ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದ ಮೊದಲ ಹಿಂದಿ ಕಾದಂಬರಿ

ನವದೆಹಲಿ: ದೆಹಲಿ ಮೂಲದ ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೆರಿಕದ ಅನುವಾದಕಿ ಡೈಸಿ ರಾಕ್‌ವೆಲ್ ಅವರು ತಮ್ಮ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗಾಗಿ ಗುರುವಾರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೂಲತಃ ಹಿಂದಿಯಲ್ಲಿ ಬರೆದ ‘ಟಾಂಬ್ ಆಫ್ ಸ್ಯಾಂಡ್’ ಯಾವುದೇ ಭಾರತೀಯ ಭಾಷೆಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮೊದಲ ಪುಸ್ತಕವಾಗಿದೆ. 2022 ಇಂಟರ್‌ನ್ಯಾಷನಲ್‌ ಬುಕರ್ … Continued

ಕಾಶ್ಮೀರ ಟಿವಿ ಕಲಾವಿದೆ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್ ಉಗ್ರರ ಹತ್ಯೆ: ಪೊಲೀಸರು

ಶ್ರೀನಗರ: ಕಾಶ್ಮೀರಿ ಕಿರುತೆರೆ ನಟಿ ಅಮ್ರೀನ್ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಕಾಶ್ಮೀರದ ಅವಂತಿಪೋರಾದಲ್ಲಿ ಕೊಲ್ಲಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬೆಳಿಗ್ಗೆ ತಿಳಿಸಿದ್ದಾರೆ. ಕಿರುತೆರೆ ಕಲಾವಿದೆ ಅಮ್ರೀನ್ ಭಟ್ ಅವರ ಹೇಯ ಹತ್ಯೆ ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸಲಾಗಿದೆ… ಕಾಶ್ಮೀರ ಕಣಿವೆಯಲ್ಲಿ ಮೂರು ದಿನಗಳಲ್ಲಿ ಹತ್ಯೆಯಾದ ಜೈಶ್-ಎ-ಮೊಹಮ್ಮದ್ … Continued

ನಾಯಿಗೆ ವಾಕಿಂಗ್‌ ಮಾಡಿಸಲು ದೆಹಲಿ ಸ್ಟೇಡಿಯಂ ಖಾಲಿ ಮಾಡಿಸಿದ ಐಎಎಸ್ ಅಧಿಕಾರಿ ಲಡಾಖ್‌ಗೆ, ಪತ್ನಿ ಅರುಣಾಚಲಕ್ಕೆ ವರ್ಗಾವಣೆ..!

ನವದೆಹಲಿ: ತನ್ನ ನಾಯಿಯನ್ನು ವಾಕ್‌ ಮಾಡಿಸಲು (ನಡೆದಾಡಿಸಲು) ದೆಹಲಿಯ ಕ್ರೀಡಾಂಗಣವನ್ನು ತೆರವುಗೊಳಿಸಿದ ಅಧಿಕಾರಿ ಸಂಜೀವ್ ಖಿರ್ವಾರ್ ಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರನ್ನು ಲಡಾಖ್‌ಗೆ ವರ್ಗಾಯಿಸಲಾಗಿದೆ. ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಭಾರತೀಯ ಆಡಳಿತ ಸೇವೆಗಳ ಅಧಿಕಾರಿಯು ತನ್ನ ನಾಯಿ ವಾಕ್ … Continued

ವೃದ್ಧ ತಂದೆ-ತಾಯಿಗಳಿಗೆ ಕಿರುಕುಳ ನೀಡುವ ಮಕ್ಕಳನ್ನು ಮನೆಯಿಂದ ಹೊರಹಾಕಿ ಎಂದ ಕೋರ್ಟ್‌

ಹರಿದ್ವಾರ: ತಮ್ಮ ತಂದೆ-ತಾಯಿಗಳಿಗೆ ಕಿರುಕುಳ ನೀಡಿದ ಆರು ವೃದ್ಧ ದಂಪತಿಗಳ ಮಕ್ಕಳಿಗೆ ಒಂದು ತಿಂಗಳೊಳಗೆ ಮನೆ ಖಾಲಿ ಮಾಡುವಂತೆ ಹರಿದ್ವಾರ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನ್ಯಾಯಾಲಯ ಗುರುವಾರ ಆದೇಶಿಸಿದೆ. ಹಾಗೂ ಆದೇಶ ಪಾಲಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ತಮ್ಮ ಮನೆಯಲ್ಲಿ ವಾಸಿಸುತ್ತಿರುವಾಗ ಪೋಷಕರನ್ನು ನಿಂದಿಸುವ ಮಕ್ಕಳನ್ನು ಆಸ್ತಿಯಿಂದ … Continued

ಬಾಲಿವುಡ್ ನಟರಾದ ಶಾರುಖ್ ಖಾನ್‌- ಅಜಯ್ ದೇವಗನ್‌ಗೆ ತಲಾ 5 ರೂಪಾಯಿ ಮನಿ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ..! ಕಾರಣವೇನೆಂದರೆ

ಖಾರ್ಗೋನ್ (ಮಧ್ಯಪ್ರದೇಶ): ಸಹೋದರರ ದಿನದ ಮುನ್ನಾದಿನದಂದು, ಖಾರ್ಗೋನ್‌ನ ಮೊದಲ ವರ್ಷದ ವಿದ್ಯಾರ್ಥಿನಿಯೊಬ್ಬಳು ಪಾನ್ ಮಸಾಲಾ ಜಾಹೀರಾತನ್ನು ತೊರೆಯುವಂತೆ ಬಾಲಿವುಡ್ ತಾರೆಗಳಾದ ಶಾರುಖ್ ಖಾನ್ ಮತ್ತು ಅಜಯ್ ದೇವಗನ್‌ಗೆ ವಿನಂತಿಸಿದ್ದಾಳೆ. ಖಾರ್ಗೋನ್‌ನ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಥಮ ವರ್ಷದ ಕಲಾ ವಿದ್ಯಾರ್ಥಿ ಧಡ್ಕನ್ ಆಶೀರ್ವಾದ್ ಜೈನ್ ಬಾಲಿವುಡ್‌ ನಟರಾದ ಶಾರುಖ್ ಖಾನ್ ಮತ್ತು ಅಜಯ್ ದೇವಗನ್‌ಗೆ ತಲಾ … Continued

ಅಸ್ಸಾಂ: ಸಾಮೂಹಿಕ ಅತ್ಯಾಚಾರ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರಿಂದ ಗುಂಡೇಟು

ಕೊಕ್ರಜಾರ್: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾದ ವ್ಯಕ್ತಿಯೊಬ್ಬ ಗುರುವಾರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹಾರಿಸಿ ಗಾಯಗೊಂಡಿರುವ ಘಟನೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಅತ್ಯಾಚಾರದ ಘಟನೆಯನ್ನು ಚಿತ್ರೀಕರಿಸಿದ್ದ ಮೊಬೈಲ್ ಹ್ಯಾಂಡ್‌ಸೆಟ್‌ … Continued

ವೀಸಾ ಲಂಚ ಪ್ರಕರಣ: ಕಾರ್ತಿ ಚಿದಂಬರಂ ಅವರನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಪ್ರಶ್ನಿಸಿದ ಸಿಬಿಐ

ನವದೆಹಲಿ: ತಂದೆ ಪಿ ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ 2011ರಲ್ಲಿ 263 ಚೀನಾ ಪ್ರಜೆಗಳಿಗೆ ವೀಸಾ ನೀಡಿದ್ದ ಆರೋಪದ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಗುರುವಾರ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ವಿಶೇಷ ನ್ಯಾಯಾಲಯದ ಅನುಮತಿಯೊಂದಿಗೆ ಕಾರ್ತಿ ಅವರು ಬ್ರಿಟನ್‌ … Continued

ಬೆಂಗಳೂರಿನ ಆಸ್ಪತ್ರೆಯಲ್ಲಿ 7 ವರ್ಷಗಳಿಂದ ದಾಖಲಾಗಿದ್ದ ಮಹಿಳೆ ಸಾವು

ಬೆಂಗಳೂರು: ಅಪರೂಪದ ಪ್ರಕರಣದಲ್ಲಿ, ಸುಮಾರು ಏಳು ವರ್ಷಗಳ ಕಾಲ ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ 35 ವರ್ಷದ ಮಹಿಳೆ ನಿಧನರಾಗಿದ್ದಾರೆ. ಅಕ್ಟೋಬರ್ 2015 ರಲ್ಲಿ ಹೊಟ್ಟೆ ನೋವಿನಿಂದಾಗಿ ಪೂನಂ ರಾಣಾ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರಳವಾದ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಒಂದು ದಿನನಿತ್ಯದ ಪ್ರಕರಣವೆಂದು ಆರಂಭದಲ್ಲಿ ಭಾವಿಸಲಾಗಿತ್ತು, ನಂತರ ಇದು ಹಲವಾರು ತಿರುವುಗಳು ಮತ್ತು ಅಸಂಖ್ಯಾತ ತೊಡಕುಗಳನ್ನು … Continued

ನೀರು ಚಿಮ್ಮಿಸುವ ಮೂಲಕ ಪಕ್ಷಿಗೆ ಕೀಟಲೆ ಮಾಡಿದ ಮರಿಯಾನೆ- ಪ್ರತಿಯಾಗಿ ದಾಳಿ ಮಾಡಿ ಆನೆ ಕುಣಿಯುವಂತೆ ಮಾಡಿದ ಪಕ್ಷಿ | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ಹರಿದಾಡುತ್ತಿದ್ದು, ಇದು ಕೇವಲ ವೀಕ್ಷಿಸಲು ಮನರಂಜನೆ ನೀಡುವುದಲ್ಲದೆ ಎಲ್ಲರಿಗೂ ಒಳ್ಳೆಯ ಪಾಠವನ್ನೂ ನೀಡುವಂತಿದೆ. ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಯಾರನ್ನಾದರೂ ಚಿಕ್ಕವರೆಂದು ಪರಿಗಣಿಸಿ ಕೀಟಲೆ ಮಾಡುವುದು ಮೂರ್ಖತನ. ಏಕೆಂದರೆ ಸಣ್ಣ ಹಕ್ಕಿ ಕೂಡ ಆನೆ ನೃತ್ಯ ಮಾಡುವಂತೆ ಮಾಡುತ್ತದೆ ಎಂದು ಅವರು ಅದಕ್ಕೆ ಶೀರ್ಷಿಕೆ ಬರೆದಿದ್ದಾರೆ. … Continued

ವೇಶ್ಯಾವಾಟಿಕೆ ಕಾನೂನುಬದ್ಧ, ವಯಸ್ಕ- ಒಪ್ಪಿಗೆಯ ಲೈಂಗಿಕ ಕಾರ್ಯಕರ್ತರ ಮೇಲೆ ಪೊಲೀಸರು ಕ್ರಿಮಿನಲ್ ಕ್ರಮ ಕೈಗೊಳ್ಳುವಂತಿಲ್ಲ : ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಮಹತ್ವದ ಆದೇಶವೊಂದರಲ್ಲಿ, ಸುಪ್ರೀಂಕೋರ್ಟ್ ವೇಶ್ಯಾವೃತ್ತಿಯನ್ನು ಕಾನೂನುಬದ್ಧ ಎಂದು ಹೇಳಿದೆ. ಒಪ್ಪಿಗೆ ಮೇರೆಗೆ ಲೈಂಗಿಕ ವೃತ್ತಿ ನಡೆಸುತ್ತಿರುವವರ ಮೇಲೆ ಪೊಲೀಸರು ಅಪರಾಧ ಕ್ರಮ ಕೈಗೊಳ್ಳುವಂತಿಲ್ಲ ಹಾಗೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ವೇಶ್ಯಾವಾಟಿಕೆ ಒಂದು ವೃತ್ತಿ ಮತ್ತು ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಅಡಿಯಲ್ಲಿ ಘನತೆ ಹಾಗೂ ಸಮಾನ ರಕ್ಷಣೆಗೆ ಅರ್ಹರು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. … Continued