ಅಬಕಾರಿ ನೀತಿ ಪ್ರಕರಣದಲ್ಲಿ ಮೊದಲ ಬಂಧನ : ಮನೀಶ್ ಸಿಸೋಡಿಯಾ ಸಹಾಯಕ ವಿಜಯ ನಾಯರ್ ಬಂಧಿಸಿದ ಸಿಬಿಐ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ವಿಜಯ ನಾಯರ್ ಅವರನ್ನು ಸಿಬಿಐ ಬಂಧಿಸಿದೆ. ಇದು ಈ ಪ್ರಕರಣದಲ್ಲಿ ಸಿಬಿಐನ ಮೊದಲ ಬಂಧನವಾಗಿದೆ. ಅವರು ಓನ್ಲಿ ಮಚ್ ಲೌಡರ್ ಎಂಟರ್‌ಟೈನ್‌ಮೆಂಟ್ ಮತ್ತು ಈವೆಂಟ್ ಮೀಡಿಯಾ ಕಂಪನಿಯ ಮಾಜಿ ಸಿಇಒ ಆಗಿದ್ದಾರೆ. ಅವರ ಮೇಲೂ ಇಡಿ ದಾಳಿ ನಡೆಸಿದೆ. ಅಬಕಾರಿ ನೀತಿ ಪ್ರಕರಣದ ಪ್ರಮುಖ ಸಂಚುಕೋರರಲ್ಲಿ ಇವರೂ ಒಬ್ಬರು … Continued

ಹೈದರಾಬಾದ್: ನವರಾತ್ರಿ ಪೆಂಡಾಲ್‌ನಲ್ಲಿ ದುರ್ಗಾ ದೇವಿಯ ಮೂರ್ತಿಗೆ ಹಾನಿ ಮಾಡಿದ ಇಬ್ಬರು ಬುರ್ಖಾಧಾರಿ ಮಹಿಳೆಯರ ಬಂಧನ

ಹೈದರಾಬಾದ್: ಇಲ್ಲಿನ ಪೂಜಾ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ದುರ್ಗಾ ಮಾತೆಯ ವಿಗ್ರಹಕ್ಕೆ ಹಾನಿ   ಮಾಡಿದ ಆರೋಪದ ಮೇಲೆ ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈ ಘಟನೆಯು ಮುಂಜಾನೆ ಸಂಭವಿಸಿದ್ದು, ಇಪ್ಪತ್ತರ ಹರೆಯದವರೆಂದು ಹೇಳಲಾದ ಇಬ್ಬರು ಮಹಿಳೆಯರು, ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ಪೂಜಾ ಮಂಟಪಕ್ಕೆ ನುಗ್ಗಿ ದುರ್ಗಾ ದೇವಿಯ ವಿಗ್ರಹವನ್ನು … Continued

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಮೂವರು ಗೆಹ್ಲೋಟ್ ನಿಷ್ಠರಿಗೆ ಶೋಕಾಸ್‌ ನೋಟಿಸ್‌ ನೀಡಿದ ಕಾಂಗ್ರೆಸ್ ಶಿಸ್ತು ಸಮಿತಿ, ಆದ್ರೆ ಗೆಹ್ಲೋಟ್‌ಗೆ ವಿನಾಯಿತಿ…!

ನವದೆಹಲಿ: ಕಾಂಗ್ರೆಸ್ ಶಿಸ್ತು ಸಮಿತಿ ಮಂಗಳವಾರ ರಾಜಸ್ಥಾನದ ಸಚಿವರಾದ ಶಾಂತಿ ಧರಿವಾಲ್ ಮತ್ತು ಮಹೇಶ್ ಜೋಶಿ ಮತ್ತು ಶಾಸಕ ಧರ್ಮೇಂದ್ರ ರಾಥೋಡ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ರಾಜಸ್ಥಾನದ ಮೂವರು ನಾಯಕರ ವಿರುದ್ಧ 10 ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದ್ದು, ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಮೂಲಗಳು ತಿಳಿಸಿವೆ. ತಮ್ಮ ನಿಷ್ಠಾವಂತ ಶಾಸಕರ … Continued

ನಾಳೆ 2016ರ ನೋಟು ಅಮಾನ್ಯೀಕರಣ ಕ್ರಮದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿವಾದಾತ್ಮಕ ಕ್ರಮದ ಆರು ವರ್ಷಗಳ ನಂತರ ನೋಟು ಅಮಾನ್ಯೀಕರಣ (demonetisation)ದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಸೆಪ್ಟೆಂಬರ್‌ 28ರಂದು ವಿಚಾರಣೆ ನಡೆಸಲಿದೆ ಎಂದು ಲೈವ್‌ ಲಾ (Live Law) ವರದಿ ಮಾಡಿದೆ. ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು … Continued

ಅಸ್ವಸ್ಥತೆ ನಂತರ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲು: ವರದಿ

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಅನಾರೋಗ್ಯದ ಬಗ್ಗೆ ದೂರು ನೀಡಿದ ನಂತರ ನಿನ್ನೆ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿಯಾಗಿದೆ. ನಟಿ ದೀಪಿಕಾ ನಂತರ ಹಲವಾರು ಪರೀಕ್ಷೆಗಳಿಗೆ ಒಳಗಾದರು. ಈಗ ಅವರ ಆರೋಗ್ಯ ಸ್ಥಿರವಾಗಿದೆ ಹಾಗೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಅವರ ತಂಡ ಈ ಬಗ್ಗೆ … Continued

15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ; ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ-ಸಚಿವ ನಾಗೇಶ ಮಾಹಿತಿ

ಬೆಂಗಳೂರು: ರಾಜ್ಯದ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ 1:2 ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಪಟ್ಟಿಯನ್ನು ಇಂದು  (ಸೆಪ್ಟೆಂಬರ್‌ 27) ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ ಮಾಹಿತಿ ನೀಡಿದ್ದಾರೆ. ಶಿಕ್ಷಕರ ನೇಮಕಾತಿಗೆ ಆಯ್ಕೆ ಪಟ್ಟಿ ಸಿದ್ಧಪಡಿಸಿದ್ದು, ಶಿಕ್ಷಣ ಸಚಿವರೇ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, 15,000 … Continued

ʼನಿಜವಾದ ಶಿವಸೇನೆ’ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಉದ್ಧವ್‌ ಠಾಕ್ರೆ ಬಣಕ್ಕೆ ಭಾರೀ ಹಿನ್ನಡೆ

ನವದೆಹಲಿ: ಏಕನಾಥ  ಶಿಂಧೆ ವಿರುದ್ಧದ ಹೋರಾಟದಲ್ಲಿ ಉದ್ಧವ್ ಠಾಕ್ರೆ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ನಿಜವಾದ ಶಿವಸೇನೆ ಯಾರ ಬಣ ಎಂಬುದನ್ನು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ತಡೆ ನೀಡುವುದಕ್ಕೆ ಸುಪ್ರೀಂಕೋರ್ಟ್ ಇಂದು, ಮಂಗಳವಾರ ನಿರಾಕರಿಸಿದೆ.ಮಹಾರಾಷ್ಟ್ರದಲ್ಲಿ “ನಿಜವಾದ” ಶಿವಸೇನೆ ಯಾರದ್ದು..? ಏಕನಾಥ ಶಿಂಧೆ ಬಣವೋ ಅಥವಾ ಉದ್ಧವ್ ಠಾಕ್ರೆ ಬಣವೋ ಎಂದು ನಿರ್ಧರಿಸಲು ಚುನಾವಣಾ ಆಯೋಗದ ಪ್ರಕ್ರಿಯೆಗಳಿಗೆ ಯಾವುದೇ … Continued

ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಇರಿದು ಕೊಂದ ಪತಿ..

ಮುಂಬೈ: ಟ್ಯಾಕ್ಸಿ ಡ್ರೈವರ್ (36) ಕಳೆದ ರಾತ್ರಿ ಮುಂಬೈನಲ್ಲಿ ತಮ್ಮ ಪುತ್ರನ ಕಸ್ಟಡಿಗಾಗಿ ಜಗಳವಾಡಿದ ನಂತರ ಮತ್ತು ಸಾಂಪ್ರದಾಯಿಕ ಮುಸ್ಲಿಂ ಪದ್ಧತಿಗಳನ್ನು ಅನುಸರಿಸಲು ನಿರಾಕರಿಸಿದ ನಂತರ ತನ್ನ ವಿಚ್ಛೇದಿತ ಪತ್ನಿ(20)ಯನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಹಿಂದೂ ಮಹಿಳೆ ರೂಪಾಲಿ 2019 ರಲ್ಲಿ ಮುಸ್ಲಿಂ ಇಕ್ಬಾಲ್ ಶೇಖ್ ಅವರನ್ನು ವಿವಾಹವಾಗಿದ್ದರು. ಅವರು … Continued

ಈ ವರ್ಷದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹಿರಿಯ ನಟಿ ಆಶಾ ಪರೇಖ್ ಆಯ್ಕೆ

ನವದೆಹಲಿ: ಹಿರಿಯ ನಟಿ ಆಶಾ ಪರೇಖ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಅವರನ್ನು ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ವರ್ಷ ನಟಿ ಆಶಾ ಪರೇಖ್ ಅವರನ್ನು ಚಿತ್ರರಂಗದ ಭಾರತದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ … Continued

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯಕುಮಾರ್ ಸಕ್ಸೇನಾ ವಿರುದ್ಧ ಮಾನಹಾನಿಕರ ಆರೋಪ ಮಾಡದಂತೆ ಎಎಪಿಗೆ ನಿರ್ಬಂಧಿಸಿದ ಹೈಕೋರ್ಟ್

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿನಯಕುಮಾರ್ ಸಕ್ಸೇನಾ ಮತ್ತು ಅವರ ಕುಟುಂಬದವರು ₹ 1,400 ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತಿಪಾದಿಸಿದ ನಂತರ ಆಮ್ ಆದ್ಮಿ ಪಕ್ಷ ಮತ್ತು ಅದರ ಹಲವಾರು ನಾಯಕರು “ಸುಳ್ಳು” ಆರೋಪಗಳನ್ನು ಮಾಡದಂತೆ ಸೆಪ್ಟೆಂಬರ್ 27 ರಂದು ದೆಹಲಿ ಹೈಕೋರ್ಟ್ ನಿರ್ಬಂಧಿಸಿದೆ. ಅಲ್ಲದೆ, ಸಕ್ಸೇನಾ ಅವರು ಎಎಪಿ, ಅದರ ನಾಯಕರಾದ ಅತಿಶಿ ಸಿಂಗ್, … Continued