ಅಪರಿಚಿತ ಗ್ಯಾಂಗ್‌ನಿಂದ ಬಿಜೆಪಿಯ ಮುಖಂಡನ ಹತ್ಯೆ

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಬಿಜೆಪಿಯ ನಾಯಕನನ್ನು ಮೂವರು ದುಷ್ಕರ್ಮಿಗಳು ಮಂಗಳವಾರ (ಮೇ 24 ರಂದು) ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಚಿಂತಾದ್ರಿಪೇಟ್‌ನಲ್ಲಿ ಬಾಲಚಂದರ್ (30) ಅವರನ್ನು ಅಪರಿಚಿತ ಗ್ಯಾಂಗ್‌ ಹತ್ಯೆ ಮಾಡಿದೆ. ಬಾಲಚಂದರ್ ಅವರು ಬಿಜೆಪಿಯ ಪರಿಶಿಷ್ಟ ಜಾತಿ/ಪಂಗಡದ (SC/ST) ಸೆಂಟ್ರಲ್ ಚೆನ್ನೈ ಮುಖ್ಯಸ್ಥರಾಗಿದ್ದರು. ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದರಿಂದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ವೈಯಕ್ತಿಕ ಭದ್ರತಾ … Continued

ಜ್ಞಾನವಾಪಿ ಪ್ರಕರಣ: ಮೇ 28, 29ಕ್ಕೆ 5 ಸಾವಿರ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಸಭೆ

ನವದೆಹಲಿ: ಜ್ಞಾನವಾಪಿ ಮಸೀದಿ ಮತ್ತು ಕುತುಬ್ ಮಿನಾರ್ ಒಳಗೊಂಡಿರುವ ವಿವಾದದ ನಡುವೆ ಜಾಮಿಯತ್-ಉಲಮಾ-ಇ-ಹಿಂದ್ ಎಂಬ ಮುಸ್ಲಿಂ ಸಂಘಟನೆಯು ಉತ್ತರ ಪ್ರದೇಶದ ದೇವಬಂದ್‌ನಲ್ಲಿ ಮೇ 28 ಮತ್ತು 29 ರಂದು ‘ಬೃಹತ್‌ ಸಭೆ’ ನಡೆಸಲಿದೆ. ಸುಮಾರು 5,000 ಮುಸ್ಲಿಂ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಈ ಸಭೆಯಲ್ಲಿ ಜ್ಞಾನವಾಪಿ, ಮಥುರಾ ಮತ್ತು ಕುತುಬ್ ಮಿನಾರ್‌ನಂತಹ ಸ್ಮಾರಕಗಳ ಬಗ್ಗೆ … Continued

ಕುರ್ಚಿಗಾಗಿ ಮಕ್ಕಳೆದುರೇ ಇಬ್ಬರು ಶಿಕ್ಷಕಿಯರಿಂದ ಮಕ್ಕಳಂತೆ ಕಾದಾಟ.. ವಿದ್ಯಾರ್ಥಿಗಳೇ ಕಂಗಾಲು | ವೀಕ್ಷಿಸಿ

ಶಿಕ್ಷಕರು ದಾರಿ ತೋರಿಸಬೇಕಾದ ಭವಿಷ್ಯದ ಪ್ರಜ್ಞೆಗಳನ್ನು ರೂಪಿಸಬೇಕಾದ ಶಿಕ್ಷಕರೇ ಕುರ್ಚಿಗಾಗಿ ಮಕ್ಕಳೆದುರೇ ಚಿಕ್ಕ ಮಕ್ಕಳಂತೆ ಜಗಳವಾಡಿಕೊಂಡ ಘಟನೆ ವರದಿಯಾಗಿದೆ. ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿರುವ ಚಿತ್ರಕೂಟ ಚಕೌಂಧದ ಸಂಯುಕ್ತ ಶಾಲೆಯಲ್ಲಿ. ಇಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಮತ್ತು ಸಹಾಯಕ ಶಿಕ್ಷಕಿ ಕುರ್ಚಿಗಾಗಿ ಕಾದಾಟ ನಡೆಸಿದ್ದಾರೆ…! … Continued

ಜಿಲ್ಲೆಯ ಮರುನಾಮಕರಣಕ್ಕೆ ಸಂಬಂಧಿಸಿದಂತೆ ಭುಗಿಲೆದ್ದ ಹಿಂಸಾಚಾರ : ಆಂಧ್ರಪ್ರದೇಶ ಸಚಿವರ ಮನೆಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಹೈದರಾಬಾದ್: ಕೋನಸೀಮಾ ಜಿಲ್ಲೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವ ಆಂಧ್ರಪ್ರದೇಶ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಮಲಾಪುರಂನಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಪೊಲೀಸ್ ವಾಹನ ಮತ್ತು ಖಾಸಗಿ ಬಸ್‌ಗೆ ಬೆಂಕಿ ಹಚ್ಚಿದ್ದು, ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. … Continued

ದುಬಾರಿ ವಾಚ್ ಮಾರಲು ಹೋದ ಭಾರತದ ತಂಡದ ವಿಕೆಟ್‌ ಕೀಪರ್‌ ರಿಷಭ್ ಪಂತಗೆ 1.63 ಕೋಟಿ ರೂ.ಪಂಗನಾಮ…!

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಹಾಗೂ ಭಾರತದ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ರಿಷಭ್ ಪಂತ್ ಅವರು ತಮ್ಮಲ್ಲಿದ್ದ ದುಬಾರಿ ಬೆಲೆಯ ವಾಚುಗಳು ಹಾಗೂ ಚಿನ್ನಾಭರಣಗಳನ್ನು ಮಾರಲು ಹೋಗಿ 1.63 ಕೋಟಿ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ರಿಷಭ್ ಪಂತ್ ಅವರಿಗೆ ವಾಚ್‍ಗಳ ಮೋಹವಿದ್ದು ದುಬಾರಿ ಬೆಲೆಯ ವಾಚುಗಳನ್ನು ಕೊಂಡುಕೊಳ್ಳಲು ಸದಾ ಮುಂದಿರುತ್ತಾರೆ. ತಮ್ಮಲ್ಲಿರುವ ಹಳೆಯ … Continued

ಕುತುಬ್ ಮಿನಾರ್ ವಿವಾದ: ಕೆಡವಿದ ಕಟ್ಟಡದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ-ಕೋರ್ಟ್‌ನಲ್ಲಿ ಎಎಸ್ಐ ಹೇಳಿಕೆ

ನವದೆಹಲಿ: ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಕುತುಬ್ ಮಿನಾರ್ ಪ್ರಕರಣದ ವಿಚಾರಣೆ ಇಂದು, (ಮೇ ೨೪) ಪೂರ್ಣಗೊಂಡಿದೆ. ಈ ಕುರಿತು ಜೂನ್ 9 ರಂದು ನಿರ್ಧಾರ ಬರಲಿದೆ. ಇಂದು, ಮಂಗಳವಾರ ಭಾರತೀಯ ಪುರಾತತ್ವ ಇಲಾಖೆ (ASI) ಮತ್ತು ಹಿಂದೂ ಪಕ್ಷದವರು ತಮ್ಮ ವಾದ ಮಂಡಿಸಿದರು. 27 ದೇವಸ್ಥಾನಗಳನ್ನು ಕೆಡವಿ ಕುವ್ವಾತ್ ಉಲ್ ಇಸ್ಲಾಂ (Quwwat ul Islam) … Continued

ಭ್ರಷ್ಟಾಚಾರ ಆರೋಪದ ಮೇಲೆ ಪಂಜಾಬ್ ಸಚಿವನ ವಜಾಗೊಳಿಸಿದ ನಂತರ ಬಂಧನ

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭ್ರಷ್ಟಾಚಾರದ ಆರೋಪದ ಮೇಲೆ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ರಾಜ್ಯ ಸಂಪುಟದಿಂದ ವಜಾ ಮಾಡಿರುವುದಾಗಿ ಮಂಗಳವಾರ ಹೇಳಿದ್ದಾರೆ. ಅವರನ್ನು ಪದಚ್ಯುತಗೊಳಿಸಿದ ನಂತರ, ಸಿಂಗ್ಲಾ ಅವರನ್ನು ಭ್ರಷ್ಟಾಚಾರ ವಿರೋಧಿ ಬ್ಯೂರೋ ಬಂಧಿಸಿತು. ನಾನು ಆ ಸಚಿವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇನೆ, ಎಎಪಿ ಭ್ರಷ್ಟಾಚಾರದ ವಿರುದ್ಧ ಶೂನ್ಯ-ಸಹಿಷ್ಣು … Continued

ಜಾಗತಿಕ ತಾಪಮಾನ ಏರಿಕೆ 2022ರಲ್ಲಿ ಭಾರತದಲ್ಲಿ ಅನೇಕರ ಸಾವಿಗೆ ಕಾರಣವಾದ ಶಾಖದ ಅಲೆಯನ್ನು ಸಾಮಾನ್ಯಕ್ಕಿಂತ 30 ಪಟ್ಟು ಹೆಚ್ಚಿಸಿದೆ: ವರದಿ

ನವದೆಹಲಿ: ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ, ದಕ್ಷಿಣ ಏಷ್ಯಾದಲ್ಲಿ 90 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಶಾಖದ ಅಲೆಗೆ ಸಾಕ್ಷಿಯಾಯಿತು. ವರದಿಯ ಪ್ರಕಾರ, ಹವಾಮಾನ ಬದಲಾವಣೆಯಿಂದ ಈ ಶಾಖದ ಅಲೆಯು ಸಾಮಾನ್ಯಕ್ಕಿಂತ 30 ಪಟ್ಟು ಹೆಚ್ಚಾಗಿತ್ತು…! ಮಾನವ ಉಂಟುಮಾಡುವ ಹವಾಮಾನ ಬದಲಾವಣೆಯ ಪ್ರಾರಂಭದ ಮೊದಲು, ಅಂತಹ ಘಟನೆ ಸಂಭವಿಸುವ ಸಾಧ್ಯತೆಗಳು ಸರಿಸುಮಾರು 3,000 … Continued

ಕೋವಿಡ್‌ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ಯಶಸ್ಸಿನಿಂದ ಪ್ರಜಾಪ್ರಭುತ್ವಗಳು ಯಶಸ್ವಿಯಾಗಬಲ್ಲವು ಎಂಬುದು ಸಾಬೀತು:ಭಾರತದ ಕೋವಿಡ್ ಸಮರಕ್ಕೆ ಅಮೆರಿಕ ಅಧ್ಯಕ್ಷ ಬೈಡೆನ್‌ ಪ್ರಶಂಸೆ

ಟೋಕಿಯೊ: ಟೋಕಿಯೊದಲ್ಲಿ ನಡೆದ ಕ್ವಾಡ್ ಶೃಂಗಸಭೆಯ ಅಧಿವೇಶನದಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಭಾರತದ ಕೋವಿಡ್ ಸಾಂಕ್ರಾಮಿಕ ರೋಗವನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ಶ್ಲಾಘಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಧಾನಿ ಮೋದಿಯವರ ಯಶಸ್ಸು ಪ್ರಜಾಪ್ರಭುತ್ವಗಳು ನೀಡಬಲ್ಲವು ಎಂಬುದನ್ನು ಜಗತ್ತಿಗೆ ತೋರಿಸಿದೆ ಮತ್ತು ಚೀನಾ ಮತ್ತು ರಷ್ಯಾದಂತಹ ನಿರಂಕುಶಾಧಿಕಾರಗಳು ವೇಗವಾಗಿ ಬದಲಾಗುತ್ತಿರುವ … Continued

ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೋಷಿಸಿದ ನವಜಾತ ಶಿಶು ಅಂತ್ಯಸಂಸ್ಕಾರ ಮಾಡುವ ಮೊದಲು ಜೀವಂತ…!

ಜಮ್ಮು: ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಳ್‌  ಉಪ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶು ಮೃತಪಟ್ಟಿದೆ ಎಂದು ಘೋಷಿಸಲಾಯಿತು. ನಂತರ ಕುಟುಂಬ ಸದಸ್ಯರು ಸಮಾಧಿ ಮಾಡಲು ಕರೆದೊಯ್ಯುವಾಗ ಮಗು ಜೀವಂತವಾಗಿರುವುದು ಕಂಡುಬಂದಿದೆ. ನಿರ್ಲಕ್ಷ್ಯದ ವಿರುದ್ಧ ಕೋಪಗೊಂಡ ಮಗುವಿನ ಕುಟುಂಬ ಸದಸ್ಯರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದರು. ಘಟನೆಯನ್ನು ಗಮನಿಸಿದ ಅಧಿಕಾರಿಗಳು ಶಿಶುವಿನ ಕುಟುಂಬದವರ … Continued