ಕೊಡಗು ಜಿಲ್ಲಾ ಪೊಲೀಸ್ ಖಜಾನೆಯಿಂದಲೇ ಹಣ ನಾಪತ್ತೆ ಪ್ರಕರಣ: ಮೂವರ ಅಮಾನತು

ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ಖಜಾನೆಯಲ್ಲಿ ಲಕ್ಷಾಂತರ ರೂ. ಲೂಟಿ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ನಗದು ಶಾಖೆ ನಗದು ನಿರ್ವಾಹಕ ರಂಜಿತ್ ಕುಮಾರ್, ದ್ವಿತೀಯ ದರ್ಜೆ ಗುಮಾಸ್ತ ಲೋಹಿತ್, ಡಿ ಗ್ರೂಪ್ ಸಿಬ್ಬಂದಿ ವಿನೋದ್ ಕುಮಾರ್ ಅಮಾನತುಗೊಂಡವರು … Continued

ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಎರಡು ದಿನ ಭಾರೀ ಮಳೆ ನಿರೀಕ್ಷೆ

ಬೆಂಗಳೂರು: ಕೆಲದಿನಗಳಿಂದ ನಾಪತ್ತೆಯಾ ಆತಂಕ ಮೂಡಿಸಿದ್ದ ಮುಂಗಾರು ಮಳೆ ಕರ್ನಾಟಕದಲ್ಲಿ ಮತ್ತೆ ಜೀವ ಪಡೆದುಕೊಂಡಿದೆ. ಎಲ್ಲೆಡೆ ವರುಣನ ಆರ್ಭಟ ಜೋರಾಗುತ್ತಿದೆ. ಕರಾವಳಿ ಭಾಗದಲ್ಲಿ ಭಾರೀ ಮಳೆಯ ಜತೆಗೆ ಗಾಳಿಯ ರಭಸವೂ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಸೋಮವಾರ ಮುಂಜಾನೆಯಿಂದ ಮತ್ತೆ ಮಳೆ ಜೋರಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ ಮತ್ತು ಕೊಡಗು … Continued

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಕೈಟೆಕ್ಸ್‌ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆಹ್ವಾನ: ಟಿಆರ್‌ಎಸ್ ಆಕ್ಷೇಪ

ಹೊಸ ಬೆಳವಣಿಗೆಯೊಂದರಲ್ಲಿ, ಟಿಆರ್‌ ಎಸ್ ನಾಯಕರು ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೈಟೆಕ್ಸ್ ಸಮೂಹವನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿರುವುದನ್ನು ಆಕ್ಷೇಪಿಸಿದ್ದಾರೆ. ತೆಲಂಗಾಣ ಸರ್ಕಾರವು ವಾರಂಗಲ್ಲಿನಲ್ಲಿ 1,000 ಕೋಟಿ ರೂ.ಗಳ ಹೂಡಿಕೆ ಮಾಡುವುದಾಗಿ ಘೋಷಿಸಿದ ನಂತರವೂ. ಕೈಟೆಕ್ಸ್ ಸಮೂಹದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಸಾಬು ಎಂ. ಜಾಕೋಬ್ ನೇತೃತ್ವದಲ್ಲಿ ತೆಲಂಗಾಣ ಕೈಗಾರಿಕಾ … Continued

ಮುರ್ಡೇಶ್ವರದಲ್ಲಿ ಇಬ್ಬರು ಸಮುದ್ರ ಪಾಲು. ಓರ್ವ ಶವವಾಗಿ ಪತ್ತೆ, ಮತ್ತೊಬ್ಬ ನಾಪತ್ತೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಇಬ್ಬರು ಪ್ರವಾಸಿಗರು ಸಮುದ್ರದಲ್ಲಿ ಮುಳುಗಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಓರ್ವ ಶವವಾಗಿ ಪತ್ತೆಯಾಗಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾನೆ. ಮತ್ತೋರ್ವನ ಶೋಧಕಾರ್ಯ ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ನಾಲ್ವರು ಮುರುಡೇಶ್ವರ ದೇವಸ್ಥಾನದಲ್ಲಿ ಪೂಜೆಯ ಬಳಿಕ ಸಮುದ್ರದಲ್ಲಿ ಈಜಲು ಹೋಗಿದ್ದರು. ಈ ವೇಳೆ ಅಲೆಯ ಅಬ್ಬರಕ್ಕೆ … Continued

ಕರ್ನಾಟಕದಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ.1.24ಕ್ಕೆ ಇಳಿಕೆ, ಮತ್ತಷ್ಟು ಕುಸಿದ ದೈನಂದಿನ ಸೋಂಕು..

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸಕಾರಾತ್ಮಕ ದರ (ಪಾಸಿಟಿವಿಟಿ ರೇಟ್‌)ದಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಭಾನುವಾರ ಅದು ಶೇ.1.24ಕ್ಕೆ ಕುಸಿದಿದೆ. ರಾಜ್ಯದಲ್ಲಿ ಭಾನುವಾರ 1,978 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 56 ಜನರು ಕೊರಿನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇವೇಳೆ 2,326 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 36,737 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕಿನ ಖಚಿತ ಪ್ರಮಾಣ … Continued

ಹುಡುಗ ಕಪ್ಪು ಎಂದು ಮದುವೆ ನಿರಾಕರಿಸಿದ ತಂಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಣ್ಣ..!

ರಾಯಚೂರು : ಮದುವೆ ನಿಶ್ಚಯವಾಗಿದ್ದ ವರ ಕಪ್ಪಗಿದ್ದಾನೆ ಎಂಬ ಕಾರಣಕ್ಕೆ ವಧು ಮದುವೆ ನಿರಾಕರಿಸಿದ್ದಕ್ಕೆ ತನ್ನ ತಂಗಿಯನ್ನ ಅಣ್ಣ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಎಂಬಲ್ಲಿ ನಡೆದ ವರದಿಯಾಗಿದೆ. ಗಬ್ಬೂರು ಗ್ರಾಮದ ನಿವಾಸಿ ಚಂದ್ರಕಲಾ (22 ವರ್ಷ) ಎಂಬಾಕೆಯೇ ಅಣ್ಣನಿಂದ ಕೊಲೆಯಾದ ಯುವತಿ. ಆಕೆಯ ಅಣ್ಣ ಶ್ಯಾಮ … Continued

ಕನ್ನಡದಲ್ಲೇ ಟ್ವೀಟ್‌ ಮಾಡಿದ ನೂತನ ರಾಜ್ಯಪಾಲರು..!

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಥಾವರ್‌ಚಂದ್‌ ಗೆಹ್ಲೋಟ್‌ ಅವರು ಕನ್ನಡದಲ್ಲೇ ಟ್ವೀಟ್‌ ಮಾಡಿದ್ದಾರೆ. ಭಾರತ ಸಂವಿಧಾನದ ಮತ್ತು ಕಾನೂನಿನ ಪರಿರಕ್ಷಣೆ, ಸಂರಕ್ಷಣೆ ಮತ್ತು ಪ್ರತಿರಕ್ಷಣೆ ಹಾಗೂ ಕರ್ನಾಟಕ ರಾಜ್ಯದ ಜನತೆಯ ಸೇವೆ ಮತ್ತು ಯೋಗಕ್ಷೇಮಕ್ಕಾಗಿ ಪ್ರತಿಬದ್ಧನಾಗಿರುತ್ತೇನೆಂದು ನಾನು ಇಂದು ಕರ್ನಾಟಕ ರಾಜ್ಯದ ರಾಜ್ಯಪಾಲನಾಗಿ ಪ್ರಮಾಣ ವಚನ ಸ್ವೀಕರಿಸಿರುತ್ತೇನೆʼ ಎಂದು ಥಾವರ್‌ಚಂದ್‌ ಗೆಹ್ಲೋಟ್‌ ಅವರು … Continued

ಬದುಕಿನಲ್ಲಿ ಸ್ಪಷ್ಟತೆ ಮುಖ್ಯ, ವಿದ್ಯಾರ್ಥಿಗಳಿಗೆ ಓದಿದ ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯ:ರಾಘವೇಶ್ವರ ಶ್ರೀಗಳು

ಸಾಹಸ ಸಾಧನೆಯ ಮಾರ್ಗ: ರಾಘವೇಶ್ವರ ಶ್ರೀ ಗೋಕರ್ಣ: ಸಾಹಸ ಮಾಡದೇ ಸಾಧನೆ ಸಾಧ್ಯವಿಲ್ಲ; ಸಾಹಸ ಮಾಡಿ ಬದುಕಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವತಿಯಿಂದ ಹಮ್ಮಿಕೊಂಡಿದ್ದ ಜ್ಞಾನ ವಿಜ್ಞಾನ ಚಿಂತನ ಸತ್ರ ಮಾಲಿಕೆಯ ಐದನೇ ವಿಚಾರ ಸಂಕಿರಣ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ … Continued

ಅಕ್ರಮ ಗಣಿಗಾರಿಕೆ ವಿರುದ್ಧದ ನಮ್ಮ ಹೋರಾಟ ನಿಲ್ಲುವುದಿಲ್ಲ: ಸುಮಲತಾ

ಬೆಂಗಳೂರು: ಅಕ್ರಮ ಗಣಿಗಾರಿಕೆ ತಡೆಯುವುದು ಕಷ್ಟ. ಆದರೆ, ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸಂಸದೆ ಸುಮಲತಾ ಘೋಷಣೆ ಮಾಡಿದ್ದಾರೆ. ರಾಜ್ಯಪಾಲರ ಪ್ರಮಾಣವಚನ ಕಾರ್ಯಕ್ರಮದ ನಂತರ ರಾಜಭವನದಲ್ಲಿ ಭಾನುವಾರ ಮಾತನಾಡಿದ ಅವರು, ನಾವು ಅಡ್ಡದಾರಿಯಲ್ಲಿ ಹೋಗುವುದು ಬೇಡ. ನಮ್ಮ ನೋವನ್ನು ಶಾಂತಿಯುತವಾಗಿ ಪ್ರಕಟ ಮಾಡೋಣ. ನಾನು ಯಾರ ವಿರುದ್ಧ ಹೋರಾಟ ಮಾಡಿಲ್ಲ. ನನ್ನ ಹೋರಾಟ ಅಕ್ರಮ ಗಣಿಗಾರಿಕೆ … Continued

ಜೆಡಿಎಸ್‌ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ ವಿಚಾರ ಕುರಿತು ಡಿಕೆಶಿ ಹೇಳಿದ್ದೇನು..?

ಬೆಂಗಳೂರು: ಪಕ್ಕದಲ್ಲಿ ಬಂದು ನಿಂತ ಜೆಡಿಎಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಥಳಿಸಿದ ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ಈಗಾಗಲೇ ಬಿಜೆಪಿ ಟೀಕಿಸಿದೆ. ಸಾಮಅಜಿಕ ಜಅಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈಗ ಈ ಘಟನೆ ಬಗ್ಗೆ ಕಪಾಳಮೋಕ್ಷ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುಅವರು, ಆತ ನಮ್ಮ … Continued