ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಕಾರು ಎಳೆದೊಯ್ದ ವೀಡಿಯೊ ಹೊರಬಿತ್ತು| ವೀಡಿಯೊ

ನವದೆಹಲಿ: ಪಾನಮತ್ತ ಚಾಲಕನೊಬ್ಬ ತನಗೆ ಕಿರುಕುಳ ನೀಡಿ ಎಳೆದೊಯ್ದಿದ್ದಾನೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆರೋಪಿಸಿದ ಒಂದು ದಿನದ ನಂತರ, ಘಟನೆಯದ್ದು ಎಂದು ಹೇಳಲಾದ ವೀಡಿಯೊ ಹೊರಬಿದ್ದಿದೆ. ವಾಹನದ ಕಿಟಕಿಗೆ ತನ್ನ ಕೈಯನ್ನು ಸಿಕ್ಕಿಸಿ ಎಐಐಎಂಎಸ್ ಹೊರಗೆ 10-15 ಮೀಟರ್ ತನ್ನ ಕಾರಿನಿಂದ ಎಳೆದೊಯ್ದಿದ್ದಾನೆ ಎಂದು ಆರೋಪಿಸಿ ಒಂದು ದಿನದ ನಂತರ … Continued

40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ 88 ವರ್ಷದ ವೃದ್ಧ 5 ಕೋಟಿ ರೂಪಾಯಿ ಲಾಟರಿ ಬಹುಮಾನ ಗೆದ್ದ

ಪಂಜಾಬ್‌ನ ದೇರಾಬಸ್ಸಿಯಲ್ಲಿ 88 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ರಾತ್ರೋರಾತ್ರಿ ಅದೃಷ್ಟ ಖುಲಾಯಿಸಿದೆ, ಅವರು ಬುಧವಾರ 5 ಕೋಟಿ ರೂ. ಲಾಟರಿ ಬಂಪರ್‌ ಬಹುಮಾನ ಗೆದ್ದಿದ್ದಾರೆ. ಸಾಧಾರಣ ಹಿನ್ನೆಲೆಯಿಂದ ಬಂದ ಅವರು ದೇರಾಬಸ್ಸಿ ಪ್ರದೇಶದಲ್ಲಿ ಮಹಂತ್ ದ್ವಾರಕಾ ದಾಸ್ ಎಂದು ಜನಪ್ರಿಯರಾಗಿದ್ದಾರೆ, ಅವರು ಪಂಜಾಬ್‌ ಲೋಹ್ರಿ ಮಕರ ಸಕ್ರಾಂತಿ ಬಂಪರ್ ಲಾಟರಿ ಗೆದ್ದಿದ್ದಾರೆ. ಮಹಂತ್ ದ್ವಾರಕಾ ದಾಸ್ … Continued

ಡಬ್ಲ್ಯುಎಫ್‌ಐ ವಿವಾದ: ರಾಜೀನಾಮೆ ನೀಡಲು ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ ಗೆ ಕ್ರೀಡಾ ಸಚಿವಾಲಯ ಸೂಚನೆ..?

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ(WFI)ದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಗುರುವಾರ ಕ್ರೀಡಾ ಸಚಿವಾಲಯ ಅಂತಿಮ ಸೂಚನೆ ನೀಡಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು 24 ಗಂಟೆಗಳ ಕಾಲಾವಕಾಶ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ನಿವಾಸದಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ ನಂತರ ಈ … Continued

ಬಿಬಿಸಿ ಸಾಕ್ಷ್ಯಚಿತ್ರ : ಬ್ರಿಟನ್ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಸಮರ್ಥಿಸಿಕೊಂಡು, ಪಾಕ್ ಮೂಲದ ಸಂಸದನ ಬಾಯ್ಮುಚ್ಚಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ | ವೀಡಿಯೊ

ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ರಿಟನ್ ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರು ಬಿಬಿಸಿ ಸಾಕ್ಷ್ಯಚಿತ್ರದ ಸರಣಿಯಿಂದ ಅಂತರ ಕಾಯ್ದುಕೊಂಡರು ಹಾಗೂ ಭಾರತೀಯ ಪ್ರಧಾನಿ ಬಗೆಗಿನ ನಿರೂಪಣೆಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನ ಮೂಲದ ಬ್ರಿಟನ್‌ ಸಂಸದ ಇಮ್ರಾನ್ ಹುಸೇನ್ ಅವರು ಬ್ರಿಟಿಷ್ ಸಂಸತ್ತಿನಲ್ಲಿ ಎತ್ತಿದ ಪ್ರಧಾನಿ ಮೋದಿ ವಿವಾದಾತ್ಮಕ ಸಾಕ್ಷ್ಯಚಿತ್ರದ … Continued

“ಅಪಪ್ರಚಾರದ ನಿರೂಪಣೆಯ ತುಣುಕು”, “ವಸಾಹತುಶಾಹಿ ಮನಸ್ಥಿತಿ”: ಪ್ರಧಾನಿ ಮೋದಿ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸರ್ಕಾರದ ಪ್ರತಿಕ್ರಿಯೆ

ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಗಳ ಕುರಿತಾದ ಬಿಬಿಸಿ ಸರಣಿಯನ್ನು ಸರ್ಕಾರವು ಇಂದು, ಗುರುವಾರ ಬಲವಾಗಿ ಖಂಡಿಸಿದೆ, ಇದು “ಅಪ್ರಚಾರದ ನಿರೂಪಣೆಯನ್ನು ತಳ್ಳಲು ವಿನ್ಯಾಸಗೊಳಿಸಲಾದ ಪ್ರಚಾರದ ತುಣುಕು” ಎಂದು ಕರೆದಿದೆ. ಗುರುವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, “ಇದು ನಿರ್ದಿಷ್ಟವಾಗಿ ಅಪಖ್ಯಾತಿಗೊಳಿಸಲು ವಿನ್ಯಾಸಗೊಳಿಸಲಾದ … Continued

ಪ್ರಾಯೋಗಿಕ ಪರೀಕ್ಷೆ ವೇಳೆ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿ…!

ದೆಹಲಿ: ಗುರುವಾರದಂದು ನಡೆಯುತ್ತಿದ್ದ ಪ್ರಾಯೋಗಿಕ ಪರೀಕ್ಷೆಯ ವೇಳೆ ಇನ್ವಿಜಿಲೇಟರ್ ಆಗಿ ನೇಮಕಗೊಂಡಿದ್ದ ದೆಹಲಿ ಸರ್ಕಾರಿ ಶಾಲೆಯ ಶಿಕ್ಷಕನಿಗೆ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದರ್‌ಪುರಿ ಪ್ರದೇಶದಲ್ಲಿನ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಭೂದೇವ್ ಎಂಬ ಶಿಕ್ಷಕನಿಗೆ ವಿದ್ಯಾರ್ಥಿ ಚಾಕು ಇರಿದಿದ್ದಾನೆ. ಹೊಟ್ಟೆಗೆ ಗಾಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಬಿಎಲ್‌ಕೆ ಕಪೂರ್ ಆಸ್ಪತ್ರೆಯಲ್ಲಿ … Continued

ಅಮಾನತುಗೊಂಡ ಡಿಎಂಕೆ ನಾಯಕ ಕೃಷ್ಣಮೂರ್ತಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ ತಮಿಳುನಾಡು ರಾಜ್ಯಪಾಲ

ಚೆನ್ನೈ: ತಮ್ಮ ವಿರುದ್ಧ ನಿಂದನೀಯ ಮತ್ತು ಅವಹೇಳನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ತಮಿಳುನಾಡು (ಟಿಎನ್) ರಾಜ್ಯಪಾಲರಾದ ಆರ್.ಎನ್. ರವಿ ಅವರು ಈಗ ಅಮಾನತುಗೊಂಡಿರುವ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಗುರುವಾರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 199(2)ರ ಅಡಿಯಲ್ಲಿ ರಾಜ್ಯಪಾಲರ ಪರವಾಗಿ ಚೆನ್ನೈ ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ (ಸಿಪಿಪಿ) … Continued

ಕುಸ್ತಿಪಟುಗಳ ಪ್ರತಿಭಟನೆ…: ‘ರಾಜಕೀಯ ವಿಷಯ ಮಾಡಬೇಡಿ’; ಎಡಪಕ್ಷದ ನಾಯಕಿ ಬೃಂದಾ ಕಾರಟ್‌ಗೆ ವೇದಿಕೆ ತೊರೆಯುವಂತೆ ಮನವಿ | ವೀಕ್ಷಿಸಿ

ನವದೆಹಲಿ: ಫೆಡರೇಶನ್ ಮುಖ್ಯಸ್ಥರು ಮತ್ತು ಹಲವಾರು ತರಬೇತುದಾರರು ಅನೇಕ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸುಮಾರು 200 ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಜಂತರ್ ಮಂತರ್‌ ಪ್ರತಿಭಟನಾ ಸ್ಥಳಕ್ಕೆ ಇಂದು, ಗುರುವಾರ ಆಗಮಿಸಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕಿ ಬೃಂದಾ ಕಾರಟ್ ಆಗಮಿಸಿದರು. ಆದರೆ ಅವರಿಗೆ ವೇದಿಕೆಯಿಂದ ಹೊರಹೋಗುವಂತೆ ಕೈಮುಗಿದು … Continued

ನಾವು ವೋಟ್​ ಬ್ಯಾಂಕ್ ರಾಜಕಾರಣ ಮಾಡಲ್ಲ, ಮನೆಮನೆಗೆ ನೀರು ಕೊಡ್ತೇವೆ, ಅಭಿವೃದ್ಧಿ ರಾಜಕಾರಣ ಮಾಡ್ತೇವೆ : ಪ್ರಧಾನಿ ಮೋದಿ

ಯಾದಗಿರಿ: ನಾವು ವೋಟ್​ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತೇವೆ. ಯಾದರಿಗಿ ಸೇರಿದಂತೆ ದೇಶದ ಇಂಥ ಅನೇಕ ಜಿಲ್ಲೆಗಳಲ್ಲಿ ಆಕಾಂಕ್ಷಿ ಜಿಲ್ಲೆ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುರುವಾರ ಜಲಜೀವನ್ ಮಿಷನ್ ಯೋಜನೆಯಡಿ ಯಾದಗಿರಿ ಜಿಲ್ಲೆಯ 710 ಗ್ರಾಮೀಣ ವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಕರ್ಯ ನೀಡುವ … Continued

ಐಷಾರಾಮಿ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದ ವಜ್ರದ ಉದ್ಯಮಿಯ 8 ವರ್ಷದ ಮಗಳು…!

ವಜ್ರದ ಉದ್ಯಮಿಯ 8 ವರ್ಷದ ಮಗಳು ಜೀವನದ ಎಲ್ಲ ಐಷಾರಾಮಿ ಜೀವನ ಹಾಗೂ ಐಹಿಕ ಸುಖಗಳನ್ನು ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ. ಗುಜರಾತಿನ ಸೂರತ್ ಮೂಲದ ವಜ್ರದ ಉದ್ಯಮಿಯ ಧನೇಶ್ ಸಾಂಘ್ವಿ ಅವರ ಹಿರಿಯ ಪುತ್ರಿ 8 ವರ್ಷದ ದೇವಾಂಶಿ ಸಾಂಘ್ವಿ ಸನ್ಯಾಸಿನಿಯಾಗಿ ಮುಂದುವರಿಯಲಿದ್ದಾರೆ…! ಧನೇಶ್ ಸಾಂಘ್ವಿ ಅವರು ವಿಶ್ವದ ಅತ್ಯಂತ ಹಳೆಯ ವಜ್ರ ಕಂಪನಿಗಳಲ್ಲಿ ಒಂದಾದ … Continued