ಹಿಜಾಬ್‌ ವಿವಾದ: ಎಲ್ಲ ಧರ್ಮಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲಾ- ಕಾಲೇಜುಗಳು ಸೂಚಿಸಿದ ಡ್ರೆಸ್ ಕೋಡ್ ಪಾಲಿಸಬೇಕು ಎಂದ ಅಮಿತ್ ಶಾ

ನವದೆಹಲಿ: ವಿದ್ಯಾರ್ಥಿಗಳು ಯಾವುದೇ ಧರ್ಮದವರಾದರೂ ಶಾಲೆಗಳು ಮತ್ತು ಕಾಲೇಜುಗಳು ಸೂಚಿಸಿದ ಡ್ರೆಸ್ ಕೋಡ್ ಅನ್ನು ಎಲ್ಲಾ ವಿದ್ಯಾರ್ಥಿಗಳು ತ ಅನುಸರಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. ಸಿಎನ್‌ಎನ್ ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್‌ ಶಾ, ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ಧರ್ಮಕ್ಕಿಂತ ಮಿಗಿಲಾಗಿ ನೋಡಬೇಕು. ತಮ್ಮ ತಮ್ಮ ಧರ್ಮ ಯಾವುದೇ … Continued

ಪಂಜಾಬಿನಲ್ಲಿ 65% ಮತದಾನ, ಇದು 2017ಕ್ಕಿಂತ ಕಡಿಮೆ; ಮಾರ್ಚ್ 10ರಂದು ಮತ ಎಣಿಕೆ

ಚಂಡೀಗಡ: ಪಂಜಾಬ್ ತನ್ನ 117 ಸದಸ್ಯರ ಶಾಸಕಾಂಗ ಸಭೆಗೆ ಶಾಸಕರನ್ನು ಆಯ್ಕೆ ಮಾಡಲು ಭಾನುವಾರ ಮತ ಚಲಾಯಿಸಿದೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ 2017 ರಲ್ಲಿ ಶೇಕಡಾ 77.36 ಕ್ಕೆ ಹೋಲಿಸಿದರೆ ರಾಜ್ಯದಲ್ಲಿ 65.32 %ರಷ್ಟು ಮತದಾನವಾಗಿದೆ. ಕಣದಲ್ಲಿರುವ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರದ ನಂತರ, ಪಂಜಾಬ್‌ನಲ್ಲಿ ಭಾನುವಾರ ಬೆಳಿಗ್ಗೆ 8 … Continued

ಇನ್ಮುಂದೆ ರೈಲ್ವೆಯಿಂದ ಮನೆಮನೆಗೆ ಪಾರ್ಸೆಲ್‌ ಸೇವೆ, ಜೂನ್‌ನಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಪೈಲಟ್ ಪ್ರಾಜೆಕ್ಟ್ ಆರಂಭ..!

ಭಾರತೀಯ ರೈಲ್ವೇ ವೈಯಕ್ತಿಕ ಮತ್ತು ಬೃಹತ್ ಗ್ರಾಹಕರಿಗಾಗಿ ಮನೆ-ಮನೆಗೆ  ಪಾರ್ಸೆಲ್‌ ವಿತರಣಾ ಸೇವೆಗಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಿದೆ. ರೈಲ್ವೆ ಈ ಉದ್ದೇಶಕ್ಕಾಗಿ ಅಪ್ಲಿಕೇಶನ್‌ ಅನ್ನು ಹೊಂದಲು ಯೋಜಿಸುತ್ತಿದ್ದಾರೆ. ಅವರು ಗ್ರಾಹಕರಿಗೆ ತಮ್ಮ ವಿತರಣೆಗಳನ್ನು ಟ್ರ್ಯಾಕ್ ಮಾಡಲು ಸುಲಭವಾಗುವಂತೆ QR ಕೋಡ್‌ಗಳೊಂದಿಗೆ ಸೇವೆ ಒದಗಿಸಲಿದೆ. ಅಂದಾಜು ಶುಲ್ಕ ಮತ್ತು ಪಾರ್ಸೆಲ್‌  ತಲುಪಿಸಲು ಅಗತ್ಯವಿರುವ ಸಮಯವನ್ನು ಅಪ್ಲಿಕೇಶನ್ ಅಥವಾ … Continued

ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ತ್ರಿಶೂರ್: ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರಿನ ಉಳುವಾತುಕಡವು ಎಂಬಲ್ಲಿ ಭಾನುವಾರ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಕಡಂಪರಂಬತ್ ಆಶಿಫ್ (41), ಅವರ ಪತ್ನಿ ಅಬೀರಾ (35), ಅವರ ಮಕ್ಕಳಾದ ಫಾತಿಮಾ (14) ಮತ್ತು ಅನೋನಿಸಾ (7) ಎಂದು ಗುರುತಿಸಲಾಗಿದೆ.ಮುಂಜಾನೆಯಾದರೂ ಮನೆಯವರು ಮನೆಯಿಂದ ಹೊರಗೆ ಬಾರದಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಳಿ … Continued

ಮುಂಬೈ – ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ: ಗುಜರಾತ್‌ನಲ್ಲಿ 352 ಕಿಮೀ ಕಾರಿಡಾರ್‌ಗಾಗಿ ಎಲ್ಲಾ ಸಿವಿಲ್ ಗುತ್ತಿಗೆ ನೀಡಿದ ಎನ್‌ಎಚ್‌ಎಸ್‌ಆರ್‌ಸಿಎಲ್

ಮುಂಬೈ: ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (MAHSR) ಕ್ಷಿಪ್ರ ಗತಿಯಲ್ಲಿ ಸಾಗುತ್ತಿದೆ. ನ್ಯಾಶನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಗುಜರಾತ್‌ನಲ್ಲಿ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (MAHSR) ಜೋಡಣೆಯ ನಿರ್ಮಾಣಕ್ಕಾಗಿ 100 ಪ್ರತಿಶತ ನಾಗರಿಕ ಗುತ್ತಿಗೆಗಳನ್ನು ನೀಡಿದೆ, ಇದು ಒಟ್ಟು 508 ಕಿಮೀಗಳಲ್ಲಿ 352 ಕಿ.ಮೀಕಾರಿಡಾರ್‌ ಗುತ್ತಿಗೆ ನೀಡಿದೆ. ಎನ್‌ಎಚ್‌ಎಸ್‌ಆರ್‌ಸಿಎಲ್ ಸಬರಮತಿ, ಅಹಮದಾಬಾದ್, ಆನಂದ್, ವಡೋದರಾ, … Continued

ಕಾಸರಗೋಡು: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ-ಪಕ್ಷದ ಕಚೇರಿಗೆ ಬೀಗ ಜಡಿದ ಕಾರ್ಯಕರ್ತರು

ಕಾಸರಗೋಡು(ಕೇರಳ): ಕಾಸರಗೋಡು ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದ್ದು ಕಾರ್ಯಕರ್ತರು ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಜಡಿದ ಘಟನೆ ಇಂದು, ಭಾನುವಾರ ನಡೆದಿದೆ. ಕುಂಬಳೆ ಗ್ರಾಮ ಪಂಚಾಯತ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಬದ್ಧ ರಾಜಕೀಯ ವೈರಿಗಳಾದ ಬಿಜೆಪಿ ಮತ್ತು ಸಿಪಿಎಂ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ. . ಹಲವು ಬಾರಿ ರಾಜ್ಯ … Continued

ಉಕ್ರೇನ್‌ನಿಂದ ಹೊರಡಿ: ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚನೆ

ನವದೆಹಲಿ: ಉಕ್ರೇನ್‌ನಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದೆ. ರಷ್ಯಾವು ಯುದ್ಧ ವಿಮಾನಗಳ ಸಮೇತ ಯುದ್ಧಕ್ಕೆ ಸಜ್ಜಾಗಿ ನಿಂತಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ರಷ್ಯಾ ದಾಳಿ ನಡೆಸಬಹುದು ಸ್ಥಿತಿ ಏರ್ಪಟ್ಟಿದೆ. ಅದರ ಯುದ್ಧೋನ್ಮಾದ ತೀವ್ರವಾಗಿದೆ ಎಂದು ಅಮೆರಿಕ ಹೇಳುತ್ತಿದೆ. ಕೆಲವು ದಿನಗಳ ಹಿಂದೆ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಜೆಗಳೂ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸೂಚನೆ ನೀಡಿದ್ದ ಭಾರತ, ಭಾನುವಾರ … Continued

ಬೀಗ ಹಾಕಿದ ಒಂದೇ ಕೋಣೆಯಲ್ಲಿ ಚಿರತೆಯೊಂದಿಗೆ ಎರಡು ತಾಸು ಕಳೆದ 15 ವರ್ಷದ ಬಾಲಕಿ…!

15 ವರ್ಷದ ರೇಣು ಮಾಝಿ, ಸಾವಿನ ದವಡೆಯಿಂದ ತನ್ನನ್ನು ತಾನು ಹೇಗೆ ರಕ್ಷಿಸಿಕೊಂಡಳು ಎಂಬ ತನ್ನ ಕಥೆಯನ್ನು ಹೇಳುತ್ತಾ ಕಣ್ಣೀರಿಟ್ಟಿದ್ದಾಳೆ. ಆದರೆ ಫೆಬ್ರವರಿ 14 ರ ಭಯಾನಕ ಘಟನೆ ನೆನಪಿಸಿಕೊಂಡ ಅವಳು, ಆಗ ಅಳುವುದರಿಂದ ಖಂಡಿತವಾಗಿಯೂ ಸಾವು ಸಂಭವಿಸುತ್ತದೆ ಎಂದು ತನಗೆ ಅಳಲು ಸಹ ಸಾಧ್ಯವಾಗಲಿಲ್ಲ ಎಂದು ಚಿರತೆಯೊಂದಿಗೆ ಒಂದೇ ರೂಮಿನಲ್ಲಿ ತಾನು ಕಳೆದ ಎರಡು … Continued

ಸೋನು ಸೂದ್ ಮತಗಟ್ಟೆಗಳಿಗೆ ಭೇಟಿ ನೀಡುವುದು ತಡೆದ ಚುನಾವಣಾ ಆಯೋಗ

ಮೊಗಾ (ಪಂಜಾಬ್‌): ಬಾಲಿವುಡ್ ನಟ ಸೋನು ಸೂದ್ ಅವರು ಪಂಜಾಬ್ ನ ಮೊಗಾ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಪ್ರವೇಶಕ್ಕೆ ಯತ್ನಿಸಿದ ಆರೋಪದ ಮೇಲೆ ಅವರನ್ನು ತಡೆಯಲಾಗಿದೆ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ ಘಟನೆ ಭಾನುವಾರ ನಡೆದಿದೆ. ರಾಜ್ಯದ 117 ಕ್ಷೇತ್ರಗಳಲ್ಲಿ ಇಂದು, ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, ಮೊಗಾದಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ … Continued

ಮದುವೆ ಸ್ಥಳಕ್ಕೆ ಹೊರಟ ಕಾರು ನದಿಗೆ ಬಿದ್ದು ವರ ಸೇರಿ ಒಂಬತ್ತು ಜನರ ಸಾವು

ಕೋಟಾ (ರಾಜಸ್ಥಾನ): ಶನಿವಾರ ತಡರಾತ್ರಿ ರಾಜಸ್ಥಾನದ ಕೋಟಾದಲ್ಲಿ ಮದುಮಗ ಪ್ರಯಾಣಿಸುತ್ತಿದ್ದ ಕಾರು ಚಂಬಲ್ ನದಿಗೆ ಬಿದ್ದ ಪರಿಣಾಮ ವರ ಸೇರಿದಂತೆ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮದುವೆ ಸ್ಥಳಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೋಟಾ ನಗರದ ಮೂಲಕ ಹಾದುಹೋಗುವ ಚಂಬಲ್ ನದಿಯ ರಾಜಕಾಲುವೆ ಸೇತುವೆಯಿಂದ ಕಾರು ನದಿಗೆ ಬಿದ್ದಿದೆ. … Continued