ಭಾರತದಲ್ಲಿ ಕಂಡುಬಂದ ಮೊದಲ ಕೋವಿಡ್ ಸ್ಟ್ರೈನ್ ಡೆಲ್ಟಾ’ ರೂಪಾಂತರ ಎಂದು ಕರೆಯಲ್ಪಡುತ್ತದೆ:ಡಬ್ಲ್ಯುಎಚ್‌ಒ

ಜಿನೀವಾ: ಭಾರತದಲ್ಲಿ ಮೊದಲು ದೊರೆತ ಕೋವಿಡ್‌-19 ರೂಪಾಂತರವನ್ನು (B.1.617) ‘ಡೆಲ್ಟಾ’ ರೂಪಾಂತರ ಎಂದು ಕರೆಯಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ. ಭಾರತದಲ್ಲಿ ಮೊದಲು ಕಂಡುಬರುವ ಕೋವಿಡ್ ರೂಪಾಂತರವನ್ನು ‘ಡೆಲ್ಟಾ’ ಎಂದು ಉಲ್ಲೇಖಿಸಲಾಗುವುದು ಮತ್ತು ಈ ಹಿಂದೆ ದೇಶದಲ್ಲಿ ಕಂಡುಬಂದ ರೂಪಾಂತರವನ್ನು ‘ಕಪ್ಪಾ’ ಎಂದು ಕರೆಯಲಾಗುತ್ತದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ … Continued

ಇದೆಂಥ ಉಲ್ಬಣ..! ಭಾರತದ ಒಟ್ಟು ಕೊರೊನಾ ಸೋಂಕಿನ 31.67%, ಒಟ್ಟು ಸಾವಿನ 35.63% ಮೇ ತಿಂಗಳಲ್ಲೇ ದಾಖಲು..!!

ನವ ದೆಹಲಿ:ಕೋವಿಡ್‌-19 ರ ಎರಡನೇ ಅಲೆಯಲ್ಲಿ ಭಾರತವು ಕೇವಲ ಮೇ ತಿಂಗಳಲ್ಲೇ 88.82 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕನ್ನು ವರದಿ ಮಾಡಿದೆ..! ಇದುವರೆಗೆ ದೇಶದಲ್ಲಿ ವರದಿಯಾದ 2.8 ಕೋಟಿ ಪ್ರಕರಣಗಳಲ್ಲಿ ಕೇವಲ ಮೇ ತಿಂಗಳಲ್ಲಿಯೇ ಶೇ.31.67 ರಷ್ಟುವರದಿಯಾಗಿದೆ ಮತ್ತು ಇದು ಭಾರತದ ಪಾಲಿಗೆ ಸಾಂಕ್ರಾಮಿಕ ರೋಗದ ಅತ್ಯಂತ ಕೆಟ್ಟ ತಿಂಗಳು. ಮೇ ತಿಂಗಳಲ್ಲಿ ಈ … Continued

ಕೇಂದ್ರದೊಂದಿಗಿನ ಜಗಳದ ಮಧ್ಯೆ, ಬಂಗಾಳದ ಮುಖ್ಯ ಕಾರ್ಯದರ್ಶಿ ನಿವೃತ್ತಿ, ಸಿಎಂ ಮುಖ್ಯ ಸಲಹೆಗಾರರಾಗಿ ನೇಮಕ

ಕೋಲ್ಕತ್ತಾ: ಹಠಾತ್ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಸ್ಥಾನದಿಂದ ಸೋಮವಾರ ಮಧ್ಯಾಹ್ನ ಆಲಾಪನ್ ಬಂಧೋಪಾಧ್ಯಾಯ ನಿವೃತ್ತಿ ಪಡೆದುಕೊಂಡಿದ್ದು, ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಹೊಸ ಆದೇಶದ ಪ್ರಕಾರ ಬಂಡೋಪಾಧ್ಯಾಯ ಜೂನ್ 1ರಿಂದ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದು ಮೂರು ವರ್ಷಗಳ ಕಾಲ ಮುಂದುವರಿಯಲಿದ್ದಾರೆ.ಿವರ ಸ್ಥಾನಕ್ಕೆ ಹೆಚ್‌.ಕೆ. ದ್ವಿವೇದಿ ಅವರನ್ನು ಪಶ್ಚಿಮ ಬಂಗಾಳದ … Continued

ರಿಯಾ ಚಕ್ರವರ್ತಿ, 34 ಜನರ ವಿರುದ್ಧ ಎನ್‌ಸಿಬಿ ಪ್ರಕರಣದಲ್ಲಿ ಸುಶಾಂತ್ ಸಿಂಗ್ ರಜಪೂತ್ ಮನೆ ಸಹಾಯಕರು ಸಾಕ್ಷಿಗಳು

ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯ ಮಾಜಿ ಸಿಬ್ಬಂದಿ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದಾರೆ. ರಜಪೂತ ಸಹಚರರಾದ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಸೇರಿದಂತೆ 35 ವ್ಯಕ್ತಿಗಳ ವಿರುದ್ಧ ತನಿಖೆಗೆ ಸೇರಲು ಎನ್‌ಸಿಬಿ ಕೇಶವ್ ಬ್ಯಾಚ್ನರ್ ಮತ್ತು ನೀರಜ್ ಸಿಂಗ್ ಅವರನ್ನು ಕರೆಸಿಕೊಂಡಿತ್ತು ಎಂದು ಇಂಡಿಯಾ ಟುಡೆ ವರದಿ … Continued

ಮಹತ್ವದ ನಿರ್ಧಾರ.. ಎರಡನೇ ಕೋವಿಡ್‌-19 ಮುಂಗಡ ಪಡೆಯಲು ಸದಸ್ಯರಿಗೆ ಅವಕಾಶ ನೀಡಿದ ಇಪಿಎಫ್ಒ

ನವ ದೆಹಲಿ: ನೌಕರರ ಭವಿಷ್ಯ ನಿಧಿ ಯೋಜನೆಯ ಸದಸ್ಯರು ಈಗ ತಮ್ಮ ಇಪಿಎಫ್ ಠೇವಣಿಗಳಿಂದ ಮರುಪಾವತಿಸಲಾಗದ ಒಂದು ಮುಂಗಡವನ್ನು ಪಡೆಯಬಹುದು. ಕೋವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ತನ್ನ ಚಂದಾದಾರರನ್ನು ಬೆಂಬಲಿಸುವ ಸಲುವಾಗಿ, ನಿವೃತ್ತಿ ನಿಧಿ ಸಂಸ್ಥೆ (retirement fund body )ಸೋಮವಾರ (ಮೇ 31, 2021) ತನ್ನ ಸದಸ್ಯರಿಗೆ ಮರುಪಾವತಿಸಲಾಗದ ಎರಡನೇ ಕೋವಿಡ್‌-19 ಮುಂಗಡವನ್ನು … Continued

ಭಾರತದಲ್ಲಿ ಕೆಲವು ವಾರಗಳಲ್ಲಿ ಎರಡು ವಿಭಿನ್ನ ಲಸಿಕೆಗಳ ಬೆರೆಸುವ ಕಾರ್ಯಸಾಧ್ಯತೆ ಅಧ್ಯಯನ ಆರಂಭ: ಕೇಂದ್ರ ಕೋವಿಡ್‌ ಪಾನೆಲ್‌

ನವ ದೆಹಲಿ: ಭಾರತವು ಕೆಲವು ವಾರಗಳಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ಬೆರೆಸುವ ಸಾಧ್ಯತೆಯ ಬಗ್ಗೆ ಅಧ್ಯಯನವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಕೇಂದ್ರದ ಕೋವಿಡ್‌-19 ಕಾರ್ಯ ಸಮೂಹದ ಮುಖ್ಯಸ್ಥರು ಸೋಮವಾರ ತಿಳಿಸಿದ್ದಾರೆ. ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್ (ಎನ್‌ಟಿಎಜಿಐ) ಅಡಿಯಲ್ಲಿ ಕೋವಿಡ್‌ ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷರಾಗಿರುವ ಡಾ.ಎನ್.ಕೆ.ಅರೋರಾ, ಎರಡು ವಿಭಿನ್ನ ತಯಾರಕರ ಲಸಿಕೆ ಪ್ರಮಾಣವನ್ನು … Continued

2020-21ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ದರ ಶೇ. 7.3ರಷ್ಟು ಕುಸಿತ: ನಾಲ್ಕನೇ ತ್ರೈಮಾಸಿಕ ಶೇ. 1.6ರಷ್ಟು ಏರಿಕೆ

2019-20ರಲ್ಲಿ 4 ಪ್ರತಿಶತಕ್ಕೆ ಹೋಲಿಸಿದರೆ, 2020-21ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ -7.3% ರಷ್ಟಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2019-20ರ ಜನವರಿ-ಮಾರ್ಚ್ ಅವಧಿಯಲ್ಲಿ ಶೇಕಡಾ 3 ರಷ್ಟು ಇತ್ತು. ಏತನ್ಮಧ್ಯೆ, 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ … Continued

ಕೋವಿಡ್ ರೋಗಿಗಳಿಗೆ ಆನಂದಯ್ಯ ಆಯುರ್ವೇದ ಔಷಧ ಬಳಸಲು ಆಂಧ್ರ ಸರ್ಕಾರ ಅನುಮತಿ..!

ಅಮರಾವತಿ: ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಹಳ್ಳಿಯ ಆಯುರ್ವೇದ ಪಂಡಿತ ಬಿ. ಆನಂದಯ್ಯ ಅವರಿಂದ ತಯಾರಿಸಲ್ಪಟ್ಟ ಔಷಧವನ್ನು ಕೋವಿಡ್-19 ಸೋಂಕಿತರು ಚಿಕಿತ್ಸೆಯಾಗಿ ಬಳಸಲು ಆಂಧ್ರ ಪ್ರದೇಶ ಸರ್ಕಾರ ಸೋಮವಾರ ಹಸಿರು ನಿಶಾನೆ ತೋರಿದೆ. ಆದಾಗ್ಯೂ, ಕೆಲವೇ ನಿಮಿಷಗಳಲ್ಲಿ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲಿದೆ ಎನ್ನಲಾದ ಕಣ್ಣಿಗೆ ಹನಿ ಹಾಕಲು ಆನಂದಯ್ಯ ಅವರಿಗೆ ಸರ್ಕಾರ ಅನುಮತಿ ನೀಡಿಲ್ಲ. ಮುಖ್ಯಮಂತ್ರಿ ವೈ.ಎಸ್. … Continued

ಕೋವಿಡ್‌ಗೆ ಗಿಡಮೂಲಿಕೆ ಕಣ್ಣಿನ ಹನಿಗಳ ‘ಪರಿಣಾಮಕಾರಿತ್ವ’ಕ್ಕೆ ಪ್ರತಿಜ್ಞೆಗೈದ ನಿವೃತ್ತ ಮುಖ್ಯಾಧ್ಯಾಪಕ ಕೊರೊನಾದಿಂದ ನಿಧನ

ನೆಲ್ಲೂರು: ಕಳೆದ ವಾರ ಕೃಷ್ಣಪಟ್ಟಣಂನ ಆನಂದಯ್ಯ ಅವರ ವೈದ್ಯಕೀಯ ಶಿಬಿರದಲ್ಲಿ ಕೋವಿಡ್‌ -19 ಸೋಂಕಿಗೆ ಒಳಗಾದ ಮತ್ತು ನಂತರ ‘ಗಿಡಮೂಲಿಕೆ’ ಕಣ್ಣಿನ ಹನಿಗಳನ್ನು ತೆಗೆದುಕೊಂಡಿದ್ದ ನೆಲ್ಲೂರು ಜಿಲ್ಲೆಯ ಕೋಟಾಯ ಮಂಡಳಿಯ ನಿವೃತ್ತ ಮುಖ್ಯೋಪಾಧ್ಯಾಯರು ನೆಲ್ಲೂರು ನಗರದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸೋಮವಾರ ಮುಂಜಾನೆ ನಿಧನರಾದರು. . ಕಣ್ಣಿನ ಹನಿಗಳನ್ನು ತೆಗೆದುಕೊಂಡ ನಂತರ ಆನಂದಯ್ಯ … Continued

ನೀತಿ ನಿರೂಪಕರು ನೆಲದ ಮೇಲೆ ಕಿವಿಗಳನ್ನು ಹೊಂದಿರಬೇಕು: ಕೋವಿಡ್‌ ವ್ಯಾಕ್ಸಿನೇಷನ್ ನೀತಿ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವ ದೆಹಲಿ: ಕೋವಿನ್‌ನಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ನೀತಿ ಮತ್ತು ಕಡ್ಡಾಯವಾಗಿ ನೋಂದಣಿ ಮಾಡುವ ಅಗತ್ಯತೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಸೋಮವಾರ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ. ಲಸಿಕೆ ಪಡೆಯಲು ಕೇಂದ್ರವು ಕೋವಿನ್ ನೋಂದಣಿ ಕಡ್ಡಾಯಗೊಳಿಸಿರುವುದರಿಂದ, ದೇಶ ಎದುರಿಸುತ್ತಿರುವ ಡಿಜಿಟಲ್ ವಿಭಜನೆಯ ಸಮಸ್ಯೆಯನ್ನು ಹೇಗೆ ಪರಿಹರಿಸಲಿದೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್. ಎನ್. … Continued