ಮಂಗಳೂರು : ಆಟೋದಲ್ಲಿ ನಿಗೂಢ ಸ್ಪೋಟ ಪ್ರಕರಣ…ಎಡಿಜಿಪಿ ಹೇಳಿದ್ದೇನೆಂದರೆ…

ಮಂಗಳೂರು: ಕಂಕನಾಡಿ ಸಮೀಪ ಆಟೋರಿಕ್ಷಾದಲ್ಲಿ ಸಂಭವಿಸಿದ ನಿಗೂಢ ಸ್ಪೋಟಕ್ಕೆ ಸಂಬಂಧಿಸಿದಂತೆ, ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬೇರೆಡೆ ಹೋಗಿ ಬಾಂಬ್​ ಬ್ಲಾಸ್ಟ್​​ ಮಾಡುವ ಉದ್ದೇಶ ಹೊಂದಿದ್ದ. ಆದರೆ ಆಕಸ್ಮಿಕವಾಗಿ ಆಟೋದಲ್ಲಿ ಅದು ಬ್ಲಾಸ್ಟ್​​ ಆಗಿದೆ ಎಂದು ಎಡಿಜಿಪಿ ಅಲೋಕ​​ಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಇರುವುದು ಯಾರು ಎಂಬ ಮಾಹಿತಿ … Continued

ನ್ಯೂಜಿಲೆಂಡ್ ವಿರುದ್ಧ ಕೇವಲ 49-ಬಾಲ್‌ಗಳಲ್ಲಿ ಶತಕ ಸಿಡಿಸಿದ ಸೂರ್ಯಕುಮಾರ ಯಾದವ್

ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ ಯಾದವ್ ಅವರು ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ T20I ನಲ್ಲಿ ತಮ್ಮ ಬಿರುಸಿನ ಆಟ ಪ್ರದರ್ಶಿಸಿ ಹಲವಾರು ದಾಖಲೆಗಳನ್ನು ಪುಡಿ ಮಾಡಿದ್ದಾರೆ. ಅವರು ಕೇವಲ 49 ಎಸೆತಗಳಲ್ಲಿ ತಮ್ಮ ಶತಕ  ಪೂರೈಸಿದ್ದಾರೆ. ಇದು ಸೂರ್ಯಕುಮಾರ ಅವರ ಎರಡನೇ T20I ಶತಕವಾಗಿದೆ ಮತ್ತು ಕಾಕತಾಳೀಯವಾಗಿ ಅವರ ಮೊದಲನೇ ಶತಕವನ್ನು ಇಂಗ್ಲೆಂಡ್ ವಿರುದ್ಧ … Continued

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ: 2013ರಿಂದ ತನಿಖೆಗೆ ಆದೇಶ, ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ-ಸಿಎಂ ಬೊಮ್ಮಾಯಿ

ಬೆಂಗಳೂರು : 2013ರಿಂದಲೂ ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಇತರ ಜವಾಬ್ದಾರಿಗಳನ್ನು ವಹಿಸಿದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ. ತನಿಖೆಯ ಮೂಲಕ ಎಲ್ಲ ಸತ್ಯಗಳು ಹೊರಬರಲಿದೆ. ನಿರಾಧಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ನ ಈ ಪ್ರಯತ್ನ, ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಕಾವೇರಿ ನಿವಾಸದ ಬಳಿ … Continued

ಮುಸ್ಲಿಮರು ಮಾತ್ರ ಕಾಂಗ್ರೆಸ್ ಉಳಿಸಬಲ್ಲರು ಎಂದ ಗುಜರಾತ್ ಕಾಂಗ್ರೆಸ್‌ ಅಭ್ಯರ್ಥಿ: ಇದು ತುಷ್ಟೀಕರಣದ ರಾಜಕಾರಣ ಎಂದು ಬಿಜೆಪಿ ವಾಗ್ದಾಳಿ

ನವದೆಹಲಿ: ಗುಜರಾತ್‌ನ ಸಿದ್ಧಪುರದ ಕಾಂಗ್ರೆಸ್‌ ಅಭ್ಯರ್ಥಿ ಚಂದನ್ ಠಾಕೂರ್ ಅವರು ಕಾಂಗ್ರೆಸ್ ಅನ್ನು ಉಳಿಸಲು ಮುಸ್ಲಿಮರಿಂದ ಮಾತ್ರ ಸಾಧ್ಯ ಎಂದು ಹೇಳಿದ ನಂತರ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ ಹಾಗೂ ಪಕ್ಷವು ‘ತುಷ್ಟೀಕರಣ’ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದೆ. ಪಕ್ಷವು ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಆರೋಪಿಸಿ ಬಿಜೆಪಿ ರಾಷ್ಟ್ರೀಯ … Continued

ಟಿಆರ್‌ಎಸ್‌ ಶಾಸಕರ ಖರೀದಿ ಯತ್ನದ ಪ್ರಕರಣ: ಬಿಜೆಪಿಯ ಬಿ.ಎಲ್‌. ಸಂತೋಷ ಬಂಧಿಸದಂತೆ ಎಸ್‌ಐಟಿಗೆ ತೆಲಂಗಾಣ ಹೈಕೋರ್ಟ್‌ ಆದೇಶ

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕರ ಖರೀದಿ ಯತ್ನದ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ ಮತ್ತು ವಕೀಲ ಶ್ರೀನಿವಾಸ ಅವರನ್ನು ಮುಂದಿನ ಆದೇಶದವರೆಗೆ ಬಂಧಿಸದಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ತೆಲಂಗಾಣ ಹೈಕೋರ್ಟ್ ಶನಿವಾರ ಮಧ್ಯಂತರ ಆದೇಶ ನೀಡಿದೆ. ಆದರೂ ತನಿಖೆಗೆ ಸಹಕರಿಸುವಂತೆ ಇಬ್ಬರಿಗೂ … Continued

ಅಧಿಕಾರಿ ಮುಂದೆ ನಾಯಿಯಂತೆ ಬೊಗಳಿ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ ವ್ಯಕ್ತಿ : ಕಾರಣ ಗೊತ್ತಾದ್ರೆ ನೀವು ಬಿದ್ದು ಬಿದ್ದು ನಗ್ತೀರಾ | ವೀಕ್ಷಿಸಿ

ಅಧಿಕೃತ ದಾಖಲೆಗಳಲ್ಲಿ ಕಾಗುಣಿತ ದೋಷಗಳು ದೇಶದಲ್ಲಿ ಸಾಮಾನ್ಯವಾಗಿದೆ ಆದರೆ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ತಮ್ಮ ಪಡಿತರ ಚೀಟಿಯಲ್ಲಿ ತನ್ನ ಉಪನಾಮವನ್ನು “ದತ್ತಾ” ಬದಲಿಗೆ “ಕುತ್ತಾ (ನಾವೆ)” ಎಂದು ಬರೆದಿದ್ದರಿಂದ ಕೋಪಗೊಂಡು ಅಸಾಮಾನ್ಯ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಶ್ರೀಕಾಂತಿ ದತ್ತಾ ಎಂಬ ವ್ಯಕ್ತಿ ತನ್ನ ಪಡಿತರ ಚೀಟಿಯಲ್ಲಿ ದತ್ತಾ ಬದಲು ಕುತ್ತಾ … Continued

ಆಸ್ಪತ್ರೆಯ ಐಸಿಯುನಲ್ಲಿ ಮುಕ್ತವಾಗಿ ಓಡಾಡಿದ ಹಸು : ವೀಡಿಯೊ ವೈರಲ್‌ ಆದ ನಂತರ ಮೂವರು ಕೆಲಸದಿಂದ ವಜಾ | ವೀಕ್ಷಿಸಿ

ಆಘಾತಕಾರಿ ಘಟನೆಯೊಂದರಲ್ಲಿ, ಶುಕ್ರವಾರ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ (ಐಸಿಯು) ಹಸುವೊಂದು ಪ್ರವೇಶಿಸಿದೆ. ಆಸ್ಪತ್ರೆ ಆವರಣದಲ್ಲಿದ್ದ ಕಸದ ತೊಟ್ಟಿಗಳಲ್ಲಿರುವ ವೈದ್ಯಕೀಯ ತ್ಯಾಜ್ಯವನ್ನು ಹಸು ತಿಂದು ಸ್ವಚ್ಛಂದವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಯಲ್ಲಿ ದಿನವಿಡೀ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದರೂ, ಹಸುವನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಲು ಯಾರೂ ಇರಲಿಲ್ಲ. ಆಸ್ಪತ್ರೆಯಲ್ಲಿ ಇಬ್ಬರು ಹಸು ಹಿಡಿಯುವವರನ್ನು ನೇಮಿಸಲಾಗಿದೆ … Continued

ಡೇಟಾ ಸಂರಕ್ಷಣಾ ಮಸೂದೆ-2022: ಡೇಟಾ ಸಂರಕ್ಷಿಸದಿದ್ದರೆ 500 ಕೋಟಿ ರೂಪಾಯಿ ವರೆಗೆ ದಂಡ ವಿಧಿಸಲು ಪ್ರಸ್ತಾಪ

ನವದೆಹಲಿ: ಭಾರತೀಯ ಪ್ರಜೆಗಳ ಡೇಟಾವನ್ನು (ಆಧಾರ್ ಸಂಖ್ಯೆ, ಮೊಬೈಲ್‌ ನಂಬರ್‌, ಬ್ಯಾಂಕ್‌ ಖಾತೆ ವಿವರ ಇತ್ಯಾದಿ) ಹೊಂದಿರುವ ಯಾವುದೇ ಕಂಪನಿಗಳು, ಆ ದತ್ತಾಂಶಗಳು ಅನ್ಯರಿಗೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು. ಸೋರಿಕೆ ಮಾಡಿದರೆ ಅಥವಾ ದುರ್ಬಳಕೆ ಮಾಡಿಕೊಂಡರೆ ಹಾಗೂ ದತ್ತಾಂಶ ರಕ್ಷಣೆಯಲ್ಲಿ (ಡೇಟಾ ಪ್ರೊಟೆಕ್ಷನ್) ವಿಫಲವಾದವರಿಗೆ 500 ಕೋಟಿ ರೂ. ವರೆಗೆ ದಂಡ ವಿಧಿಸುವ ಬಗ್ಗೆ ದತ್ತಾಂಶ … Continued

ಕಾನೂನುಬಾಹಿರವಾಗಿ ಫಿಫಾ ವಿಶ್ವಕಪ್ 2022 ಪ್ರಸಾರ ಮಾಡದಂತೆ 12,000 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಮದ್ರಾಸ್ ಹೈಕೋರ್ಟ್ ಶುಕ್ರವಾರ ವಯಾಕಾಮ್ 18 ಪರವಾಗಿ ಮಧ್ಯಂತರ ತಡೆಯಾಜ್ಞೆ ನೀಡಿದೆ ಮತ್ತು 12,000 ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಫಿಫಾ (FIFA) ವಿಶ್ವಕಪ್ 2022 ಅನ್ನು ಅಕ್ರಮವಾಗಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ. ಫಿಫಾ ಫುಟ್ಬಾಲ್‌ ವಿಶ್ವಕಪ್​ನನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡಲು ಮುಂದಾಗಿದ್ದ 12,000 ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ವಿರುದ್ಧ ವಯಾಕಾಮ್18 ಮದ್ರಾಸ್ ಹೈಕೋರ್ಟ್ ಮೊರೆ … Continued

ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಅರುಣ ಗೋಯೆಲ್ ನೇಮಕ

ನವದೆಹಲಿ: ಗುಜರಾತ್‌ನಲ್ಲಿ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನ ನಿವೃತ್ತ ಅಧಿಕಾರಿ ಅರುಣ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ದೇಶದ ಉನ್ನತ ಚುನಾವಣಾ ಸಂಸ್ಥೆಯಲ್ಲಿ ಮೂರನೇ ಹುದ್ದೆಯು ಸುಮಾರು ಆರು ತಿಂಗಳಿನಿಂದ ಖಾಲಿಯಾಗಿತ್ತು. ಇಂದು, ಶನಿವಾರ ಸಂಜೆ ಕಾನೂನು ಸಚಿವಾಲಯದ ಪ್ರಕಟಣೆಯಲ್ಲಿ, ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾಗಿ ಅರುಣ್ ಗೋಯೆಲ್ ಅವರನ್ನು ನೇಮಿಸಲು ಸಂತೋಷವಾಗಿದೆ” … Continued