ಯುಎಇ ಮೂಲದ ಕಂಪನಿ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ವರದಕ್ಷಿಣೆ ವಿರೋಧಿ ನೀತಿ ಜಾರಿಗೆ ತಂದ ಭಾರತೀಯ ಸಿಇಒ..!

ಶಾರ್ಜಾ ಮೂಲದ ಕಂಪನಿಯು ತನ್ನ ಉದ್ಯೋಗಿಗಳಿಗೆ ಕಟ್ಟುನಿಟ್ಟಾದ ಹತ್ತು ಅಂಶಗಳ ವರದಕ್ಷಿಣೆ ನೀತಿಯನ್ನು ಪರಿಚಯಿಸಿದೆ. ಅದು ವಿಫಲವಾದರೆ ಅವರ ಒಪ್ಪಂದಗಳನ್ನು ರದ್ದುಗೊಳಿಸಬಹುದು ಮತ್ತು ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಶಾರ್ಜಾ ಮೂಲದ ಅರೀಸ್‌ ಸಮೂಹದ (Aries Group) ಸ್ಥಾಪಕ ಮತ್ತು ಸಿಇಒ ಸೋಹನ್ ರಾಯ್ ಈ ವರ್ಷದ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಹೊಸ ನೀತಿಯನ್ನು ಘೋಷಿಸಿದ್ದರು. … Continued

ಜುಲೈ 31 ರೊಳಗೆ 51.6 ಕೋಟಿ ಡೋಸ್ ಲಸಿಕೆ ಲಭ್ಯ, ಈಗಾಗಲೇ 35.6 ಕೋಟಿ ಪೂರೈಕೆ: ಸುಪ್ರೀಂ ಕೋರ್ಟಿಗೆ ಕೇಂದ್ರದಿಂದ ಮಾಹಿತಿ

ನವದೆಹಲಿ: ಜುಲೈ 31ರೊಳಗೆ 51.6 ಕೋಟಿ ಡೋಸುಗಳಷ್ಟು ಕೋವಿಡ್ ಲಸಿಕೆ ಲಭ್ಯವಾಗಲಿದ್ದು, ಅದರಲ್ಲಿ ಈಗಾಗಲೇ 35.6 ಕೋಟಿ ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರವು ಶನಿವಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಮಕ್ಕಳಿಗೆ ಲಭ್ಯವಿರುವ ಲಸಿಕೆ ಸ್ಥಿತಿಗತಿ ಬಗ್ಗೆಯೂ ಮಾಹಿತಿ ನೀಡಿದ ಕೇಂದ್ರ ಸರ್ಕಾರ, 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ … Continued

ವರನಿಗೆ ಕನ್ನಡಕವಿಲ್ಲದೆ ಓದಲು ಆಗಲ್ಲ ಎಂದು ಹಸೆಮಣೆಯಲ್ಲೇ ಮದುವೆಯಾಗಲು ಒಲ್ಲೆ ಎಂದ ಯುವತಿ..!

ಭಾವಿ ಪತಿಗೆ ಕನ್ನಡಕ ಇಲ್ಲದೇ ಓದಲು ಆಗುವುದಿಲ್ಲ ಎಂದು ತಿಳಿದ ವಧು ಮಂಟಪದಲ್ಲೇ ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆ ಮುರಿದುಕೊಂಡಿದ್ದೊಂದೇ ಅಲ್ಲ, ಮದುಮಗ ಮತ್ತು ಆತನ ಕುಟುಂಬದ ಮೇಲೂ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಉತ್ತರ ಪ್ರದೇಶದ ಜಮ್ಲಾಪುರದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿಯಾಗಿದೆ. ಮದುವೆಯ ದಿನ ವರ ಚೆನ್ನಾಗಿ … Continued

ಯುಪಿ ಸಿಎಂ ಜೊತೆ ಅಯೋಧ್ಯೆ ಅಭಿವೃದ್ಧಿ ಯೋಜನೆ ಬಗ್ಗೆ ಚರ್ಚಿಸಿದ ಪ್ರಧಾನಿ ಮೋದಿ

ಅಯೋಧ್ಯೆ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಶನಿವಾರ ವರ್ಚುವಲ್‌ ಕಾನ್ಫೆರೆನ್ಸ್‌ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತುಕತೆ ನಡೆಸಿದ್ದಾರೆ. ಅಯೋಧ್ಯೆಯ ಅಭಿವೃದ್ಧಿಯ ಭವಿಷ್ಯದ ದೃಷ್ಟಿಯಿಂದ ರಸ್ತೆಗಳು, ಮೂಲಸೌಕರ್ಯ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಹಲವಾರು ಯೋಜನೆಗಳ ಪ್ರಧಾನಿ ಮೋದಿ ಪರಿಶೀಲಿಸಿದ್ದಾರೆ. ನಡೆಯುತ್ತಿರುವ ಯೋಜನೆಗಳನ್ನು … Continued

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ದೇಶ್ಮುಖ್ ಇಬ್ಬರು ಸಹಾಯಕರಿಗೆ ಜುಲೈ 1ರ ವರೆಗೆ ಇಡಿ ಕಸ್ಟಡಿಗೆ ನೀಡಿದ ಕೋರ್ಟ್‌

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್‌ ದೇಶ್ಮುಖ್‌ ಅವರ ಮೇಲೆ ದಾಖಲಾದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ್ಮುಖ್ ಅವರ ಇಬ್ಬರು ಸಹಾಯಕರನ್ನು ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿಗೆ ಜುಲೈ 1 ರವರೆಗೆ ನ್ಯಾಯಾಲಯ ನೀಡಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಯ ನಿಬಂಧನೆಗಳ ಅಡಿಯಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ ದೇಶ್ಮುಖ್ … Continued

ನಕಲಿ ಲಸಿಕೆ ಶಿಬಿರ : ನಕಲಿ ಐಎಎಸ್‌ ಅಧಿಕಾರಿ ಸೇರಿ ನಾಲ್ವರ ಬಂಧನ

ಕೋಲ್ಕತ್ತಾ,:ಪಶ್ಚಿಮ ಬಂಗಾಳದಲ್ಲಿ ನಕಲಿ ಲಸಿಕೆ ಶಿಬಿರ ನಡೆಸಿದ್ದ ನಕಲಿ ಐಎಎಸ್ ಅಧಿಕಾರಿ ದೇಬಾಂಜನ್ ದೇಬ್  ಹಾಗೂ ಮೂವರು ಸಹವರ್ತಿಗಳನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಇಬ್ಬರು ಕೋಲ್ಕತ್ತಾ ಮುನ್ಸಿಫಲ್ ಕಾಪೆರ್ರೇಷನ್ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ದೇಬ್ ಹಣ ಪಡೆದುನಕಲಿ ಲಸಿಕೆ ಶಿಬಿರಗಳನ್ನು ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. … Continued

ಕೋವಿಡ್‌ ಲಸಿಕೆ ಪಡೆಯುವುದರಿಂದ ತಪ್ಪಿಸಿಕೊಳ್ಳಲು ಮರ ಏರಿದ ಭೂಪ..! ಪತ್ನಿಗೂ ಬೇಡವೆಂದು ಅವಳ ಆಧಾರ್‌ ಕಾರ್ಡ್ ಒಯ್ದ..!!

ನವದೆಹಲಿ: ಜನರಲ್ಲಿ ಪ್ರಚಲಿತದಲ್ಲಿರುವ ಲಸಿಕೆ ಹಿಂಜರಿಕೆಯನ್ನು ಚಿತ್ರಿಸುವ ವಿಲಕ್ಷಣ ಘಟನೆ ವಿಶೇಷವಾಗಿ ದೇಶದ ಗ್ರಾಮೀಣ ಜನಸಂಖ್ಯೆ ಹೆಚ್ಚಾಗಿ ಹೊಮದಿರುವ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ರಾಜ್‌ಗಡ ಜಿಲ್ಲೆಯ ಪಟಂಕಲನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕೋವಿಡ್‌ ಲಸಿಕೆ ಪಡೆಯದಿರಲು ನಿರ್ಧರಿಸಿ ಅದರಿಂದ ತಪ್ಪಿಸಿಕೊಳ್ಳಲು ಮರ ಹತ್ತಿದ್ದಾರೆ..! ಮತ್ತು ದಿನಕ್ಕೆ ಕೋವಿಡ್‌ ಲಸಿಕೆ ಶಿಬಿರ ಮುಗಿಯುವವರೆಗೂ ಇಳಿಯಲು ನಿರಾಕರಿಸಿದ್ದಾರೆ … Continued

ಮುಂದಿನ ತಿಂಗಳು ಪ್ರತಿಭಟನೆ ತೀವ್ರಗೊಳಿಸಲು ರೈತರ ನಿರ್ಧಾರ, ಮಾತುಕತೆಗೆ ಸಿದ್ಧ ಎಂದ ಸರ್ಕಾರ

ನವದೆಹಲಿ: ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಯೋಜಿಸುತ್ತಿರುವ ರೈತರು ಜುಲೈನಲ್ಲಿ ಇನ್ನೂ ಎರಡು ಸಮಾವೇಶಗಳನ್ನು ನಡೆಸಲಿದ್ದಾರೆ ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯತ್‌ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನೀಡಿದ ಅವರು ಜುಲೈ 9 ರಂದು ಟ್ರಾಕ್ಟರ್ ಸಮಾವೇಶ ನಡೆಯಲಿದ್ದು, ಇದರಲ್ಲಿ ಶಾಮ್ಲಿ ಮತ್ತು ಭಗಪತ್ ಜನರು ಹಾಜರಾಗಲಿದ್ದಾರೆ ಮತ್ತು ಇದು ಜುಲೈ 10 ರಂದು ಸಿಂಗ್ … Continued

ಕೋವಿಡ್‌-19 ಡೆಲ್ಟಾ ಪ್ಲಸ್ ರೂಪಾಂತರದಿಂದ ತಮಿಳುನಾಡಿನಲ್ಲಿ ಮೊದಲ ಸಾವು

ಚೆನ್ನೈ: ತಮಿಳುನಾಡಿನಲ್ಲಿ Sars-Cov-2 (COVID-19) ಡೆಲ್ಟಾ ಪ್ಲಸ್‌ ಸೋಂಕಿಗೆ ಮೊದಲ ಸಾವು ವರದಿಯಾಗಿದೆ. ಮಧುರೈನ ರೋಗಿಯೊಬ್ಬರು ಕೊರೊನಾ ವೈರಸ್‌ ಡೆಲ್ಟಾ ಪ್ಲಸ್‌ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈಗ, ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ಮಧುರೈ, ಚೆನ್ನೈ, ಮತ್ತು ಕಾಂಚಿಪುರಂ ಜಿಲ್ಲೆಗಳಲ್ಲಿ ಪತ್ತೆಯಾದ ಕೋವಿಡ್‌-19 ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರವನ್ನು ತಡೆಗಟ್ಟಲು ತಕ್ಷಣದ … Continued

ಆರಂಭಿಕ ಉತ್ಸಾಹದ ನಂತರ 60 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ವ್ಯಾಕ್ಸಿನೇಷನ್ ವೇಗ ಕುಂಠಿತ:ತಜ್ಞರ ಕಳವಳ

ನವದೆಹಲಿ: ಆರಂಭಿಕ ಹೆಚ್ಚಿನ ಉತ್ಸಾಹದ ನಂತರ ನಂತರ ಕಳೆದ ಕೆಲವು ವಾರಗಳಲ್ಲಿ 60ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ವ್ಯಾಕ್ಸಿನೇಷನ್ ವೇಗ ಕುಂಠೀತವಾಗಿದೆ. ಆರೋಗ್ಯ ತಜ್ಞರು ಇದಕ್ಕೆ ಓಡಾಟದ ಸಮಸ್ಯೆಗಳು ಮತ್ತು ತಪ್ಪು ಮಾಹಿತಿ ಮತ್ತು ಡೋಸುಗಳ ಬಗ್ಗೆ ಆಧಾರರಹಿತ ಆತಂಕಗಳು ಕಾರಣವೆಂದು ಹೇಳಲಾಗಿದೆ. ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಇದುವರೆಗೆ 2.29 ಕೋಟಿ ವೃದ್ಧರಿಗೆ ಸಂಪೂರ್ಣ ಲಸಿಕೆ … Continued