75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ…: ಕೇಂದ್ರವು ದೆಹಲಿ ಬಜೆಟ್ ಮಂಡನೆ ತಡೆಹಿಡಿದ ನಂತರ ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪತ್ರ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಅನುಮೋದನೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ದೇಶದ 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಬಜೆಟ್ ಮಂಡನೆಯನ್ನು ತಡೆಹಿಡಿಯಲಾಗಿದೆ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ನೀವು ದೆಹಲಿಯ … Continued

ಇಂಟರ್‌ಪೋಲ್‌ನ ವಾಂಟೆಡ್ ಪಟ್ಟಿಯಿಂದ ಮೆಹುಲ್ ಚೋಕ್ಸಿ ಹೊರಕ್ಕೆ : ಜಗತ್ತಿನಾದ್ಯಂತ ಮುಕ್ತವಾಗಿ ಪ್ರಯಾಣಿಸಬಹುದು-ವರದಿ

ನವದೆಹಲಿ: ಭಾರತದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಹೊರಡಿಸಿದ್ದ ರೆಡ್ ಕಾರ್ನರ್ ನೋಟಿಸ್ ಅನ್ನು ಇಂಟರ್‌ಪೋಲ್ ಹಿಂಪಡೆದಿದೆ ಎಂದು ವರದಿಯಾಗಿದೆ. ನವದೆಹಲಿ: ಆದಾಗ್ಯೂ, ಭಾರತದಲ್ಲಿನ ಇಂಟರ್‌ಪೋಲ್‌ನ ನೋಡಲ್ ಏಜೆನ್ಸಿಯಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಇನ್ನೂ ಈ ನಿರ್ಧಾರವನ್ನು ಖಚಿತಪಡಿಸಿಲ್ಲ ಅಥವಾ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ನೋಟಿಸ್ ಹಿಂಪಡೆಯುವುದರಿಂದ ಚೋಕ್ಸಿ ಪ್ರಪಂಚದಾದ್ಯಂತ ಮುಕ್ತವಾಗಿ … Continued

ಇದು ಆಗದ ಹೊರತು ಬಿಜೆಪಿ ಸೋಲಿಸಲು ಸಾಧ್ಯವಿಲ್ಲ : ವಿಪಕ್ಷಗಳಿಗೆ ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಸಲಹೆ

ನವದೆಹಲಿ : ಅಸ್ಥಿರ ಮತ್ತು ಸೈದ್ಧಾಂತಿಕವಾಗಿ ಪರಸ್ಪರ ಭಿನ್ನವಾಗಿರುವುದರಿಂದ 2024ರಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟು ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಪ್ರಶಾಂತ ಕಿಶೋರ ಭವಿಷ್ಯ ನುಡಿದಿದ್ದಾರೆ. ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಿಂದಾದ ಪ್ರಯೋಜನಗಳನ್ನು ಸಹ ಚುನಾವಣಾ ತಂತ್ರಜ್ಞರು ಪ್ರಶ್ನಿಸಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟು ಕೇವಲ ಪಕ್ಷಗಳು ಅಥವಾ ನಾಯಕರನ್ನು ಒಟ್ಟಿಗೆ ಸೇರಿಸುವುದರಿಂದ ಸಾಧ್ಯವಿಲ್ಲ ಎಂದು … Continued

ಭಾರತದಲ್ಲಿ ಖಾಲಿಸ್ತಾನಿ ಪರ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ವಿರುದ್ಧದ ಪೊಲೀಸ್ ಕ್ರಮ ವಿರೋಧಿಸಿ ಪ್ರತಿಭಟನೆಗಳ ನಂತರ ಭಾರತದಲ್ಲಿ ಕೆನಡಾದ ನ್ಯೂ ಡೆಮಾಕ್ರಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಸೇರಿದಂತೆ ಖಾಲಿಸ್ತಾನ್ ಪರ ಟ್ವಿಟರ್ ಖಾತೆಗಳನ್ನು ಬ್ಲಾಕ್‌ ಮಾಡಲಾಗಿದೆ. ಖಾಲಿಸ್ತಾನಿ ಘಟಕಗಳು ವಿದೇಶಿ ರಾಷ್ಟ್ರಗಳಲ್ಲಿನ ಭಾರತೀಯ ಕಾನ್ಸುಲೇಟ್‌ಗಳು ಮತ್ತು ಹೈಕಮಿಷನ್‌ಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸುತ್ತಿರುವ ಸಮಯದಲ್ಲಿ ಇದು … Continued

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸದ ಮೇಲೆ ಖಾಲಿಸ್ತಾನ್ ಬೆಂಬಲಿಗರಿಂದ ದಾಳಿ: ಬಾಗಿಲು-ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದರು

ನವದೆಹಲಿ : ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದಲ್ಲಿ ಖಾಲಿಸ್ತಾನ್ ಬೆಂಬಲಿಗರು ರಾಷ್ಟ್ರಧ್ವಜವನ್ನು ಕೆಳಗಿಳಿಸಿದ ಬೆನ್ನಲ್ಲೇ, ಬೃಹತ್ ಜನಸಮೂಹವು ಯುಎಸ್‌ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಮೇಲೆ ದಾಳಿ ನಡೆಸುತ್ತಿರುವ ವೀಡಿಯೊಗಳು ಹೊರಹೊಮ್ಮಿವೆ. ಹಿನ್ನಲೆಯಲ್ಲಿ ಜೋರಾಗಿ ಪಂಜಾಬಿ ಸಂಗೀತ ಕೇಳುತ್ತದೆ. ಅವರು ಕಟ್ಟಡದ ಹೊರ ಗೋಡೆಯ ಮೇಲೆ “ಅಮೃತಪಾಲ್ ಬಿಡುಗಡೆ” ಎಂಬ ಬೃಹತ್ ಗೀಚುಬರಹವನ್ನು ಸಹ ಸಿಂಪಡಿಸಿದ್ದಾರೆ. … Continued

ಖಾಲಿಸ್ತಾನಿಗಳಿಗೆ ಭಾರತದ ದಿಟ್ಟ ಪ್ರತ್ಯುತ್ತರ; ಲಂಡನ್‌ ಹೈಕಮಿಷನ್‌ ಕಟ್ಟಡ ಅಲಂಕರಿಸಿದ ಬೃಹತ್‌ ತ್ರಿವರ್ಣ ಧ್ವಜ

ನವದೆಹಲಿ: ಪಂಜಾಬ್‌ನಲ್ಲಿ ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ವಿರುದ್ಧದ ಕ್ರಮವನ್ನು ವಿರೋಧಿಸಿ ಖಾಲಿಸ್ತಾನಿ ಬೆಂಬಲಿಗರು ಭಾರತೀಯ ಧ್ವಜವನ್ನು ಕೆಳಗೆ ಎಳೆದುಹಾಕಿದ ಕೆಲವೇ ಗಂಟೆಗಳ ನಂತರ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡ ಬೃಹತ್ ತ್ರಿವರ್ಣ ಧ್ವಜವು ಅಲಂಕರಿಸಿದೆ. ದೈತ್ಯ ಭಾರತೀಯ ತ್ರಿವರ್ಣ ಧ್ವಜದ ಫೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ, ಅನೇಕರು … Continued

ಪ್ರಧಾನಿ ಮೋದಿಯವರ ದೊಡ್ಡ ಟಿಆರ್‌ಪಿಯೇ ರಾಹುಲ್‌ ಗಾಂಧಿ : ಮಮತಾ ಬ್ಯಾನರ್ಜಿ ವಾಗ್ದಾಳಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಭಾನುವಾರ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ “ಅತಿದೊಡ್ಡ ಟಿಆರ್‌ಪಿ” ರೇಟಿಂಗ್‌ ಎಂದು ಟಿಎಂಸಿ ಕಾರ್ಯಕರ್ತರಿಗೆ ಮಮತಾ … Continued

5 ಮತ್ತು 8ನೇ ತರಗತಿಗೆ ಬೋರ್ಡ್​ ಪರೀಕ್ಷೆ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ, ಅರ್ಜಿ ಆಲಿಸಲು ಸಮ್ಮತಿ

ನವದೆಹಲಿ: ಕರ್ನಾಟಕ ರಾಜ್ಯದ ಬೋರ್ಡ್ ಪಠ್ಯಕ್ರಮ ಅಧ್ಯಯನ ಮಾಡುವ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸರ್ಕಾರಕ್ಕೆ ಅನುಮತಿ ನೀಡುವ ಕರ್ನಾಟಕ ಹೈಕೋರ್ಟ್ ಆದೇಶದ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಮಾರ್ಚ್ 27 ರಂದು ವಿಚಾರಣೆ ಮಾಡಲು ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು … Continued

ನಟ ರಜನಿಕಾಂತ್‌ ಪುತ್ರಿಯ ಲಾಕರ್‌ನಿಂದ ಚಿನ್ನಾಭರಣ ಕಳ್ಳತನ: ಪೊಲೀಸರಿಗೆ ದೂರು ನೀಡಿದ ಐಶ್ವರ್ಯ

ಚೆನ್ನೈ: ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ರಜನಿಕಾಂತ್ ಅವರು ತೆನಾಂಪೇಟೆ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಲಾಕರ್‌ನಲ್ಲಿದ್ದ 60 ಪವನ್ ಚಿನ್ನ ಮತ್ತು ವಜ್ರದ ಆಭರಣಗಳು ತಮ್ಮ ಚೆನ್ನೈನ ಮನೆಯಿಂದ ನಾಪತ್ತೆಯಾಗಿವೆ ಎಂದು ಹೇಳಿದ್ದಾರೆ. ಬೆಲೆಬಾಳುವ ವಸ್ತುಗಳು 3.60 ಲಕ್ಷ ರೂಪಾಯಿಗಳಾಗಿದ್ದು, 2019 ರಲ್ಲಿ ತನ್ನ ಸಹೋದರಿ ಸೌಂದರ್ಯ ಅವರ ಮದುವೆಗೆ ಬಳಸಿದ್ದಾಗಿ ಹೇಳಿದ್ದಾರೆ. … Continued

ಜಲಂಧರ್‌ನಲ್ಲಿ ಪೊಲೀಸರಿಗೆ ಶರಣಾದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ಚಿಕ್ಕಪ್ಪ, ಚಾಲಕ

ನವದೆಹಲಿ: ತೀವ್ರಗಾಮಿ ಬೋಧಕ ಮತ್ತು ಖಾಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ಚಿಕ್ಕಪ್ಪ ಮತ್ತು ಚಾಲಕ ಜಲಂಧರ್‌ನಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಪೋಲೀಸ್ ಸೋಮವಾರ ತಿಳಿಸಿದ್ದಾರೆ. ಅಮೃತಪಾಲ್ ಚಿಕ್ಕಪ್ಪ ಹರ್ಜಿತ್ ಸಿಂಗ್ ಮತ್ತು ಚಾಲಕ ಹರ್‌ಪ್ರೀತ್ ಸಿಂಗ್ ಭಾನುವಾರ ತಡರಾತ್ರಿ ಮೆಹತ್‌ಪುರ ಪ್ರದೇಶದ ಗುರುದ್ವಾರದ ಬಳಿ ಶರಣಾಗಿದ್ದಾರೆ ಎಂದು ಜಲಂಧರ್ ಹಿರಿಯ ಪೊಲೀಸ್ … Continued