ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌-ಏಕದಿನ ಪಂದ್ಯಗಳಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ: ಯಶಸ್ವಿ ಜೈಸ್ವಾಲಗೆ ಅವಕಾಶ, ಚೇತೇಶ್ವರ ಪೂಜಾರಗೆ ಕೊಕ್

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳಿಗೆ ಭಾರತದ ತಂಡವನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ ಯಶಸ್ವಿ ಜೈಸ್ವಾಲ್ ಇದೇ ಮೊದಲ ಬಾರಿಗೆ ಭಾರತದ ತಂಡದಲ್ಲಿ ಸ್ಥಾನ ನೀಡಲಾಗಿದೆ. ವೇಗಿ ಮುಖೇಶಕುಮಾರ ಅವರ ಮೊದಲ ಟೆಸ್ಟ್ ಸ್ಥಾನ ಪಡೆದಿದ್ದಾರೆ. ಮತ್ತೊಂದು … Continued

ಕಾಶ್ಮೀರದ ಕುಪ್ವಾರದಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ : ಶುಕ್ರವಾರ ಕುಪ್ವಾರದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಯಿಂದ ಒಳ ನುಸುಳಲು ಯತ್ನಿಸುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಒಂದು ವಾರದಲ್ಲಿ ಭದ್ರತಾ ಪಡೆಗಳು ವಿಫಲಗೊಳಿಸಿದ ಎರಡನೇ ಪ್ರಮುಖ ಒಳನುಸುಳುವಿಕೆ ಪ್ರಯತ್ನ ಇದಾಗಿದೆ. ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಗಡಿ ನಿಯಂತ್ರಣ … Continued

ಪ್ರಧಾನಿ ಮೋದಿ ಔತಣಕೂಟದಲ್ಲಿ ಟಾಪ್ ಉದ್ಯಮಿಗಳು ಸೇರಿದಂತೆ 400 ಗಣ್ಯರು ಭಾಗಿ

ವಾಷಿಂಗ್ಟನ್‌ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸುವ ಅಮೆರಿಕದ ಸರ್ಕಾರಿ ಭೋಜನಕೂಟದಲ್ಲಿ ಅಧ್ಯಕ್ಷ ಜೋ ಬೈಡನ್ ಅಮೆರಿಕ ಮತ್ತು ಭಾರತದ ನಡುವಿನ ಟೆಕ್ ಉದ್ಯಮ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನದಲ್ಲಿ ಸಿಲಿಕಾನ್ ವ್ಯಾಲಿಯ ಮಹತ್ವದ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಶ್ವೇತಭವನದ ಈ ಭೋಜನಕ್ಕೆ 400ಕ್ಕೂ ಹೆಚ್ಚು ಅತಿಥಿಗಳಿಗೆ ವೈಟ್​​ಹೌಸ್ ಆಹ್ವಾನವನ್ನು ನೀಡಿದೆ. ಶ್ವೇತಭವನದಲ್ಲಿ, ನಡೆದ ಔತಣ ಕೂಟದಲ್ಲಿ … Continued

ಸಮುದ್ರದಾಳದಲ್ಲಿ ʻಟೈಟಾನಿಕ್ʼ ವೀಕ್ಷಣೆಗೆ ತೆರಳಿದ್ದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರ ಸಾವು : ನೌಕೆ ಸ್ಫೋಟಗೊಂಡಿದ್ದೇ ಸಾವಿಗೆ ಕಾರಣ ; ಅಮೆರಿಕ ಕೋಸ್ಟ್‌ ಗಾರ್ಡ್‌

ನ್ಯೂಯಾರ್ಕ್​: ಶತಮಾನದ ಹಿಂದೆ ದುರಂತಕ್ಕೀಡಾದ ಟೈಟಾನಿಕ್​ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಸಾವಿಗೀಡಾಗಿದ್ದಾರೆ   ಎಂದು ಅಮೆರಿಕ ಕೋಸ್ಟ್‌ ಗಾರ್ಡ್‌ ಹೇಳಿದೆ ಟೈಟಾನ್​ ಹೆಸರಿನ ನೌಕೆಯು ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸಮುದ್ರದ ಆಳಕ್ಕೆ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ … Continued

ಪಾಟ್ನಾದಲ್ಲಿ ಇಂದಿನ ಪ್ರತಿಪಕ್ಷಗಳ ಸಭೆಗೆ ಆರ್‌ಎಲ್‌ಡಿ ಗೈರು; ಬಿಎಸ್‌ಪಿಗೆ ಆಹ್ವಾನವಿಲ್ಲ

ನವದೆಹಲಿ: ಶುಕ್ರವಾರ, ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮಹತ್ವದ ಸಭೆಗೆ ಮೊದಲು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಗುರುವಾರ ವಿರೋಧ ಪಕ್ಷದ ಮೈತ್ರಿ ವಿರುದ್ಧ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. “ದಿಲ್ ಮಿಲೇ ನಾ ಮಿಲೇ, ಹಾಥ್ ಮಿಲಾತೆ ರಹಿಯೇ (ಹೃದಯ ಬೆಸೆಯುತ್ತಿದೆಯೋ ಇಲ್ಲವೋ ಆದರೆ ಕೈ ಕುಲುಕುತ್ತಿರಿ” ಎಂದು ಮಾಯಾವತಿ ಅವರು … Continued

ಪಾಟ್ನಾದಲ್ಲಿ ನಡೆಯುವ ಮಹತ್ವದ ಪ್ರತಿಪಕ್ಷಗಳ ಸಭೆಗೆ ಒಂದು ದಿನ ಮೊದಲು ಕಾಂಗ್ರೆಸ್‌ಗೆ ಎಎಪಿ ಎಚ್ಚರಿಕೆ

ನವದೆಹಲಿ: ದೆಹಲಿಯ ಆಡಳಿತಾತ್ಮಕ ಸೇವೆಗಳನ್ನು ಮರುರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಕಾಂಗ್ರೆಸ್ ತನ್ನ ಪಕ್ಷದ ಅಭಿಯಾನವನ್ನು ಬೆಂಬಲಿಸದಿದ್ದರೆ ಶುಕ್ರವಾರ (ಜೂನ್‌ ೨೩ರ) ಪ್ರಮುಖ ಪ್ರತಿಪಕ್ಷಗಳ ಸಭೆಯನ್ನು ಗೈರಾಗುವುದಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಎಚ್ಚರಿಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ ಎಂದು ವರದಿಯೊಂದು ತಿಳಿಸಿದೆ. ಪಾಟ್ನಾದಲ್ಲಿ ಶುಕ್ರವಾರ ನಡೆಯಲಿರುವ ಈ ಸಭೆಯು 2024 … Continued

ಪ್ರಧಾನಿ ಮೋದಿಯ ಅಮೆರಿಕ ಭೇಟಿ ನಡುವೆ ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್ ತಯಾರಿಸಲು ಎಚ್‌ಎಎಲ್‌-ಅಮೆರಿಕದ ಜೆನರಲ್‌ ಇಲೆಕ್ಟ್ರಿಕ್‌ ಒಪ್ಪಂದ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ಮಧ್ಯೆ, ಜೆನರಲ್‌ ಇಲೆಕ್ಟ್ರಿಕ್‌ (GE) ಏರೋಸ್ಪೇಸ್ ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಇಂದು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪ್ರಕಟಿಸಿದೆ. ಅಮೆರಿಕದ ಜಿಇ ಏರೋಸ್ಪೇಸ್ ಈ ಒಪ್ಪಂದವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ … Continued

ವಿಚ್ಛೇದನ ಪ್ರಕ್ರಿಯೆ ವಿಳಂಬಕ್ಕೆ ಅಸಮಾಧಾನ: ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಕಾರು ಧ್ವಂಸಗೊಳಿಸಿದ ಕೇರಳದ ವ್ಯಕ್ತಿ

ತಿರುವನಂತಪುರಂ: 55 ವರ್ಷದ ವ್ಯಕ್ತಿಯೊಬ್ಬ ತನ್ನ ವಿಚ್ಛೇದನ ಪ್ರಕ್ರಿಯೆ ವಿಳಂಬವಾಗಿದ್ದಕ್ಕೆ ಅಸಮಾಧಾನಗೊಂಡು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಕಾರಿಗೆ ಹಾನಿ ಮಾಡಿದ ಧ್ವಂಸಗೊಳಿಸಿದ ಘಟನೆ ಕೇರಳದ ತಿರುವಲ್ಲಾ ಕೋರ್ಟ್ ಆವರಣದಲ್ಲಿ ನಡೆದಿದೆ. 55 ವರ್ಷದ ಇ.ಪಿ. ಜಯಪ್ರಕಾಶ ಎಂಬ ವ್ಯಕ್ತಿಯನ್ನು ಪೊಲೀಸರು ನಂತರ ವಶಕ್ಕೆ ತೆಗೆದುಕೊಂಡರು. ಬುಧವಾರ ಸಂಜೆ 4:30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ … Continued

ತಲೆಗೆ ₹ 21,000 ಬಹುಮಾನ‌ ಘೋಷಿಸಿದ್ದ ‘ಮೋಸ್ಟ್ ವಾಂಟೆಡ್’ ಕೋತಿ ಕೊನೆಗೂ ಸೆರೆ

ಭೋಪಾಲ್: ತನ್ನ ತಲೆಗೆ ₹ 21,000 ಬಹುಮಾನ ಹೊತ್ತಿದ್ದ ಕೋತಿಯೊಂದು ಕೊನೆಗೂ ಸೆರೆ ಸಿಕ್ಕಿದೆ. ಮಧ್ಯಪ್ರದೇಶದ ರಾಜ್‌ಗಢ ಪಟ್ಟಣದಲ್ಲಿ ಎರಡು ವಾರಗಳಲ್ಲಿ 20 ಜನರ ಮೇಲೆ ದಾಳಿ ನಡೆಸಿ ಭಯವನ್ನುಂಟು ಮಾಡಿದ್ದ ಕೋತಿಯನ್ನು ಹಿಡಿಯಲಾಗಿದೆ. ಬುಧವಾರ (ಜೂನ್‌ 21) ಸಂಜೆ, ಉಜ್ಜಯಿನಿಯಿಂದ ಕರೆಸಲಾಗಿದ್ದ ವಿಶೇಷ ತಂಡವು ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ʼಉಗ್ರʼ … Continued

ಎನ್‌ಪಿಎಸ್‌ನಲ್ಲಿ ಬದಲಾವಣೆಗೆ ಕೇಂದ್ರ ಚಿಂತನೆ, ಶೇ.45 ಪಿಂಚಣಿ ಸಿಗುವ ಸಾಧ್ಯತೆ : ವರದಿ

ನವದೆಹಲಿ: ಸದ್ಯ ಜಾರಿಯಲ್ಲಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌)ಯಲ್ಲಿ ಕೆಲವೊಂದು ಬದಲಾವಣೆ ತರುವುದನ್ನು ಕೇಂದ್ರ ಸರ್ಕಾರ   ಪರಿಗಣಿಸುತ್ತಿದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಪಡೆದಿರುವ ಕೊನೆಯ ಸಂಬಳದ ಶೇ.40ರಿಂದ ಶೇ.45ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡುವ ಬಗ್ಗೆ ಶಿಫಾರಸು ಮಾಡುವ ಸಾಧ್ಯತೆಗಳಿವೆ … Continued