ಕರ್ನಾಟಕದಲ್ಲಿ ಶೇ. 2.18ಕ್ಕೆ ಇಳಿದ ಪಾಸಿಟಿವಿಟಿ ದರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತಿದ್ದು ಭಾನುವಾರ 3,604 ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 28,34,630ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 89 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 34,743ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ರಾಜ್ಯದಲ್ಲಿ ಇದೇ ಸಮಯದಲ್ಲಿ 7,699 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ … Continued

ಜೂನ್‌ 28ರಿಂದ ಜೋಗ ಫಾಲ್ಸ್‌ ವೀಕ್ಷಣೆಗೆ ಅವಕಾಶ, ನಿಯಮ ಪಾಲನೆ ಕಡ್ಡಾಯ

ಶಿವಮೊಗ್ಗ :ಜೂನ್‌ 28ರಿಂದ ವಿಶ್ವವಿಖ್ಯಾತ ಜೋಗದ ಜಲಪಾತವನ್ನು ವೀಕ್ಷಿಸಲು ವೀಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಕೊರೊನಾ ಸೋಂಕಿನ ಲಾಕ್ ಡೌನ್ ನಂತರ ಬಂದ್ ಆಗಿತ್ತು. ಈಗ ಜೋಗದ ಸೊಬಗಿನ ವೀಕ್ಷಣೆ ವೀಕ್ಷಕರಿಗಾಗಿ ತೆರೆದುಕೊಳ್ಳಲಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸೋದು ಕಡ್ಡಾಯವಾಗಿದೆ. ಈ ಕುರಿತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕೊರೊನಾ … Continued

ಪ್ರಯಾಣಿಕರ ಗಮನಕ್ಕೆ…ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣ- ಹೊಸೂರು ಬಸ್ ನಿಲ್ದಾಣದಿಂದ ಬೇರೆ ಸ್ಥಳಗಳಿಗೆ ಹೋಗುವ ಬಸ್ಸುಗಳ ಮಾಹಿತಿ

ಹುಬ್ಬಳ್ಳಿ : ಹಾವೇರಿ, ರಾಣೆಬೆನ್ನೂರು, ದಾವಣಗೆರೆ ತಡೆರಹಿತ ಬಸ್ ಗಳು, ಹಾನಗಲ್ಲ ಮತ್ತು ಸವಣೂರು ವೇಗದೂತ ಬಸ್ ಗಳನ್ನು ಹೊಸೂರು ಬಸ್ ನಿಲ್ದಾಣದಿಂದ ಗೋಕುಲ ರಸ್ತೆ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹಳೆ ಬಸ್ ನಿಲ್ದಾಣದಲ್ಲಿ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ಹಳೆಯ ಬಸ್ ನಿಲ್ದಾಣದಿಂದ ಸಂಚರಿಸುತ್ತಿದ್ದ ಎಲ್ಲಾ ಗ್ರಾಮೀಣ … Continued

ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರಾಚೀನ ಭಾರತೀಯರ ಕೊಡುಗೆ ದೊಡ್ಡದು: ಶ್ರೀದೇವಿ ಭಟ್‌

ಗೋಕರ್ಣ: ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರಾಚೀನ ಭಾರತೀಯರ ಕೊಡುಗೆ ಅಪಾರ ಎಂದು ತಿರುವನಂತಪುರದಲ್ಲಿರುವ ಇಸ್ರೋ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಕೇಂದ್ರದ ವಿಜ್ಞಾನಿ ಶ್ರೀದೇವಿ ಭಟ್ ಹೇಳಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಜ್ಞಾನ-ವಿಜ್ಞಾನ ಚಿಂತನ ಸತ್ರದಲ್ಲಿ “ನಭ ಸ್ಪರ್ಶಮ್” ಎಂಬ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿದ ಅವರು, ವರಾಹಮಿಹಿರನ ‘ಬೃಹತ್ ಸಂಹಿತೆ’ ಕೃತಿಯಲ್ಲಿ ಸೂರ್ಯನ … Continued

ನಾಳೆ ಶಿಕ್ಷಣ ಸಚಿವರ ಉನ್ನತಮಟ್ಟದ ಸಭೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ, ಶಾಲಾ ಆರಂಭದ ಬಗ್ಗೆ ನಿರ್ಧಾರ..?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವಾಗ ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ನಾಳೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಬಾಗಿಲು ಹಾಕಿರುವ ಶಾಲೆಗಳನ್ನು ಆರಂಭಿಸುವಂತೆ ತಜ್ಞರ ಸಮಿತಿಯು ವರದಿ ನೀಡಿದೆ. ಕಾಲೇಜುಗಳನ್ನು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಿದ ನಂತರ ಜುಲೈ ಇಲ್ಲವೆ ಆಗಸ್ಟ್‌ನಲ್ಲಿ ಆರಂಭಿಸಲಾಗುವುದು ಎಂದು … Continued

ಜಮ್ಮು -ಕಾಶ್ಮೀರ ಬೆಳವಣಿಗೆ ಸಭೆಗೆ ಕಾಶ್ಮೀರಿ ಹಿಂದೂಗಳನ್ನು ಆಹ್ವಾನಿಸಿಲ್ಲ ಯಾಕೆ: ಕೇಂದ್ರಕ್ಕೆ ಮುತಾಲಿಕ ಪ್ರಶ್ನೆ

ಬೆಂಗಳೂರು: ಜೂ.೨೪ ರಂದು ಪ್ರಧಾನಿ ನೇತೃತ್ವದಲ್ಲಿ ಜಮ್ಮುಮತ್ತು  ಕಾಶ್ಮೀರ ಮುಂದಿನ ಬೆಳವಣಿಗೆ ಸಂಬಂಧ ನವದೆಹಲಿಯಲ್ಲಿ ಸಭೆ ಕರೆದಿದ್ದು ಅತ್ಯಂತ ಸ್ವಾಗತಾರ್ಹವಾಗಿದ್ದು, ಈ ಸಭೆಗೆ ಕಾಶ್ಮೀರಿ ಪಂಡಿತರ ಪ್ರತಿನಿಧಿಗಳನ್ನು ಆಹ್ವಾನಿಸದೇ ಇರುವುದು ಖಂಡನೀಯವಾಗಿದೆ ಎಂದು ಶ್ರೀರಾಮ ಸೇನೆ  ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬರುವ ಆಗಸ್ಟ ೫ … Continued

ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರ ಪ್ರಾಬಲ್ಯದ 11 ಗ್ರಾಮಗಳ ಹೆಸರು ಬದಲಿಸಿದ ಕೇರಳ ಸರ್ಕಾರ..!

ಮಂಗಳೂರು: ಕೇರಳ ಗಡಿಭಾಗದಲ್ಲಿ ಕೇರಳ ಸರ್ಕಾರ ಕನ್ನಡದ ವಿರುದ್ಧ ಮತ್ತೆ ಮಲತಾಯಿ ಧೋರಣೆ ಅನುಸರಿಸಿದೆ. ಈ ಹಿಂದೆ ಕರ್ನಾಟಕದ ಭಾಗವೇ ಆಗಿದ್ದ ಗಡಿ ಜಿಲ್ಲೆ ಕಾಸರಗೋಡಿನ ಕನ್ನಡ ಪ್ರಾಬಲ್ಯದ 11 ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಭಾಷಾಂತರ ಮಾಡಿ ಹೆಸರಿಸಿದೆ. ಈ ಹಿಂದೆಯೂ ಗಡಿಭಾಗದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನೇ ಪ್ರಥಮ ಭಾಷೆಯಾಗಿ ಅಳವಡಿಸುವ ಆದೇಶ … Continued

ಉತ್ತರ ಕನ್ನಡದ ಮತ್ತೋರ್ವ ಪ್ರತಿಭೆಗೆ ಅಮೆರಿಕ ಲ್ಯುಸಿಯಾನಾ ವಿವಿಯಿಂದ ಚಿಕ್ಕಮಕ್ಕಳ ಅಂತಸ್ರಾವ ತಜ್ಞೆ ಗೌರವ

ಶಿರಸಿ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಂಕದಗುಂಡಿಯ ಮೂಲದ ಡಾ. ಜಯಲಕ್ಷ್ಮಿ ನಾರಾಯಣ ಭಟ್ಟ, (MBBS, MD, MPH) ಇವರಿಗೆ ಅಮೆರಿಕದ ಪ್ರತಿಷ್ಠಿತ ಲ್ಯುಸಿಯಾನಾ ವಿಶ್ವವಿದ್ಯಾಲಯದಿಂದ ಚಿಕ್ಕಮಕ್ಕಳ ಎಂಡೋಕ್ರೈನಾಲಜಿ ಫೆಲೋಶಿಪ್ ಗೌರವವನ್ನು ಪ್ರದಾನ ಮಾಡಲಾಯಿತು. ಮಕ್ಕಳ ಮತ್ತು ಹದಿಹರೆಯದವರಲ್ಲಿ ಅಂತಸ್ರಾವಕ ಕಾಯಿಲೆಗಳು ಮತ್ತು ಮಧುಮೇಹ ಮೆಲ್ಲಿಟಸ್ ಹೊಂದಿರುವ ಸಂಶೋಧನೆ ಮತ್ತು ಕ್ಲಿನಿಕಲ್ ಆರೈಕೆಯಲ್ಲಿ ಎಂಡೋಕ್ರೈನಾಲಜಿ ತಜ್ಞರು … Continued

ನಾಳೆಯಿಂದ ಕರಾವಳಿ-ಮಲೆನಾಡಿನಲ್ಲಿ ಮತ್ತೆ ಮಳೆ ಅಬ್ಬರ: ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಜೂ.28ರಿಂದ ಜುಲೈ 1ರ ವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ದಿನಗಳಿಂದ ತಗ್ಗಿದ್ದ ಮಳೆ ಮತ್ತೆ ಬಿರುಸುಗೊಳ್ಳಲಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂ.28ರಿಂದ ಜು.1ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. … Continued

ಲಾಕ್ ಡೌನ್, ನೌಕರರ ಮುಷ್ಕರದಿಂದ ಸಾರಿಗೆ ಸಂಸ್ಥೆಗೆ 4,000ಕೋಟಿ ರೂ.ಗಳಷ್ಟು ನಷ್ಟ: ಸವದಿ

ಬೆಳಗಾವಿ: ಲಾಕ್ ಡೌನ್ ಮತ್ತು ನೌಕರರ ಮಷ್ಕರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕಳೆದ 15 ತಿಂಗಳಲ್ಲಿ 4,000 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಶನಿವಾರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೊದಲನೇ ಅಲೆ ನಂತರ ಕೆಎಸ್ ಆರ್ ಟಿಸಿ ನೌಕರರು ಮುಷ್ಕರಕ್ಕೆ ಇಳಿದರು. … Continued