ಮಾಜಿ ಐಎಎಸ್ ಅಧಿಕಾರಿ ಅನುಪ್ ಚಂದ್ರ ಪಾಂಡೆ ಹೊಸ ಚುನಾವಣಾ ಆಯುಕ್ತರಾಗಿ ನೇಮಕ

ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ಅನುಪ್ ಚಂದ್ರ ಪಾಂಡೆ ಅವರನ್ನು ಭಾರತದ ಹೊಸ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಈ ನೇಮಕಾತಿ ಮಾಡಿದ್ದಾರೆ. ಪಾಂಡೆ 1984 ರ ಬ್ಯಾಚ್‌ಗೆ ಸೇರಿದ ಉತ್ತರ ಪ್ರದೇಶ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ.ಸಂವಿಧಾನದ 324 ನೇ ವಿಧಿಯ ಷರತ್ತು (2) ಅನುಸಾರವಾಗಿ, ಅವರು ಅಧಿಕಾರ … Continued

ಕೋವಿಶೀಲ್ಡ್ 780 ರೂ, ಕೋವಾಕ್ಸಿನ್ 1,410 ರೂ: ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಲಸಿಕೆಗಳ ಗರಿಷ್ಠ ಬೆಲೆ ಸರ್ಕಾರದಿಂದ ನಿಗದಿ

ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಲಸಿಕೆಗಳ ಗರಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರ ಮಂಗಳವಾರ ನಿಗದಿ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಡೋಸಿಗೆ 780 ರೂ., ಕೊವಾಕ್ಸಿನ್ 1,410 ರೂ. ಮತ್ತು ಸ್ಪುಟ್ನಿಕ್ ವಿಗೆ 1,145 ರೂ.ನಿಗದಿ ಮಾಡಿದೆ. ಈ ಬೆಲೆಗಳು 5% ಜಿಎಸ್ಟಿ ಮತ್ತು 150 ರೂ.ವರೆಗೆ … Continued

ಇಪಿಎಫ್‌ಒ ಸದಸ್ಯರಿಗೆ ಒಳ್ಳೆಯ ಸುದ್ದಿ​​: ಮುಂದಿನ ತಿಂಗಳು 6 ಕೋಟಿ ಮಂದಿಗೆ ಶೇ.8.5 ಬಡ್ಡಿ ಖಾತೆಗೇ ಜಮೆ

ಇಪಿಎಫ್‌ಒ (EPFO) ವ್ಯಾಪ್ತಿಗೆ ಬರುವ ದೇಶದ ಸುಮಾರು 6 ಕೋಟಿ ಸದ್ಯರಿಗೆ ಇದು ಒಳ್ಳೆಉ ಸುದ್ದಿ. ನೌಕರರ ಭವಿಷ್ಯ ನಿಧಿ ಸಂಸ್ಥೆ 2020-21ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೀಡಲಾಗುವ ಶೇ.8:5 ಬಡ್ಡಿಯನ್ನು ಜುಲೈ ಅಂತ್ಯದೊಳಗೆ ನೀಡಲಾಗುತ್ತದೆ. ಇಪಿಎಫ್‌ ಬಡ್ಡಿಯನ್ನು ಜುಲೈ ಅಂತ್ಯದ ವೇಳೆಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತಾವನೆಗೆ ಕಾರ್ಮಿಕ … Continued

ವಿಶ್ವಸಂಸ್ಥೆ ಆರ್ಥಿಕತೆ, ಸೋಷಿಯಲ್ ಕೌನ್ಸಿಲ್‍ಗೆ ಭಾರತ ಆಯ್ಕೆ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಮುಖ ಆರು ಅಂಗಗಳಲ್ಲಿ ಒಂದಾದ ಆರ್ಥಿಕತೆ ಮತ್ತು ಸೋಷಿಯಲ್ ಕೌನ್ಸಿಲ್‍ಗೆ ಭಾರತ ಆಯ್ಕೆಯಾಗಿದೆ. ಆರ್ಥಿಕತೆ, ಸಮಾಜ ಹಾಗೂ ಪರಿಸರ ಕಾಪಾಡುವ ಗುರಿಯೊಂದಿಗೆ ಕಾರ್ಯಚರಣೆ ನಡೆಸುತ್ತಿರುವ 54 ಸದಸ್ಯ ಬಲದ ವಿಶ್ವಸಂಸ್ಥೆಯ ಈ ಕೌನ್ಸಿಲ್‍ಗೆ ಭಾರತ 2022-24 ವರೆಗಿನ ಅವಧಿಗೆ ಆಯ್ಕೆಯಾಗಿದೆ. ವಿಶ್ವಸಂಸ್ಥೆಯ ಸಭೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೈಗೊಳ್ಳುವ ನಿರ್ಣಯ ಪಾಲಿಸುವುದು ಹಾಗೂ ಹಾಗೂ … Continued

ಕೊರೊನಾ 3ನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ: ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೆರಿಯಾ

ನವದೆಹಲಿ: ಕೊರೊನಾ ವೈರಸ್ ಸೋಂಕಿನ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂಬ ಬಗ್ಗೆ ಯಾವುದೇ ಆಧಾರವಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆ ( AIIMS) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಮಂಗಳವಾರ ಹೇಳಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿನ ಎರಡೂ ಅಲೆಗಳಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಹಳೆಯ ವೈರಾಣು ಇರಬಹುದು ಅಥವಾ ಹೊಸ ರೂಪಾಂತರವೇ … Continued

25 ಕೋಟಿ ಕೋವಿಶೀಲ್ಡ್ ಡೋಸ್‌, 19 ಕೋಟಿ ಕೋವಾಕ್ಸಿನ್ ಡೋಸ್‌ಗಳಿಗೆ ಹೊಸ ಆರ್ಡರ್‌: ಕೇಂದ್ರ ಸರ್ಕಾರ

ನವ ದೆಹಲಿ: 25 ಕೋಟಿಗೂ ಹೆಚ್ಚು ಡೋಸ್‌ ಕೋವಿಶೀಲ್ಡ್ ಮತ್ತು 19 ಕೋಟಿಗೂ ಡೋಸ್ ಕೋವಾಕ್ಸಿನ್ ಕೋವಿಡ್ -19 ಲಸಿಕೆಗಳಿಗೆ ಹೊಸ ಆದೇಶಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಆರೋಗ್ಯ ಸಚಿವಾಲಯದ ವಾಡಿಕೆಯ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಖರೀದಿಯ ಆದೇಶಗಳು ಬಯಾಲಾಜಿಕಲ್‌ ಇ … Continued

9 ಸಿಂಹಗಳು ಕೊರೊನಾ ಪಾಸಿಟಿವ್‌ ನಂತರ 28 ಅರೆ-ಕಾಡಾನೆಗಳಿಗೆ ಕೋವಿಡ್‌-19 ಪರೀಕ್ಷೆ

ತಮಿಳುನಾಡು ಅರಣ್ಯ ಸಚಿವರ ಸೂಚನೆಯಂತೆ ಮುದುಮಲೈ ಹುಲಿ ಮೀಸಲು ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಬಂಧಿತ ಆನೆಗಳಿಗೆ ಮುನ್ನೆಚ್ಚರಿಕೆಕ್ರಮವಾಗಿ ಕೋವಿಡ್‌-19 ಪರೀಕ್ಷೆ ಮಾಡಲಾಗಿದೆ. ತೆಪ್ಪಕಾಡು ಆನೆ ಶಿಬಿರವು ದೇಶದ ಅತ್ಯಂತ ಹಳೆಯದಾಗಿದ್ದು, 1927 ರಲ್ಲಿ ಸ್ಥಾಪಿಸಲಾಯಿತು. ಶಿಬಿರ ಮತ್ತು ಮುದುಮಲೈ ಹುಲಿ ಮೀಸಲು ಪ್ರದೇಶವನ್ನು ತಮಿಳುನಾಡು ಅರಣ್ಯ ಇಲಾಖೆ ನಡೆಸುತ್ತಿದೆ. ಚೆನ್ನೈ ಬಳಿಯ ಅರಿಗ್ನಾರ್ ಅಣ್ಣ … Continued

ಎಲ್ಲ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಜಮ್ಮು-ಕಾಶ್ಮೀರದ ಈ ಕುಗ್ರಾಮ

ಶ್ರೀನಗರ: ಇದು ಕುಗ್ರಾಮ. ಈ ಹಳ್ಳಿಗೆ ಬರಬೇಕೆಂದರೆ 18 ಕಿ.ಮೀ ನಡೆಯಬೇಕು. ಬಹುಪಾಲು ಮಂದಿ ಅಲೆಮಾರಿಗಳು. ಜಮ್ಮು ಕಾಶ್ಮೀರದ ಈ ಕುಗ್ರಾಮ ಇದೀಗ ಕೊರೊನಾ ವಿರುದ್ಧ ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಳ್ಳಿಯ ಹೆಸರು ವೆಯಾನ್. ಇಲ್ಲಿ 18 ವರ್ಷ ಮೇಲ್ಪಟ್ಟ 362 ವಯಸ್ಕರಿಗೆ ಕೊರೊನಾ ಲಸಿಕೆ … Continued

16 ವರ್ಷದ ಬಾಲಕಿಗೆ ಕಾಮೋತ್ತೇಜಕ ಚುಚ್ಚುಮದ್ದು ನೀಡಿ 8 ವರ್ಷಗಳಿಂದ ಅತ್ಯಾಚಾರ ಆರೋಪ; ನಾಲ್ವರ ಬಂಧನ

ಅಂಧೇರಿ (ಮುಂಬೈ) ನಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ. 16 ವರ್ಷದ ಜೂನಿಯರ್ ಕಾಲೇಜು ವಿದ್ಯಾರ್ಥಿನಿ, ಉದ್ಯಮಿ ಮಗಳು, ನೆರೆಮನೆಯ ದಂಪತಿ ಮಾತ್ರೆ ಮತ್ತು ಚುಚ್ಚುಮದ್ದಿನ ರೂಪದಲ್ಲಿ ಕಾಮೋತ್ತೇಜಕಗಳನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ನೆರೆಯಾತ ತನ್ನ ಹೆಂಡತಿಯ ಉಪಸ್ಥಿತಿಯಲ್ಲಿ ಈಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ … Continued

ಈ 100 ವರ್ಷದ ವಕೀಲರು ಈಗಲೂ ಪ್ರಾಕ್ಟೀಸ್‌ ಮಾಡ್ತಾರೆ..! ಕೋವಿಡ್‌ ಸಾಂಕ್ರಾಮಿಕದಲ್ಲಿ ವರ್ಚುವಲ್‌ನಲ್ಲಿ ಕೋರ್ಟ್‌ ಪ್ರಕರಣಕ್ಕೆ ಹಾಜರಾಗ್ತಾರೆ..!!

ಜೋಧ್‌ಪುರದ ಮೂಲದ ವಕೀಲ ಲೇಖರಾಜ್ ಮೆಹ್ತಾ ಅವರು 2021 ರ ಜೂನ್ 4 ರಂದು 100 ನೇ ವರ್ಷಕ್ಕೆ ಕಾಲಿಟ್ಟರು, ಆದರೆ ಇದು ಅವರನ್ನು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಅವರಿಗೆ, ‘ವಯಸ್ಸು ಕೇವಲ ಒಂದು ಸಂಖ್ಯೆ’ ಮತ್ತು ಇಂಟರ್ನೆಟ್ ಮತ್ತು ಝೂಮ್ ಬಳಸಲು ಕಲಿತ ನಂತರ ಅವರು ಶತಕ ದಾಟಿದ ನಂತರವೂ ವರ್ಚುವಲ್‌ ವಿಚಾರಣೆಗಳಿಗೆ ಹಾಜರಾಗುತ್ತಿದ್ದಾರೆ. … Continued