ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ 4 ದಿನಗಳ ಪೊಲೀಸ್ ಕಸ್ಟಡಿ

ನವದೆಹಲಿ: ಆಲ್ಟ್ ನ್ಯೂಸ್‌ನ ಫ್ಯಾಕ್ಟ್ ಚೆಕಿಂಗ್ ಸೈಟ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ದೆಹಲಿ ನ್ಯಾಯಾಲಯವು ಮಂಗಳವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ 2018 ರ ಟ್ವಿಟ್ಟರ್ ಪೋಸ್ಟ್‌ಗಾಗಿ ದೆಹಲಿ ಪೊಲೀಸರು ನಿನ್ನೆ, ಸೋಮವಾರ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಯಾವುದೇ ನೋಟಿಸ್ … Continued

ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಖೇಶ್ ಅಂಬಾನಿ ರಾಜೀನಾಮೆ, ಅಧ್ಯಕ್ಷರಾಗಿ ಮಗ ಆಕಾಶ್ ನೇಮಕ

ಮುಂಬೈ: ಮುಖೇಶ ಅಂಬಾನಿ ಅವರು ಜೂನ್ 27 ರಿಂದ ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಿಲಯನ್ಸ್ ಜಿಯೋ ಮಂಗಳವಾರ ತನ್ನ ಮಂಡಳಿಯು ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಪ್ರಕಟಿಸಿದೆ. ಅವರನ್ನು ರಿಲಯನ್ಸ್ ಜಿಯೋದ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿಯೂ ನೇಮಿಸಲಾಗಿದೆ. … Continued

ಯುಎನ್, ಟರ್ಕಿ, ಇರಾನ್, ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಿದ ಭಾರತ

ನವದೆಹಲಿ: ವಿಶ್ವಸಂಸ್ಥೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಅಧಿಕೃತ ಖಾತೆಗಳನ್ನು Twitter ಇಂಡಿಯಾ ನಿಷೇಧಿಸಿದೆ. ಇದಕ್ಕೂ ಮೊದಲು, ಟ್ವಿಟರ್ ಪಾಕಿಸ್ತಾನದ ರಾಷ್ಟ್ರೀಯ ಪ್ರಸಾರಕ – ರೇಡಿಯೋ ಪಾಕಿಸ್ತಾನದ ಖಾತೆಯನ್ನು ಸಹ ತಡೆಹಿಡಿದಿದೆ. ಭಾರತದಲ್ಲಿ ಈ ಅಧಿಕೃತ ಖಾತೆಗಳನ್ನು ತಡೆಹಿಡಿಯಲಾದ ನಂತರ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಕ್ಷಣವೇ ಖಾತೆಗಳನ್ನು ಮರುಸ್ಥಾಪಿಸುವಂತೆ ಟ್ವಿಟರ್‌ಗೆ … Continued

G-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಳಿಗೆ ನಡೆದುಬಂದ ಅಮೆರಿಕ ಅಧಕ್ಷ ಬೈಡನ್‌, ತದನಂತರ….| ವೀಕ್ಷಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಿ 7 ಶೃಂಗಸಭೆಯಲ್ಲಿ ಇತರ ನಾಯಕರ ಜೊತೆ ಸಮೂಹ ಫೋಟೋ ತೆಗೆದುಕೊಳ್ಳಲು ಸಿದ್ಧವಾಗುತ್ತಿದ್ದಂತೆಯೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತದ ಪ್ರಧಾನಿ ಬಳಿಗೇ ತೆರಳಿ, ಅವರ ಭುಜಗಳನ್ನು ತಟ್ಟಿದರು, ಮತ್ತು ಕ್ಯಾಮೆರಾಗಳು ಇಬ್ಬರ ನಡುವೆ ವ್ಯಕ್ತವಾದ ಕ್ಷಣವನ್ನು ಸೆರೆಹಿಡಿದವು. ನಾಯಕರು ಪರಸ್ಪರ ಶುಭಾಶಯ ಕೋರಿದರು. ಕೆನಡಾದ ಪ್ರಧಾನಿ ಜಸ್ಟಿನ್ … Continued

ಅಯೋಧ್ಯೆ ಕಂಟೋನ್ಮೆಂಟ್ ಪ್ರದೇಶದ ಪೊದೆಗಳಲ್ಲಿ 18 ಜೀವಂತ ಕೈ ಗ್ರೆನೇಡ್‌ಗಳು ಪತ್ತೆ

ಲಕ್ನೋ: ಪ್ರಮುಖ ಭದ್ರತಾ ಲೋಪದ ಘಟನೆಯೊಂದರಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಸುರಕ್ಷಿತ ಅಯೋಧ್ಯೆ ಸೇನಾ ಕಂಟೋನ್ಮೆಂಟ್‌ನಲ್ಲಿ ಸೇನಾ ಅಧಿಕಾರಿಗಳ ಮೆಸ್ ಬಳಿಯ ನಿರ್ಮಲಿ ಕುಂಡ್ ಪ್ರದೇಶದಲ್ಲಿ ಶನಿವಾರ ರಾತ್ರಿ 18 ಜೀವಂತ ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾಗಿವೆ. ಘಾಘ್ರಾ ನದಿಯ ದಡದಲ್ಲಿರುವ ಈ ಪ್ರದೇಶವು ನದಿ ದಂಡೆಯ ಉದ್ದಕ್ಕೂ ವಾಸಿಸುವ ನಾಗರಿಕರ ಸಣ್ಣ ಜನಸಂಖ್ಯೆಯನ್ನು ಹೊಂದಿದೆ. ಪೊದೆಗಳಲ್ಲಿ … Continued

ಕೈಕಟ್ಟಿಕೊಂಡು ಈಜಿ 780 ಮೀಟರ್ ಅಗಲದ ಪೆರಿಯಾರ್‌ ನದಿ ದಾಟಿದ 70 ವರ್ಷದ ಮಹಿಳೆ

ಕೊಚ್ಚಿ: ಎಲ್ಲಾ ವಯೋಮಾನದವರಿಗೂ ಈಜು ಕಲಿಯಲು ಉತ್ತೇಜನ ನೀಡಲು ಇಲ್ಲಿನ ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಭಾನುವಾರ ಈಜುವ ಕಾರ್ಯಕ್ರಮ ಆಯೋಜಿಸಿದ್ದು, 70 ವರ್ಷದ ಮಹಿಳೆಯೊಬ್ಬರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ಕೈಗಳನ್ನು ಕಟ್ಟಿಕೊಂಡು ಈಜಿದ್ದಾರೆ. ಆಲುವಾದ ತೈಕ್ಕಟ್ಟುಕರದ ಆರಿಫಾ ವಿ ಕೆ ಅವರು ಕುನ್ನುಂಪುರಂನ 11 ವರ್ಷದ ಭರತ್ ಕೃಷ್ಣ ಮತ್ತು ಅಶೋಕಪುರಂನ … Continued

ಇದು ಬಾಳ್ ಠಾಕ್ರೆಯವರ ಹಿಂದುತ್ವದ ವಿಜಯ: ಸುಪ್ರೀಂ ಕೋರ್ಟ್ ರಿಲೀಫ್‌ ನಂತರ ಏಕನಾಥ್ ಶಿಂಧೆ ಹೇಳಿಕೆ

ಮುಂಬೈ: ತನಗೆ ಮತ್ತು ಇತರ ಭಿನ್ನಮತೀಯ ಶಿವಸೇನಾ ಶಾಸಕರಿಗೆ ಸುಪ್ರೀಂ ಕೋರ್ಟ್ ನೀಡಿರುವ ರಿಲೀಫ್‌ ಅನ್ನು ಬಾಳ್ ಠಾಕ್ರೆ ಅವರ ಹಿಂದುತ್ವ ಮತ್ತು ಅವರ ಆಪ್ತ ಆನಂದ್ ದಿಘೆ ಅವರ ಆದರ್ಶಗಳ ವಿಜಯ ಎಂದು ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ. ಜುಲೈ 11ರ ವರೆಗೆ ಮಹಾರಾಷ್ಟ್ರ ವಿಧಾನಸಭೆ ಉಪ ಸ್ಪೀಕರ್ ಅವರ … Continued

ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಗಲಭೆಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನ

ನವದೆಹಲಿ: ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಮತ್ತು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸತ್ಯ ತಪಾಸಣೆ ವೆಬ್‌ಸೈಟ್ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ದೆಹಲಿ ಪೊಲೀಸರನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಜುಬೈರ್ ವಿರುದ್ಧ ಭಾರತೀಯ ದಂಡ … Continued

ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ನವದೆಹಲಿ: ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ಸೋಮವಾರ ನವದೆಹಲಿಯ ಸಂಸತ್ತಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅವರ ಪಕ್ಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎನ್‌ಸಿಪಿಯ ಶರದ್ ಪವಾರ್ ಇದ್ದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎಡಪಕ್ಷಗಳಿಂದ ಸೀತಾರಾಮ ಯೆಚೂರಿ, ಆರ್‌ಎಲ್‌ಡಿ ಮುಖ್ಯಸ್ಥ … Continued

ಕಾಶ್ಮೀರ: ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತ

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನೌಪೋರಾ-ಖಾರ್ಪೋರಾ ಟ್ರುಬ್ಜಿ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಸೋಮವಾರ (ಜೂನ್ 27) ಇಬ್ಬರು ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿದೆ. ಇಂದು, ಸೋಮವಾರ ಮುಂಜಾನೆ ಎನ್‌ಕೌಂಟರ್ ಆರಂಭವಾಗಿದ್ದು, ಇಲ್ಲಿಯವರೆಗೆ ಇಬ್ಬರು ಉಗ್ರರ ಶವಗಳನ್ನು ಎನ್‌ಕೌಂಟರ್ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. … Continued