ಭಾರತದಲ್ಲಿ 39,070 ಹೊಸ ಸೋಂಕುಗಳ ವರದಿ, 491 ಸಾವು

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಸಾಂಕ್ರಾಮಿಕ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 39,070 ಹೊಸ ಸೋಂಕು ಪ್ರಕರಣಗಳು ಮತ್ತು 491 ಸಾವುಗಳು ವರದಿಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶಾದ್ಯಂತ 24 ಗಂಟೆಗಳಲ್ಲಿ 39,070 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ದೇಶದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ … Continued

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬಂಗಾರ ಗೆದ್ದ ನೀರಜ್​ಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್ ನಾಯ್ಕ..ಶಿರಸಿ ತಾಲೂಕಿನ ಬೆಂಗಳೆಯವರು..!

ಒಲಿಂಪಿಕ್ಸ್ ( Olympics) ಕ್ರೀಡಾಕೂಟ ಆರಂಭವಾಗಿ 124 ವರ್ಷಗಳು ಕಳೆದಿವೆ. ಆದರೆ ಭಾರತ ವೈಯುಕ್ತಿಕ ವಿಭಾಗದಲ್ಲಿ ಇದುವೆರೆಗೆ ಭಾರತ ಗೆದ್ದ ಚಿನ್ನದ ಪದಕ ಸಂಖ್ಯೆ ಕೇವಲ ಒಂದು ಆಗಿತ್ತು.ಅಥ್ಲಟಿಕ್ಸ್‌ನಲ್ಲಿ ಈವರೆಗೂ ಒಂದೇ ಒಂದು ಚಿನ್ನಗೆದ್ದಿರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ಹಾಗೂ ಆ ಮೂಲಕ … Continued

ಟೋಕಿಯೊ ಒಲಿಂಪಿಕ್ಸ್‌: ಅಥ್ಲೆಟಿಕ್ಸ್‌ನಲ್ಲಿ ಭಾರತದ 100 ವರ್ಷಗಳ ಪದಕ ಕಾಯುವಿಕೆ ಕೊನೆಗೊಳಿಸಿದ ನೀರಜ್ ಚೋಪ್ರಾ..!

ನವದೆಹಲಿ: ನೀರಜ್ ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಪದಕಕ್ಕಾಗಿ ಭಾರತದ ಶತಮಾನದ ಕಾಯುವಿಕೆಯನ್ನು ಕೊನೆಗೊಳಿಸಿದರು ಮತ್ತು ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ 87.58 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದರು. ನೀರಜ್ 87.03 ಮೀಟರ್ ನ ಅದ್ಭುತ ಎಸೆತದೊಂದಿಗೆ ಈವೆಂಟ್ ಆರಂಭಿಸಿದರು. ಅವರು ಎರಡನೇ ಪ್ರಯತ್ನದಲ್ಲಿ ಅದನ್ನು ಉತ್ತಮಗೊಳಿಸಿದರು ಮತ್ತು 87.58 ಮೀ ದೂರ ಎಸೆದರು. … Continued

ಟೋಕಿಯೊ ಒಲಿಂಪಿಕ್ಸ್​: ಚಿನ್ನದ ಹುಡುಗ ನೀರಜ್​ ಚೋಪ್ರಾಗೆ 6 ಕೋಟಿ ರೂ.ಬಹುಮಾನ ಘೋಷಿಸಿದ ಹರಿಯಾಣ

ನವದೆಹಲಿ: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಜಾವಲಿನ್​ ಎಸೆತದಲ್ಲಿ ಹರಿಯಾಣ ಮೂಲದ ನೀರಜ್​ ಚೋಪ್ರಾ ಚಿನ್ನದ ಪದಕ ಗೆದ್ದು ದೇಶದ ಅಥ್ಲೆಟಿಕ್ಸ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಒಲಿಂಪಿಕ್ಸ್​ ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕವನ್ನು ತಂದು ಕೊಟ್ಟ ಕೀರ್ತಿ ನೀರಜ್​ಗೆ ಸಲ್ಲುತ್ತದೆ. ಇದಕ್ಕೆ ಅವರ ರಾಜ್ಯವಾದ ಹರಿಯಾಣ ಸರ್ಕಾರ 6 ಕೋಟಿ … Continued

ವಾರೆವ್ಹಾ.. ಟೋಕಿಯೊ ಒಲಿಂಪಿಕ್ಸಿನಲ್ಲಿ ಭಾರತಕ್ಕೆ ಮೊದಲ ಚಿನ್ನ: ಜಾವೆಲಿನ್‌ ನಲ್ಲಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ..!

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಆಟಗಾರ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ನೀರಜ್ ಚೋಪ್ರಾ, ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು,ದೇಶದ ಕೀರ್ತಿ ಬೆಳಗಿದ್ದಾರೆ. ಆರಂಭದಲ್ಲೇ ನೀರಜ್ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲ ಪ್ರಯತ್ನದಲ್ಲಿ, 87.03 ಮೀಟರ್ ದೂರ ಜಾವೆಲಿನ್ ಎಸೆದಿದ್ದಾರೆ. ಎರಡನೇ ಬಾರಿ ನೀರಜ್ 87.58 ಮೀಟರ್ ದೂರ ಎಸೆದಿದ್ದಾರೆ. ಮೂರನೇ ಬಾರಿ 76.78 … Continued

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಕಂಚುಗೆದ್ದ ಭಜರಂಗ್‌ ಪುನಿಯಾ

ಟೋಕಿಯೊ ಒಲಿಂಪಿಕ್ಸ್‌: ಟೋಕಿಯೊ 2020ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪುರುಷರ 65 ಕೆಜಿ ಕುಸ್ತಿ ಸೆಣಸಾಟದಲ್ಲಿ ಕಜಕಿಸ್ತಾನದ ಡೌಲೆಟ್ ನಿಯಾಜ್‌ಬೆಕೊವ್ ವಿರುದ್ಧ ಭಾರತದ ಕುಸ್ತಿಪಟು ಭಜರಂಗ್ ಪುನಿಯಾ ಜಯಗಳಿಸುವ ಮೂಲಕ ಶನಿವಾರ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ.. ಏಷ್ಯನ್ ಕ್ರೀಡಾಕೂಟದ ಮಾಜಿ ಚಿನ್ನದ ಪದಕ ವಿಜೇತ ಭಜರಂಗ್ ಪಂದ್ಯದ ಆರಂಭದಿಂದ ಅಂತ್ಯದ ವರೆಗೂ ಪ್ರಾಬಲ್ಯ ಸಾಧಿಸಿದರು, … Continued

ಭಾರತದಲ್ಲಿ ಮತ್ತೊಂದು ಕೋವಿಡ್‌ ಲಸಿಕೆಗೆ ಅನುಮೋದನೆ..ಜಾನ್ಸನ್ ಅಂಡ್‌ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ತುರ್ತು ಬಳಕೆಗೆ ಅನುಮತಿ..!

ನವದೆಹಲಿ: ಅಮೆರಿಕ ಔಷಧ ತಯಾರಕ ಜಾನ್ಸನ್ ಮತ್ತು ಜಾನ್ಸನ್ ಅವರ ಒಂದೇ-ಡೋಸ್ ಕೋವಿಡ್ -19 ಲಸಿಕೆಗೆ ಭಾರತವು ತುರ್ತು ಬಳಕೆಯ ಅಧಿಕಾರ (ಇಯುಎ) ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಹೇಳಿದ್ದಾರೆ “ಜಾನ್ಸನ್ ಮತ್ತು ಜಾನ್ಸನ್ ಅವರ ಸಿಂಗಲ್ ಡೋಸ್ ಕೋವಿಡ್ -19 ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. … Continued

ಟೋಕಿಯೊ ಒಲಿಂಪಿಕ್ಸ್‌: ಕನ್ನಡತಿ ಅದಿತಿಗೆ ಪದಕ ಜಸ್ಟ್ ಮಿಸ್, ಗಾಲ್ಫಲ್ಲಿ ಭಾರತ ಹೊಸ ದಾಖಲೆ

ಟೋಕಿಯೋ:ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದಾರೆ. ಆದರೂ, ದಾಖಲೆ ಬರೆದಿದ್ದಾರೆ. ವಿಶ್ವದಲ್ಲಿ 200ನೇ ಸ್ಥಾನ ಪಡೆದಿದ್ದ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಒಲಿಂಪಿಕ್ಸ್ ನಲ್ಲಿ ನಾಲ್ಕನೇಯ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ. ನಿನ್ನೆ ನಡೆದ ಮೂರನೇ ಸುತ್ತಿನ ಬಳಿಕ ಪದಕದ ನಿರೀಕ್ಷೆ … Continued

ರೈಲು ನಿಲ್ದಾಣ, ಅಮಿತಾಬ್‌ ಬಚ್ಚನ್‌ ಮನೆಗೆ ಬಾಂಬ್‌ ಬೆದರಿಕೆ ಕರೆ: ಇಬ್ಬರ ಬಂಧನ

ಮುಂಬೈ: ವಾಣಿಜ್ಯ ನಗರಿ ಮುಂಬೈನ ಮೂರು ಪ್ರಮುಖ ರೈಲು ನಿಲ್ದಾಣಗಳು ಹಾಗೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ಶನಿವಾರ ತಿಳಿದುಬಂದಿದೆ. ಬಾಂಬ್ ಇಟ್ಟಿರುವ ಬಗ್ಗೆ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಮುಂಬೈನ ಮೂರು ಪ್ರಮುಖ ರೈಲ್ವೆ ನಿಲ್ದಾಣಗಳು … Continued

ಭಾರತದಲ್ಲಿ ಕೊರೊನಾ ಏರಿಳಿತ ಮುಂದುವರಿಕೆ: 38, 628 ಹೊಸ ಸೋಂಕು ಪತ್ತೆ

ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ಏರಿಳಿಕೆ ಮುಂದುವರೆದಿದ್ದು, ದೇಶದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 38,628 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 617 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಶನಿವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,18,95,385ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,27,371ಕ್ಕೆ … Continued