ಟೊಮೆಟೊ ಬೆಲೆ ಭಾರೀ ಹೆಚ್ಚಳ: ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ಸಿಗುವಂತೆ ಮಾಡಲು ಈ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಟೊಮೆಟೊ ದರಗಳು ದಾಖಲೆ ಏರಿಕೆ ಕಂಡಿದ್ದು, ವಾರಗಳಿಂದ ಪ್ರತಿ ಕಿಲೋಕ್ಕೆ 100 ರೂಪಾಯಿ ದಾಟಿದೆ. ಕೇಂದ್ರ ಸರ್ಕಾರ ಇಂದು ಟೊಮೆಟೊ ಬೆಲೆ ನಿಯಂತ್ರಣಕ್ಕೆ ಕ್ರಮಗಳನ್ನು ಪ್ರಕಟಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊಗಳನ್ನು ಖರೀದಿಸಿ ಅದನ್ನು ಟೊಮೆಟೊ ದರ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ … Continued

2010ರಲ್ಲಿ ಕೇರಳದ ಪ್ರೊಫೆಸರ್ ಕೈ ಕಡಿದ ಪ್ರಕರಣ : ಪಿಎಫ್‌ಐನ ಆರು ಮಂದಿಗೆ ಶಿಕ್ಷೆ

ಕೊಚ್ಚಿ: 2010ರಲ್ಲಿ ಕೇರಳದ ಕಾಲೇಜು ಪ್ರಾಧ್ಯಾಪಕರೊಬ್ಬರ ಕೈ ಕೊಚ್ಚಿದ ಪ್ರಕರಣದಲ್ಲಿ ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಾಗಿರುವ ಆರು ಮಂದಿಯನ್ನು ಅಪರಾಧಿಗಳೆಂದು ಕೇರಳದ ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಪ್ರಕರಣದ ಎರಡನೇ ಹಂತದ ವಿಚಾರಣೆಯಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಅನಿಲ ಕೆ. ಭಾಸ್ಕರ ಅವರು ಭಾರತೀಯ … Continued

8 ವರ್ಷದಲ್ಲಿ 7 ಬಾರಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ : ಪ್ರತಿ ಬಾರಿಯೂ ತಾನೇ ಜಾಮೀನು ನೀಡಿ ಬಿಡಿಸಿಕೊಂಡಳು..!

ಅಹಮದಾಬಾದ್‌ : ಗುಜರಾತ್‌ನ ಮೆಹಸಾನಾ ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯಕ್ಕಾಗಿ ಎಂಟು ವರ್ಷಗಳಲ್ಲಿ ಏಳು ಬಾರಿ ಮಹಿಳೆಯೊಬ್ಬರು ಪತಿಯನ್ನು ಬಂಧಿಸಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಾಗೂ ವಿಶೇಷವೆಂದರೆ ಪ್ರತಿ ಸಲ ತನ್ನ ಪತಿ ಬಂಧಿತನಾದಾಗ ಅವಳೇ ಗ್ಯಾರಂಟಿ ನೀಡಿ ತನ್ನ ಪತಿಯ ಬಿಡುಗಡೆಗೆ ವ್ಯವಸ್ಥೆ ಮಾಡುತ್ತಿದ್ದಳು ಎಂದು ವರದಿಯಾಗಿದೆ. ಮೆಹ್ಸಾನಾದಲ್ಲಿ ಮಹಿಳೆ ಕೌಟುಂಬಿಕ ಕಲಹಕ್ಕಾಗಿ ಕಳೆದ … Continued

ಹಣೆಗೆ ಬಿಂದಿ ಇಟ್ಟುಕೊಂಡು ಶಾಲೆಗೆ ಬಂದಿದ್ದಕ್ಕೆ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ ಶಿಕ್ಷಕಿ : ಮನನೊಂದು ಬಾಲಕಿ ಆತ್ಮಹತ್ಯೆ

ಧನಬಾದ್‌ : ಜಾರ್ಖಂಡ್‌ನ ಧನಬಾದ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಹಣೆಯ ಮೇಲೆ ‘ಬಿಂದಿ’ ಇಟ್ಟುಕೊಂಡು ಶಾಲೆಗೆ ಬಂದಿದ್ದಕ್ಕಾಗಿ ಶಿಕ್ಷಕರು ಕಪಾಳಮೋಕ್ಷ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಾಂಶುಪಾಲರು ಮತ್ತು ಶಿಕ್ಷಕರಿಬ್ಬರನ್ನು ಧನಬಾದ್‌ ಪೊಲೀಸರು ಬಂಧಿಸಿದ್ದಾರೆ. ಧನಬಾದ್ ಪೊಲೀಸರ ಪ್ರಕಾರ, ಉಷಾ ಕುಮಾರಿ (16) ಸೋಮವಾರ ತನ್ನ ಹಣೆಗೆ ‘ಬಿಂದಿ’ ಇಟ್ಟುಕೊಂಡು ಶಾಲೆಗೆ ಬಂದಿದ್ದಕ್ಕಾಗಿ ಶಾಲೆಯಲ್ಲಿ … Continued

ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳ ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಸಿಗೆ ಭರ್ಜರಿ ಜಯ: ಬಿಜೆಪಿಗೆ ಲಾಭ ಆದ್ರೆ 2 ನೇ ಸ್ಥಾನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪಂಚಾಯತ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸ್ವೀಪ್‌ ಮಾಡಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲಾ ಮೂರು ಹಂತಗಳಲ್ಲಿ ಬಹುಮತ ಗಳಿಸಿದೆ. ಟಿಎಂಸಿ 3,317 ಗ್ರಾಮ ಪಂಚಾಯತಗಳಲ್ಲಿ 2,552, 232 ಪಂಚಾಯಿತಿ ಸಮಿತಿಗಳು ಮತ್ತು 20 ಜಿಲ್ಲಾ ಪರಿಷತ್‌ಗಳಲ್ಲಿ 12 ಗೆದ್ದಿದೆ. ಬಿಜೆಪಿ ಕೇವಲ 212 ಗ್ರಾಮ ಪಂಚಾಯತಗಳು, 7 ಪಂಚಾಯಿತಿ … Continued

ಸುಪ್ರೀಂ ಕೋರ್ಟಿನಲ್ಲಿ ಆರ್ಟಿಕಲ್ 370 ವಿರುದ್ಧ ಅರ್ಜಿ : ಯು-ಟರ್ನ್ ಹೊಡೆದ ಐಎಎಸ್‌ ಅಧಿಕಾರಿ- ಮಾಜಿ ವಿದ್ಯಾರ್ಥಿ ನಾಯಕಿ

ನವದೆಹಲಿ: ಐಎಎಸ್ ಅಧಿಕಾರಿ ಶಾ ಫೈಸಲ್ ಮತ್ತು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಶೋರಾ ಅವರು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳನ್ನು ಹಿಂಪಡೆದಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಮಂಗಳವಾರ (ಜುಲೈ ೧೧) … Continued

ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ವಹಿವಾಟಿನ ಮೇಲೆ 28% ತೆರಿಗೆ ವಿಧಿಸಲು ಜಿಎಸ್‌ ಟಿ ಕೌನ್ಸಿಲ್ ನಿರ್ಧಾರ

ನವದೆಹಲಿ: ಆನ್‌ಲೈನ್ ಗೇಮಿಂಗ್ ಕಂಪನಿಗಳು, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳ ವಹಿವಾಟಿನ ಮೇಲೆ ಶೇಕಡಾ 28 ರಷ್ಟು ತೆರಿಗೆಯನ್ನು ವಿಧಿಸಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಮಂಗಳವಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವರ ನೇತೃತ್ವದ ಸಮಿತಿಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳನ್ನು … Continued

ವೀಡಿಯೊ..| ಸ್ವಾಮಿ ವಿವೇಕಾನಂದರ ಬಗ್ಗೆ ಅನುಚಿತ ಹೇಳಿಕೆ: ತನ್ನ ಸನ್ಯಾಸಿಗೆ ಒಂದು ತಿಂಗಳು ನಿಷೇಧಿಸಿದ ಇಸ್ಕಾನ್

ನವದೆಹಲಿ: ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಬಗ್ಗೆ ಅನುಚಿತವಾದ ಕಾಮೆಂಟ್ ಮಾಡಿದ್ದಕ್ಕಾಗಿ ತಮ್ಮ ಸಂಸ್ಥೆಯ ಸನ್ಯಾಸಿಗಳಲ್ಲಿ ಒಬ್ಬರಾದ ಅಮೋಘ ಲೀಲಾ ದಾಸ್ ಅವರನ್ನು ನಿಷೇಧಿಸಿರುವುದಾಗಿ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಮಂಗಳವಾರ ತಿಳಿಸಿದೆ. ಅಮೋಘ್ ಲೀಲಾ ದಾಸ್ ಆಧ್ಯಾತ್ಮಿಕ ಪ್ರೇರಕ ಭಾಷಣಕಾರರಾಗಿದ್ದು, ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯವಾಗಿವೆ. ಅಮೋಘ … Continued

ಇ.ಡಿ ನಿರ್ದೇಶಕರ 3ನೇ ಅಧಿಕಾರಾವಧಿ ವಿಸ್ತರಣೆ ಕಾನೂನುಬಾಹಿರ: ಸುಪ್ರೀಂ ಕೋರ್ಟ್

ನವದೆಹಲಿ : ಜಾರಿ ನಿರ್ದೇಶನಾಲಯ(ಇಡಿ)ದ ಮುಖ್ಯಸ್ಥರಾಗಿ ಸಂಜಯಕುಮಾರ ಮಿಶ್ರಾ ಅವರ ಅಧಿಕಾರಾವಧಿಯ ಮೂರನೇ ವಿಸ್ತರಣೆಯು “ಅಕ್ರಮ” ಮತ್ತು 2021 ರಲ್ಲಿ ತನ್ನ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಆದಾಗ್ಯೂ, ಸರ್ವೋಚ್ಚ ನ್ಯಾಯಾಲಯವು ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಅನುಮತಿ ನೀಡಿದೆ. ಅಲ್ಲದೆ, ವಿಸ್ತರಣೆಗೊಂಡಿದ್ದ ಅವರ ಅಧಿಕಾರಾವಧಿಯನ್ನು ಜುಲೈ 31ಕ್ಕೆ ಮೊಟಕುಗೊಳಿಸಿದೆ. 1984ರ ಬ್ಯಾಚ್‌ನ … Continued

ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಹಿಂದೂ ಪದ್ಧತಿಗಳನ್ನು ಪ್ರೀತಿಸುತ್ತೇನೆ, ನಾನೀಗ ಸಸ್ಯಾಹಾರಿ’: ಪ್ರೇಮಿಗಾಗಿ ಮಕ್ಕಳ ಸಹಿತ ಭಾರತಕ್ಕೆ ಬಂದ ಪಾಕ್‌ ಮಹಿಳೆ

ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ತನ್ನ ಪ್ರೇಮಿ ಸಚಿನ್ ಜೊತೆ ಇರಲು ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಹೊರಗಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ತಾನು ಭಾರತೀಯ ಸಂಸ್ಕೃತಿಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇನೆ ಮತ್ತು ಯಾವತ್ತಿಗೂ ಪಾಕಿಸ್ತಾನಕ್ಕೆ ಮರಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. . 2019 ರಲ್ಲಿ … Continued