ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮೇಲೆ ಗುಂಡಿನ ದಾಳಿ

ಸಹರಾನಪುರ : ಇಂದು ಬುಧವಾರ (ಜೂನ್‌ 28) ಉತ್ತರ ಪ್ರದೇಶದ ಸಹರಾನಪುರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೀಮ್ ಆರ್ಮಿ ಮುಖ್ಯಸ್ಥರು ಬೆಂಬಲಿಗರ ಮನೆಯಲ್ಲಿ ನಡೆದ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಹರಾನ್‌ಪುರದಲ್ಲಿದ್ದರು. ಆಜಾದ್ ತನ್ನ … Continued

ಜುಲೈ 13 ರಂದು ಚಂದ್ರಯಾನ-3 ಭಾರತದ ಅತ್ಯಂತ ಭಾರವಾದ ರಾಕೆಟ್ ಮೂಲಕ ಉಡಾವಣೆ

ನವದೆಹಲಿ: ವರದಿಗಳ ಪ್ರಕಾರ ಚಂದ್ರಯಾನ-3 ಮಿಷನ್ ಜುಲೈ 13 ರಂದು ಉಡಾವಣೆಯಾಗಲಿದೆ, ಇಸ್ಟ್ರೋ ಮುಖ್ಯಸ್ಥ ಎಸ್ ಸೋಮನಾಥ ಮಿಷನ್‌ ಉಡಾವಣೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಜುಲೈ 13 ರಂದು ಮಧ್ಯಾಹ್ನ 2:30 ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಯಾನ-3 ಮಿಷನ್ ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ ಮಾರ್ಕ್-IIIರಲ್ಲಿ … Continued

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹಿಜಾಬ್? : ಪರ್ಯಾಯ ಆಯ್ಕೆ ಕೇಳಿ ಪತ್ರ ಬರೆದ 7 ಎಂಬಿಬಿಎಸ್‌ ವಿದ್ಯಾರ್ಥಿನಿಯರು

ತಿರುವನಂತಪುರ : ತಿರುವನಂತಪುರ ವೈದ್ಯಕೀಯ ಕಾಲೇಜಿನ ಏಳು ವಿದ್ಯಾರ್ಥಿನಿಯರ ಗುಂಪು ಆಪರೇಷನ್ ಥಿಯೇಟರ್‌ಗಳಲ್ಲಿ ಹಿಜಾಬ್ ಧರಿಸಲು ಅನುಮತಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಾಗೂ ಆಪರೇಷನ್ ಥಿಯೇಟರ್‌ನೊಳಗೆ ಉದ್ದತೋಳಿನ ಸ್ಕ್ರಬ್ ಜಾಕೆಟ್‌ಗಳು (ಶಸ್ತ್ರಚಿಕಿತ್ಸಕರು ಧರಿಸಿರುವ ವಿಶೇಷ ನೈರ್ಮಲ್ಯ ಉಡುಪು) ಮತ್ತು ಸರ್ಜಿಕಲ್ ತಲೆಗವಸುಗಳನ್ನು ಧರಿಸಲು ಪ್ರಾಂಶುಪಾಲರಿಂದ ಅನುಮತಿ ಕೋರಿದ್ದಾರೆ. ವಿದ್ಯಾರ್ಥಿಗಳ ಪ್ರಕಾರ ಹಿಜಾಬ್‌ ತಮ್ಮ ಧಾರ್ಮಿಕ ನಂಬಿಕೆಯ … Continued

ರಾಜ್ಯಸಭೆಯ 10 ಸ್ಥಾನಗಳಿಗೆ ಜುಲೈ 24ರಂದು ಚುನಾವಣೆ

ನವದೆಹಲಿ: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೇರಿದಂತೆ ರಾಜ್ಯಸಭೆಯ 10 ಸದಸ್ಯರು ಜುಲೈ, ಆಗಸ್ಟ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಆ ಸ್ಥಾನಗಳಿಗೆ ಜುಲೈ 24ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ. ಗೋವಾದಿಂದ ಒಬ್ಬರು, ಗುಜರಾತ್‌ನಿಂದ ಮೂವರು, ಪಶ್ಚಿಮ ಬಂಗಾಳದಿಂದ ಆರು ಸದಸ್ಯರು ನಿವೃತ್ತಿಯಾಗುತ್ತಿದ್ದು, ಈ ಆಯ್ಕೆಗೆ ಚುನಾವಣೆ ನಡೆಯಲಿದೆ. ಮಂಗಳವಾರ ಈ ಬಗ್ಗೆ ಘೋಷಣೆ … Continued

ನಡು ರಸ್ತೆಯಲ್ಲೇ ಯುವತಿಗೆ ಕತ್ತಿಯಿಂದ ಹಲ್ಲೆ ಮಾಡಿದ ವ್ಯಕ್ತಿ : ಸ್ಥಳೀಯರಿಂದ ರಕ್ಷಣೆ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳವಾರ ಪುಣೆಯ ಸದಾಶಿವ ಪೇಟದಲ್ಲಿ 19 ವರ್ಷದ ಯುವತಿಯ ಮೇಲೆ ಕತ್ತಯಿಂದ ಹಲ್ಲೆ ನಡೆಸಲಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸಂತ್ರಸ್ತೆಯ ತಲೆ ಮತ್ತು ಕೈಗೆ ಗಾಯಗಳಾಗಿದ್ದು, ವೈದ್ಯಕೀಯ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷದ ಸಿಸಿಟಿವಿ ಫೂಟೇಜ್‌ನಲ್ಲಿ, ದಾಳಿಕೋರ ಜನನಿಬಿಡ ರಸ್ತೆಯಲ್ಲಿ ಆಯುಧದೊಂದಿಗೆ ಮಹಿಳೆಯನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ದಾಳಿಕೋರ ಯುವತಿಗೆ … Continued

‘ಆದಿಪುರುಷ’ ಸಿನೆಮಾ ವಿವಾದದ ನಡುವೆ, ರಮಾನಂದ ಸಾಗರ ‘ರಾಮಾಯಣ’ ಧಾರವಾಹಿ ಈ ದಿನಾಂಕದಿಂದ ಟಿವಿಯಲ್ಲಿ ಮತ್ತೆ ಪ್ರಸಾರ

ಮುಂಬೈ: ಜೂನ್ 16 ರಂದು ಬಿಡುಗಡೆಯಾದ ಆದಿಪುರುಷ ಚಿತ್ರಕ್ಕೆ ಪ್ರೇಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಭರ್ಜರಿ ಪ್ರಚಾರ ಪಡೆದು ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರವು ದೇಶದಾದ್ಯಂತ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಕಳಪೆ ವಿಎಫ್‌ಎಕ್ಸ್‌ನಿಂದ ಹಿಡಿದು ಡೈಲಾಗ್‌ಗಳ ವರೆಗೆ ಚಿತ್ರವು ಸಿನಿಪ್ರೇಮಿಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಇದರ ಮಧ್ಯೆ, ರಮಾನಂದ್ ಸಾಗರ್ ಅವರ ಜನಪ್ರಿಯ ಟಿವಿ ಧಾರಾವಾಹಿ … Continued

ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗಾಯಗೊಂಡ ನಂತರ ವೈದ್ಯರ ಸಲಹೆ ಧಿಕ್ಕರಿಸಿ ಗಾಲಿಕುರ್ಚಿಯಲ್ಲಿ ಆಸ್ಪತ್ರೆಯಿಂದ ಹೊರನಡೆದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಮಂಗಳವಾರ ಉತ್ತರ ಬಂಗಾಳದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ನಂತರ ಅವರ ಮೊಣಕಾಲು ಮತ್ತು ಸೊಂಟಕ್ಕೆ ಗಾಯವಾಗಿದೆ. ಆದರೆ, ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಉಳಿಯುವಂತೆ ವೈದ್ಯರ ಸಲಹೆ ತಿರಸ್ಕರಿಸಿದ ಅವರು ತಮ್ಮ ಮನೆಯಲ್ಲೇ ಚಿಕಿತ್ಸೆ ಮುಂದುವರಿಸುವುದಾಗಿ ಹೇಳಿ ಗಾಲಿಕುರ್ಚಿಯಲ್ಲೇ ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ ಎಂದು ವರದಿಯಾಗಿದೆ. ಕೋಲ್ಕತ್ತಾದ … Continued

ಹಿಂಸಾಚಾರ ಪೀಡಿತ ಮಣಿಪುರಕ್ಕೆ ಜೂನ್ 29 ರಂದು ರಾಹುಲ್ ಗಾಂಧಿ ಭೇಟಿ

ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಜೂನ್ 29 ರಿಂದ 30ರ ವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಮಂಗಳವಾರ ತಿಳಿಸಿದ್ದಾರೆ. ರಾಹುಲ್‌ ಗಾಂಧಿಯವರು ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಇಂಫಾಲ್ ಮತ್ತು ಚುರಚಂದಪುರದಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ : ರಿಯಲ್ ಎಸ್ಟೇಟ್ ಸಂಸ್ಥೆ ಸೂಪರ್‌ಟೆಕ್‌ ಅಧ್ಯಕ್ಷನ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಕಂಪನಿ ಸೂಪರ್‌ಟೆಕ್‌ನ ಅಧ್ಯಕ್ಷ ಆರ್‌.ಕೆ. ಅರೋರಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ವರದಿಯಾಗಿದೆ. ವರದಿ ಪ್ರಕಾರ, ಮಂಗಳವಾರ ನಡೆದ ಮೂರನೇ ಸುತ್ತಿನ ವಿಚಾರಣೆಯ ನಂತರ ಅರೋರಾ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. … Continued

ಕ್ಯಾಮರಾದಲ್ಲಿ ಕಂಡ ಐವರು ದರೋಡೆಕೋರರನ್ನು ಹಿಡಿಯಲು 1,600 ಮಂದಿಯನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು…!

ನವದೆಹಲಿ: ಪ್ರಗತಿ ಮೈದಾನದ ಸುರಂಗ ಮಾರ್ಗದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರಾತ್ರಿ ಗಸ್ತಿನಲ್ಲಿ ಸುಮಾರು 1,600 ಜನರನ್ನು ಕರೆದೊಯ್ದು ವಿಚಾರಣೆ ನಡೆಸಿದ್ದು, ಅಂತಿಮವಾಗಿ ಈ ₹ 2 ಲಕ್ಷ ದರೋಡೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಾಂಡಿ ಚೌಕ್ ಮೂಲದ ಓಮಿಯಾ ಎಂಟರ್‌ಪ್ರೈಸಸ್‌ನ ಡೆಲಿವರಿ ಏಜೆಂಟ್ ಪಟೇಲ್ ಸಜನಕುಮಾರ … Continued