು ರೈತರ … Continued

ಭಾರತದಲ್ಲಿ 12-18 ವರ್ಷದವರಿಗೆ ಮೊದಲ ಲಸಿಕೆ ಜೈಡಸ್ ಕ್ಯಾಡಿಲಾಗೆ ಈ ವಾರ ಅನುಮೋದನೆ..?

ನವದೆಹಲಿ: ಜೈಡಸ್ ಕ್ಯಾಡಿಲಾದ ಕೋವಿಡ್ ಲಸಿಕೆಯು ಈ ವಾರ ಕೇಂದ್ರದಿಂದ ತುರ್ತು ಬಳಕೆಯ ದೃಢೀಕರಣವನ್ನು (EUA) ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಜೈಡಸ್ ಕ್ಯಾಡಿಲಾ ಜುಲೈ 1 ರಂದು ತನ್ನ ಕೋವಿಡ್ ಲಸಿಕೆ ZyCoV-D ಗಾಗಿ ಇಯುಎ (EUA) ಸ್ಥಾನಮಾನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕಂಪನಿಯು 12-18 ವರ್ಷ … Continued

ಲೋಕಸಭೆಯಲ್ಲಿ ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ ತಿದ್ದುಪಡಿ ಮಸೂದೆ-2021 ಅಂಗೀಕಾರ

ನವದೆಹಲಿ: ಇತರ ಹಿಂದುಳಿದ ವರ್ಗಗಳನ್ನು (OBC) ಗುರುತಿಸುವ ರಾಜ್ಯಗಳ ಅಧಿಕಾರವನ್ನು ಮರಳಿ ಕೊಡುವ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆ-2021 ಅನ್ನು ಸೋಮವಾರ ಲೋಕಸಭೆ ಅಂಗೀಕರಿಸಿದೆ. ಈ ಮಸೂದೆ 1950 ರ ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶವನ್ನು ತಿದ್ದುಪಡಿ ಮಾಡುತ್ತದೆ. ಅದರಲ್ಲಿ ಅಧಿಸೂಚಿತ ಎಸ್​​ಟಿಗಳ ಪಟ್ಟಿಯನ್ನು ಮಾರ್ಪಡಿಸಲು ಸಂಸತ್ತಿಗೆ ಅನುಮತಿ ನೀಡುತ್ತದೆ ಹಾಗೂ ಹಿಂದುಳಿದ ವರ್ಗಗಳನ್ನು ಗುರುತಿಸಲು … Continued

ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ -2021 ಬೆಂಬಲಿಸಲು ಪ್ರತಿಪಕ್ಷಗಳ ನಿರ್ಧಾರ: ಖರ್ಗೆ

ನವದೆಹಲಿ ಸಂಸತ್ತು ಸೋಮವಾರ ಮುಂಗಾರು ಅಧಿವೇಶನದ ನಾಲ್ಕನೇ ಮತ್ತು ಅಂತಿಮ ವಾರ ಪ್ರವೇಶಿಸುತ್ತಿದ್ದು, ಪೆಗಾಸಸ್ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಕೇಂದ್ರವನ್ನು ಮೂಲೆಗುಂಪು ಮಾಡುವ ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸಲು ಹಲವು ವಿರೋಧ ಪಕ್ಷಗಳ ಸದನಗಳ ನಾಯಕರು ಇಂದು (ಸೋಮವಾರ) ಸಭೆ ನಡೆಸುತ್ತಿದ್ದಾರೆ. ಮುಂಗಾರು ಅಧಿವೇಶನದ ಉಳಿದ ಅವಧಿಯ ಜಂಟಿ ಕಾರ್ಯತಂತ್ರವನ್ನು ರೂಪಿಸಲು ವಿವಿಧ ವಿರೋಧ … Continued

ಭಾರತದಲ್ಲಿ 35,499 ಹೊಸ ಕೋವಿಡ್ ಪ್ರಕರಣಗಳು ದಾಖಲು, 97.4%ಕ್ಕೆ ತಲುಪಿದ ಚೇತರಿಕೆ ದರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ಸಿನ 35,499 ಹೊಸ ಪ್ರಕರಣಗಳನ್ನು ಭಾರತ ದಾಖಲಿಸಿದ್ದು, ಸೋಂಕಿನಿಂದಾಗಿ 447 ಸಾವುಗಳು ಸಂಭವಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 39,686 ಡಿಸ್ಚಾರ್ಜ್‌ಗಳನ್ನು ವರದಿ ಮಾಡಿದೆ. ಒಟ್ಟು ಚೇತರಿಕೆ 3,11,39,457 ಕ್ಕೆ ತಲುಪಿದೆ. ಭಾರತದಲ್ಲಿ ಕೋವಿಡ್ -19 ರ … Continued

ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಯುವತಿ ಕೊಂದ ತಾಲಿಬಾನಿಗಳು..!

ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯದ ಬಲ್ಖ್‌ನಿಂದ ಬಂದ ವರದಿಗಳು, ತಾಲಿಬಾನ್‌ಗಳು ಯುವತಿಯನ್ನು ಬಿಗಿಯಾದ ಬಟ್ಟೆ ಧರಿಸಿದ್ದಕ್ಕಾಗಿ ಮತ್ತು ಅವರ ಜೊತೆ ಪುರುಷ ಸಂಬಂಧಿಯ ಜೊತೆಗೆ ಇಲ್ಲದ ಕಾರಣ ಕೊಲ್ಲಲ್ಪಟ್ಟರು ಎಂದು ಹೇಳಿದೆ. ವರದಿಗಳ ಪ್ರಕಾರ ಯುವತಿಯನ್ನು ತಾಲಿಬಾನ್ ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದು ಸಮರ್ ಕಂದಿಯಾನ್ ಗ್ರಾಮದಲ್ಲಿ, ಇದನ್ನು ಉಗ್ರಗಾಮಿ ಸಂಘಟನೆ ನಿಯಂತ್ರಿಸುತ್ತದೆ. ಬಲ್ಖ್‌ನ ಪೊಲೀಸ್ ವಕ್ತಾರ ಆದಿಲ್ … Continued