ಭಾರತದ ಹೊಸ ಸಂಸತ್ ಭವನವನ್ನು ಪ್ರಧಾನಿ ಮೋದಿ ಈ ತಿಂಗಳೇ ಉದ್ಘಾಟಿಸುವ ಸಾಧ್ಯತೆ

ನವದೆಹಲಿ: ಭಾರತದ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಕೊನೆಯಲ್ಲಿ ಉದ್ಘಾಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಸಂಸತ್ತಿನ ಹೊಸ ಕಟ್ಟಡವು ಅಂತಿಮ ಹಂತದಲ್ಲಿದೆ, ಪ್ರಧಾನಿಯವರು ಮೇ ಕೊನೆಯ ವಾರದಲ್ಲಿ ತಮ್ಮ ಸರ್ಕಾರದ ಒಂಬತ್ತು ವರ್ಷಗಳ ಪೂರ್ಣಗೊಳ್ಳುವ ಸಂದರ್ಭದಲ್ಲಿ ಉದ್ಘಾಟಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು … Continued

ಅದಾನಿ ಕಂಪೆನಿಗಳ ತನಿಖೆ 2016ರಿಂದ ನಡೆದಿಲ್ಲ : ವರದಿ ಸಲ್ಲಿಕೆಗೆ 6 ತಿಂಗಳು ಬೇಕು ಎಂದು ಸೆಬಿಯಿಂದ ಸುಪ್ರೀಂ ಕೋರ್ಟಿಗೆ ಮನವಿ

ನವದೆಹಲಿ: 2016ರಿಂದ ಅದಾನಿ ಸಮೂಹದ ಯಾವುದೇ ಕಂಪೆನಿಗಳನ್ನು ತನಿಖೆ ಮಾಡಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೋಮವಾರ ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. [ ಸಂಘಟಿತ ಸಂಸ್ಥೆಗಳ ವ್ಯವಹಾರಗಳ ತನಿಖೆ ಅತ್ಯಂತ ಸಂಕೀರ್ಣವಾಗಿರುವುದರಿಂದ ತನಿಖೆಗೆ ಅಧಿಕ ಸಮಯ ಅಗತ್ಯವಿದೆ ಎಂದು ಸೆಬಿ ಮನವಿ ಮಾಡಿದೆ. ಅದಾನಿ ಸಮೂಹದ ವಿರುದ್ಧ ನಡೆಸುತ್ತಿರುವ ತನಿಖೆಯನ್ನು … Continued

ಕರ್ನಾಟಕದ ಸೋಲಿನ ನಂತರ ಚುನಾವಣೆ ಸನಿಹದಲ್ಲಿರುವ 4 ರಾಜ್ಯಗಳಲ್ಲಿ ಕಾರ್ಯತಂತ್ರ ಬದಲಿಸಲಿರುವ ಬಿಜೆಪಿ

ನವದೆಹಲಿ : ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶವು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಚಾರದ ಕಾರ್ಯತಂತ್ರ ವನ್ನು ಬದಲಾಯಿಸುವಂತೆ ಮಾಡಿದೆ ಎಂದು ವರದಿಯೊಂದು ಹೇಳಿದೆ. ನಾಲ್ಕು ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗಳು ವರ್ಷಾಂತ್ಯದ ಸಮಯದಲ್ಲಿ ನಡೆಯಲಿವೆ. ಇವುಗಳಲ್ಲಿ, ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ … Continued

“ನೀವು ತಮಾಷೆ ಮಾಡುತ್ತಿದ್ದೀರಾ?” : ತನ್ನ ಲಂಡನ್ ವಿಳಾಸ ʼ10 ಡೌನಿಂಗ್ ಸ್ಟ್ರೀಟ್‌ʼ ಎಂಬುದನ್ನು ನಂಬಲು ವಲಸೆ ಅಧಿಕಾರಿ ನಿರಾಕರಿಸಿದ ಪ್ರಸಂಗ ನೆನಪಿಸಿಕೊಂಡ ಸುಧಾ ಮೂರ್ತಿ

ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡ ಲೇಖಕಿ ಮತ್ತು ಇನ್ಫೊಸಿಸ್‌ ಫೌಂಡೇಶನ್‌ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ’10 ಡೌನಿಂಗ್ ಸ್ಟ್ರೀಟ್’ ಎಂದು ಅಡ್ರೆಸ್‌ ಬರೆದಾಗ ವಲಸೆ ಅಧಿಕಾರಿಯೊಬ್ಬರು ಈ ವಿಳಾಸವನ್ನು ನಂಬಲು ನಿರಾಕರಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 10 ಡೌನಿಂಗ್ ಸ್ಟ್ರೀಟ್ ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯ ಅಧಿಕೃತ ನಿವಾಸ ಮತ್ತು ಕಚೇರಿಯಾಗಿದ್ದು, ಅಲ್ಲಿ ಅವರ … Continued

‘ ಕಾಂಗ್ರೆಸ್‌ಗೆ ಬೆಂಬಲ ನೀಡಲು ತೃಣಮೂಲ ಸಿದ್ಧ, ಆದರೆ…’: ಕರ್ನಾಟಕ ಫಲಿತಾಂಶದ ನಂತರ ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷ ಬೆಂಬಲಿಸುವ ಸುಳಿವು ನೀಡಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ತನ್ನ ಬೆಂಬಲ ಬಯಸಿದರೆ ಅದು ಸಹ ಟಿಎಂಸಿಗೆ ಅದೇ ರೀತಿ ಬೆಂಬಲಿಸಬೇಕು … Continued

ದೆಹಲಿ ಪ್ರವಾಸ ರದ್ದುಗೊಳಿಸಿದ ಡಿ.ಕೆ.ಶಿವಕುಮಾರ: ಹೊಟ್ಟೆ ನೋವಿನ ಕಾರಣ ನೀಡಿದ ಕೆಪಿಸಿಸಿ ಅಧ್ಯಕ್ಷ..

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ ಸೋಮವಾರ ಸಂಜೆ ಹೈಕಮಾಂಡ್ ಜೊತೆಗಿನ ಮಾತುಕತೆಗಾಗಿ ನವದೆಹಲಿಗೆ ಹೋಗುವುದನ್ನು ರದ್ದುಗೊಳಿಸಿದ್ದಾರೆ. ಹೊಟ್ಟೆನೋವು ಇರುವುದರಿಂದ ದೆಹಲಿಗೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಇತರರ ಸಂಖ್ಯಾಬಲದ ಬಗ್ಗೆ ಮಾತನಾಡುವ ಶಕ್ತಿ ನನಗಿಲ್ಲ. ನನ್ನ ಬಲ 135 ಮತ್ತು ನಾನು ಪಕ್ಷದ ಅಧ್ಯಕ್ಷ. ನನ್ನ ಅಧ್ಯಕ್ಷತೆಯಲ್ಲಿ ಪಕ್ಷ 135 ಸ್ಥಾನಗಳನ್ನು ಗೆದ್ದಿದೆ … Continued

ಉತ್ತರ ಪ್ರದೇಶ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲ 17 ಮೇಯರ್ ಸ್ಥಾನಗಳನ್ನು ಗೆದ್ದ ಬಿಜೆಪಿ

ಲಕ್ನೋ: ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 1,420 ಪಾಲಿಕೆ ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿ 813 ಸ್ಥಾನಗಳನ್ನು ಗೆದ್ದರೆ, ಪ್ರತಿಪಕ್ಷ ಸಮಾಜವಾದಿ ಪಕ್ಷ 191 ಮತ್ತು ಬಹುಜನ ಸಮಾಜ ಪಕ್ಷ 85 ಗೆದ್ದಿದೆ. ವಾರಾಣಸಿ, ಲಕ್ನೋ ಸೇರಿದಂತೆ ರಾಜ್ಯದಲ್ಲಿ ಅಯೋಧ್ಯೆ, ಝಾನ್ಸಿ, ಬರೇಲಿ, ಮಥುರಾ-ವೃಂದಾವನ, ಮೊರಾದಾಬಾದ್, ಸಹರಾನ್‌ಪುರ, ಪ್ರಯಾಗ್‌ರಾಜ್, ಅಲಿಗಢ, ಶಹಜಹಾನ್‌ಪುರ, ಗಾಜಿಯಾಬಾದ್, … Continued

ವೀಡಿಯೊ…: ಈಜುತ್ತಿರುವಾಗ ಹಿಪಪಾಟಮಸ್‌ ಬಾಯೊಳಗೆ ಹೋಗುತ್ತಿದ್ದ ಮೂವರು ಹುಡುಗರು, ಆದರೆ ಅದೃಷ್ಟ ರಕ್ಷಿಸಿದೆ

ಶಾರ್ಕುಗಳು, ಮೊಸಳೆ ಮತ್ತು ಇತರ ಕೆಲವು ಪ್ರಾಣಿಗಳು ಅಪಾಯಕಾರಿ ಎಂದು ಈಜಲು ಹೋಗುವವರಿಗೆ ತಿಳಿದಿರುತ್ತದೆ. ಅವರು ಪ್ರಧಾನವಾಗಿ ಈ ಪ್ರಾಣಿಗಳು ಕಂಡುಬರುವ ಪ್ರದೇಶಗಳಿಗೆ ಈಜಲು ಹೋಗುವುದಿಲ್ಲ. ಆದರೆ ಹಿಪಪಾಟಮಸ್‌ಗಳು ಉಂಟುಮಾಡುವ ಅಪಾಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅವುಗಳು ದೂರದಿಂದ ಮುದ್ದಾಗಿ ಮತ್ತು ಶಾಂತವಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಎದುರಾದ ಸಂದರ್ಭಗಳಲ್ಲಿ, ನಮ್ಮ ಜೀವಿತಾವಧಿಯನ್ನು ಸೆಕೆಂಡುಗಳಿಗೆ ಇಳಿಸಿಬಿಡುತ್ತವೆ.. ಟ್ವಿಟ್ಟರ್ … Continued

ಬಜರಂಗದಳ ವಿರುದ್ಧದ ಹೇಳಿಕೆಗೆ 100 ಕೋಟಿ ಮಾನನಷ್ಟ ಮೊಕದ್ದಮೆ: ಕಾಂಗ್ರೆಸ್ ಅಧ್ಯಕ್ಷ ಖರ್ಗೆಗೆ ಕೋರ್ಟ್ ಸಮನ್ಸ್

₹100 ಕೋಟಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಇತ್ತೀಚೆಗಷ್ಟೇ ನಡೆದ ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಬಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಖರ್ಗೆ ವಿರುದ್ಧ ಹಿಂದೂ ಸುರಕ್ಷಾ ಪರಿಷತ್ ಬಜರಂಗದಳ ಹಿಂದ್ ಸಂಸ್ಥಾಪಕ ಸಂಗ್ರೂರ್ ಮೂಲದ ಹಿತೇಶ ಭಾರದ್ವಾಜ್ ಅವರು ಸ್ಥಳೀಯ … Continued

ಇನ್ಮುಂದೆ ಮೊಬೈಲ್ ಕಳ್ಳತನವಾದ್ರೆ, ಕಳೆದುಕೊಂಡ್ರೆ ಗಾಬರಿಯಾಗ್ಬೇಕಿಲ್ಲ: ಸರ್ಕಾರಿ ಪೋರ್ಟಲ್ ಬಳಸಿಕೊಂಡು ಅದನ್ನು ನಿರ್ಬಂಧಿಸಬಹುದು, ಪತ್ತೆಹಚ್ಚಬಹುದು, ಹೇಗೆ ಎಂಬುದು ಇಲ್ಲಿದೆ

ನವದೆಹಲಿ: ನಿಮ್ಮ ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚವುದಕ್ಕೆ ಸಹಾಯ ಮಾಡಲು ಸರ್ಕಾರವು ಪೋರ್ಟಲ್ ಒಂದನ್ನು ಅನಾವರಣಗೊಳಿಸುತ್ತಿದೆ. ಸರ್ಕಾರವು ವೆಬ್‌ಸೈಟ್ ಅನ್ನು ಪ್ರಾರಂಭಿಸುತ್ತಿದೆ. ವೆಬ್‌ಸೈಟ್ sancharsaathi.gov.in – ಇದು ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡಲು ಅನುಮತಿಸುತ್ತದೆ. ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ದಿನವಾದ ಮೇ 17 ರಿಂದ ಪೋರ್ಟಲ್ … Continued