ಮುಷ್ಕರದ ಮಧ್ಯೆಯೂ ಬಸ್ ಚಾಲನೆ: ಚಾಲಕನ ಥಳಿಸಿದ ಮಹಿಳೆಯರ ಬಂಧನ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಸತತ 6ನೇ ದಿನವೂ ಮುಂದುವರೆದಿದೆ. ನೆಲಮಂಗಲ ಠಾಣಾ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಮುಷ್ಕರದ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಚಾಲಕನನ್ನು ಪ್ರತಿಭಟನಾ ನಿರತ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ಐವರು ಮಹಿಳೆಯರನ್ನು ಬಂಧಿಸಿದ್ದು, 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅರಿಶಿನಕುಂಟೆ … Continued

ಕರ್ನಾಟಕದಲ್ಲಿ ಸೋಮವಾರ ಹತ್ತು ಸಾವಿರಕ್ಕಿಂತ ತುಸು ಕಡಿಮೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಉಲ್ಬಣ ಮುಂದುವರೆದಿದ್ದು, ಸೋಮವಾರ 9,579 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 52 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,74,869ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 12,941ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಸೋಮವಾರ 6,387 … Continued

ವರ್ಗಾವಣೆಗೊಂಡ ಸಾರಿಗೆ ಸಂಸ್ಥೆ ನೌಕರರಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ

ಬೆಂಗಳೂರು: ಸಾರಿಗೆ ನೌಕರರಿಗೆ ಅನುಕೂಲತೆ ಕಲ್ಪಿಸಲು ವರ್ಗಾವಣೆ ಮಾಡಿದ್ದರೂ ಕೆಲಸಕ್ಕೆ ಹಾಜರಾಗದ ನೌಕರರ ವರ್ಗಾವಣೆ ರದ್ದುಪಡಿಸಲಾಗುವುದಲ್ಲದೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ ಸೂಚಿಸಿದ್ದಾರೆ. ೨೦೧೯-೨೦ ಹಾಗೂ ೨೦೨೦-೨೧ ಸಾಲಿನಲ್ಲಿ ಸಿಬ್ಬಂದಿಗಳ ಕೋರಿಕೆಯಂತೆ ದೂರದ ಘಟಕಗಳಿಗೆ ಅಲೆದಾಟ ತಪ್ಪಿಸಲು, ಆರ್ಥಿಕ ನಷ್ಟ ತಪ್ಪಿಸುವ ಉದ್ದೇಶದಿಂದ … Continued

ರಸ್ತೆ ಬದಿ ನಿಂತಿದ್ದ ಬೈಕ್‌ಗಳಿಗೆ ಕಾಂಗ್ರೆಸ್‌ ಮುಖಂಡನ ಕಾರು ಡಿಕ್ಕಿ: ಇಬ್ಬರ ಸಾವು

ಧಾರವಾಡ: ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರ ಸಹೋದರ ವಿಜಯ್​ ಕುಲಕರ್ಣಿ ಅವರಿದ್ದ ಕಾರು ಬೈಕ್​ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ಸೋಮವಾರ ನಡೆದ ವರದಿಯಾಗಿದೆ. ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿದ್ದ ಬರುತ್ತಿದ್ದ ಕಾರು ಬೆಳಗಾವಿ ರಸ್ತೆಯ ಕೆವಿಜಿ ಬ್ಯಾಂಕ್ ಎದುರು ನಿಂತಿದ್ದ ಬೈಕ್​ಗಳಿಗೆ ಕಾರು ಢಿಕ್ಕಿ … Continued

ಕೊರೊನಾ ಉಲ್ಬಣ: ಸರ್ವಪಕ್ಷಗಳ ಸಭೆ ಕರೆದ ಸಿಎಂ, ಲಾಕ್‌ಡೌನ್‌ ಆಗುತ್ತಾ..?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಕೊರೊನಾ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ವಪಕ್ಷ ಸಭೆ ಕರೆಯಲಾಗುವುದು. ಏಪ್ರಿಲ್ 18, 19ರಂದು ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.ರಾಜ್ಯದಲ್ಲಿ ಕೊರೊನಾ ಸೋಂಕು … Continued

ಬಸ್‌ ನಿಲ್ದಾಣದಲ್ಲೇ ವಿಷ ಸೇವಿಸಿದ ಸಾರಿಗೆ ನೌಕರ

ಹಾಸನ: ಸಾರಿಗೆ ನೌಕರರ ಮುಷ್ಕರ ೬ನೇ ದಿನಕ್ಕೆ ಮುಂದುವರೆದಿದ್ದು, ಸಾರಿಗೆ ನೌಕರರೊಬ್ಬರು ಬಸ್‌ ನಿಲ್ದಾಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ-ಚಿಕ್ಕಮಗಳೂರು ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷ ಪಾಲಾಕ್ಷ (೪೦) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ತೀವ್ರ ಅಸ್ವಸ್ಥಗೊಂಡಿದ್ದು, ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ನನ್ನನ್ನು ವರ್ಗಾವಣೆ … Continued

ಏಕಲವ್ಯ ಪ್ರಶಸ್ತಿ ಪುರಸ್ಕೃತ ಈಜುಪಟು ಆತ್ಮಹತ್ಯೆ

ಬೆಂಗಳೂರು: ವರ್ಷದಿಂದ ಕೆಲಸವಿಲ್ಲದೆ ಖಿನ್ನತೆಗೆ ಒಳಗಾಗಿದ್ದ ಏಕಲವ್ಯ ಪ್ರಶಸ್ತಿ ಪುರಸ್ಕೃತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜಯನಗರದ ಮಾರೇನಹಳ್ಳಿಯಲ್ಲಿ ನಡೆದಿದೆ. ಈಜುಗಾರ್ತಿಯಾಗಿದ್ದ ಜಿ.ಬಿ. ಶಿಲ್ಪಾ (41) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರೂ ಕೆಲಸ ಪಡೆಯಲಾಗದ ಬಗ್ಗೆ ಡೆತ್ ನೋಟ್‌ನಲ್ಲಿ ನೋವು ತೋಡಿಕೊಂಡಿರುವ ಶಿಲ್ಪಾ, ಪತಿ ಮನೆಯಲ್ಲಿಲ್ಲದ … Continued

ಸಿಡಿ ಪ್ರಕರಣ: ದೊಡ್ಡ ಟ್ವಿಸ್ಟ್‌..ಎಸ್‌ಐಟಿ ಮುಂದೆ ಉಲ್ಟಾ ಹೊಡೆದ ಯುವತಿ..!?

ಬೆಂಗಳೂರು : ಸಿಡಿ ಯುವತಿ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು, ತನ್ನ ಈ ಮೊದಲಿನ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ನನ್ನನ್ನು ಹನಿ ಟ್ರ್ಯಾಪ್‌ ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ನರೇಶ್ ಮತ್ತು ಶ್ರವಣ್ ವಿರುದ್ಧ ಸಿಡಿ ಪ್ರಕರಣದ ಯುವತಿ ಆರೋಪ ಮಾಡಿದ್ದಾರೆ. ನನ್ನನ್ನು ಹನಿಟ್ರ್ಯಾಪ್‌ ಗೆ ನರೇಶ್ ಮತ್ತು ಶ್ರವಣ್ … Continued

ಅವಶ್ಯಕತೆ ಎದುರಾದರೆ ಲಾಕ್‌ಡೌನ್ ಜಾರಿ ಮಾಡ್ತೇವೆ ಎಂದ ಸಿಎಂ ಬಿಎಸ್‌ವೈ..!

ಬೀದರ: ಅವಶ್ಯಕತೆ ಎದುರಾದರೆ ಕರ್ನಾಟಕದಲ್ಲಿಯೂ ಲಾಕ್‌ಡೌನ್ ವಿಧಿಸಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಬೀದರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಒಳಿತಿಗಾಗಿ ಸ್ಪಂದಿಸಬೇಕಾಗಿದೆ. ಅವರು ಗಮನಹರಿಸದಿದ್ದರೆ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ಅಗತ್ಯವಿದ್ದರೆ ಮತ್ತು ಅಗತ್ಯವಿದ್ದಲ್ಲಿ ನಾವು ಲಾಕ್‌ಡೌನ್ ವಿಧಿಸುತ್ತೇವೆ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ … Continued

ಮಹಾಂತಪ್ಪ ನಂದೂರ, ದೀಪಾ‌ ಹಿರೇಗುತ್ತಿ, ಪದ್ಮರಾಜ‌ ದಂಡಾವತಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ

ಹುಬ್ಬಳ್ಳಿ: ಉಮಾಶಂಕರ ಪ್ರತಿಷ್ಠಾನದ 2018 , 2019 ಮತ್ತು 2020 ರ ಸಾಲಿನ ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 2018 ನೇ ಸಾಲಿಗಾಗಿ ಕೊಪ್ಪದ ಉಪನ್ಯಾಸಕಿ ದೀಪಾ ಹಿರೇಗುತ್ತಿಯವರ ಅಂಕಣ ಬರಹಗಳ ಸಂಕಲನ ಫೀನಿಕ್ಸ್; 2019 ನೇ ಸಾಲಿಗಾಗಿ ಹುಬ್ಬಳ್ಳಿಯ‌ ಮಹಾಂತಪ್ಪ‌ ನಂದೂರ; ಮತ್ತು 2020 ನೇ‌ ಸಾಲಿಗಾಗಿ ಪದ್ಮರಾಜ ದಂಡಾವತಿ ಅವರ ಅನುವಾದಿತ ಕೃತಿ ಸೀತಾ … Continued