ಕೆ ಪಿ ಎಸ್‌ ಸಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ – ಎ ಮತ್ತು ಗ್ರೂಪ್ – ಬಿ ವೃಂದದ 384 ಹುದ್ದೆಗಳ ನೇಮಕಾತಿ ಮುಖ್ಯ ಪರೀಕ್ಷೆಯನ್ನು (KAS Mains exam) ಕರ್ನಾಟಕ ಲೋಕಸೇವಾ ಆಯೋಗ ಮುಂದೂಡಿದೆ. ಆಯೋಗವು ಫೆ.13ರಂದು ಮುಖ್ಯ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿತ್ತು ಮಾರ್ಚ್‌ 28, 29, ಏಪ್ರಿಲ್ 1, ಮತ್ತು 2ರಂದು ಪರೀಕ್ಷೆ ನಡೆಸಲಾಗುವುದು … Continued

ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಆಕಸ್ಮಿಕ : ಅಪಾರ ಹಾನಿ

ಬೆಳಗಾವಿ: ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಹಾನಿಯಾದ ಘಟನೆ ಶುಕ್ರವಾರ ನಡೆದಿದೆ. ಸ್ಥಳೀಯ ಎರಡು ಅಗ್ನಿಶಾಮಕ ವಾಹನಗಳು ಸೇರಿದಂತೆ, ಸಂಕೇಶ್ವರ, ಚಿಕ್ಕೋಡಿ, ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನಿಂದ ಸೇರಿ ಸುಮಾರು ಏಳು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸಿವೆ. ಸಂಜೆ 4 ಗಂಟೆಗೆ 24 ಟಿಪಿಎಚ್ ಬಾಯ್ಲರ್ … Continued

ವಿಧಾಸಭೆಯಿಂದ 18 ಬಿಜೆಪಿ ಶಾಸಕರು ಅಮಾನತು ; ಸದನದಿಂದ ಹೊರಗೆ ಹೊತ್ತೊಯ್ದ ಮಾರ್ಷಲ್‌ ಗಳು

ಬೆಂಗಳೂರು : ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಶುಕ್ರವಾರ 18 ಬಿಜೆಪಿ ಶಾಸಕರನ್ನು ಆರು ತಿಂಗಳವರೆಗೆ ಅಮಾನತುಗೊಳಿಸಿದ್ದಾರೆ. ಸಭಾಪತಿ ಆದೇಶವನ್ನು ಧಿಕ್ಕರಿಸಿ ಅಶಿಸ್ತು ಮತ್ತು ಅಗೌರವದಿಂದ ನಡೆದುಕೊಂಡು ಸದಸ್ಯರು ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಮಾನತುಗೊಂಡ ಶಾಸಕರು ಸಭಾಧ್ಯಕ್ಷರ ವೇದಿಕೆ ಏರುವುದು, ಸಭಾಧ್ಯಕ್ಷರತ್ತ ಪೇಪರ್ ಎಸೆದು ಸದನದ ಬಾವಿಗಿಳಿದು … Continued

ಕನಕಪುರ | ಮಗುವಿಗೆ ಬರೆ ಹಾಕಿ ಡೈಪರ್ ಗೆ ಖಾರದಪುಡಿ ತುಂಬಿದ ಅಂಗನವಾಡಿ ಸಹಾಯಕಿ…!

ಕನಕಪುರ: ಅಂಗನವಾಡಿ ಸಹಾಯಕಿಯೊಬ್ಬಳು ಎರಡೂವರೆ ವರ್ಷದ ಮಗುವಿಗೆ ಚಾಕುವಿನಿಂದ ಬರೆ ಹಾಕಿ ಡೈಪರ್ ಗೆ ಖಾರದಪುಡಿ ಹಾಕಿ ಕ್ರೌರ್ಯ ಮೆರೆಯಲಾಗಿದೆ ಎಂದು ಆರೋಪಿಸಲಾಗಿದೆ. ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಜ್ಯೋತಿ ಮತ್ತು ರಮೇಶ ನಾಯ್ಕ್ ಎಂಬವರ ಎರಡೂವರೆ ವರ್ಷದ ಮಗ ದೀಕ್ಷಿತ್ ಸಂತ್ರಸ್ತ ಬಾಲಕ. ಮಂಗಳವಾರ ಅಂಗನವಾಡಿ ಮುಗಿದ … Continued

ಸಚಿವರು, ಶಾಸಕರ ವೇತನ ದ್ವಿಗುಣ ಸಾಧ್ಯತೆ : ವೇತನ. ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ

ಬೆಂಗಳೂರು: ಕರ್ನಾಟಕದ ಚುನಾಯಿತ ಪ್ರತಿನಿಧಿಗಳು ಶೀಘ್ರದಲ್ಲೇ ಎರಡು ಪಟ್ಟು ಹೆಚ್ಚು ಸಂಬಳ ಪಡೆಯಲಿದ್ದಾರೆ, ಕರಡು ಮಸೂದೆಯು ಮುಖ್ಯಮಂತ್ರಿ, ಮಂತ್ರಿಗಳು ಮತ್ತು ಶಾಸಕರಿಗೆ 100%ರಷ್ಟು ವೇತನ ಹೆಚ್ಚಳವನ್ನು ಪ್ರಸ್ತಾಪಿಸುತ್ತದೆ. ಪಿಂಚಣಿಗಳು ಮತ್ತು ವಿಮಾನ/ರೈಲು ಪ್ರಯಾಣ ಭತ್ಯೆಗಳಲ್ಲಿ ಶೇಕಡಾ 50 ರಷ್ಟು ಹೆಚ್ಚಳದಿಂದ ಹಿಡಿದು ಇತರ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಶಾಸಕಾಂಗದ ವೇತನಗಳು, ಪಿಂಚಣಿಗಳು … Continued

ಭಾರತ ಸರ್ಕಾರ ವಿರುದ್ಧ ಹೈಕೋರ್ಟ್​​ನಲ್ಲಿ ಮೊಕದ್ದಮೆ ಹೂಡಿದ ಇಲಾನ್ ಮಸ್ಕ್ ಒಡೆತನದ ಎಕ್ಸ್‌

ಬೆಂಗಳೂರು : ಎಲಾನ್ ಮಸ್ಕ್ ಒಡೆತನದ ಎಕ್ಸ್‌ ವೆಬ್‌ಸೈಟ್‌ನಲ್ಲಿನ ಟ್ವೀಟ್ ಮತ್ತು ಇತರ ವಿಷಯವನ್ನು ತೆಗೆದುಹಾಕುವಂತೆ ಸೂಚಿಸಲು ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಆಕ್ಟ್) ಸೆಕ್ಷನ್ 79(3)(ಬಿ)ಯನ್ನು ಬಳಸುವ ವಿಧಾನವನ್ನು ಪ್ರಶ್ನಿಸಿ ಎಕ್ಸ್, ಭಾರತ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಭಾರತದಲ್ಲಿನ ಸರ್ಕಾರಿ ಅಧಿಕಾರಿಗಳು ಸರಿಯಾದ ಕಾನೂನು ಕಾರ್ಯವಿಧಾನಗಳನ್ನು ಬೈಪಾಸ್ … Continued

ಮಾರ್ಚ್‌ ೨೧ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಬೆಂಗಳೂರು : ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಾಳೆಯಿಂದ ಆರಂಭವಾಗಲಿದ್ದು, ೨,೮೧೮ ಕೇಂದ್ರಗಳಲ್ಲಿ ೮.೯೬ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ ಮಾರ್ಚ್‌ ೨೧ ರಿಂದ ಏಪ್ರಿಲ್‌ ೪ರ ವರೆಗೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ … Continued

48 ನಾಯಕರ ಹನಿಟ್ರ್ಯಾಪ್ ಸಿಡಿ ಇದೆ, ನನ್ನ ಮೇಲೂ ಯತ್ನ; ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಮಾಹಿತಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್‌ (Honey Trap) ಮತ್ತೆ ಸದ್ದು ಮಾಡುತ್ತಿದೆ. ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಎಲ್ಲ ಪಕ್ಷದ ನಾಯಕರು ಸೇರಿದಂತೆ ಸುಮಾರು 48 ಮಂದಿಯ ಹನಿಟ್ರ್ಯಾಪ್ ಸಿ.ಡಿ. ಮಾಡಲಾಗಿದೆ ಎಂದು … Continued

ರಾಜ್ಯದ ಜನತೆಗೆ `ಕರೆಂಟ್ʼ ಶಾಕ್’ : ಏಪ್ರಿಲ್ 1 ರಿಂದ ವಿದ್ಯುತ್ ದರ ಹೆಚ್ಚಳ…!

ಬೆಂಗಳೂರು: ಬೆಲೆ ಏರಿಕೆಯ ಹೊಡೆತದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್‌ ನೀಡಿದೆ. ಎಸ್ಕಾಂಗಳ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಸರ್ಕಾರ ಕತ್ತರಿ ಹಾಕಿದೆ. ಪಿಂಚಣಿ ದುಡ್ಡಿಗಾಗಿ ಪ್ರತಿ ಯೂನಿಟ್‌ಗೆ 36 ಪೈಸೆಯಂತೆ ದರವನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (KERC) ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಏಪ್ರಿಲ್ 1 ರಿಂದ … Continued

ವೀಡಿಯೊ…| ಹಾಸನ : ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಟ್ಟಿಸಿಕೊಂಡು ಬಂದ ಕೋಪಗೊಂಡ ಕಾಡಾನೆ ; ಸ್ವಲ್ಪದರಲ್ಲೇ ಪಾರು…

ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಇಬ್ಬರು ಅರಣ್ಯಾಧಿಕಾರಿಗಳನ್ನು ಕಾಡು ಆನೆಯೊಂದು ಅಟ್ಟಿಸಿಕೊಂಡು ಹೋದ ಆಘಾತಕಾರಿ ಘಟನೆ ನಡೆದಿದ್ದು, ಇಬ್ಬರು ಅರಣ್ಯಾಧಿಕಾರಿಗಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆನೆ ತನ್ನತ್ತ ಧಾವಿಸಿ ಬರುತ್ತಿದ್ದರೂ ಕ್ಯಾಮರಾಮನ್ ಪ್ರಾಣಕ್ಕೂ ಲೆಕ್ಕ ಕೊಡದೆ ಧೈರ್ಯವಾಗಿ ನಿಂತು ಘಟನೆಯನ್ನು ಚಿತ್ರೀಕರಿಸಿದ್ದಾರೆ. ಹಾಸನದ ಬೇಲೂರು ತಾಲೂಕಿನ ಗ್ರಾಮದಲ್ಲಿ ಕಾಡು ಆನೆಯೊಂದು ದಾರಿ ತಪ್ಪಿ ಕೃಷಿ ಭೂಮಿಗೆ ನುಗ್ಗಿದೆ. ಅರಣ್ಯ … Continued