ಭಾರತದ ವಾಯವ್ಯ, ಮಧ್ಯ, ಪೂರ್ವ ಭಾಗಗಳಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ: ಬಿಸಿ ಅಲೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ಭಾರತದ ಹಲವಾರು ಭಾಗಗಳು ಬೇಸಿಗೆಯ ಉಷ್ಣತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಭಾರತೀಯ ಹವಾಮಾನ ಇಲಾಖೆಯು ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತಕ್ಕೆ ಗುರುವಾರ ಬಿಸಿ (ಶಾಖ) ಅಲೆಯ ಎಚ್ಚರಿಕೆಯನ್ನು ನೀಡಿದೆ. ಬುಧವಾರದ ವೇಳೆಗೆ ಈ ಭಾಗಗಳಲ್ಲಿ ಗರಿಷ್ಠ ತಾಪಮಾನ 40 ರಿಂದ 45 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗಮನಿಸಿದೆ. ಭಾರತದಲ್ಲಿ … Continued

UPIನಲ್ಲಿ ಹಣ ಪಾವತಿ ಮಾಡುವ ಭಾರತದ ಬಳಕೆದಾರರು, ವ್ಯಾಪಾರಿಗಳಿಗೆ ಶೀಘ್ರದಲ್ಲೇ ಕ್ಯಾಶ್‌ಬ್ಯಾಕ್ ಆಫರ್‌ ನೀಡಲಿದೆ ವಾಟ್ಸಾಪ್‌…!

ಹೆಚ್ಚಿನ ಬಳಕೆದಾರರು ಮತ್ತು ವ್ಯಾಪಾರಿಗಳನ್ನು ತನ್ನ ಪಾವತಿ ವೇದಿಕೆಗೆ (payments platform) ಸೆಳೆಯುವ ಪ್ರಯತ್ನದಲ್ಲಿ, ವಾಟ್ಸಪ್‌ (WhatsApp) ಈ ತಿಂಗಳಿನಿಂದ ಕ್ಯಾಶ್‌ಬ್ಯಾಕ್ ಯೋಜನೆಯನ್ನು ಹೊರತರಲಿದೆ. ರಾಯಿಟರ್ಸ್ ವರದಿ ಮಾಡಿದಂತೆ, ವಾಟ್ಸಪ್‌ (WhatsApp)ನ ಕ್ಯಾಶ್‌ಬ್ಯಾಕ್ ಪ್ರೋಗ್ರಾಂ ಅದರ ಪಾವತಿ ಸೇವೆಗಾಗಿ ಬಳಕೆದಾರರ ನೆಲೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಇದು ಭಾರತದ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮೂಲಸೌಕರ್ಯವನ್ನು … Continued

ದೆಹಲಿ ಜಹಾಂಗೀರ್ ಪುರಿ ಗಲಭೆ: ಕತ್ತಿ ಝಳಪಿಸಿದ್ದ ಪ್ರಮುಖ ಆರೋಪಿ ಸೇರಿ ಇಬ್ಬರ ಬಂಧನ

ನವದೆಹಲಿ: ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಈ ತಿಂಗಳಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಈ ಪ್ರಕರಣದಲ್ಲಿ ಸುಮಾರು 30 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಾದ ಜಹಾಂಗೀರಪುರಿ ನಿವಾಸಿಗಳಾದ ಜಾಫರ್ (34) ಮತ್ತು ಬಾಬುದ್ದೀನ್ ಅಲಿಯಾಸ್ ಬಾಬು (43) … Continued

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ಕಮಲನಾಥ್ ರಾಜೀನಾಮೆ

ಭೋಪಾಲ: ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದ ವದಂತಿಗಳ ನಡುವೆ, ಕಮಲ್ ನಾಥ್ ಅವರು ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಇನ್ನು ಮುಂದೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವುದಿಲ್ಲ ಎಂದು ಹೇಳಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಿಎಲ್‌ಪಿ ನಾಯಕರಾಗಿ ಅವರ ಕೊಡುಗೆಯನ್ನು ಶ್ಲಾಘಿಸಿ ಅವರ ರಾಜೀನಾಮೆಯನ್ನು … Continued

ಮದುವೆ ಕಾರ್ಯಕ್ರಮದಲ್ಲಿ ಜೀವಂತ ನಾಗರ ಹಾವಿನೊಂದಿಗೆ ‘ನಾಗಿನ್ ಡ್ಯಾನ್ಸ್’ : ಐವರು ಪೊಲೀಸ್‌ ವಶಕ್ಕೆ…ವೀಕ್ಷಿಸಿ

ಜೀವಂತ ನಾಗರಹಾವು ಬಳಸಿ ಮದುವೆ ಮೆರವಣಿಗೆಯಲ್ಲಿ ‘ಮೈನ್ ನಾಗಿನ್’ ಹಾಡಿಗೆ ನೃತ್ಯ ಮಾಡಿದ ಐವರನ್ನು ಒಡಿಶಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವು ಬುಧವಾರ ಮಯೂರ್‌ಭಂಜ್ ಜಿಲ್ಲೆಯ ಕರಂಜಿಯಾ ಪಟ್ಟಣದ ಬೀದಿಗಳಲ್ಲಿ ಬಾರಾತಿಗಳು ತಮ್ಮ ಬಿದಿರಿನ ಬುಟ್ಟಿಯ ಮುಚ್ಚಳವನ್ನು ತೆರೆದು ಹಾವನ್ನು ಪ್ರದರ್ಶಿಸುವ ಮೂಲಕ ಬಾಡಿಗೆಗೆ ಪಡೆದ ಹಾವಿನೊಂದಿಗೆ ನೃತ್ಯ ಮಾಡುವುದನ್ನು … Continued

ಪುರುಷರ ಮಿದುಳಿನ ಗಣಿತದ ಮಿಥ್ಯೆ..!?: ಗಣಿತದಲ್ಲಿ ಹುಡುಗಿಯರು ಹುಡುಗರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರೇ? ಯುನೆಸ್ಕೋ ಅಧ್ಯಯನ ಹೇಳಿದ್ದೇನು..?

ನವದೆಹಲಿ: ಗಣಿತ ಮತ್ತು ವಿಜ್ಞಾನದಲ್ಲಿ ಹುಡುಗರು ಜನ್ಮತಃ ಉತ್ತಮರೇ? ಈ ಪ್ರಶ್ನೆಯು ದಶಕಗಳಿಂದ ಬಿಸಿಬಿಸಿಯಾದ ಚರ್ಚೆಗೆ ಕಾರಣವಾಗಿದೆ. ಕೆಲವು ಸಂಶೋಧಕರ ಪ್ರಕಾರ, ಮೆದುಳಿನ ಚಟುವಟಿಕೆ ಮತ್ತು ಹಾರ್ಮೋನುಗಳ ವ್ಯತ್ಯಾಸಗಳು ಪುರುಷರಿಗೆ ಗಣಿತದ ಅಂಚನ್ನು ಮೊದಲಿನಿಂದಲೂ ನೀಡುತ್ತವೆ ಮತ್ತು ಹುಡುಗಿಯರು ಓದುವಿಕೆ ಮತ್ತು ಬರವಣಿಗೆಯ ಕಡೆಗೆ ಹೆಚ್ಚು ನಿರ್ದೇಶಿಸಲ್ಪಡುತ್ತಾರೆ. ಆದರೆ ಗಣಿತ ಮಾಡುವಾಗ ಮಕ್ಕಳ ಮೆದುಳಿನ ಮೇಲೆ … Continued

ಮೇ 5, 6 ರಂದು ಹಾಜರಾಗುವಂತೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಸಮನ್ಸ್ ನೀಡಿದ ಭೀಮಾ-ಕೋರೆಗಾಂವ್ ತನಿಖಾ ಸಮಿತಿ

ಮುಂಬೈ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಯುದ್ಧ ಸ್ಮಾರಕದಲ್ಲಿ 2018ರ ಜನವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಮೇ 5 ಮತ್ತು 6ರಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್‌ಗೆ ಹಾಜರಾಗುವಂತೆ ಕೋರೆಗಾಂವ್-ಭೀಮಾ ವಿಚಾರಣಾ ಆಯೋಗ ಸೂಚಿಸಿದೆ. ಸಮಿತಿಯು ಈ ಹಿಂದೆ 2020 ರಲ್ಲಿ ಪವಾರ್‌ಗೆ ಸಮನ್ಸ್ ನೀಡಿತ್ತು, ಆದರೆ ಕೊರೊನಾ ವೈರಸ್-ಪ್ರೇರಿತ … Continued

ಭಾರತದಲ್ಲಿ 46 ದಿನಗಳ ನಂತರ 3,000 ದಾಟಿದ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ…!

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತವು ಗುರುವಾರ 3,303 ಹೊಸ ಕೋವಿಡ್‌-19 ಪ್ರಕರಣಗಳನ್ನು ವರದಿ ಮಾಡಿದೆ. 46 ದಿನಗಳ ನಂತರ ದೈನಂದಿನ ಪ್ರಕರಣಗಳ ಸಂಖ್ಯೆ 3,000 ದಾಟಿದೆ. ಅದು ಒಟ್ಟು ಸೋಂಕಿತರ ಸಂಖ್ಯೆಯನ್ನು 4,30,68,799 ಕ್ಕೆ ಒಯ್ದಿದೆ, ಸಕ್ರಿಯ ಪ್ರಕರಣಗಳು 16,980 ಕ್ಕೆ ಏರಿದೆ. ಕೋವಿಡ್‌-19 ರ ಸಾವಿನ ಸಂಖ್ಯೆ 5,23,693 ಕ್ಕೆ … Continued

91 ವರ್ಷದ ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಕಲಾವಿದರನ್ನು ಸರ್ಕಾರಿ ಭವನದಿಂದ ಹೊರಹಾಕಿದ ಸರ್ಕಾರ…

ನವದೆಹಲಿ: 91 ವರ್ಷ ವಯಸ್ಸಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಒಡಿಸ್ಸಿ ನರ್ತಕ ಗುರು ಮಾಯಾಧರ್ ರಾವುತ್‌ ಅವರಿಂದ ಪ್ರಾರಂಭಿಸಿ, 2014 ರಲ್ಲಿ ರದ್ದುಗೊಂಡ ಸರ್ಕಾರಿ ವಸತಿಗಳಿಂದ ಪ್ರಖ್ಯಾತ ಕಲಾವಿದರನ್ನು ಹೊರಹಾಕುವ ಪ್ರಕ್ರಿಯೆಗಳನ್ನು ಕೇಂದ್ರವು ಮಂಗಳವಾರ ಪ್ರಾರಂಭಿಸಿತು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2020 ರಲ್ಲಿ ಮನೆಗಳನ್ನು ಖಾಲಿ ಮಾಡುವಂತೆ ಕಲಾವಿದರಿಗೆ ನೋಟಿಸ್ ನೀಡಿದ … Continued

ಉತ್ತರ ಪ್ರದೇಶದಲ್ಲಿ 6 ಸಾವಿರ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ತೆರವು, 30 ಸಾವಿರ ಧ್ವನಿವರ್ಧಕಗಳ ಶಬ್ದಗಳಿಗೆ ಮಿತಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಸುಮಾರು ಆರು ಸಾವಿರ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇತರ 30 ಸಾವಿರ ಧ್ವನಿವರ್ಧಕಗಳ ಶಬ್ದಗಳನ್ನು ಮಿತಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ಉತ್ತರ ಪ್ರದೇಶ ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಮತ್ತು ಶಬ್ದಗಳಲ್ಲಿ ಮಿತಿಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು … Continued