ಪರಿಷತ್‌ ಚುನಾವಣೆ: ಮತದಾನಕ್ಕಾಗಿ ನವಾಬ್‌ ಮಲಿಕ್, ಅನಿಲ ದೇಶಮುಖ್ ಮಾಡಿದ್ದ ಮನವಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆಗೆ ಮತದಾನ ಮಾಡಲು ಅನುಮತಿ ಕೋರಿ ಸಚಿವ ನವಾಬ್‌ ಮಲಿಕ್‌ ಹಾಗೂ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ನ್ಯಾಯಮೂರ್ತಿ ಎನ್‌ ಜೆ ಜಮಾದಾರ್ ಅವರು ನೀಡಿರುವ ತೀರ್ಪು ಜೂ. 20ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸಲು ಅನುವು ಮಾಡಿಕೊಡುವ ಸಲುವಾಗಿ … Continued

ದೈತ್ಯಾಕಾರದ ರುಮಾಲಿ ರೊಟ್ಟಿ ತಯಾರಿಸುವುದನ್ನು ನೋಡಿದರೆ ನೀವು ಬೆರಗಾಗ್ತೀರಾ..ವೀಕ್ಷಿಸಿ

ಆರ್‌ಪಿಜಿ (RPG) ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಅಪರೂಪದ ವೀಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಜೂನ್ 16 ರಂದು ಅವರು ಪೋಸ್ಟ್‌ ಮಾಡಿರುವ ವೀಡಿಯೊದಲ್ಲಿ ಉದ್ದನೆಯ ಸಿಲಿಂಡರಾಕಾರದ ಪ್ಯಾನ್‌ನಲ್ಲಿ ವ್ಯಕ್ತಿಯೊಬ್ಬ ಬೃಹತ್ ರುಮಾಲಿ ರೊಟ್ಟಿಗಳನ್ನು ತಯಾರಿಸುವುದನ್ನು ನೋಡಬಹುದು. ಆ ರೊಟ್ಟಿಯ ಬೃಹತ್‌ ಆಕಾರವನ್ನು ಊಹಿಸಿಕೊಳ್ಳಲು ಕಷ್ಟವಾಗುವಷ್ಟು ಅದು ದೊಡ್ಡದಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ … Continued

ಪ್ರತಿಭಟನೆಗಳ ಮಧ್ಯೆಯೇ ಜೂನ್ 24 ರಿಂದ ಅಗ್ನಿಪಥ ಯೋಜನೆಯಡಿ ವಾಯುಪಡೆಯಲ್ಲಿ ನೇಮಕಾತಿ ಆರಂಭ

ನವದೆಹಲಿ: ಭಾರತೀಯ ವಾಯುಪಡೆಯು ಹೊಸ ಅಗ್ನಿಪಥ ನೇಮಕಾತಿ ಮಾದರಿಯ ಅಡಿಯಲ್ಲಿ ಆಯ್ಕೆಯನ್ನು ಪ್ರಾರಂಭಿಸುವ ಮೊದಲ ಸೇನಾ ವೀನಾಗವಾಗಲಿದ್ದು, ಇದು. ಜೂನ್ 24ರಿಂದ ಅಗ್ನಿವೀರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಲಿದೆ. ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ತಮ್ಮ ಭಾಷಣದಲ್ಲಿ, “ಉನ್ನತ ವಯೋಮಿತಿಯನ್ನು (ನೇಮಕಾತಿಗಾಗಿ) 23 ವರ್ಷಕ್ಕೆ ಪರಿಷ್ಕರಿಸಲಾಗಿದೆ ಎಂದು ಘೋಷಿಸಲು ಸಂತೋಷವಾಗಿದೆ. ಇದು ಯುವಕರಿಗೆ ಅನುಕೂಲ … Continued

ಚಿರಾಪುಂಜಿಯಲ್ಲಿ ಒಂದೇ ದಿನಕ್ಕೆ ಸುರಿದ 972 ಮಿಮೀ ಮಳೆ…! 27 ವರ್ಷಗಳಲ್ಲೇ ಜೂನ್‌ನಲ್ಲಿ ಸುರಿದ ಅತಿ ಹೆಚ್ಚು ಮಳೆ

ಒಂದು ದಿನದಲ್ಲಿ 811.6 ಮಿಮೀ ಮಳೆಯನ್ನು ದಾಖಲಿಸಿದ ಕೇವಲ ಎರಡು ದಿನಗಳ ನಂತರ, ಮೇಘಾಲಯದ ಚಿರಾಪುಂಜಿಯಲ್ಲಿ ಶುಕ್ರವಾರ ಬೆಳಿಗ್ಗೆ 8:30 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ 972 ಮಿಮೀ ಮಳೆ ಸುರಿದಿದೆ. ಇದು 1995ರ ನಂತರ ಜೂನ್‌ ತಿಂಗಳಲ್ಲಿ ೊಂದು ದಿನದಲ್ಲಿ ಸುರಿದ ಅತಿ ಹೆಚ್ಚು ಮಳೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. … Continued

ಸೋನಿಯಾ ಗಾಂಧಿಗೆ ಕೋವಿಡ್ -19 ನಂತರದ ನಂತರದ ಶ್ವಾಸನಾಳದ ಸೋಂಕು ಚಿಕಿತ್ಸೆ ಮುಂದುವರಿಕೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೋವಿಡ್ -19 ಸೋಂಕಿನ ನಂತರ ತಮ್ಮ ಶ್ವಾಸನಾಳದ ಸೋಂಕಿಗೆ ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ  ಹಾಗೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಕ್ಷ ತಿಳಿಸಿದೆ. ಅವರನ್ನು ತಕ್ಷಣವೇ ಚಿಕಿತ್ಸೆಗೆ ಒಳಪಡಿಸಲಾಯಿತು ಮತ್ತು ನಿನ್ನೆ (ಗುರುವಾರ) ಬೆಳಿಗ್ಗೆ ಸಂಬಂಧಿತ ಅನುಸರಣಾ ಚಿಕಿತ್ಸೆ ಕಾರ್ಯವಿಧಾನಕ್ಕೆ ಒಳಗಾದರು” ಎಂದು ಅಖಿಲ … Continued

ಅಗ್ನಿಪಥ ವಿರೋಧಿಸಿ ಪ್ರತಿಭಟನೆ: ಈವರೆಗೆ 200 ರೈಲುಗಳ ಮೇಲೆ ಪರಿಣಾಮ, 35 ರೈಲುಗಳು ರದ್ದು- ರೈಲ್ವೆ ಇಲಾಖೆ

ನವದೆಹಲಿ: ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆ ಇದುವರೆಗೆ 200 ಕ್ಕೂ ಹೆಚ್ಚು ರೈಲುಗಳ ಮೇಲೆ ಪರಿಣಾಮ ಬೀರಿದೆ ಎಂದು ರೈಲ್ವೆ ಶುಕ್ರವಾರ ತಿಳಿಸಿದೆ. ಬುಧವಾರ ಪ್ರತಿಭಟನೆಗಳು ಭುಗಿಲೆದ್ದ ನಂತರ ಸುಮಾರು 35 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು 13 ಅಲ್ಪಾವಧಿ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ … Continued

ಅಗ್ನಿಪಥ ಯೋಜನೆ: ಈ ವರ್ಷದ ಸೇನಾ ನೇಮಕಾತಿ ವಯಸ್ಸಿನ ಮಿತಿ 21 ರಿಂದ 23ಕ್ಕೆ ಹೆಚ್ಚಿಸಿದ ಸರ್ಕಾರ

ನವದೆಹಲಿ: ಅಗ್ನಿಪಥ ಯೋಜನೆಯಡಿ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು ಕೇಂದ್ರ ಸರ್ಕಾರ 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿದೆ. ಮಂಗಳವಾರ ಅಗ್ನಿಪಥ ಯೋಜನೆಯನ್ನು ಘೋಷಿಸುವಾಗ, 17.5 ಮತ್ತು 21 ವರ್ಷದೊಳಗಿನ ನಾಗರಿಕರು ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ “ಟೂರ್ ಆಫ್ ಡ್ಯೂಟಿ” ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ಹೇಳಿತ್ತು. ಟೂರ್ … Continued

ಬಿಹಾರ, ಉತ್ತರ ಪ್ರದೇಶದ ನಂತರ ತೆಲಂಗಾಣಕ್ಕೆ ಹರಡಿದ ಅಗ್ನಿಪಥ ವಿರೋಧಿ ಪ್ರತಿಭಟನೆ ; ಸಿಕಂದರಾಬಾದ್‌ನಲ್ಲಿ ಪೊಲೀಸರ ಗುಂಡಿನ ದಾಳಿಗೆ ಓರ್ವ ಸಾವು

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗೆ ಕಾರಣವಾದ ಸರ್ಕಾರದ ಹೊಸ ನೇಮಕಾತಿ ಯೋಜನೆ ಅಗ್ನಿಪಥ ಈಗ ಹೈದರಾಬಾದ್‌ಗೆ ವ್ಯಾಪಿಸಿದೆ, ಪ್ರತಿಭಟನಾಕಾರರು ಶುಕ್ರವಾರ ಬೆಳಿಗ್ಗೆ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಕನಿಷ್ಠ ಏಳು ರೈಲುಗಳಿಗೆ ಬೆಂಕಿ ಹಚ್ಚಿ ಇಡೀ ರೈಲ್ವೆ ನಿಲ್ದಾಣದ ಆವರಣವನ್ನು ದೋಚಿದ್ದಾರೆ. ಶುಕ್ರವಾರ ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಅಗ್ನಿಪಥ್ ಪ್ರತಿಭಟನಾಕಾರರ ಮೇಲೆ ರೈಲ್ವೆ ಪೊಲೀಸರು ಗುಂಡಿನ … Continued

ರಾಜಸ್ಥಾನ ಸಿಎಂ ಅಶೋಕ ಗೆಹ್ಲೋಟ್ ಸಹೋದರ ಅಗ್ರಸೇನ ಗೆಹ್ಲೋಟ್ ನಿವಾಸದ ಮೇಲೆ ಸಿಬಿಐ ದಾಳಿ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಜೋಧ್‌ಪುರ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳವು ದಾಳಿ ನಡೆಸಿದೆ. ಅಗ್ರಸೇನ ಗೆಹ್ಲೋಟ್ ರಸಗೊಬ್ಬರ ವ್ಯಾಪಾರಿಯಾಗಿದ್ದು, ರಸಗೊಬ್ಬರ ಹಗರಣದಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ನಡೆಸಲಾಗಿತ್ತು. ರಾಹುಲ್ ಗಾಂಧಿ ವಿರುದ್ಧದ ಇಡಿ ತನಿಖೆಗೆ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ನಡುವೆ … Continued

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಪಟ್ಟಿ ಘೋಷಣೆ ಮಾಡುವ ಭಾರತ, ಅಮೆರಿಕ ಕ್ರಮಕ್ಕೆ ಚೀನಾ ತಡೆ

ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆಯ ಐಸಿಸ್ ಮತ್ತು ಅಲ್ ಖೈದಾ ನಿರ್ಬಂಧಗಳ ಸಮಿತಿಯಡಿ ‘ಜಾಗತಿಕ ಭಯೋತ್ಪಾದಕ’ ಎಂದು ಪಟ್ಟಿ ಮಾಡುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಅಮೆರಿಕದ ಜಂಟಿ ಪ್ರಸ್ತಾವನೆಗೆ ಚೀನಾ ಕೊನೆಯ ಕ್ಷಣದಲ್ಲಿ ತಡೆಯೊಡ್ಡಿದೆ. ಮಕ್ಕಿ ಅಮೆರಿಕದಿಂದ ಗೊತ್ತುಪಡಿಸಿದ ಭಯೋತ್ಪಾದಕ ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಮತ್ತು … Continued