ಸೋನಿಯಾ ಗಾಂಧಿಗೆ ಹೊಸ ಸಮನ್ಸ್ ನೀಡಿದ ಇಡಿ: ಜೂನ್ 23ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹಾಜರಾಗಲು ಜಾರಿ ನಿರ್ದೇಶನಾಲಯ (ಇಡಿ) ಹೊಸ ದಿನಾಂಕ ನಿಗದಿ ಮಾಡಿದ್ದು ಜೂನ್ 23 ರಂದು ಹಾಜರಾಗಲು ಸೋನಿಯಾ ಗಾಂಧಿಯವರಿಗೆ ಸಮನ್ಸ್ ನೀಡಿದೆ. ಇದಕ್ಕೂ ಮೊದಲು, ಜೂನ್ 8 ಕ್ಕೆ … Continued

ಕೋಲ್ಕತ್ತಾದ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್ ಹೊರಗೆ ಬೇಕಾಬಿಟ್ಟಿ ಗುಂಡು ಹಾರಿಸಿದ ಪೊಲೀಸ್‌, ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕೋಲ್ಕತ್ತಾ: ಇಂದು, ಶುಕ್ರವಾರ ಮಧ್ಯಾಹ್ನ ಕೋಲ್ಕತ್ತಾದ ಬಾಂಗ್ಲಾದೇಶ ಹೈಕಮಿಷನ್‌ನ ಹೊರಗೆ ಕೋಲ್ಕತ್ತಾ ಪೊಲೀಸ್ ಸಶಸ್ತ್ರ ಪೊಲೀಸ್ ಪೇದೆಯೊಬ್ಬರು ಗುಂಡಿನ ದಾಳಿ ನಡೆಸಿದ್ದು, ಓರ್ವ ಮಹಿಳೆ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ. ಚೋಡುಪ್ ಲೆಪ್ಚಾ ಎಂದು ಗುರುತಿಸಲಾದ ಪೊಲೀಸ್, ಒಂದು ಗಂಟೆ ಕಾಲ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ಎಂದು ಹೇಳಲಾಗಿದೆ. ನಂತರ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾನೆ. ನಂತರ ಅವನು ತನ್ನ … Continued

ಹಿಂಸಾಚಾರಕ್ಕೆ ತಿರುಗಿದ ಪ್ರವಾದಿ ಕುರಿತ ಹೇಳಿಕೆಗಳ ವಿರುದ್ಧದ ಪ್ರತಿಭಟನೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ

ಕೋಲ್ಕತ್ತಾ: ಶುಕ್ರವಾರ, ಜೂನ್ 10 ರಂದು ಹೌರಾದ ಉಲುಬೇರಿಯಾ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ ಮತ್ತು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ನಾಯಕರೊಬ್ಬರು ಸುಟ್ಟ ಪಕ್ಷದ ಕಚೇರಿಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಹಾಗೂ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಗೃಹ-ಪೊಲೀಸ್ ಸಚಿವೆ ಮಮತಾ ಬ್ಯಾನರ್ಜಿ … Continued

ಪ್ರವಾದಿ ಕುರಿತು ವಿವಾದಾತ್ಮ ಹೇಳಿಕೆ ವಿರುದ್ಧ ದೆಹಲಿ, ಉತ್ತರ ಪ್ರದೇಶ, ಕೋಲ್ಕತ್ತಾ ಬೀದಿಗಳಲ್ಲಿ ಪ್ರತಿಭಟನೆ

ನವದೆಹಲಿ: ಇದೀಗ ಅಮಾನತುಗೊಂಡಿರುವ ಬಿಜೆಪಿ ನಾಯಕ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ಹೇಳಿಕೆಗಳ ವಿರುದ್ಧ ಶುಕ್ರವಾರ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಶುಕ್ರವಾರದ ಪ್ರಾರ್ಥನೆಯ ನಂತರ ದೆಹಲಿ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು. ಬಿಜೆಪಿಯು ವಿವಾದದಿಂದ ದೂರವಿರಲು ಪ್ರಯತ್ನಿಸಿತು, ಟೀಕೆಗಳು “ವೈಯಕ್ತಿಕ ಹೇಳಿಕೆಗಳು” ಎಂದು ಬಿಜೆಪಿ … Continued

ಮೂರು ತಿಂಗಳ ಬಳಿಕ ಭಾರತದಲ್ಲಿ ಹೊಸದಾಗಿ 7,584 ಕೊರೊನಾ ಸೋಂಕು ದಾಖಲು…!

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 7,584 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಮೂರು ತಿಂಗಳ ಬಳಿಕ ಅತಿ ಹೆಚ್ಚು ದೈನಂದಿನ ಪ್ರಕರಣಗಳು ದಾಖಲಾದಂತಾಗಿದೆ. ಕಳೆದ ಮೂರು ತಿಂಗಳಿನಿಂದ ಪ್ರತಿನಿತ್ಯ 3 ಸಾವಿರ ಆಸು-ಪಾಸಿನಲ್ಲಿ ಪ್ರಕರಣಗಳು ವರದಿಯಾಗುತ್ತಿದ್ದು. ಈಗ ದಿಢೀರ್ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 24 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ … Continued

ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಐಐಎಸ್‌ಸಿ ಬೆಂಗಳೂರು ಭಾರತದಲ್ಲೇ ನಂ.1 ವಿಶ್ವ ವಿದ್ಯಾಲಯ

ನವದೆಹಲಿ: ಗುರುವಾರ ಬಿಡುಗಡೆಯಾದ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು 2023 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಭಾರತದಲ್ಲೇ ನಂಬರ್‌ 1 ಎಂದು ರ್ಯಾಂಕ್‌ ಪಡೆದಿದ್ದು, ಜಾಗತಿಕವಾಗಿ 155ನೇ ರ್ಯಾಂಕ್‌ ಪಡೆದಿದೆ., ಇದು ಎಲ್ಲಾ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು) ತಮ್ಮ ಸ್ಥಿತಿಯನ್ನು ಸುಧಾರಿಸಿದೆ ಎಂಬುದನ್ನು ತೋರಿಸುತ್ತದೆ. QS ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳ ಇತ್ತೀಚಿನ … Continued

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ: ಕರ್ನಾಟಕ ಸೇರಿ 4 ರಾಜ್ಯಗಳ ಮೇಲೆ ಕೇಂದ್ರದ ನಿಗಾ

ನವದೆಹಲಿ: ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೇಶಾದ್ಯಂತ ದಿನೇ ದಿನೇ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ದೆಹಲಿ ರಾಜ್ಯಗಳ ಮೇಲೆ ನಿಗಾ ವಹಿಸಿದೆ. ನಾಲ್ಕೂ ರಾಜ್ಯಗಳಲ್ಲಿ 5 ಹಂತದ ಕೊರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ಹೆಚ್ಚಳ ಮಾಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಸೂಚಿಸಿದೆ. … Continued

ಇರಾನ್ ವಿದೇಶಾಂಗ ಸಚಿವರೊಂದಿಗಿನ ಭೇಟಿಯಲ್ಲಿ ಪ್ರವಾದಿ ಹೇಳಿಕೆ ವಿಚಾರ ಪ್ರಸ್ತಾಪವಾಗಿಲ್ಲ: ಭಾರತ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ನಡುವಿನ ಭೇಟಿಯ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಕೆಲವು ಬಿಜೆಪಿ ನಾಯಕರು ಮಾಡಿದ ವಿವಾದಾತ್ಮಕ ಹೇಳಿಕೆಗಳ ವಿಷಯವನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಕೇಂದ್ರ ಹೇಳಿದೆ. ಆ ಸಂಭಾಷಣೆಯ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿಲ್ಲ ಎಂಬುದು ನನ್ನ ತಿಳಿವಳಿಕೆ, ”ಎಂದು ವಿದೇಶಾಂಗ … Continued

ಪ್ರವಾದಿ ವಿವಾದ: ಅಜಿತ್ ದೋವಲ್ ಜೊತೆಗಿನ ಸಭೆಯ ತನ್ನ ದೃಷ್ಟಿಕೋನದ ಹೇಳಿಕೆ ಅಳಿಸಿದ ಇರಾನ್‌ ವಿದೇಶಾಂಗ ಸಚಿವ

ನವದೆಹಲಿ: ಆಡಳಿತಾರೂಢ ಬಿಜೆಪಿಯ ಸದಸ್ಯರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ವಿವಾದಾತ್ಮಕ ಕುರಿತು ಭಾರೀ ರಾಜತಾಂತ್ರಿಕ ಗದ್ದಲದ ಮಧ್ಯದಲ್ಲಿ, ಇರಾನ್ ತನ್ನ ವಿದೇಶಾಂಗ ಸಚಿವರು ದೆಹಲಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗಿನ ಭೇಟಿಯ ಹಿಂದಿನ ಪತ್ರಿಕಾ ಹೇಳಿಕೆಯನ್ನು ಬದಲಾಯಿಸಿದೆ. ಪ್ರವಾದಿ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡಿದವರಿಗೆ “ಪಾಠ ಕಲಿಸಲಾಗುವುದು” ಎಂದು ರಾಷ್ಟ್ರೀಯ … Continued

ಇವಿ ಚಾರ್ಜಿಂಗ್‌ – ಸ್ವ್ಯಾಪಿಂಗ್‌ ಮೂಲಸೌಕರ್ಯಕ್ಕಾಗಿ ಜಿಯೋ-ಬಿಪಿ ಜೊತೆಗೆ ಒಮ್ಯಾಕ್ಸ್‌ ಪಾಲುದಾರಿಕೆ

ನವದೆಹಲಿ/ಮುಂಬೈ: ಭಾರತದ ಪ್ರಮುಖ ರಿಯಲ್ ಎಸ್ಟೇಟ್‌ ಡೆವಲಪರ್‌ಗಳಾದ ಒಮ್ಯಾಕ್ಸ್‌ ಗುರುವಾರ ಜಿಯೋ-ಬಿಪಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಅಡಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬ್ಯಾಟರಿ ಚಾರ್ಜಿಂಗ್‌ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಫರಿದಾಬಾದ್‌, ಘಾಜಿಯಾಬಾದ್, ನ್ಯೂ ಚಂಡೀಗಢ, ಲೂಧಿಯಾನ, ಪಟಿಯಾಲ, ಅಮೃತಸರ, ಜೈಪುರ, ಸೋನಿಪತ್ತ ಮತ್ತು ಬಹಾದುರ್‌ಗಢದಲ್ಲಿ ಹಂತ ಹಂತವಾಗಿ ಒಮ್ಯಾಕ್ಸ್‌ ಸ್ಥಳದಲ್ಲಿ ಇವಿ … Continued