ಹುಬ್ಬಳ್ಳಿ: ಶಾಲಾ ವಾಹನದ ರೇಡಿಯೇಟರ್ ಬ್ಲಾಸ್ಟ್ ; ಕೆಲವು ಮಕ್ಕಳಿಗೆ ಗಾಯ

ಹುಬ್ಬಳ್ಳಿ: ಖಾಸಗಿ ಶಾಲೆಯೊಂದರ ಮಕ್ಕಳನ್ನು ಕರೆದ್ಯೊಯುವ ವಾಹನದ ರೇಡಿಯಟರ್  ಬ್ಲಾಸ್ಟ್ ನಾಲ್ಕೈದು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ಸಂಜೆ ಇಲ್ಲಿನ ಗೋಕುಲ ರಸ್ತೆ ಯ ಸೆಂಟ್ರಲ್ ಎಕ್ಸಾಯೀಜ್ ಕಾಲೋನಿಯಲ್ಲಿ ನಡೆದಿದೆ. ಗಾಯಾಳು ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾಸಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ವಾಪಸ್ಸು ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ … Continued

ಬೆಳಗಾವಿ ಚಿರತೆ ಸೆರೆ ಕಾರ್ಯಾಚರಣೆಗೆ ಶಿವಮೊಗ್ಗದಿಂದ ಬರಲಿವೆ ಎರಡು ಆನೆಗಳು

ಬೆಳಗಾವಿ: ಬೆಳಗಾವಿ ನಗರದ ಗಾಲ್ಫ್‌ ಮೈದಾನದಲ್ಲಿ ಅವಿತುಕೊಂಡ ಚಿರತೆ ಸೆರೆಗೆ ಈಗ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್‌ ಶಿಬಿರದಿಂದ ಎರಡು ಆನೆಗಳನ್ನು ಕರೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳವಾರ ಬೆಳಿಗ್ಗೆಯೇ ಎರಡು ಆನೆಗಳು ಹಾಗೂ ಪರಿಣತ ಸಿಬ್ಬಂದಿಯ ತಂಡ ಶಿವಮೊಗ್ಗದಿಂದ ಹೊರಟಿದೆ ಎಂದು ಹೇಳಲಾಗಿದೆ. ಸಕ್ರೆಬೈಲ್‌ ಆನೆ ತರಬೇತಿ ಕ್ಯಾಂಪಿನಲ್ಲಿರುವ ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿರುವ … Continued

ಬಿಎಸ್‌ಎನ್‌ಎಲ್‌ ಕರ್ನಾಟಕ ವೃತ್ತಕ್ಕೆ 100 ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಆಹ್ವಾನ

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್, ಕರ್ನಾಟಕ ವೃತ್ತವು ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು bsnl.co.in ನಲ್ಲಿ ಬಿಎಸ್‌ಎನ್‌ಎಲ್‌ (BSNL)ನ ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಿ ಪ್ರಕ್ರಿಯೆಯು ಆಗಸ್ಟ್ 22 ರಂದು ಪ್ರಾರಂಭವಾಗಿದೆ ಮತ್ತು ಆಗಸ್ಟ್ 30ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಂಸ್ಥೆಯಲ್ಲಿ 100 ಹುದ್ದೆಗಳನ್ನು ಭರ್ತಿ … Continued

ಎಸಿಬಿ ರದ್ದು: ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ

ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಕರ್ನಾಟಕ ಹೈಕೋರ್ಟ್‌ ರದ್ದು ಮಾಡಿರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಕನಕರಾಜು ಎಂಬವರ ಪರವಾಗಿ ವಕೀಲ ಅಶೋಕ ಪಾಣಿಗ್ರಾಹಿ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಸಿ.ಟಿ.ರವಿಕುಮಾರ್ ಪೀಠದ ಎದುರು ಖಾಸಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ … Continued

35 ಸಾವಿರಕ್ಕೂ ಹೆಚ್ಚು ಹಾವು, ಪ್ರಾಣಿ-ಪಕ್ಷಿಗಳನ್ನು ರಕ್ಷಿಸಿದ್ದ ಸ್ನೇಕ್ ಲೋಕೇಶ ನಿಧನ

ಬೆಂಗಳೂರು: ನೆಲಮಂಗಲದ ಸ್ನೇಕ್ ಲೋಕೇಶ ಎಂದು ಹೆಸರುವಾಸಿಯಾಗಿದ್ದ ಉರಗ ರಕ್ಷಕ, ಲೋಕೇಶ ಅವರು ಹಾವು ಕಡಿತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು, ಮಂಗಳವಾರ ಬೆಳಗ್ಗೆ ಸ್ನೇಕ್ ಲೋಕೇಶ ಅವರು ನಿಧನರಾಗಿದ್ದಾರೆ. ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಜುಲೈ 17ರಂದು ಬರಿಗೈಯಲ್ಲಿ ನಾಗರ ಹಾವನ್ನು ಹಿಡಿಯುವಾಗ‌ ಲೋಕೇಶ ಅವರ ಬೆರಳಿಗೆ ವಿಷಪೂರಿತ ನಾಗರಹಾವು … Continued

ಕೊಡಗಿನಲ್ಲಿ 24ರಿಂದ ನಾಲ್ಕು ದಿನ ನಿಷೇಧಾಜ್ಞೆ ಜಾರಿ: ಕಾಂಗ್ರೆಸ್‌ ಪ್ರತಿಭಟನೆ ಮುಂದಕ್ಕೆ

ಮಡಿಕೇರಿ: ಮಳೆಹಾನಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ಪ್ರತಿಭಟಿಸಿ ಕಾಂಗ್ರೆಸ್ ನಾಯಕರು ಇದೇ 26ರಂದು ಮಡಿಕೇರಿ ಚಲೋ ಹಮ್ಮಿಕೊಂಡಿದ್ದು, ಜಿಲ್ಲಾ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಇದೇ ದಿನ ಬಿಜೆಪಿ ಜನಜಾಗೃತಿ ಸಮಾವೇಸವೂ ನಡೆಯಲಿದೆ ಎಂದು ಹೇಳಲಾಗಿತ್ತು. … Continued

ರಾಜ್ಯದ ಈ ಜಿಲ್ಲೆಗಳಲ್ಲಿ ಮೂರು ದಿನ ಮಳೆ: ಹಳದಿ ಅಲರ್ಟ್ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕದಲ್ಲಿ ಮತ್ತೆ ಮೂರ್ನಾಲ್ಕು ದಿಮ ಮಳೆ ಜೋರಾಗಲಿದೆ ಎಂದು ತಿಳಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಲ್ಲಿ ಮಳೆ ಮುಂದುವರೆಯಲಿದ್ದು, ಆಗಸ್ಟ್​ 25ರವರೆಗೆ ಮೂರು ದಿನ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಇನ್ನು 3 ದಿನ ಹಳದಿ ಅಲರ್ಟ್​ … Continued

ಕುಮಟಾ: ಮಿರ್ಜಾನ್‌ ಬಳಿ ಅಪರೂಪದ ಬಿಳಿ ಹೆಬ್ಬಾವು ಪತ್ತೆ….!

ಕುಮಟಾ: ಉತ್ತರ ಕನ್ನಡಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದಲ್ಲಿ ಸುಬ್ರಹ್ಮಣ್ಯ ನಾಯ್ಕ ಅವರ ಮನೆಯಲ್ಲಿ ಬಿಳಿ ಹೆಬ್ಬಾವು ಸಿಕ್ಕಿದೆ. ಈ ಅಪರೂಪದ ಬಿಳಿ ಹೆಬ್ಬಾವು ಕಂಡು ಜನರಿಗೆ ಗಾಬರಿ ಹಾಗೂ ಅಚ್ಚರಿ ಎರಡೂ ಆಗಿದೆ. ಬಳಿಕ ಉರಗ ತಜ್ಞ ಪವನ್ ನಾಯ್ಕ‌ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪವನ್ ನಾಯ್ಕ ಬಿಳಿ … Continued

ಸೆಪ್ಟೆಂಬರ್‌ 2 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ನವ ಮಂಗಳೂರು ಬಂದರು ಪ್ರಾಧಿಕಾರದ ಕಾರ್ಯಕ್ರಮಕ್ಕೆ ಮೋದಿಗೆ ಆಹ್ವಾನ ನೀಡಲಾಗಿದ್ದು, ಎನ್‍ಎಂಪಿಎದ ಹಲವು ಯೋಜನೆಗಳ ಉದ್ಘಾಟನೆಗಾಗಿ ಆಗಮಿಸಲಿದ್ದಾರೆ ಎನ್ನಲಾಗಿದೆ. ನವ ಮಂಗಳೂರು ಬಂದರಿನಲ್ಲಿ ನಡೆಯಲಿರುವ ಕಾರ್ಯಕ್ರಮ ದಲ್ಲಿ ಪ್ರಧಾನಿ ಭಾಗಿಯಾಗಲಿದ್ದು,ಇದೇ ವೇಳೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ … Continued

ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದು ತಪ್ಪಲ್ಲ : ಪ್ರಮೋದ ಮುತಾಲಿಕ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶ ಮಾಡಿರುವುದು ತಪ್ಪೆಂದು ನಾನು ಹೇಳುವುದಿಲ್ಲ, ಬಿಜೆಪಿಯವರು ಇಂತಹ ವಿಷಯ ಬಿಟ್ಟು ವೀರ್‌ ಸಾವರ್ಕರ್ ಅವರ ಬಗ್ಗೆ ಚರ್ಚೆ ಮಾಡಲಿ ಎಂದು  ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಸಾಹಾರ ಸೇವನೆ ಮಾಡಿದ್ದರಲ್ಲಿ ತಪ್ಪು ಕಾಣುವುದಿಲ್ಲ. ಹಿಂದೂಗಳಲ್ಲಿ ದೇವರಿಗೂ … Continued