ಬಸ್-ಟ್ರಕ್ ಡಿಕ್ಕಿ: 10 ಜನರು ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

ನಾಸಿಕ್‌: ಮಹಾರಾಷ್ಟ್ರದ ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಶುಕ್ರವಾರ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ ಮತ್ತು 34 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಪತ್ತಾರೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ಖಾಸಗಿ ಐಷಾರಾಮಿ ಬಸ್ ಥಾಣೆ ಜಿಲ್ಲೆಯ ಅಂಬರನಾಥದಿಂದ ಹೊರಟಿತ್ತು. ನಾಸಿಕ್-ಶಿರಡಿ ಹೆದ್ದಾರಿಯ ಪಥರೆ ಶಿವಾರ್ … Continued

ಟಿಎಂಸಿ ಶಾಸಕನ ಆಸ್ತಿಗಳ ಮೇಲೆ ಐಟಿ ದಾಳಿ : 11 ಕೋಟಿ ರೂಪಾಯಿ ನಗದು ವಶ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ಜಾಕಿರ್ ಹುಸೇನ್ ಅವರ ಮುರ್ಷಿದಾಬಾದ್, ಕೋಲ್ಕತ್ತಾ ಮತ್ತು ನವದೆಹಲಿಯಲ್ಲಿರುವ ಆಸ್ತಿಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ 11 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಬುಧವಾರ ಸಂಜೆ ಆರಂಭವಾದ ಶೋಧ ಕಾರ್ಯವು ಗುರುವಾರ ರಾತ್ರಿಯ ವರೆಗೆ ಹುಸೇನ್‌ ಅವರಿಗೆ ಸಂಬಂಧಿಸಿದ … Continued

ʼವಿಶ್ವದ ಅತಿ ಉದ್ದದ ನದಿ ವಿಹಾರʼಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ: ಅದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು…

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೀಡಿಯೋ ಲಿಂಕ್ ಮೂಲಕ ವಾರಾಣಸಿ(ಕಾಶಿ)ಯಲ್ಲಿ ವಿಶ್ವದ ಅತಿ ಉದ್ದದ ಕ್ರೂಸ್ ಎಂ.ವಿ. ಗಂಗಾ ವಿಲಾಸಕ್ಕೆ ಚಾಲನೆ ನೀಡಲಿದ್ದಾರೆ ಮತ್ತು ಹಲವಾರು ಇತರ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಶ್ವದ ಅತಿ ಉದ್ದದ ನದಿ ಕ್ರೂಸ್ ಎಂವಿ ಗಂಗಾ ವಿಲಾಸ ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದೆ. … Continued

ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಇನ್ನಿಲ್ಲ

ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಸಮಾಜವಾದಿ ನಾಯಕ ಶರದ ಯಾದವ್ ಅವರು ಗುರುವಾರ (ಜನವರಿ 12) ತಮ್ಮ 75 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಟ್ವಿಟರ್‌ನಲ್ಲಿ “ಪಾಪಾ ನಹೀ ರಹೇ (ಪಾಪಾ ಇನ್ನಿಲ್ಲ)” ಎಂದು ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಮಾಜಿ ಸಚಿವರ ಆರೋಗ್ಯ ಹದಗೆಟ್ಟಿತ್ತು, ಅವರನ್ನು ಗುರುಗ್ರಾಮದ … Continued

ತೆರಿಗೆ ನೋಟಿಸ್ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೋದ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ

ಮುಂಬೈ : ಬಾಲಿವುಡ್‌ ನಟಿ ಹಾಗೂ ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ತೆರಿಗೆ ಹೆಚ್ಚಳದ ನೋಟಿಸ್‌ನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2012-13 ಮತ್ತು 2013-14ರ ಬಾಕಿಗಳ ಕುರಿತು ಮಾರಾಟ ತೆರಿಗೆ ಉಪ ಆಯುಕ್ತರು ನೀಡಿದ ಎರಡು ಆದೇಶಗಳನ್ನು ಪ್ರಶ್ನಿಸಿ ನಟಿ ಅನುಷ್ಕಾ ಶರ್ಮಾ ಬಾಂಬೆ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಅವರ … Continued

ಕಾಶ್ಮೀರ ಸೋನಾಮಾರ್ಗದಲ್ಲಿ ಸಂಭವಿಸಿದ ಭಾರೀ ಹಿಮಕುಸಿತ : ರುದ್ರ ರಮಣೀಯ ದೃಶ್ಯ ಕ್ಯಾಮರಾದಲ್ಲಿ ಸೆರೆ | ವೀಕ್ಷಿಸಿ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಗಿರಿಧಾಮ ಸೋನಾಮಾರ್ಗದಲ್ಲಿ ಇಂದು, ಗುರುವಾರ  ಭಾರೀ ಹಿಮ ಹಿಮಕುಸಿತದ ವರದಿಯಾಗಿದೆ, ಅದರ ವೀಡಿಯೊವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿರುವ ಸೋನಾಮಾರ್ಗ್‌ನ ಬಾಲ್ಟಾಲ್ ಪ್ರದೇಶದ ಬಳಿ ಹಿಮಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಎರಡು ಹಿಮಕುಸಿತಗಳು ವರದಿಯಾಗಿದ್ದು, ಯಾವುದೇ ಪ್ರಾಣಹಾನಿ ಬಗ್ಗೆ … Continued

ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣ: ಯಥಾಸ್ಥಿತಿ ಕಾಪಾಡಲು ಇಶಾ ಯೋಗ ಕೇಂದ್ರಕ್ಕೆ ಹೈಕೋರ್ಟ್‌

ಬೆಂಗಳೂರು : ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಅವಲಗುರ್ಕಿಯಲ್ಲಿ ಆದಿಯೋಗಿ ಪ್ರತಿಷ್ಠಾಪನೆಗೆ ಮಂಜೂರಾಗಿರುವ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಸದೆ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್‌ ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ … Continued

ರಾಜಕೀಯ ಜಾಹೀರಾತುಗಳಿಗಾಗಿ ಎಎಪಿಗೆ ₹163 ಕೋಟಿ ವಸೂಲಿ ನೊಟೀಸ್ ನೀಡಿದ ದೆಹಲಿ ಸರ್ಕಾರ : 10 ದಿನಗಳಲ್ಲಿ ಪಾವತಿಸಲು ಸೂಚನೆ

ನವದೆಹಲಿ : ಸರ್ಕಾರಿ ಜಾಹೀರಾತಿನ ಸೋಗಿನಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಬಳಿಯಿಂದ ₹ 163.62 ಕೋಟಿ ವಸೂಲಿ ಮಾಡುವಂತೆ ದೆಹಲಿ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) ನೀಡಿರುವ ವಸೂಲಾತಿ ನೋಟಿಸ್‌ನಲ್ಲಿ ದೆಹಲಿಯ ಆಡಳಿತ ಪಕ್ಷವು 10 ದಿನಗಳಲ್ಲಿ ಮೊತ್ತವನ್ನು ಪಾವತಿಸುವಂತೆ … Continued

ದೆಹಲಿ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಗೇಟ್‌ನಲ್ಲಿ ಸಾರ್ವಜನಿಕರೆದುರೇ ಮೂತ್ರ ಮಾಡಿದ ಸೌದಿ ಅರೇಬಿಯಾಕ್ಕೆ ಹೊರಟಿದ್ದ ವ್ಯಕ್ತಿ

ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ರ ನಿರ್ಗಮನ ಪ್ರದೇಶದ ಗೇಟ್‌ನಲ್ಲಿ 39 ವರ್ಷದ ಕುಡುಕ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಭಾನುವಾರ ಸಂಜೆ ನಡೆದ ಘಟನೆಯ ನಂತರ ಬಂಧಿತನಾಗಿದ್ದ ಬಿಹಾರದ ನಿವಾಸಿ ಜೌಹರ್ ಅಲಿ ಖಾನ್ ಅವರನ್ನು ಅದೇ ದಿನ ಜಾಮೀನು ಬಾಂಡ್ ಮೇಲೆ ಬಿಡುಗಡೆ ಮಾಡಲಾಯಿತು ಎಂದು … Continued

ಏಕಕಾಲದಲ್ಲಿ ಎರಡು ಕೋರ್ಸ್‌ಗಳು: ʼಕಾರ್ಯವಿಧಾನʼ ರೂಪಿಸಲು ವಿವಿಗಳಿಗೆ ಯುಜಿಸಿ ಸೂಚನೆ

ನವದೆಹಲಿ: ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಶೈಕ್ಷಣಿಕ ಕೋರ್ಸ್‌ಗಳನ್ನು ಮುಂದುವರಿಸಲು ಅನುವು ಮಾಡಿಕೊಡಲು “ಸುಲಭಗೊಳಿಸುವ ಕಾರ್ಯವಿಧಾನವನ್ನು ರೂಪಿಸಲು” ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳು (ಎಚ್‌ಇಐ) ವಲಸೆ ಪ್ರಮಾಣ ಪತ್ರ / ಶಾಲೆ ಬಿಡುವ ಪ್ರಮಾಣ ಪತ್ರಗಳಿಗೆ ಒತ್ತಾಯಿಸುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಎಂದು ಆಯೋಗ ತಿಳಿಸಿದೆ. … Continued