ನೂತನ ಸಂಸತ್ತಿನ ಉದ್ಘಾಟನೆ: ಮೇ 28ರ ಸಮಾರಂಭದಲ್ಲಿ ಯಾವ ಪಕ್ಷಗಳು ಪಾಲ್ಗೊಳ್ಳುತ್ತಿವೆ..? ಯಾವ್ಯಾವ ಪಕ್ಷಗಳು ಬಹಿಷ್ಕರಿಸುತ್ತಿವೆ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಕಟ್ಟಡವನ್ನು ಉದ್ಘಾಟನೆ ಮಾಡುವುದನ್ನು ಪ್ರತಿಪಕ್ಷಗಳು ವಿರೋಧಿಸುತ್ತಿರುವ ಕಾರಣ ನೂತನ ಸಂಸತ್ ಭವನದ ಉದ್ಘಾಟನೆ ಈಗ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಕಟ್ಟಡವನ್ನು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂಬುದು ವಿರೋಧ ಪಕ್ಷದ ಅಭಿಪ್ರಾಯವಾಗಿದೆ. ಪ್ರತಿಭಟನೆಯ ಸಂಕೇತವಾಗಿ, 21 ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ, … Continued

ಶನಿವಾರ 24 ಶಾಸಕರಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ: ಮೂಲಗಳು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಇನ್ನೂ 24 ಸಚಿವರು ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಪಕ್ಷದ ಕೇಂದ್ರ ನಾಯಕರ ನಡುವೆ ನಡೆದ ಸಭೆಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಗಳು ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ … Continued

ತಿಹಾರ್ ಜೈಲಿನಲ್ಲಿ ಕುಸಿದು ಬಿದ್ದ ಎಎಪಿ ನಾಯಕ ಸತ್ಯೇಂದ್ರ ಜೈನ್‌; ಆಸ್ಪತ್ರೆಗೆ ದಾಖಲು

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಅವರು ದೆಹಲಿಯ ತಿಹಾರ್‌ ಜೈಲಿನ ಸ್ನಾನಗೃಹದಲ್ಲಿ ಇಂದು, ಗುರುವಾರ (ಮೇ 25) ಕುಸಿದು ಬಿದ್ದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಸತ್ಯೇಂದ್ರ ಜೈನ್‌ ಅವರು ಬೆಳಿಗ್ಗೆ … Continued

ಇನ್‍ಸ್ಟಾಗ್ರಾಮ್‍ನಲ್ಲಿ 25 ಕೋಟಿ ಫಾಲೋವರ್ಸ್‌ : ದಾಖಲೆ ಬರೆದ ವಿರಾಟ್ ಕೊಹ್ಲಿ

ನವದೆಹಲಿ : ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ ಪ್ರದರ್ಶಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ, ಇದೀಗ ತನ್ನ ಇನ್‍ಸ್ಟಾಗ್ರಾಮ್‍ ಫಾಲೋವರ್ಸ್‍ಗಳ ಸಂಖ್ಯೆಯಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ವಿರಾಟ್‌ ಕೊಹ್ಲಿ ಇನ್‍ಸ್ಟಾಗ್ರಾಮ್‍ ಖಾತೆಯನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ ಇದೀಗ 25 ಕೋಟಿ ದಾಟಿದೆ. ಆ ಮೂಲಕ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನಲ್ಲಿ 25 ಕೋಟಿ … Continued

‘ನಮ್ಮ ದೇಶದ ಸಂಸತ್‌ ಭವನವನ್ನು ಭಾರತದ ಪ್ರಧಾನಿ ಉದ್ಘಾಟನೆ ಮಾಡದೆ ಪಾಕಿಸ್ತಾನದ ಪ್ರಧಾನಿ ಮಾಡುತ್ತಾರೆಯೇ’ ? : ವಿಪಕ್ಷಗಳಿಗೆ ಕಾಂಗ್ರೆಸ್‌ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣನ್‌ ಪ್ರಶ್ನೆ

ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಪ್ರತಿಪಕ್ಷಗಳು ಮರುಪರಿಶೀಲಿಸುವಂತೆ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣನ್ ಮನವಿ ಮಾಡಿದ್ದಾರೆ. ಹೊಸ ಸಂಸತ್ ಭವನವನ್ನು ಅನಾವರಣಗೊಳಿಸುವ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಸೇರಿದಂತೆ 20 ಪ್ರತಿಪಕ್ಷಗಳು ಘೋಷಿಸಿದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಬಂದಿದೆ. ಪ್ರಧಾನಿ ಮೋದಿಯವರ ನೀತಿಗಳನ್ನು ವಿರೋಧಿಸುವ ಹಕ್ಕು ಪ್ರತಿಪಕ್ಷಗಳಿಗೆ ಇದೆ. ಆದರೆ … Continued

ಬಿಹಾರ ಮಾದರಿ ಅಳವಡಿಕೆ, 475 ಸ್ಥಾನಗಳಿಗೆ ಯೋಜನೆ ; 2024ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ ರಣತಂತ್ರ ಏನು..?

ಲೋಕಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದೆ. ಈ ನಡುವೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ 2024ರ ಲೋಕಸಭೆ ಚುನಾವಣೆಗೆ ತಮ್ಮ ಚುನಾವಣಾ ಪ್ಲಾನ್ ಶುರು ಮಾಡಿದ್ದು, ಪ್ರತಿಪಕ್ಷಗಳು ಬಿಜೆಪಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿವೆ. ಏತನ್ಮಧ್ಯೆ, ಪ್ರತಿಪಕ್ಷಗಳು ‘ಒಂದು ಸ್ಥಾನಕ್ಕೆ ಒಬ್ಬ ಅಭ್ಯರ್ಥಿ’ ಎಂಬ ಸೂತ್ರವನ್ನು ಸಿದ್ಧಪಡಿಸಿವೆ. ಇದು ಅನುಷ್ಠಾನವಾದರೆ ಇದರ ಅಡಿಯಲ್ಲಿ … Continued

ವಿಜ್ಞಾನದ ತತ್ವಗಳು ವೇದಗಳಿಂದ ಬಂದಿವೆ, ಆದರೆ ಪಾಶ್ಚಾತ್ಯ ಜ್ಞಾನದಂತೆ ಪ್ರತಿಬಿಂಬಿಸಲಾಗಿದೆ: ಇಸ್ರೋ ಅಧ್ಯಕ್ಷ ಸೋಮನಾಥ

ಬೀಜಗಣಿತ, ವರ್ಗಮೂಲಗಳು, ಸಮಯದ ಪರಿಕಲ್ಪನೆಗಳು, ವಾಸ್ತುಶಿಲ್ಪ, ಬ್ರಹ್ಮಾಂಡದ ರಚನೆ, ಲೋಹಶಾಸ್ತ್ರ, ವಾಯುಯಾನ ಇವುಗಳ ಮೂಲತತ್ವಗಳು ಮೊದಲು ವೇದಗಳಲ್ಲಿ ಕಂಡುಬಂದವು, ಇವು ಅರಬ್ ದೇಶಗಳ ಮೂಲಕ ಯುರೋಪಿಗೆ ಪ್ರಯಾಣಿಸಿ, ನಂತರ ಪಶ್ಚಿಮ ದೇಶಗಳ ವಿಜ್ಞಾನಿಗಳ ಆವಿಷ್ಕಾರಗಳಾಗಿ ಪ್ರತಿಪಾದಿಸಲ್ಪಟ್ಟವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ ಅವರು ಬುಧವಾರ ಹೇಳಿದ್ದಾರೆ. ಬಾಹ್ಯಾಕಾಶ ಇಲಾಖೆಯ … Continued

ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ 15 ಪಕ್ಷಗಳು

ನವದೆಹಲಿ: 19 ವಿರೋಧ ಪಕ್ಷಗಳು ನೂತನ ಸಂಸತ್ತಿನ ಭವನದ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ ನಂತರ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆ ಕುರಿತಾದ ಗದ್ದಲವು ತೀವ್ರಗೊಂಡಿದೆ, ಆದರೆ ಇದೇ ವೇಳೆ 15 ಪಕ್ಷಗಳು ಮೇ 28 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಶಿವಸೇನೆ (ಏಕನಾಥ್ … Continued

ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಅವಮಾನ : ನೂತನ ಸಂಸತ್ ಭವನ ಉದ್ಘಾಟನೆ ಬಹಿಷ್ಕರಿಸಲು ಮುಂದಾದ ಪ್ರತಿಪಕ್ಷಗಳಿಗೆ ಎನ್‌ಡಿಎ ತರಾಟೆ

ನವದೆಹಲಿ: ಮೇ 28 ರಂದು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವ ವಿರೋಧ ಪಕ್ಷಗಳ ನಿರ್ಧಾರವನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬುಧವಾರ ಖಂಡಿಸಿದೆ. “ಈ ಕೃತ್ಯವು ಕೇವಲ ಅಗೌರವವಲ್ಲ; ಇದು ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಘೋರವಾದ ಅವಮಾನವಾಗಿದೆ” ಎಂದು ಎನ್‌ಡಿಎ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. … Continued