ಕಾರ್ಯಕ್ರಮದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು 13 ಮಂದಿ ಸಾವು

ಕುಶಿನಗರ (ಉತ್ತರ ಪ್ರದೇಶ): ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಪೊಲೀಸ್ ಠಾಣೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹಳದಿ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಬಂಧಿಕರು ಜಮಾಯಿಸಿದಾಗ, ಬಾವಿಯ ಮೇಲಿನ ಕಬ್ಬಿಣದ ಗ್ರಿಲ್ ತುಂಡಾಗಿ ಅನೇಕರು ಬಾವಿಯಲ್ಲಿ ಬಿದ್ದಿದ್ದು, ಕನಿಷ್ಠ 13 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು … Continued

ಅಯ್ಯೋ ದೇವರೆ… ಪ್ಲಾಸ್ಟಿಕ್ ಕ್ಯಾನಿನೊಳಗೆ ತಲೆ ಸಿಲುಕಿಸಿಕೊಂಡ ಚಿರತೆ…! ವೀಕ್ಷಿಸಿ

ಥಾಣೆ: ಪ್ಲಾಸ್ಟಿಕ್‌ ಕ್ಯಾನಿನಲ್ಲಿ ತಲೆ ಸಿಲುಕಿಕೊಂಡ ಚಿರತೆ ಮರಿಯೊಂದು ಅರಣ್ಯಾಧಿಕಾರಿಗಳು, ಸ್ವಯಂಸೇವಕರು ಮತ್ತು ಗ್ರಾಮಸ್ಥರು ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದಾಗಿ ಸುಮಾರು 48 ಗಂಟೆಗಳ ನಂತರ ನೋವಿನಿಂದ ಮುಕ್ತವಾಗಿದೆ. ಈ ಅಗ್ನಿಪರೀಕ್ಷೆಯು ದೊಡ್ಡ ಬೆಕ್ಕಿಗೆ ಸರಿಯಾಗಿ ಉಸಿರಾಡಲು ಅಥವಾ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದೆ ಸುಮಾರು ಎರಡು ದಿನಗಳ ವರೆಗೆ ಆಹಾರ ಸಿಗದೆ ತೀವ್ರವಾಗಿ ದಣಿದಿದೆ. ಥಾಣೆ … Continued

ಹೊಸ ಸುರಕ್ಷತಾ ನಿಯಮ: ಮೋಟಾರ್ ಸೈಕಲ್‌ಗಳಲ್ಲಿ ಹೋಗುವ 4 ವರ್ಷದೊಳಗಿನ ಮಕ್ಕಳಿಗೆ ಕ್ರ್ಯಾಶ್ ಹೆಲ್ಮೆಟ್, ಸುರಕ್ಷತಾ ಸರಂಜಾಮು ಕಡ್ಡಾಯ, ವೇಗದ ಮಿತಿಯೂ ನಿಗದಿ

ನವದೆಹಲಿ: 4 ವರ್ಷದೊಳಗಿನ ಮಕ್ಕಳ ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆ ಸಾರಿಗೆ ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸಿದ್ದು, ನಾಲ್ಕು ವರ್ಷದೊಳಗಿನ ಮಕ್ಕಳು ಕ್ರ್ಯಾಶ್ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಅವರನ್ನು ಸಾಗಿಸುವ ದ್ವಿಚಕ್ರ ವಾಹನಗಳು ಸರಂಜಾಮು ಸುರಕ್ಷತೆ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ನಾಲ್ಕು ವರ್ಷದೊಳಗಿನ ಮಗುವನ್ನು ಪಿಲಿಯನ್‌ನಲ್ಲಿ ಸಾಗಿಸುವ ಮೋಟಾರ್‌ಸೈಕಲ್‌ನ ವೇಗ ಗಂಟೆಗೆ 40 ಕಿಮೀ … Continued

ಈ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್‌ನಿಂದ 55,000ಕ್ಕೂ ಹೆಚ್ಚು ಜನರ ನೇಮಕಕ್ಕೆ ಚಿಂತನೆ: ಸಿಇಒ ಸಲೀಲ್ ಪರೇಖ್

ಬೆಂಗಳೂರು: ಎರಡನೇ ಅತಿದೊಡ್ಡ ಐಟಿ ರಫ್ತುದಾರ ಇನ್ಫೋಸಿಸ್ 2022-23ನೇ ಸಾಲಿನಲ್ಲಿ ಕ್ಯಾಂಪಸ್‌ಗಳಿಂದ 55,000ಕ್ಕೂ ಹೆಚ್ಚು ಹೊಸ ಪದವೀಧರರನ್ನು ನೇಮಿಸಿಕೊಳ್ಳಬಹುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಲಿಲ್‌ ಪಾರೇಖ್‌ ಬುಧವಾರ ಹೇಳಿದ್ದಾರೆ. ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಸಲೀಲ್ ಪರೇಖ್ ಮಾತನಾಡಿ, ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರಿಗೆ ಟೆಕ್ ವಲಯದಲ್ಲಿ ಅಪಾರ ಅವಕಾಶಗಳು … Continued

ಮಹಿಳೆಯ ಕಿಬ್ಬೊಟ್ಟೆಯಲ್ಲಿತ್ತು 47 ಕೆಜಿ ತೂಕದ ಗಡ್ಡೆ…! ಮಹಿಳೆ ತೂಕಕ್ಕಿಂತ ಹೆಚ್ಚು ತೂಕದ ಮಾಂಸ ಹೊರತೆಗೆದ ವೈದ್ಯರು..!!

ಅಹಮದಾಬಾದ್‌: ಗುಜರಾತಿನ ಅಹಮದಾಬಾದ್‌ನ ವೈದ್ಯರು ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 47 ಕೆಜಿ ಗಡ್ಡೆಯನ್ನು ಹೊರತೆಗೆಯುವ ಮೂಲಕ ಹೊಸ ಜೀವನ ನೀಡಿದ್ದಾರೆ. ಗಡ್ಡೆಯ ಕಾರಣ ಮಹಿಳೆಯ ತೂಕವು ಬಹುತೇಕ ದ್ವಿಗುಣಗೊಂಡಿತ್ತು. ಗಡ್ಡೆ ತೆಗೆದ ನಂತರ ಮಹಿಳೆಯ ತೂಕ ಕೇವಲ 49 ಕೆ.ಜಿಗೆ ಇಳಿಯಿತು. ನಗರದ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಿಂದ ಶಾಂತಿಯನ್ನು (ಹೆಸರು ಬದಲಾಯಿಸಲಾಗಿದೆ) ಹೊರತೆಗೆದಾಗ, ಅವರ ದೇಹದಿಂದ ನಿಜವಾಗಿಯೂ … Continued

ವಿಚಾರಣೆ ವೇಳೆ ತಂಪು ಪಾನೀಯ ಸೇವನೆ: ಪೊಲೀಸ್ ಅಧಿಕಾರಿಗೆ 100 ಕೋಕ್ ಕ್ಯಾನ್‌ಗಳ ʼದಂಡʼ ವಿಧಿಸಿದ ಗುಜರಾತ್ ಹೈಕೋರ್ಟ್

ನ್ಯಾಯಾಲಯದ ವಿಚಾರಣೆಯ ವೇಳೆ ಕೋಕಾ ಕೋಲಾ ಕುಡಿಯುತ್ತಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಮಂಗಳವಾರ ಗುಜರಾತ್ ಹೈಕೋರ್ಟ್‌ನ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಾಗೂ ಕೋರ್ಟ್‌ ಅವರಿಗೆ 100 ಕೋಕ್ ಕ್ಯಾನ್‌ ದಂಡ ಹಾಕಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ ತಮ್ಮ ಅಸಮಂಜಸ ವರ್ತನೆಯ ಪರಿಣಾಮ 100 ಕೋಕ್ ಕ್ಯಾನ್‌ಗಳನ್ನು ವಕೀಲರ ಸಂಘದ ಪ್ರತಿಯೊಬ್ಬರಿಗೂ ನೀಡುವಂತೆ ಮುಖ್ಯ ನ್ಯಾಯಮೂರ್ತಿ … Continued

42 ಲಕ್ಷ ರೂ. ಖರ್ಚು ಮಾಡಿ ಶ್ರೀಕೃಷ್ಣ ಮಂದಿರ ಕಟ್ಟಿದ ಮುಸ್ಲಿಂ ಉದ್ಯಮಿ..!

ರಾಂಚಿ: ಜಾರ್ಖಂಡ್‌ನ ದುಮ್ಕಾದ ಮಹೇಶ್‌ಬಥನ್‌ನಲ್ಲಿ ಉದ್ಯಮಿ ನೌಶಾದ್ ಶೇಖ್ ಅವರು ಸುಮಾರು 42 ಲಕ್ಷ ರೂಪಾಯಿ ಖರ್ಚು ಮಾಡಿ ಶ್ರೀಕೃಷ್ಣನ ದೇವಸ್ಥಾನವನ್ನು ನಿರ್ಮಿಸಿದ್ದಾರೆ…! ರಣೀಶ್ವರ್ ಬ್ಲಾಕ್‌ನ ಪ್ರಮುಖರೂ ಆಗಿರುವ ಶೇಖ್ ಅವರು ಎಲ್ಲಾ ಧರ್ಮಗಳ ಬಗ್ಗೆ ಗೌರವವನ್ನು ಹೊಂದಿದ್ದಾರೆ ಮತ್ತು ಅವರು ಶ್ರೀಕೃಷ್ಣನಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳುತ್ತಾರೆ. ಮುಸ್ಲಿಮನಾಗಿದ್ದರೂ ದೇವಸ್ಥಾನವನ್ನು ಏಕೆ ಕಟ್ಟಿದ್ದೀರಿ ಎಂಬ ಪ್ರಶ್ನೆಗೆ … Continued

ಬುರ್ಖಾಧಾರಿ ಮಹಿಳೆಯಿಂದ ಕ್ಯಾಬ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ

ಗುರುಗ್ರಾಮ್: ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಬುರ್ಖಾ ಧರಿಸಿದ ಮಹಿಳೆಯೊಬ್ಬರು ಕ್ಯಾಬ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ. ಗುರುಗ್ರಾಮ್‌ನ ರಾಜೀವ್ ಚೌಕ್ ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಗುರುತು ಮತ್ತು ಉದ್ದೇಶ ಇನ್ನೂ ತಿಳಿದುಬರಬೇಕಿಗದ್ದು, ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು … Continued

ಕರ್ನಾಟಕದ ಹಿಜಾಬ್ ವಿವಾದ ವಿರೋಧಿಸಿ ಆಗ್ರಾದ ತಾಜ್ ಮಹಲ್ ಪ್ರವೇಶಿಸಿ ಹನುಮಾನ್ ಚಾಲೀಸಾ ಪಠಿಸಲು ಯತ್ನ..!

ಆಗ್ರಾ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ವಿರೋಧಿಸಿ ಬಲಪಂಥೀಯ ಸಂಘಟನೆಗಳ ಸದಸ್ಯರು ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್ ಆವರಣಕ್ಕೆ ನುಗ್ಗಿ ಹನುಮಾನ್ ಚಾಲೀಸಾ ಪಠಿಸಲು ಯತ್ನಿಸಿದ್ದಾರೆ. ಆದಾಗ್ಯೂ, ಪ್ರತಿಭಟನಾಕಾರರು ತಾಜ್ ಮಹಲ್ ಪ್ರವೇಶಿಸದಂತೆ ಅವರನ್ನು ಪೊಲೀಸರು ತಡೆದಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಜನರು ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿರ್ಬಂಧಿಸಬೇಕು ಮತ್ತು ‘ಹಿಜಾಬ್’ ಹೆಸರಿನಲ್ಲಿ ತೊಂದರೆ ನೀಡುವವರಿಗೆ ಕಠಿಣ … Continued

ದೇಶದ ಅತಿ ಕಿರಿಯ ಮೇಯರ್‌ ಜೊತೆ ಕೇರಳ ಅತಿ ಕಿರಿಯ ಶಾಸಕನ ಮದುವೆ..!

ಕೋಝಿಕೋಡ್:ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳದ ಅತ್ಯಂತ ಕಿರಿಯ ಶಾಸಕ ಕೆ.ಎಂ. ಸಚಿನ್ ದೇವ್ ಅವರು ಒಂದು ತಿಂಗಳೊಳಗೆ ವಿವಾಹವಾಗಲಿದ್ದಾರೆ. ಫೆ.16ರ ಬುಧವಾರ ದೇವ್ ಅವರ ತಂದೆ ಕೆ.ಎಂ.ನಂದಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕುಟುಂಬಸ್ಥರು ಭೇಟಿಯಾಗಿ ವಿವಾಹದ ಕುರಿತು ಚರ್ಚಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ತಿರುವನಂತಪುರದ ಮೇಯರ್ ಆಗಿರುವ … Continued