ಪ್ರತಿಪಕ್ಷಗಳ ಧ್ಯೇಯವಾಕ್ಯ ಕುಟುಂಬದ-ಕುಟುಂಬದಿಂದ-ಕುಟುಂಬಕ್ಕಾಗಿ: ವಿರೋಧ ಪಕ್ಷಗಳ ಒಗ್ಗಟ್ಟಿನ ಸಭೆ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ : ಇಂದು, ಮಂಗಳವಾರ ಬೆಂಗಳೂರಿನಲ್ಲಿ ಭ್ರಷ್ಟರ ಸಭೆ ನಡೆಯುತ್ತಿದೆ. ಪ್ರತಿಪಕ್ಷಗಳ ಧ್ಯೇಯವಾಕ್ಯ “ಕುಟುಂಬ ಮೊದಲು ಮತ್ತು ಅವರಿಗೆ ರಾಷ್ಟ್ರ ಏನೂ ಅಲ್ಲ, ಅವರ ಗಮನ ಕುಟುಂದ ಮೇಲೆ ಇದೆಯೇ ಹೊರತು ರಾಷ್ಟ್ರದ ಮೇಲಲ್ಲ” ಎಂದು ಬೆಂಗಳೂರಲ್ಲಿ ಸಭೆ ನಡೆಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ … Continued

ಹೊಡೆಯಬೇಡಿ ಎಂದು ಅಂಗಲಾಚುತ್ತಿದ್ದರೂ ದೆಹಲಿ ಪ್ರವಾಸಿಗನ ಬೆನ್ನಟ್ಟಿ ದೊಣ್ಣೆಯಿಂದ ಮನಸೋಇಚ್ಛೆ ಥಳಿಸಿದ ಹಲ್ಲೊಕೋರರು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆಗ್ರಾದಲ್ಲಿ, ತಾಜ್‌ಮಹಲ್‌ಗೆ ಭೇಟಿ ನೀಡಲು ನವದೆಹಲಿಯಿಂದ ಬಂದ ಪ್ರವಾಸಿಗನ ಮೇಲೆ ಲಾಠಿ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಲಾಗಿದೆ. ಆತನ ಕಾರು ಹಲ್ಲೆ ಮಾಡಿದವರೊಬ್ಬರ ಕಾರನ್ನು ಟಚ್‌ ಮಾಡಿದ ನಂತರ ಆತನ ಬೆನ್ನಟ್ಟಿ ಲಾಠಿ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಟ್ವಿಟ್ಟರ್ ನಲ್ಲಿ ವೀಡಿಯೊ ವೈರಲ್ ಆಗಿದೆ. ಹಲವಾರು … Continued

ಮಾನನಷ್ಟ ಮೊಕದ್ದಮೆ : ರಾಹುಲ್ ಗಾಂಧಿ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ನವದೆಹಲಿ; ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಧಿಸಿದ ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಮೇಲ್ಮನವಿಯನ್ನು ಜುಲೈ 21 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ತುರ್ತು ಪಟ್ಟಿಯನ್ನು ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ ನೇತೃತ್ವದ … Continued

ಕಾಶ್ಮೀರ: ಪೂಂಚ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನ ಸಿಂಧರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮಂಗಳವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ. ಮಾಹಿತಿಯ ಪ್ರಕಾರ, ಸೋಮವಾರ (ಜುಲೈ 17) ರಾತ್ರಿ 11:30 ರ ಸುಮಾರಿಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮೊದಲ ಮುಖಾಮುಖಿ ನಡೆದಿದ್ದು, ನಂತರ ಇತರ ರಾತ್ರಿ ಕಣ್ಗಾವಲು ಉಪಕರಣಗಳೊಂದಿಗೆ ಡ್ರೋನ್‌ಗಳನ್ನು … Continued

ಕೋಳಿ ರಕ್ತ ಬಳಸಿ ಉದ್ಯಮಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ 3 ಕೋಟಿ ರೂ. ವಸೂಲಿ ಮಾಡಿದ ಮಹಿಳೆ

ಮುಂಬೈ : ಮಹಿಳೆಯೊಬ್ಬರು ಕೋಳಿ ರಕ್ತವನ್ನು ಬಳಸಿ 64 ವರ್ಷದ ಉದ್ಯಮಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಅವರಿಂದ 3.26 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಮುಂಬೈ ಪೊಲೀಸರು 2021ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಮಹಿಳೆ ಮೋನಿಕಾ ಭಗವಾನ್ ಅಲಿಯಾಸ್ ದೇವ್ ಚೌಧರಿ ಮತ್ತು … Continued

ಟೋಲ್ ನಲ್ಲಿ ಮಹಿಳೆಯ ದಾದಾಗಿರಿ..: ಟೋಲ್ ಪಾವತಿಸಿ ಎಂದಿದ್ದಕ್ಕೆ ಸಿಬ್ಬಂದಿ ಕೂದಲು ಜಗ್ಗಾಡಿ, ಕುರ್ಚಿಯಿಂದ ನೆಲಕ್ಕೆ ಕೆಡಹಿದ ಮಹಿಳೆ | ದೃಶ್ಯ ಸೆರೆ

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬರು ಟೋಲ್ ಪ್ಲಾಜಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಲುಹರ್ಲಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಟೋಲ್ ಪಾವತಿ ಮಾಡುವಂತೆ ಟೋಲ್‌ ಸಿಬ್ಬಂದಿ ಹೇಳಿದ್ದಕ್ಕಾಗಿ ಮಹಿಳೆಯು ಟೋಲ್ ಪ್ಲಾಜಾ ಉದ್ಯೋಗಿ ಮಹಿಳೆಯ ಕೂದಲನ್ನುಹಿಡಿದು ಜಗ್ಗಿದ್ದಾಳೆ, ಎಳೆದಾಡಿದ್ದಾಳೆ ಮತ್ತು … Continued

ವಿರೋಧ ಪಕ್ಷಗಳ ಒಕ್ಕೂಟ VS ಬಿಜೆಪಿ ಮೈತ್ರಿ : ಪ್ರತಿಪಕ್ಷಗಳ ಸಭೆಗೆ ಸಮಾನಾಂತರವಾಗಿ ನಾಳೆ ಬಿಜೆಪಿ ನೇತೃತ್ವದಲ್ಲಿ 38 ಪಕ್ಷಗಳ ಎನ್‌ಡಿಎ ಸಮಾವೇಶ

ನವದೆಹಲಿ : ಮಂಗಳವಾರ (ಜುಲೈ 18) ದೆಹಲಿಯಲ್ಲಿ ನಡೆಯಲಿರುವ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಭಾಗವಹಿಸುವುದನ್ನು 38 ಪಕ್ಷಗಳ ನಾಯಕರು ಖಚಿತಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಎನ್‌ಡಿಎ ಬೆಳವಣಿಗೆ ಕುರಿತು ಮಾತನಾಡಿದ ಅವರು, ಎನ್‌ಡಿಎ ಮೈತ್ರಿ ಅಧಿಕಾರಕ್ಕಾಗಿ ಅಲ್ಲ, ಈ … Continued

ಜಮ್ಮು-ಕಾಶ್ಮೀರ ಶಾಕರ್…: 27 ಜನರನ್ನು ಮದುವೆಯಾಗಿ ಹಣದೊಂದಿಗೆ ಪರಾರಿಯಾದ ಚಾಲಾಕಿ ಮಹಿಳೆ…!

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮಹಿಳೆಯೊಬ್ಬಳು ಮದುವೆಯ ಹೆಸರಿನಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ 27 ಪುರುಷರನ್ನು ವಂಚಿಸಿದ್ದಾಳೆ…! ಬುದ್ಗಾಮ್ ಜಿಲ್ಲೆಯ 12 ಜನರು ತಮ್ಮ ಪತ್ನಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗಳಲ್ಲಿ ದೂರು ನೀಡಿ ತಮ್ಮ ಜೊತೆಗಿರುವ ಮಹಿಳೆಯ ಫೋಟೋವನ್ನು ಪೊಲೀಸರಿಗೆ ತೋರಿಸಿದ ನಂತರ ಅವಳಿ ಎಲ್ಲರಿಗೂ ಮೋಸ ಮಾಡಿರುವುದು ಗೊತ್ತಾಗಿದೆ. ಏಕೆಂದರೆ ಅವರ ಎಲ್ಲಾ ಫೋಟೋಗಳಲ್ಲಿ ಮಹಿಳೆ … Continued

ಖ್ಯಾತ ಗಣಿತಜ್ಞೆ ಡಾ. ಮಂಗಳಾ ನಾರ್ಲಿಕರ್ ನಿಧನ

ಪುಣೆ : ಖ್ಯಾತ ಗಣಿತಜ್ಞೆ ಡಾ.ಮಂಗಳಾ ಜೆ.ನಾರ್ಲಿಕರ್ ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ ಎಂದು ಮಾಜಿ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಕಳೆದ ಒಂದು ವರ್ಷದಿಂದ ಕ್ಯಾನ್ಸರ್‌ ಜೊತೆ ಹೋರಾಟ ನಡೆಸಿದ್ದರು. ಅವರು ಪತಿ, ಪ್ರಸಿದ್ಧ ಖಗೋಳ ಭೌತಶಾಸ್ತ್ರಜ್ಞ ಮತ್ತು ವಿಶ್ವಶಾಸ್ತ್ರಜ್ಞ ಡಾ ಜಯಂತ್ ನಾರ್ಲಿಕರ್ ಮತ್ತು ಮೂವರು ಪುತ್ರಿಯರಾದ ಲೀಲಾವತಿ, … Continued

ಎರಡನೇ ಬಾರಿಗೆ ಚಂದ್ರಯಾನ-3ರ ಕಕ್ಷೆ ಎತ್ತರಿಸಿದ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎರಡನೇ ಬಾರಿಗೆ ಚಂದ್ರಯಾನ-3 ಮಿಷನ್‌ನ ಕಕ್ಷೆಯನ್ನು ಯಶಸ್ವಿಯಾಗಿ ಏರಿಸಿದೆ. ಬಾಹ್ಯಾಕಾಶ ನೌಕೆಯು ಈಗ 200 ಕಿಲೋಮೀಟರ್‌ಗಿಂತಲೂ ಹೆಚ್ಚು ಪರಿಧಿಯಲ್ಲಿ ಹಾರುತ್ತಿದೆ. ಭೂಮಿಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಳ್ಳಲು ಮತ್ತು ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಲು ಅಗತ್ಯವಾದ ನಿಖರವಾದ ಎತ್ತರವನ್ನು ಸಾಧಿಸಲು, ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಇನ್ನೂ ಮೂರು ಕಕ್ಷೆಯನ್ನು … Continued