ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಸಮಾರಂಭದಲ್ಲಿ ಬಿಸಿಲ ತಾಪದಿಂದ 11 ಮಂದಿ ಸಾವು

ಮುಂಬೈ: ಭಾನುವಾರ ನಡೆದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಯಲಿನಲ್ಲಿ ಕುಳಿತಿದ್ದ 11 ಮಂದಿ ಬಿಸಿಲ ತಾಪದಿಂದ ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಸುಮಾರು 50 ಜನರು ಶಾಖ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ದಾಖಲಾಗಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ, ಮಹಾರಾಷ್ಟ್ರ ಸರ್ಕಾರವು ಸ್ಥಾಪಿಸಿದ ಪ್ರಶಸ್ತಿಯನ್ನು … Continued

ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ 2 ವರ್ಷಗಳ ನಂತರ ಮನೆ ಮುಂದೆ ಪ್ರತ್ಯಕ್ಷ..!!

ಧಾರ್ (ಮಧ್ಯಪ್ರದೇಶ) : ಆಸ್ಪತ್ರೆಯಲ್ಲಿ ಕೋವಿಡ್-19 ನಿಂದಾಗಿ “ಮೃತ” ಎಂದು ಘೋಷಿಸಿದ ವ್ಯಕ್ತಿಯೊಬ್ಬನ ಕುಟುಂಬ ಸದಸ್ಯರು ಆತನ ಅಂತ್ಯಕ್ರಿಯೆ ನೆರವೇರಿಸಿದ ಎರಡು ವರ್ಷಗಳ ನಂತರ ಆತ ಮನೆಗೆ ಮರಳಿದ್ದಾನೆ. ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಕಮಲೇಶ ಪಾಟಿದಾರ್ (35) ಎಂಬ ವ್ಯಕ್ತಿ ತಮ್ಮ ಕುಟುಂಬವರು ತಮ್ಮ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಸುಮಾರು ಎರಡು ವರ್ಷಗಳ … Continued

ಫೆಮಿನಾ ಮಿಸ್ ಇಂಡಿಯಾ 2023 : 19 ವರ್ಷದ ನಂದಿನಿ ಗುಪ್ತಾಗೆ ಮಿಸ್ ಇಂಡಿಯಾ ಕಿರೀಟ

ಮುಂಬೈ: ರಾಜಸ್ಥಾನದ ಕೋಟಾದ ನಂದಿನಿ ಗುಪ್ತಾ ಅವರು ಫೆಮಿನಾ ಮಿಸ್ ಇಂಡಿಯಾ 2023 ಕಿರೀಟವನ್ನು ಗೆದ್ದಿದ್ದಾರೆ. ಏಪ್ರಿಲ್ 15 ರಂದು ನಡೆದ ಗ್ರ್ಯಾಂಡ್ ಫಿನಾಲೆ ಸಮಾರಂಭದಲ್ಲಿ ನಂದಿನಿ ಅವರಿಗೆ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ನೀಡಲಾಯಿತು. ಭಾರತದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯ 59 ನೇ ಆವೃತ್ತಿಯು ಮಣಿಪುರ ಇಂಫಾಲದ ಖುಮಾನ್ ಲ್ಯಾಂಪಕ್‌ನ ಒಳಾಂಗಣ ಕ್ರೀಡಾಂಗಣದಲ್ಲಿ … Continued

ಮಾಜಿ ಸಂಸದನ ಹತ್ಯೆ ಪ್ರಕರಣ : ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಭಾಸ್ಕರ ರೆಡ್ಡಿ ಬಂಧಿಸಿದ ಸಿಬಿಐ

ನವದೆಹಲಿ: ಮಾಜಿ ಸಂಸದ ವಿವೇಕಾನಂದ ರೆಡ್ಡಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ. ಎಸ್ ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಭಾನುವಾರ (ಏಪ್ರಿಲ್ 16) ಬಂಧಿಸಿದೆ. ಹತ್ಯೆಯಾಗಿದ್ದ ವಿವೇಕಾನಂದ ರೆಡ್ಡಿ ಸಹ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ … Continued

ತನ್ನ ಮರಿಯನ್ನು ರಕ್ಷಿಸಲು ಮೊಸಳೆ ಮೇಲೆ ದಾಳಿ ಮಾಡಿದ ತಾಯಿ ಆನೆ, ಕೊಳದಿಂದಲೇ ಪಲಾಯನ ಮಾಡಿದ ಮೊಸಳೆ | ವೀಕ್ಷಿಸಿ

ತಾಯಂದಿರು ಶೌರ್ಯ ಮತ್ತು ಧೈರ್ಯದ ಪ್ರತಿರೂಪ ಮತ್ತು ತಾಯಿಯಂತೆ ಯಾರೂ ಮಗುವನ್ನು ರಕ್ಷಿಸಲು ಸಾಧ್ಯವಿಲ್ಲ. ತನ್ನ ಮಗುವನ್ನು ರಕ್ಷಿಸಲು ಅವಳು ತನ್ನ ಜೀವವನ್ನೇ ಅಪಾಯಕ್ಕೆ ತಳ್ಳಬಹುದು. ಅಂತಹ ಬಲವಾದ ಪ್ರವೃತ್ತಿಗಳು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಕಂಡುಬರುತ್ತವೆ. ತಾಯಿ ಆನೆಯೊಂದು ತನ್ನ ಮಗುವನ್ನು ರಕ್ಷಿಸಲು ಮೊಸಳೆ ಮೇಲೆ ದಾಳಿ ಮಾಡುವುದನ್ನು ತೋರಿಸುವ ಇಂತಹ ವೀಡಿಯೊ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ. … Continued

ದೆಹಲಿಯಲ್ಲಿ ಒಂದೇ ದಿನಕ್ಕೆ 1,300 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲು, 30% ದಾಟಿದ ಪಾಸಿಟಿವಿಟಿ ದರ

ನವದೆಹಲಿ: ದೆಹಲಿ ಆರೋಗ್ಯ ಇಲಾಖೆ ಶನಿವಾರದ ದೈನಂದಿನ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 1,300 ಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಹಾಗೂ ಪಾಸಿಟಿವಿಟಿ ದರ ಶೇಕಡಾ 30 ಕ್ಕಿಂತ ಹೆಚ್ಚು ಎಂಬುದು ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಒಟ್ಟು 1,369 ಕೊರೊನಾ ಪ್ರಕರಣಗಳು ದಾಖಲಾಗಿವೆ. ಪಾಸಿಟಿವಿಟಿ … Continued

ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಅತೀಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ ನಲ್ಲಿ ಹತ್ಯೆ

ಲಕ್ನೋ: ಮಾಜಿ ಸಂಸದ, ಕುಖ್ಯಾತ ಗ್ಯಾಂಗ್‌ಸ್ಟರ್‌ ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಗ್ಯಾಂಗ್‌ಸ್ಟರ್‌ ಅತಿಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ ನಲ್ಲಿ ಹತ್ಯೆ ಅತೀಕ್‌ ಅಹ್ಮದ್‌ (Atiq Ahmed) ಮತ್ತು ಸಹೋದರ ಅಶ್ರಫ್‌ ಅಹ್ಮದ್‌ ಗ್ಯಾಂಗ್‌ವಾರ್‌ ಗೆ ಬಲಿಯಾಗಿದ್ದಾರೆ. ಇಬ್ಬರನ್ನು ಶನಿವಾರ ಪ್ರಯಾಗ್‌ರಾಜ್‌ ಆಸ್ಪತ್ರೆಗೆ ಮೆಡಿಕಲ್‌ ಚೆಕಪ್‌ಗಾಗಿ ಕರೆದುಕೊಂಡು ಹೋಗುವಾಗ ಅತೀಕ್‌ ಅಹಮ್ಮದ್‌ ಮಾಧ್ಯಮಗಳ ಮುಂದೆ ಮಾತನಾಡಲು ಮುಂದಾದಾಗ ಎಲ್ಲಿಂದಲೋ … Continued

ಹುಬ್ಬಳ್ಳಿ: ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆ-ಅಸಮಾಧಾನಗೊಂಡಿರುವ ಜಗದೀಶ ಶೆಟ್ಟರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ, ಮಾತುಕತೆ

ಹುಬ್ಬಳ್ಳಿ:ಬಿಜೆಪಿ ಪ್ರಕಟಿಸಿದ ಎರಡು ಪಟ್ಟಿಗಳಲ್ಲಿ ತನಗೆ ಟಿಕೆಟ್ ಘೋಷಣೆಯಾಗದ ಕಾರಣ ತೀವ್ರ ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಹುಬ್ಬಳ್ಳಿಯಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈಗ ಅಖಾಡಾಕ್ಕೆ ಧುಮುಕಿದ್ದು ಜಗದೀಶ್ ಶೆಟ್ಟರ ಮನೆಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗುವುದು ಇನ್ನೂ … Continued

ಬೆಳ್ಳಂಬೆಳಗ್ಗೆ ಪ್ರಪಾತಕ್ಕೆ ಉರುಳಿದ ಬಸ್ : 12 ಮಂದಿ ಸಾವು, 27 ಜನರಿಗೆ ಗಾಯ

ಮುಂಬೈ: ಬಸ್ಸೊಂದು ಕಮರಿಗೆ ಬಿದ್ದು ಸುಮಾರು 12 ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ – ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ಸಂಗೀತ ತಂಡವೊಂದರ ಸದಸ್ಯರನ್ನು ಪುಣೆಯಿಂದ ಮುಂಬೈಗೆ ಕರೆದೊಯ್ಯುತ್ತಿದ್ದ ವೇಳೆ ಹೆದ್ದಾರಿಯ ಶಿಂಗ್ರೋಬಾ ದೇವಸ್ಥಾನದ ಬಳಿ ಮುಂಜಾನೆ 4:50ರ ಸುಮಾರಿಗೆ ಈ ಅಪಘಡ ಸಂಭವಿಸಿದೆ. ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದು, … Continued

125 ಅಡಿ ಎತ್ತರದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ

ಹೈದರಾಬಾದ್‌ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಶುಕ್ರವಾರ ಹೈದರಾಬಾದ್‌ನಲ್ಲಿ 125 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಹೈದರಾಬಾದ್‌ನ ಈ ಡಾ.ಅಂಬೇಡ್ಕರ್ ಪ್ರತಿಮೆಯು ಭಾರತದ ಅತಿ ಎತ್ತರದ ಪ್ರತಿಮೆಯಾಗಿದೆ. ಅನಾವರಣ ಸಮಾರಂಭದಲ್ಲಿ 35,000 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಪ್ರತಿಮೆಯು ಹೈದರಾಬಾದ್‌ನ ಪ್ರಸಿದ್ಧ ಹುಸೇನ್ ಸಾಗರ್ ಸರೋವರದ … Continued