ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ 14 ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಈ ವಿಷಯವನ್ನು ಇಂದು, ಶುಕ್ರವಾರ ಸಿಜೆಐ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಮುಂದೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರಸ್ತಾಪಿಸಿದ್ದಾರೆ. ಬಂಧನ, ರಿಮಾಂಡ್ ಮತ್ತು ಜಾಮೀನಿನ ಕುರಿತು ಕಾನೂನು ಜಾರಿ … Continued

19,000 ಉದ್ಯೋಗಿಗಳನ್ನು ವಜಾ ಮಾಡಲು ಮುಂದಾದ ಅಕ್ಸೆಂಚರ್

ನವದೆಹಲಿ: ಸಾವಿರಾರು ಉದ್ಯೋಗಿಗಳ ವಜಾ ಘೋಷಿಸಿದ ಟೆಕ್ ಕಂಪನಿಗಳ ಪಟ್ಟಿಗೆ ಅಕ್ಸೆಂಚರ್ ಈಗ ಸೇರ್ಪಡೆಯಾಗಿದೆ. ಹದಗೆಡುತ್ತಿರುವ ಜಾಗತಿಕ ಆರ್ಥಿಕತೆಯ ಆತಂಕದಲ್ಲಿ ಅದು ಸುಮಾರು 19,000 ಉದ್ಯೋಗಿಗಳನ್ನು ವಜಾ ಮಾಡುತ್ತಿದೆ ಎಂದು ವರದಿಯಾಗಿದೆ. ಈ ವಜಾ ಅದರ ಉದ್ಯೋಗಿಗಳ ಶೇಕಡಾ 2.5 ರಷ್ಟಿದೆ. ಆದರೆ, ಆಕ್ಸೆಂಚರ್ ತಕ್ಷಣವೇ ಉದ್ಯೋಗಿಗಳನ್ನು ತೆಗೆದುಹಾಕುವುದಿಲ್ಲ ಮತ್ತು ಮುಂದಿನ 18 ತಿಂಗಳುಗಳಲ್ಲಿ ವಜಾ … Continued

ಪ್ರಧಾನಿ ಮೋದಿ ಭೇಟಿಯಾಗಬೇಕಿದ್ದ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನದ ನಾಮಿನಿ ಅಜಯ್ ಬಂಗಾಗೆ ಕೊರೊನಾ ಸೋಂಕು ದೃಢ

ನವದೆಹಲಿ: ವಿಶ್ವಬ್ಯಾಂಕ್ ಅಧ್ಯಕ್ಷೀಯ ನಾಮಿನಿ ಅಜಯ್ ಬಂಗಾ (Ajay Banga) ಭಾರತಕ್ಕೆ ಆಗಮಿಸಿದ್ದಾರೆ. ಆದರೆ, ನವದೆಹಲಿಯಲ್ಲಿ ವಾಡಿಕೆಯ ಪರೀಕ್ಷೆಯ ಸಮಯದಲ್ಲಿ, ಅವರಿಗೆ ಕೊರೊನಾ ಸೋಂಕು ಕಂಡುಬಂದಿದೆ. ಸದ್ಯ ಅವರು ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಖಜಾನೆ ಇಲಾಖೆ ತಿಳಿಸಿದೆ. ಬಂಗಾ ತನ್ನ ವಿಶ್ವ ಪ್ರವಾಸದ ಕೊನೆಯ ಹಂತದ ಭಾಗವಾಗಿ ದೆಹಲಿಯಲ್ಲಿದ್ದರು. ಅವರ ಮೂರು ವಾರಗಳ ಜಾಗತಿಕ ಪ್ರವಾಸದ ಭಾಗವಾಗಿ … Continued

ಶಿಕ್ಷೆ ವಿಚಿತ್ರ … ಆದರೆ ಶಿಕ್ಷೆಯ ನಂತರ ಕಾನೂನಿನ ಅಡಿಯಲ್ಲಿ ರಾಹುಲ್‌ ಗಾಂಧಿ ಲೋಕಸಭೆ ಸ್ಥಾನದಿಂದ ಅನರ್ಹಗೊಂಡಿದ್ದಾರೆ: ಕಪಿಲ್ ಸಿಬಲ್

ನವದೆಹಲಿ : ಗುಜರಾತ್‌ನ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ರಾಹುಲ್ ಗಾಂಧಿ ಸ್ವಯಂಚಾಲಿತವಾಗಿ ಲೋಕಸಭೆ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ ಎಂದು ಖ್ಯಾತ ವಕೀಲ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪನಾಮದ ಬಗ್ಗೆ ನೀಡಿದ ಹೇಳಿಕೆಗಾಗಿ ಗುಜರಾತ್‌ನ ನ್ಯಾಯಾಲಯವು ರಾಹುಲ್‌ ಗಾಂಧಿ ಅವರಿಗೆ ಎರಡು … Continued

ಅಮೃತಪಾಲ್ ಲುಕ್ ಬದಲಾಯಿಸಿಕೊಂಡಿದ್ದಾನೆ, ಪೇಟ ಧರಿಸಿರಲಿಲ್ಲ: ಪೊಲೀಸರಿಗೆ ತಿಳಿಸಿದ ಬಂಧಿತ ಹರಿಯಾಣ ಮಹಿಳೆ

ಚಂಡೀಗಡ: ಆರು ದಿನಗಳ ಹಿಂದೆ ಪಂಜಾಬ್‍ನಿಂದ ಪರಾರಿಯಾಗಿದ್ದ ಖಾಲಿಸ್ತಾನ್ ಬೆಂಬಲಿಗ ಅಮೃತ್‍ಪಾಲ್ ಸಿಂಗ್ (Amritpal Singh) ಹರಿಯಾಣದಲ್ಲಿ ತಲೆಮರೆಸಿಕೊಂಡಿರುವ ಕೆಲವು ಸುಳಿವುಗಳು ಸಿಕ್ಕಿವೆ. ಸ್ಕೂಟರ್‍ನಲ್ಲಿ ತನ್ನ ಅನುಯಾಯಿ ಜೊತೆ ಕುರುಕ್ಷೇತ್ರಕ್ಕೆ ಬಂದಿದ್ದ ಅಮೃತ್‍ಪಾಲ್ ಸಿಂಗ್ ಮಹಿಳೆಯೊಬ್ಬರ ಮನೆಯಲ್ಲಿ ಒಂದು ರಾತ್ರಿ ತಲೆ ಮರೆಸಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ. ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರ ಪಾಪಲ್‌ಪ್ರೀತ್ … Continued

ಹಿಂದುತ್ವದ ಕುರಿತ ಟ್ವೀಟ್‌: ನಟ ಚೇತನಗೆ ಜಾಮೀನು ಮಂಜೂರು

ಬೆಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ನಟ ಚೇತನಕುಮಾರ ಅವರಿಗೆ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ. ನಟ ಚೇತನ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ 32ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜೆ ಲತಾ ಅವರು ಜಾಮೀನು ಭದ್ರತೆಯಾಗಿ ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ … Continued

ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಮಹಾತ್ಮ ಗಾಂಧಿ ಉಲ್ಲೇಖಿಸಿ ರಾಹುಲ್‌ ಗಾಂಧಿ ಟ್ವೀಟ್‌

“ಮೋದಿ ಉಪನಾಮ”  ಕುರಿತು ರಾಹುಲ್‌ ಗಾಂಧಿ ಹೇಳಿಕೆಗಳಿಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುರುವಾರ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸತ್ಯ ಮತ್ತು ಅಹಿಂಸೆಯ ಕುರಿತು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಸತ್ಯವೇ ನನ್ನ ದೇವರು, … Continued

ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ : ವಿಶ್ವದ ಟಾಪ್‌ 10 ಶ್ರೀಮಂತರಲ್ಲಿ ಭಾರತದ ಮುಖೇಶ ಅಂಬಾನಿಗೆ ಸ್ಥಾನ; ಮುಂಬೈ 66, ಬೆಂಗಳೂರು 21 ಬಿಲಿಯನೇರ್‌ಗಳಿಗೆ ನೆಲೆ

ನವದೆಹಲಿ: 2023ರ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ ಭಾರತದಲ್ಲಿ 187 ಶತಕೋಟ್ಯಧಿಪತಿಗಳು ಮತ್ತು 16 ಹೊಸ ಸೇರ್ಪಡೆಗಳೊಂದಿಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಬಿಲಿಯನೇರ್ ಉತ್ಪಾದಿಸುವ ರಾಷ್ಟ್ರವಾಗಿ ಮುಂದುವರೆದಿದೆ. ಮುಂಬೈ 66 ಶತಕೋಟ್ಯಧಿಪತಿಗಳಿಗೆ ನೆಲೆಯಾಗಿದೆ, ನಂತರ 39 ಶತಕೋಟ್ಯಧಿಪತಿಗಳೊಂದಿಗೆ ನವದೆಹಲಿ ಎರಡನೇ ಸ್ಥಾನದಲ್ಲಿದೆ ಮತ್ತು 21 ಶತಕೋಟ್ಯಧಿಪತಿಗಳೊಂದಿಗೆ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, … Continued

ರಾಹುಲ್ ಗಾಂಧಿಗೆ 2 ವರ್ಷ ಶಿಕ್ಷೆ : ಲೋಕಸಭೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ

ನವದೆಹಲಿ : 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೋಷಿ ಎಂದು ಸೂರತ್‌ ನ್ಯಾಯಾಲಯವು ತೀರ್ಪು ನೀಡಿದ್ದು, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರಾಹುಲ್‌ ಗಾಂಧಿ ಅವರಿಗೆ ಜಾಮೀನು ನೀಡಲಾಯಿತು ಮತ್ತು ನಿರ್ಧಾರವನ್ನು ಮೇಲ್ಮನವಿ ಸಲ್ಲಿಸಲು ಅವರ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಕರ್ನಾಟಕದ ಕೋಲಾರದಲ್ಲಿ ರಾಹುಲ್‌ ಗಾಂಧಿ … Continued

ಈ ಮೆಸೇಜ್‌ ನಿಮಗೂ ಬರಬಹುದು ಎಚ್ಚರ : ಮೊಬೈಲಿಗೆ ಬಂದ ವಿದ್ಯುತ್ ಬಿಲ್ ಸಂದೇಶಕ್ಕೆ ಉತ್ತರಿಸಿ ಲಕ್ಷಾಂತರ ರೂ.ಕಳೆದುಕೊಂಡ ಮಹಿಳೆ

ಕಳೆದ ಕೆಲವು ವಾರಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ದೇಶಾದ್ಯಂತ ಅನೇಕರು ಆನ್‌ಲೈನ್ ವಂಚಕರಿಂದ ಮೊಬೈಲ್ ಫೋನ್‌ಗಳ ಮೂಲಕ ಸ್ವೀಕರಿಸಿದ ಎಸ್‌ಎಂಎಸ್‌ (SMS) ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಿದ ನಂತರ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಆನ್‌ಲೈನ್‌ ವಂಚಕರು ಈಗ ವಿದ್ಯುತ್ ಬಿಲ್ ವಿಚಾರವಾಗಿ ಎಸ್‌ಎಂಎಸ್‌ ಕಳುಹಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ.ಗಳನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಮುಂಬೈನ … Continued