ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಇಳಿಮುಖ

ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಟ್ಟು 3,310 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 114 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 28,26,754ಕ್ಕೆ ಏರಿಕೆಯಾಗಿದೆ. 6524 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 26,84,997 ಜನರು ಗುಣಮುಖರಾಗಿದ್ದಾರೆ. 1,07,195 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 34539 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 614 ಜನರಲ್ಲಿ … Continued

ಸಿಎಂ ಬಿಎಸ್‌ವೈ, ಕೋವಿಡ್ ಉಸ್ತುವಾರಿ ಸಚಿವರ ಸಭೆ:ಮದುವೆಗೆ ಷರತ್ತುಬದ್ಧ ಅನುಮತಿಗೆ ನಿರ್ಧಾರ

ಬೆಂಗಳೂರು : ಲ್ಯಾಣ ಮಂಟಪಗಳಲ್ಲಿ ಮದುವೆಗೆ ಷರತ್ತುಬದ್ಧ ಅನುಮತಿ ನೀಡಲಾಗುವುದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಚಿವರು, ಅಧಿಕಾರಿಗಳ ಜೊತೆಗೆ ರಾಜ್ಯದಲ್ಲಿನ ಕೊರೊನಾ ನಿಯಂತ್ರಣ ಕುರಿತು ಸಭೆ ನಡೆಯಿತು. ರಾಜ್ಯದಲ್ಲಿ ಜೂನ್28ರಿಂದ ( ಸೋಮವಾರದಿಂದ) ಕಲ್ಯಾಣ ಮಂಟಪ, ಹೊಟೇಲ್‌, ಪಾರ್ಟಿ … Continued

ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣ

ಬೆಂಗಳೂರು: ಕರ್ನಾಟಕದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣವಾಗಲಿದೆ. ಪುತ್ಥಳಿ ನಿರ್ಮಾಣ ಮಾಡಲು ಕಡತವನ್ನು ಮಂಡನೆ ಮಾಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ. 9/6/2021ರಂದು ಮುಖ್ಯಮಂತ್ರಿಗಳು ಈ ಕುರಿತ ಟಿಪ್ಪಣಿಗೆ ಸಹಿ ಹಾಕಿದ್ದಾರೆ. ವಿಧಾನಸೌಧದ ಆವರಣದಲ್ಲಿ ಜಗಜ್ಯೋತಿ ಶ್ರೀ ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲು ಸೂಕ್ತ ಪ್ರಸ್ತಾವನೆಯೊಂದಿಗೆ ಕಡತವನ್ನು ಮಂಡಿಸಲು ಸೂಚನೆ … Continued

ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ  ಆರಂಭ

ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿರುವ ಜಿಲ್ಲೆಗಳ ಮೀರಜ್, ಈಚಲಕರಂಜಿ, ಸೊಲ್ಲಾಪುರ, ಬಾರ್ಸಿ,ಔರಂಗಾಬಾದ್,ಪಂಢರಾಪುರ, ತುಳಜಾಪುರ ಮತ್ತಿತರ ಸ್ಥಳಗಳಿಗೆ ಬಸ್  ಸಂಚಾರ ಮತ್ತೆ ಆರಂಭವಾಗಿದೆ. ಮೀರಜ್ ಮತ್ತು  ಈಚಲಕರಂಜಿ ಬಸ್ಸುಗಳು ಗೋಕುಲ … Continued

‘ಕಲ್ಯಾಣ ಕರ್ನಾಟಕ’ಕ್ಕೆ ಸಿಹಿ ಸುದ್ದಿ : 1,493 ಕೋಟಿ ರೂ.ಗಳ ಕ್ರಿಯಾಯೋಜನೆಗೆ ರಾಜ್ಯಪಾಲರ ಅನುಮೋದನೆ

ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆ ರೂಪಿಸಲು ಅನುಮೋದನೆ ಕೋರಿ ರಾಜ್ಯಪಾಲರಿಗೆ ಸಲ್ಲಿಸಿದ್ದ 1492.97 ರೂ.ಗಳ ಕೋಟಿ ಅನುದಾನಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಗಿರಿಜನ ಉಪಯೋಜನೆಗೆ 100 ಕೋಟಿ ರೂ.ಗಳು, ವಿಶೇಷ ಘಟಕ (ಎಸ್‍ಸಿಪಿ) 300 ಕೋಟಿ ರೂ.ಗಳು ಹಾಗೂ ಸಾಮಾನ್ಯ 1092.97 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿದ್ದು, … Continued

ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಖಾಲಿ ಖಾಲಿ..!

ಹುಬ್ಬಳ್ಳಿ: ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್‌ ವ್ಯಾಕ್ಸಿನ್‌ ಇರಲಿಲ್ಲ. ಶುಕ್ರವಾರ ಬೆಳಿಗ್ಗೆ ಕೇವಲ ೧೦೦ ಜನರಿಗೆ ಮಾತ್ರ ಲಸಿಕೆ ನೀಡಲಾಗಿತ್ತು. ನಂತರ ಲಸಿಕೆ ಖಾಲಿಯಾಗಿದೆ.ಸರದಿಯಲ್ಲಿ ನಿಂತಿದ್ದ ನೂರಾರು ಜನ ವ್ಯಾಕ್ಸಿನ್‌ ಸಿಗದೆ ಪರದಾಡಬೇಕಾಯಿತು. ಕೆಲವರಿಗೆ ಈ ಬಗ್ಗೆಮಾಹಿತಿ ಇಲ್ಲದ ಕಾರಣ ಅವರು ಆಸ್ಪತ್ರೆಗೆ ಲಸಿಕೆ ಪಡೆಯಲು ಬಂದಿದ್ದರು. ಬಹಳ ಹೊತ್ತಿನಿಂದ ಕಾಯುತ್ತಿದ್ದ ಸಾರ್ವಜನಿಕರು ಕಿಮ್ಸ್‌ … Continued

ವರ್ಷಪೂರ್ತಿ ಜೋಗ ಜಲಪಾತಕ್ಕೆ ನೀರು ಬಿಡಲು ಯೋಜನೆ, ಹೊನ್ನಾವರ-ಗೇರುಸೊಪ್ಪದ ವರೆಗೆ ಬೋಟಿಂಗ್‌ಗೆ ಅವಕಾಶ

ಬೆಂಗಳೂರು: ವಿಶ್ವ ​ವಿಖ್ಯಾತ ಜೋಗದ ಸಿರಿಯ ವೈಭವವನ್ನು ಇನ್ಮುಂದೆ ವರ್ಷದ ಎಲ್ಲ ದಿನಗಳಲ್ಲೂ ಸಿಗುವಂತೆ ಯೋಜನೆ ರೂಪಿಸಲಾಗಿದೆ. ಜೋಗ ಜಲಪಾತಕ್ಕೆ ಅಣೆಕಟ್ಟಿನಿಂದ ನೀರು ಬಿಡುವ ವ್ಯವಸ್ಥೆ ಮಾಡಲಾಗುತ್ತಿದ್ದು,ವರ್ಷ ಪೂರ್ತಿ ಧುಮ್ಮಿಕ್ಕುವ ಜೋಗ ಜಲಪಾತ ನೋಡಬಹುದು ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್​ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯಗಳ ನೀರನ್ನ ವಿದ್ಯುತ್,ವ್ಯವಸಾಯಕ್ಕೆ ಉಪಯೋಗವಾಗುತ್ತಿತ್ತು. ಇನ್ಮುಂದೆ ಪಿಪಿಎ … Continued

ಮುಂದಿನ ವಾರದಿಂದ ಪ್ರವಾಸಿ ತಾಣಗಳು ಮುಕ್ತ: ಸಚಿವ ಯೋಗೇಶ್ವರ

ಬೆಂಗಳೂರು: ಮುಂದಿನ ವಾರದಿಂದ ರಾಜ್ಯದ ಪ್ರವಾಸಿ ತಾಣಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿದರು. ‌ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊವಿಡ್​ನಿಂದ ನಲುಗಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. 185 ಕೋಟಿ ರೂ.ಗಳ ಟೆಂಡರ್ ಕರೆದು ಜೋಗ ಜಲಪಾತದ ಅಭಿವೃದ್ಧಿ ಕೆಲಸ … Continued

ಕರಾವಳಿ-ಮಲೆನಾಡಿನಲ್ಲಿ ಇಂದಿನಿಂದ 4 ದಿನ ಭಾರೀ ಮಳೆ:ಹವಾಮಾನ ಇಲಾಖೆ

ಬೆಂಗಳೂರು:ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಇಂದಿನಿಂದ (ಜೂನ್‌ 25ರಿಂದ) ಜೋರಾಗಿ ಮಳೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 28ರವರೆಗೂಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿಯೂ ಮಳೆ ಹೆಚ್ಚಾಗಲಿದ್ದು, ನಾಳೆಯಿಂದ (ಜೂನ್‌ 26ರಿಂದ) ಮೂರು ದಿನಗಳ ಕಾಲ ಮಳೆಯಾಗಲಿದೆ … Continued

ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ :ಮುಂಬೈನಲ್ಲಿ ತೀರ್ಮಾನ ಎಂದ ರಮೇಶ್‌ ಜಾರಕಿಹೊಳಿ

ಮೈಸೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ ಎಂದು ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಶುಕ್ರವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿಗೆ ಬಂದಿರುವುದು ಸುತ್ತೂರು ಶ್ರೀಗಳನ್ನು ಭೇಟಿ ಮಾಡಲು. ಮುಖ್ಯಮಂತ್ರಿಗಳ ಭೇಟಿ ವಿಚಾರ ನನಗೆ ಗೊತ್ತಿಲ್ಲ. ನಾನು ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ದೈವಾಧೀನರಾದ ಕಾರಣ … Continued