ಕರ್ನಾಟಕದ ಮುಂದಿನ ಸಿಎಂ ಆಯ್ಕೆ: ದೆಹಲಿಯಲ್ಲಿ ಅಮಿತ್​ ಶಾ ತುರ್ತು ಸಭೆ; ರಾಜ್ಯಕ್ಕೆ ನಾಳೆ ಧರ್ಮೇಂದ್ರ ಪ್ರಧಾನ್

ಬೆಂಗಳೂರು: ಬಿ.ಎಸ್.​ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಕೂಡ ಅಂಗೀಕಾರವಾಗಿದೆ. ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗುವ ವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಕಾರ್ಯನಿರ್ವಹಿಸಲಿದ್ದಾರೆ. ಯಡಿಯೂರಪ್ಪ ಬಳಿಕ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಆಯ್ಕೆ ನಡೆಸಲುದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತಾ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ. ಸಂಸತ್​ ಭವನದಲ್ಲಿ ಅಮಿತ್​ ಶಾ ನೇತೃತ್ವದಲ್ಲಿ … Continued

ರಾಜೀನಾಮೆಗೆ ಬಿಜೆಪಿ ವರಿಷ್ಠರಿಂದ ಯಾವುದೇ ಒತ್ತಡವಿಲ್ಲ, ರಾಜ್ಯಪಾಲನಾಗುವುದಿಲ್ಲ ಎಂದ ಯಡಿಯೂರಪ್ಪ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲರ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಸಲ್ಲಿಸಿದರು. ಯಡಿಯೂರಪ್ಪ ಅವರ ರಾಜೀನಾಮೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ ಸಮಯದಲ್ಲಿ ಬಂದಿದೆ. ಯಡಿಯೂರಪ್ಪಹೇಳಿದ್ದೇನು..?: ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ ನಂತರ ಯಡಿಯೂರಪ್ಪ, “ಹೈಕಮಾಂಡ್‌ನಿಂದ ಯಾವುದೇ … Continued

ಎರಡು ದಿನಗಳೊಳಗೆ ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆ ಸಾಧ್ಯತೆ: ಉತ್ತರ ಕರ್ನಾಟಕಕ್ಕೆ ಮಣೆ ?

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡುವುದಾಗಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಹೀಗಾಗಿ ಈಗ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಪ್ರಶ್ನೆ ಮುಂಚೂಣಿಗೆ ಬಂದಿದೆ. ಜುಲೈ 26ರಂದು ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 2ನೇ ವರ್ಷದ ಸಂಭ್ರಮಾಚರಣೆಯೊಂದಿಗೆ ವಿದಾಯ ಭಾಷಣದ ಮಾಡಿದ ಯಡಿಯೂರಪ್ಪ ಅವರ ಬದಲಿಗೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಹೆಸರನ್ನು ಪ್ರಕಟಿಸುವ ಸಾಧ್ಯತೆಯೂ ಇದೆ … Continued

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಭಾನುವಾರ ನಡೆದ ಬಿಜೆಪಿ ಸರ್ಕಾರದ ಎರಡು ವರ್ಷ ಪೂರ್ಣಗೊಳಿಸಿದ ಸಾಧನಾ ಸಮಾವೇಶದಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದ ನಂತರ  ರಾಜಭವನಕ್ಕೆ ತೆರಳಿ ರಾಜ್ಯಪಾಲ  ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ   ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮಧಯಾಹ್ನ ಊಟದ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲ … Continued

ನವಿಲುತೀರ್ಥ ಡ್ಯಾಂನಿಂದ ಬಿಟ್ಟ ನೀರಿನಿಂದ ನೆರೆ: ಕುಸಿದ ಮನೆಗಳು, ಅಪಾರ ಬೆಳೆನಷ್ಟ

posted in: ರಾಜ್ಯ | 0

ಗದಗ: ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮಲಪ್ರಭ ಹಾಗೂ ತುಂಗಭದ್ರಾ ನದಿಗಳ ಹರಿವು ಹೆಚ್ಚಳ ಹಾಗೂ ನವಿಲುತೀರ್ಥ ಆಣೆಕಟ್ಟೆಯಿಂದ ಹೊರ ಬಿಟ್ಟಿರುವ ನೀರಿನಿಂದಾಗಿ ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಭಾಗಶಃ ಮುಳುಗಡೆ ಹಂತದಲ್ಲಿವೆ. ಗದಗ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದ್ದು, ಬೆಳಗಾವಿ ಜಿಲ್ಲೆಯ ನವಿಲುತೀರ್ಥ … Continued

ಕರ್ನಾಟಕದಲ್ಲಿ ಶೇ 20ರಷ್ಟು ಅಧಿಕ ಮಳೆ

ಬೆಂಗಳೂರು: ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆ ಎಡೆಬಿಡದೆ ಸುರಿಯುತ್ತಿದೆ. ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಶೇ. 20ರಷ್ಟು ಅಧಿಕ ಮಳೆಯಾಗಿದೆ ಎಂದು ವರದಿಯಾಗಿದೆ. ಇನ್ನೂ 2 ದಿನ ಮಳೆಯಾಗಲಿದ್ದು, 7 ಜಿಲ್ಲೆಗಳಲ್ಲಿ ರೆಡ್​​ ಅಲರ್ಟ್​ ಮುಂದುವರಿದಿದೆ. ಮುಂಗಾರಿನ ಅವಧಿಯಲ್ಲಿ ಅಂದರೆ ಜೂನ್ 1 ರಿಂದ ಜುಲೈ 19ರ ಮಧ್ಯದ ಅವಧಿಯಲ್ಲಿ ಕರ್ನಾಟಕದಲ್ಲಿ ವಾಡಿಕೆಯಂತೆ … Continued

ಮುಂಗಾರು ಮಳೆಗೆ ರಾಜ್ಯದ ೨೮೩ ಗ್ರಾಮಗಳು ಭಾಗಶಃ ಮುಳುಗಡೆ: ಸಂಕಷ್ಟಕ್ಕೆ ಸಿಲುಕಿದ ೩೬ ಸಾವಿರಕ್ಕೂ ಅಧಿಕ ಜನರು

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಹತ್ತಕ್ಕೂ ಹೆಚ್ಚು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉತ್ರರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ೨೮೩ ಗ್ರಾಮಗಳು ನದಿ ಹಾಗೂ ಮಳೆಯ ನೀರಿನಿಂದ ಜಲಾವೃತವಾಗಿದ್ದು, ಗ್ರಾಮಿಣ ಭಾಗದ ಸಾವಿರಾರು ಜನ ಮನೆ, ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರತರಾಗಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ವರದಿಯ ಪ್ರಕಾರ, … Continued

ಅಭಿನಯ ಶಾರದೆ ಕನ್ನಡದ ಹಿರಿಯ ನಟಿ ಜಯಂತಿ ನಿಧನ

ಬೆಂಗಳೂರು: ಅಭಿನಯ ಶಾರದೆ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಯಂತಿ ಸೋಮವಾರ ನಿಧನರಾಗಿದ್ದಾರೆ..ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಮವಾರ ಬೆಳಗಿನ ಜಾವ  ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಬದುಕಿಗೆ ವಿದಾಯ ಹೇಳಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ … Continued

ಜಾಗರೂಕ ರೈಲ್ವೆ ಚಾಲಕ ಸಿಬ್ಬಂದಿಯಿಂದ ಪ್ರಯಾಣಿಕರ ಸುರಕ್ಷತೆಗಾಗಿ ಸಕಾಲಿಕ ಕ್ರಮ:ನೈಋತ್ವ ರೈಲ್ವೆಯಿಂದ ಲೊಕೊ ಪೈಲಟ್‌ಗಳಿಗೆ ಬಹುಮಾನ

*PRESS RELEASE NO.262 DATED 25.7.2021* *ಜಾಗರೂಕ ರೈಲ್ವೆ ಚಾಲಕ ಸಿಬ್ಬಂದಿಗಳಿಂದ ಪ್ರಯಾಣಿಕರ ಸುರಕ್ಷತೆಗಾಗಿ ಸಕಾಲಿಕ ಕ್ರಮ* ಹುಬ್ಬಳ್ಳಿ: ರೈಲು ಸಂಖ್ಯೆ 01134 ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬಯಿ ರೈಲಿನ ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್ ಮತ್ತು ಗಾರ್ಡ್ ಗಳ ಸಮಯಪ್ರಜ್ಞೆ, ತ್ವರಿತ ಕಾರ್ಯಾಚರಣೆಯನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಗಜಾನನ ಮಲ್ಯ … Continued

ನಿರ್ಗಮನದ ಮಾತುಕತೆಯ ಮಧ್ಯೆ ಯಡಿಯೂರಪ್ಪಗೆ 500 ವೀರಶೈವ- ಲಿಂಗಾಯತ ಸ್ವಾಮೀಜಿಗಳ ಬೆಂಬಲ

ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಿಂದ ಬಂದ 500 ಕ್ಕೂ ಹೆಚ್ಚು ವೀರಶೈವ-ಲಿಂಗಾಯತ ವೀಕ್ಷಕರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಎಂದು ಅಧಿಕಾರ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಬಾಲೆಹೋಸೂರ ಮಠದ ದಿಂಗಲೇಶ್ವರ ಸ್ವಾಮಿ, ತಿಪಟೂರಿನ ರುದ್ರಮುನಿ ಸ್ವಾಮಿ ಮತ್ತು ಚಿತ್ರದುರ್ಗದ ಬಸವಕುಮಾರ ಸ್ವಾಮಿ ಅವರು ನೀಡಿದ ಕರೆಯ ಮೇರೆಗೆ, ಬೆಂಗಳೂರು ಅರಮನೆ … Continued