ಇಡಿ ವಿಚಾರಣೆಯಿಂದ ಹೊರಬರುತ್ತಿದ್ದಂತೆ ಮಹಾ ಜುಮ್ಲಾಗಳ ಸರ್ಕಾರ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ

ನವದೆಹಲಿ: ಎರಡನೇ ದಿನದ ಜಾರಿ ನಿರ್ದೇನಾಲಯ(ಇಡಿ)ದ ವಿಚಾರಣೆ ಮುಗಿಸಿ ಹೊರಬರುತ್ತಿದ್ದಂತೆಯೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ಒಂದೂವರೆ ವರ್ಷದಲ್ಲಿ ಕನಿಷ್ಠ 10 ಲಕ್ಷ ಯುವಜನರಿಗೆ ಉದ್ಯೋಗವನ್ನು ಒದಗಿಸುತ್ತೇವೆ ಎಂಬ ಕೇಂದ್ರ ಸರ್ಕಾರದ ಭರವಸೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, … Continued

ಸಿನೆಮಾ ಶೂಟಿಂಗ್‌ ವೇಳೆ ಖ್ಯಾತ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು

ಹೈದರಾಬಾದ್‌: ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ಚಲನಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೈದರಾಬಾದ್‌ನಲ್ಲಿ ಬಿಗ್ ಬಿ ಮತ್ತು ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಈಗವರು ಚೇತರಿಸಿಕೊಂಡಿದ್ದು ಅವರನ್ನು ಡಿಸ್ಚಾರ್ಜ್‌ ಮಾಡಲಾಗಿದೆ  ಹಾಗೂ ಸೆಟ್‌ಗೆ ಮರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ದೀಪಿಕಾ … Continued

ಪ್ರವಾದಿ ವಿವಾದದ ಮಧ್ಯೆ ಕುವೈತ್‌ಗೆ 192 ಮೆಟ್ರಿಕ್‌ ದೇಸೀ ಹಸುವಿನ ಸಗಣಿ ರಫ್ತು ಮಾಡಲಿರುವ ಭಾರತ…!

ಜೈಪುರ: ಜೈಪುರ ಮೂಲದ ಸಂಸ್ಥೆಯು ಕುವೈತ್‌ಗೆ ಹಸುವಿನ ಸಗಣಿ ರಫ್ತು ಮಾಡಲು ಸಿದ್ಧವಾಗಿದೆ, ಇದು ಉಭಯ ದೇಶಗಳ ನಡುವಿನ ಈ ತರಹದ ಮೊದಲ ಒಪ್ಪಂದವಾಗಿದೆ ಎಂದು ಹೇಳಲಾಗುತ್ತದೆ. ಕುವೈತ್ ಮೂಲದ ಲಾಮರ್ 192 ಮೆಟ್ರಿಕ್ ಟನ್ ದೇಶಿ ಹಸುವಿನ ಸಗಣಿ ಆಮದು ಮಾಡಿಕೊಳ್ಳಲು ಆರ್ಡರ್ ಮಾಡಿದೆ. ಜೈಪುರ ಮೂಲದ ಕಂಪನಿ ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಡೆವಲಪ್‌ಮೆಂಟ್ … Continued

ಚಲಿಸುತ್ತಿದ್ದ ರಥ ಉರುಳಿ ಬಿದ್ದು ಇಬ್ಬರ ಸಾವು….ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಸೋಮವಾರ ಸಂಜೆ ದೇವಸ್ಥಾನದ ರಥವೊಂದು ಕುಸಿದು ಬಿದ್ದ ಪರಿಣಾಮ  ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಪಾಪರಪಟ್ಟಿಯ ಮದೇಹಳ್ಳಿಯ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಕಾಸಿ ಹಬ್ಬದ ಅಂಗವಾಗಿ ಸಂಜೆ 6:30ರ ಸುಮಾರಿಗೆ ಕಾಳಿಯಮ್ಮನ ದೇವಸ್ಥಾನದ 30 ಅಡಿಯ ರಥವನ್ನು ಬೀದಿಗಳಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಾಗ … Continued

ಎಂದೂ ಕೇಳಿಲ್ಲ…: ಶರದ್ ಪವಾರ್ ವಿರುದ್ಧ ಟ್ವೀಟ್ ಮಾಡಿದ ವಿದ್ಯಾರ್ಥಿಯ ಬಂಧನಕ್ಕೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ

ಮುಂಬೈ: ಎನ್‌ಸಿಪಿ ನಾಯಕ ಶರದ್ ಪವಾರ್ ವಿರುದ್ಧ ಟ್ವೀಟ್ ಮಾಡಿದ 21 ವರ್ಷದ ವಿದ್ಯಾರ್ಥಿ ನಿಖಿಲ್ ಭಾಮ್ರೆಯನ್ನು ಬಂಧಿಸಿದ್ದಕ್ಕಾಗಿ ಬಾಂಬೆ ಹೈಕೋರ್ಟ್ ಸೋಮವಾರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹಿರಿಯ ರಾಜಕಾರಣಿಯನ್ನು ಗುರಿಯಾಗಿಸಿಕೊಂಡು ತನ್ನ ಖಾತೆಯಿಂದ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ ನಂತರ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಭಾಮ್ರೆ ಸಲ್ಲಿಸಿದ … Continued

ಸೇನಾ ನೇಮಕಾತಿಯಲ್ಲಿ ಮಹತ್ತರ ಬದಲಾವಣೆ: ನಾಲ್ಕು ವರ್ಷಗಳ ಮಿಲಿಟರಿ ಸೇವಾವಧಿಯ ಅಗ್ನಿಪಥ್ ಯೋಜನೆಗೆ ಕೇಂದ್ರ ಅನುಮೋದನೆ

ನವದೆಹಲಿ: ಭಾರತೀಯ ಯುವಕರು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಹೊಸ ಅಲ್ಪಾವಧಿ ನೇಮಕಾತಿ ನೀತಿಯನ್ನು ಕೇಂದ್ರವು ಮಂಗಳವಾರ ಅನಾವರಣಗೊಳಿಸಿದೆ. ಅಗ್ನಿಪಥ್ ಎಂದು ಕರೆಯಲ್ಪಡುವ ಈ ಯೋಜನೆಯು 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಮೂರು ಸೇವೆಗಳಲ್ಲಿ ಯಾವುದಾದರೂ “ಅಗ್ನಿವೀರ್” ಆಗಿ ಸೇರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅಗ್ನಿಪಥ್ ಯೋಜನೆಯನ್ನು ಈ … Continued

27 ವರ್ಷಗಳ ಸೇವೆಯ ನಂತರ ನಾಳೆಯಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್ ನಿಷ್ಕ್ರಿಯ…!

ವಾಷಿಂಗ್ಟನ್‌ : 27 ವರ್ಷಗಳ ಸೇವೆಯ ನಂತರ ಮೈಕ್ರೋಸಾಫ್ಟ್ ಹಳೆಯ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ನಿವೃತ್ತಿ ಮಾಡಲು ಯೋಜಿಸಿದೆ. ಇದು ಜೂನ್‌ 15 ರಿಂದ ನಿಷ್ಕ್ರಿಯಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಇದು ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ ಗ್ರಾಫಿಕಲ್ ವೆಬ್ ಬ್ರೌಸರ್‌ಗಳ ಸ್ಥಗಿತಗೊಂಡ ಸರಣಿಯಾಗಿದೆ ಎಂದು Mashable ವರದಿ ಹೇಳಿದೆ. ಮೊದಲು, ಇದನ್ನು ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ … Continued

ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷ ನೇಮಕಾತಿಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ: ಮುಂದಿನ ಒಂದೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ ಮಿಷನ್ ಮೋಡ್‌‌ನಲ್ಲಿ 10 ಲಕ್ಷ ನೇಮಕಾತಿಗಳನ್ನು ಮಾಡಲು ಪ್ರಧಾನಿ ನರೇಂದ್ರ ಮೋದಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲ ಪರಿಸ್ಥಿತಿಯನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಒಂದೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ … Continued

ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳ, ಆದರೆ ಜಾಗತಿಕ ಜೀವಿತಾವಧಿ ಸರಾಸರಿಗಿಂತ ಭಾರತದ್ದು ಕಡಿಮೆ

ನವದೆಹಲಿ: 2015-19ರ ಅವಧಿಯಲ್ಲಿ ಭಾರತದ ಜೀವಿತಾವಧಿಯು 69.7 ವರ್ಷಕ್ಕೆ ತಲುಪಿದೆ, ಇದು ಅಂದಾಜು ಜಾಗತಿಕ ಸರಾಸರಿ ಜೀವಿತಾವಧಿ 72.6 ವರ್ಷಗಳಿಗಿಂತ ಕಡಿಮೆಯಾಗಿದೆ. ಜೀವಿತಾವಧಿಗೆ ಎರಡು ವರ್ಷಗಳನ್ನು ಸೇರಿಸಲು ಭಾರತ ಸುಮಾರು ಹತ್ತು ವರ್ಷಗಳನ್ನು ತೆಗೆದುಕೊಂಡಿದೆ. ಈ ಅವಧಿಯಲ್ಲಿ ಒಂದನೇ ವರ್ಷ ಮತ್ತು ಐದನೇ ವಯಸ್ಸಿನಲ್ಲಿ ಜೀವಿತಾವಧಿಯನ್ನು ಅವಲೋಕಿಸಿದರೆ, ಹೆಚ್ಚಿನ ಶಿಶುಗಳು ಮತ್ತು ಐದಕ್ಕಿಂತ ಕಡಿಮೆ ವಯಸ್ಸಿನನವರ … Continued

ಭಾರತದಲ್ಲಿ 6,594 ಹೊಸ ಕೋವಿಡ್ ಪ್ರಕರಣಗಳು ದಾಖಲು, ಇದು ಹಿಂದಿನ ದಿನಕ್ಕಿಂತ 18% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು ಮಂಗಳವಾರ 6,594 ಹೊಸ ಪ್ರಕರಣಗಳನ್ನು ವರದಿ ಮಾಡಿದೆ – ಹಿಂದಿನ ದಿನಕ್ಕೆ ಹೋಲಿಸಿದರೆ ಇದು 18% ಕಡಿಮೆ. ನಿನ್ನೆ, ಭಾರತವು 8,084 ಹೊಸ ಪ್ರಕರಣಗಳನ್ನು ವರದಿ ಮಾಡಿತ್ತು; ದೇಶವು 8,000 ಕ್ಕೂ ಹೆಚ್ಚು ಪ್ರಕರಣಗಳನ್ನು ಸತತ ಮೂರು ದಿನ ವರದಿ ಮಾಡಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, … Continued