ಮಾರಾಟದಲ್ಲಿ ಹೊಸ ದಾಖಲೆ ಬರೆದ ‘ಟಗರು’ : ಈ ಟಗರಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಮಂಡ್ಯ: ಎತ್ತುಗಳು ದಾಖಲೆಯ ಬೆಲೆಯಲ್ಲಿ ಮಾರಾಟವಾಗಿದ್ದನ್ನು ಕೇಳಿದ್ದೇವೆ. ಇಲ್ಲೊಂದು ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆ. ಮಾರಾಟದಲ್ಲಿ ಅದು ಹೊಸ ದಾಖಲೆಯನ್ನೇ ಬರೆದಿದೆ…! ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದಲ್ಲಿ 1.91 ಲಕ್ಷ ರೂ.ಗಳಿಗೆ ಬಂಡೂರು ಟಗರು ಮಾರಾಟವಾಗಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ಸಣ್ಣಪ್ಪ ಎಂಬುವರು 2 ವರ್ಷದ ಹಿಂದೆ ಬಂಡೂರು ಟಗರೊಂದನ್ನು 1 ಲಕ್ಷದ … Continued

ಬೆಳ್ತಂಗಡಿ: ಇಳಂತಿಲ ಗ್ರಾಮದ ಬಳಿ 5 ಗ್ರೆನೇಡ್‌ಗಳು ಪತ್ತೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ ಪತ್ತೆಯಾಗಿದೆ. ನಿವೃತ್ತ ಸೈನಿಕರೊಬ್ಬರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ. ಇಳಂತಿಲ ಗ್ರಾಮದ ದಾರಿಯಲ್ಲಿ ಐದು ಗ್ರಾನೈಡ್ ಪತ್ತೆಯಾಗಿದೆ. ಭೂಸೇನಾ ರೆಜಿಮೆಂಟ್‌ನಲ್ಲಿ ಎಸ್‌ಸಿಒ (SCO) ಆಗಿ ನಿವೃತ್ತಿ ಆಗಿರುವ ಜಯಕುಮಾರ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಗ್ರೆನೇಡ್ … Continued

ನವೆಂಬರ್‌ 16 ರಂದು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ ನಮನ ಕಾರ್ಯಕ್ರಮ

ಬೆಂಗಳೂರು: ಇತ್ತೀಚಿಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಲು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಸಿದ್ಧವಾಗಿದೆ. ನ.16 ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ನಮನ ಕಾರ್ಯಕ್ರಮ ಆಯೋಜಿಸಿದೆ. ಗೀತ ನಮನ, ಗಾಯನ ನಮನ ಸೇರಿದಂತೆ ವಿವಿಧ … Continued

ಹೋಟೆಲ್-ರೆಸ್ಟೋರೆಂಟ್​​ಗಳಿಗೆ ಶೇ.50ರಷ್ಟು ಆಸ್ತಿ ತೆರಿಗೆ ರಿಯಾಯಿತಿ; ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : 2021-22 ನೇ ಸಾಲಿನ ಹಣಕಾಸು ವರ್ಷದಲ್ಲಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಗಳು ಪಾವತಿಸುವ ಆಸ್ತಿ ತೆರಿಗೆಯಿಂದ ( ಬಿಬಿಎಂಪಿ ಹೊರತುಪಡಿಸಿ) ಶೇ 50 ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ಎರಡು ಅಲೆಗಳಿಂದ ಆರ್ಥಿಕ ಸಂಕಷ್ಟ ಎದುರಿಸಿರುವ ಈ ವಲಯಗಳ ಸುಧಾಕರಣೆಗಾಗಿ ರಾಜ್ಯ ಸರ್ಕಾರ … Continued

ರಮಣಶ್ರೀ ಆಸ್ಪತ್ರೆ ವಿರುದ್ಧ ಪುನೀತ’ ಅಭಿಮಾನಿಗಳ ಆರೋಪ : ವೈದ್ಯರಿಗೆ ರಕ್ಷಣೆ ಕೋರಿ ಸಿಎಂ ಬೊಮ್ಮಾಯಿಗೆ ಫನಾ ಪತ್ರ

ಬೆಂಗಳೂರು: ಖ್ಯಾತ ನಟ ನಟ ಪುನೀತ್ ರಾಜಕುಮಾರ್ ಸಾವಿನ ಕುರಿತು ಆಸ್ಪತ್ರೆ ವೈದ್ಯರ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆ ರಾಜ್ಯ ಖಾಸಗಿ ಆಸ್ಪತ್ರೆಗಳ ಒಕ್ಕೂಟವು ( ಫನಾ) ಡಾ. ರಮಣರಾವ್ ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಾ. ರಮಣರಾವ್ ಅವರ ಕ್ಲಿನಿಕ್​ಗೆ ಪುನೀತರಾಜ್​ಕುಮಾರ್ … Continued

ನ.19ರಿಂದ ಬಿಎಸ್‌ವೈ, ಕಟೀಲು,, ಶೆಟ್ಟರ್, ಈಶ್ವರಪ್ಪ ರಾಜ್ಯ ಪ್ರವಾಸ

ಬೆಂಗಳೂರು : ಬಿಜೆಪಿ ನಾಯಕರು ನ. 19ರಿಂದ ರಾಜ್ಯದಲ್ಲಿ ‘ಜನ ಸ್ವರಾಜ್’​ ಯಾತ್ರೆ ನಡೆಸಲಿದ್ದಾರೆ. ನವೆಂಬರ್‌ 19ರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರ ತಂಡ ರಾಜ್ಯ ಪ್ರವಾಸ ನಡೆಸಲಿದ್ದು, ಒಟ್ಟು 6 ನಾಯಕರ ತಂಡ ಪ್ರವಾಸ ಕೈಗೊಳ್ಳಲಿದೆ. ಯಡಿಯೂರಪ್ಪ ನೇತೃತ್ವದ ತಂಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ನೇತೃತ್ವದಲ್ಲಿ 9 … Continued

ಭತ್ತಕ್ಕೆ 2500 ರೂ. ಬೆಂಬಲ ಬೆಲೆಗೆ ಆಗ್ರಹಿಸಿ ಹೆದ್ದಾರಿಯಲ್ಲೇ ಭತ್ತ ಬಡಿದು ರೈತರ ಪ್ರತಿಭಟನೆ

ಬ್ರಹ್ಮಾವರ : ಬೆಳೆದ ಭತ್ತಕ್ಕೆ 2500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕರಾವಳಿ ಭಾಗದ ರೈತರು ಹೋರಾಟ ನಡೆಸಿದ್ದಾರೆ. ಬ್ರಹ್ಮಾವರ ಬಸ್‌ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತ ಭತ್ತವನ್ನು ಮಂಚಕ್ಕೆ ಬಡಿಯುವ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬೆಳೆ ನೆಲಕಚ್ಚಿದೆ. ಭತ್ತಕ್ಕೂ ಸರಿಯಾದ … Continued

ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 224 ಮಂದಿಯಲ್ಲಿ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು (ಶನಿವಾರ) ಹೊಸದಾಗಿ 224 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 5 ಮಂದಿ ಮೃತಪಟ್ಟಿದ್ದಾರೆ. ಇದೇವೇಳೆ 317 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌. ಬಾಗಲಕೋಟೆ, ಬಳ್ಳಾರಿ,ಚಿಕ್ಕಬಳ್ಳಾಪುರ, ದಾರವಾಡ,ಗದಗ, ಹಾವೇರಿ, ,ಕಲಬುರಗಿ,ಕೊಪ್ಪಳ, ಕೊಪ್ಪಳ, ರಾಯಚೂರು,ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸೋಂಕು ದಾಖಲಾಗಿಲ್ಲ. ರಾಜ್ಯದಲ್ಲಿ … Continued

ಪರೀಕ್ಷೆ ಒತ್ತಡದಿಂದ ಪಿಎಚ್ ಡಿ ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರು: ಪರೀಕ್ಷೆ ಒತ್ತಡದಿಂದ ಪಿಎಚ್.ಡಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೈಸೂರಿನ ಸರಸ್ವತಿಪುರಂನಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದ್ದು, ಮೃತನ್ನು ರಶ್ಮಿ(29) ಎಂದು ಗರುತಿಸಲಾಗಿದೆ. ರಶ್ಮಿ ರಸಾಯನ ಶಾಸ್ತ್ರ (ಕೆಮಿಸ್ಟ್ರಿ)ದಲ್ಲಿ ಎಂಎಸ್ಸಿ ಮುಗಿಸಿ ಪಿಎಚ್‌ಡಿ ಮಾಡುತ್ತಿದ್ದರು. ಸರಸ್ವತಿಪುರಂ 9ನೇ ಮುಖ್ಯ ರಸ್ತೆಯಲ್ಲಿರುವ ಪೇಯಿಂಗ್‌ ಗೆಸ್ಟ್‌ ಆಗಿ ಚಾಮರಾಜನಗರ ಮೂಲದ … Continued

ಕೃಷಿ ಹೊಂಡಕ್ಕೆ ಬಿದ್ದ ಬಾಲ್ ತೆಗೆಯಲು ಹೋಗಿ ಮೂವರು ಮುಳುಗಿ ಸಾವು

ಆನೇಕಲ್: ಕ್ರಿಕೆಟ್ ಆಟವಾಡುತ್ತಿದ್ದಾಗ ಕೃಷಿ ಹೊಂಡಕ್ಕೆ ಬಿದ್ದ ಬಾಲನ್ನು ತೆಗೆಯಲು ಹೋಗಿ ಇಬ್ಬರು ಬಾಲಕರು ಸೇರಿದಂತೆ ಮೂವರು ಮೃತಪಟ್ಟ ಘಟನೆ ಬೆಂಗಳೂರು ನಗರ ಜಿಲ್ಲೆಯಆನೇಕಲ್​ ತಾಲೂಕಿನ ಇಗ್ಗಲೂರು ಬಳಿ ನಡೆದ ಬಗ್ಗೆ ವರದಿಯಾಗಿದೆ. ಕೃಷಿ ಹೊಂಡಕ್ಕೆ ಬಿದ್ದ ಬಾಲ್ ತೆತೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದವನನ್ನು ರಕ್ಷಿಸಲು ಹೋಗಿ ಮೂವರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಧೀಮಂತ … Continued