ತನ್ನ ಪತ್ನಿಯ ಅಜ್ಜಿ ಮೇಲೆ ಅತ್ಯಾಚಾರ ಎಸಗಿದ 60 ವರ್ಷದ ಹಿರಿಯ ನಾಗರಿಕ…!

ಪಟ್ಟನಂತಿಟ್ಟ (ಕೇರಳ): ಕೇರಳದಲ್ಲಿ ಆಘಾತಕಾರಿ ಘಟನೆ ನಡೆದ ವರದಿಯಾಗಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಜ್ಜಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಹಿರಿಯ ನಾಗರಿಕರು. ಆರೋಪಿ ಶಿವದಾಸನಿಗೆ 60 ವರ್ಷ ವಯಸ್ಸಾಗಿದ್ದರೆ, ಸಂತ್ರಸ್ತ ಅಜ್ಜಿಗೆ 85 ವರ್ಷ. ಆರೋಪಿಯ ಮನೆಯಲ್ಲಿ ಕಳೆದ … Continued

ರಸ್ತೆಯಿಂದ ಹಾರಿಬಿದ್ದು ಟ್ರಾನ್ಸ್ ಫಾರ್ಮರ್‌ನಲ್ಲಿ ಸಿಲುಕಿಕೊಂಡ ಬೈಕ್…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇಡುಕ್ಕಿ (ಕೇರಳ): ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯಿಂದೆಸೆಯಲ್ಪಟ್ಟು ಟ್ರಾನ್ಸ್ ಫಾರ್ಮರ್‌‌ನಲ್ಲಿ ಸಿಲುಕಿಕೊಂಡ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ ಎಂಬಲ್ಲಿ ನಡೆದಿದೆ. ಅಪಘಾತಕ್ಕೀಡಾಗಿ ರಸ್ತೆಯಿಂದ ಎಸೆಯಲ್ಪಟ್ಟ ಬೈಕ್ ಟ್ರಾನ್ಸ್ ಫಾರ್ಮರ್ ಗಾರ್ಡ್ ನೊಳಗೆ ಸಿಲುಕಿಕೊಂಡಿದ್ದು, ಬೈಕ್ ಸವಾರ ಪವಾಡ ಸದೃಶವಾಗಿ ಪಾರಾಗಿದ್ದಾನೆ. ವೇಗವಾಗಿ ಬಂದ ಬೈಕ್ ನಿಯಂತ್ರಣ ಕಳೆದುಕೊಂಡು ಕನಿಷ್ಠ 1.5 ಮೀಟರ್ ಎತ್ತರಕ್ಕೆ … Continued

ಹಾಪುರದಲ್ಲಿ ರಾಸಾಯನಿಕ ಕಾರ್ಖಾನೆಯ ಸ್ಫೋಟದಲ್ಲಿ 9 ಕಾರ್ಮಿಕರು ಸಾವು, 19 ಮಂದಿ ಗಾಯ

ನವದೆಹಲಿ: ಜೂನ್ 4, ಶನಿವಾರದಂದು ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ನಂತರ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ. ಕಾರ್ಖಾನೆಯಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಗೆ ಅನುಮತಿ ನೀಡಲಾಗಿದೆ, ಆದರೆ ನಿಜವಾಗಿ ಏನಾಗಿದೆ ಎಂಬುದನ್ನು ತನಿಖೆ ಮಾಡಬೇಕು ಎಂದು ಅವರು ರೂಪಂ ಹೇಳಿದರು. ಒಂದು ಸಮಿತಿಯನ್ನು ರಚಿಸಲಾಗುವುದು. ವಿಧಿವಿಜ್ಞಾನ … Continued

ಕಾಂಗ್ರೆಸ್ ಗೆ ಮತ್ತೊಂದು ಹಿನ್ನಡೆ : ಪಂಜಾಬ್‌ನ ನಾಲ್ವರು ಮಾಜಿ ಸಚಿವರು, ಮೊಹಾಲಿ ಮೇಯರ್ ಬಿಜೆಪಿಗೆ ಸೇರ್ಪಡೆ

ಚಂಡೀಗಡ: ಪಂಜಾಬ್ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಅದರ ಆರು ಪ್ರಮುಖ ನಾಯಕರು ಶನಿವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು. ಅವರಲ್ಲಿ ನಾಲ್ವರು ಮಾಜಿ ಮಂತ್ರಿಗಳಾದ ಡಾ. ರಾಜಕುಮಾರ್ ವರ್ಕಾ, ಬಲ್ಬೀರ್ ಸಿಂಗ್ ಸಿಧು, ಗುರುಪ್ರೀತ್ ಸಿಂಗ್ ಕಂಗರ್ ಮತ್ತು ಸುಂದರ್ ಶಾಮ್ ಅರೋರಾ ಸೇರಿದ್ದಾರೆ. ಮೊಹಾಲಿಯಲ್ಲಿ ಕಾಂಗ್ರೆಸ್‌ನ ಹಾಲಿ ಮೇಯರ್, ಬಲ್ಬೀರ್ ಸಿಂಗ್ ಸಿಧು … Continued

‘ರೇಪ್ ಜೋಕ್ಸ್’ ಹೊಂದಿರುವ ವಿವಾದಾತ್ಮಕ ಬಾಡಿ ಸ್ಪ್ರೇ ಜಾಹೀರಾತು ತೆಗೆದುಹಾಕಲು ಟ್ವಿಟರ್, ಯೂ ಟ್ಯೂಬ್‌ಗೆ ಸೂಚಿಸಿದ ಕೇಂದ್ರ ಸರ್ಕಾರ

ನವದೆಹಲಿ: ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವ ಸುಗಂಧ ದ್ರವ್ಯದ ಬ್ರಾಂಡ್‌ನ ಜಾಹೀರಾತುಗಳನ್ನು ತೆಗೆದುಹಾಕುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟ್ವಿಟ್ಟರ್‌ (Twitter) ಮತ್ತು ಯು ಟ್ಯೂಬ್‌ (YouTube)ಗೆ ಸೂಚಿಸಿದೆ. ಜಾಹೀರಾತು ಕಾಣಿಸಿಕೊಂಡ ಟಿವಿ ಚಾನೆಲ್‌ಗೆ ಕೂಡ ಸೂಚಿಸಿದೆ. ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಬ್ರ್ಯಾಂಡ್‌ನ ಜಾಹೀರಾತಿನ ಕುರಿತು ಕೇಂದ್ರ ಮಾಹಿತಿ ಮತ್ತು … Continued

ಕನಿಷ್ಠ 2,000-ವರ್ಷ-ಹಳೆಯ ಗೋಡೆಗಳು ಪತ್ತೆ , ಕುಶಾನರ ಕಾಲದ್ದಿರಬಹುದು ಎಂದ ಎಎಸ್‌ಐ

ಪಾಟ್ನಾ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI ) ಪಾಟ್ನಾ ವೃತ್ತವು ಬಿಹಾರದ ಪಾಟ್ನಾದ ಕುಮ್ರಹಾರ್ ಪ್ರದೇಶದಲ್ಲಿ ಕೊಳದ ಪುನರುಜ್ಜೀವನದ ಕಾಮಗಾರಿಯ ಸ್ಥಳದಲ್ಲಿ ಕನಿಷ್ಠ 2,000 ವರ್ಷಗಳಷ್ಟು ಹಳೆಯದಾದ ಇಟ್ಟಿಗೆ ಗೋಡೆಗಳ ಅವಶೇಷಗಳನ್ನು ಪತ್ತೆ ಮಾಡಿದೆ. ಪಾಟ್ನಾ ರೈಲ್ವೆ ನಿಲ್ದಾಣದ ಪೂರ್ವಕ್ಕೆ 6 ಕಿಮೀ ದೂರದಲ್ಲಿರುವ ಕುಮ್ರಹಾರ್‌ನಲ್ಲಿ ಗುರುವಾರ ಅಗೆಯುವ ಕಾರ್ಯವನ್ನು ನಡೆಸುತ್ತಿದ್ದಾಗ ಅಧಿಕಾರಿಗಳು ಗೋಡೆಗಳ … Continued

ವಕೀಲರ ಉಪಸ್ಥಿತಿಯಿಲ್ಲದೆ ಸತ್ಯೇಂದ್ರ ಜೈನ್ ಅವರನ್ನು ಇಡಿ ಪ್ರಶ್ನಿಸಬಹುದು: ದೆಹಲಿ ಹೈಕೋರ್ಟ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಹಾಗೂ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ವಕೀಲರ ಉಪಸ್ಥಿತಿಯಿಲ್ಲದೆ ಪ್ರಶ್ನಿಸಲು ಅವಕಾಶ ನೀಡಬೇಕೆಂಬ ಜಾರಿ ನಿರ್ದೇಶನಾಲಯದ ಮನವಿಯನ್ನು ದೆಹಲಿ ಹೈಕೋರ್ಟ್ ಶನಿವಾರ ಅಂಗೀಕರಿಸಿದೆ. ಪ್ರತಿವಾದಿ [ಜೈನ್] ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ದೂರು ಇಲ್ಲವಾದ್ದರಿಂದ, ಅವರು ತಮ್ಮ ಹೇಳಿಕೆಯನ್ನು ದಾಖಲಿಸುವ ಸಂದರ್ಭದಲ್ಲಿ ತಮ್ಮ … Continued

ಭಯೋತ್ಪಾದಕರಿಂದ ಟಾರ್ಗೆಟ್‌ ಹತ್ಯೆ: ಕಾಶ್ಮೀರಿ ಪಂಡಿತ ಸಮುದಾಯದ 177 ಶಿಕ್ಷಕರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾವಣೆಗೆ ಆದೇಶ

ಕಾಶ್ಮೀರ: ಕಾಶ್ಮೀರದಲ್ಲಿ ಟಾರ್ಗೆಟ್‌ ಹತ್ಯೆಗಳ ಆತಂಕಕಾರಿ ಹೆಚ್ಚಳದ ಮಧ್ಯೆ, ಶ್ರೀನಗರದಲ್ಲಿ ನಿಯೋಜಿಸಲಾದ 177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲು ಸರ್ಕಾರ ಆದೇಶಿಸಿದೆ. ಕಾಶ್ಮೀರಿ ಪಂಡಿತ ಸಮುದಾಯ ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ದಾಳಿಗಳ ಸರಣಿಯ ಹಿನ್ನೆಲೆಯಲ್ಲಿ ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲು ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ … Continued

ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿದ ಮಹಾರಾಷ್ಟ್ರ ಸರ್ಕಾರ

ಮುಂಬೈ: ಕೋವಿಡ್ -19 ಪ್ರಕರಣಗಳ ಹೆಚ್ಚಳದ ಮಧ್ಯೆ, ಮಹಾರಾಷ್ಟ್ರ ಸರ್ಕಾರವು ನಾಗರಿಕರು ತೆರೆದ ಸ್ಥಳಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸುವಂತೆ ಆದೇಶವನ್ನು ಹೊರಡಿಸಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ವರದಿಯಾದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್ ಅವರು … Continued

ಮಂಕಿಪಾಕ್ಸ್ ಪರೀಕ್ಷೆಗೆ 5 ವರ್ಷದ ಬಾಲಕಿ ಮಾದರಿ ಸಂಗ್ರಹ

ಲಕ್ನೋ: 5 ವರ್ಷದ ಬಾಲಕಿಯ ಮಾದರಿಯನ್ನು ಮಂಕಿಪಾಕ್ಸ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಗಾಜಿಯಾಬಾದ್‌ನ ಮುಖ್ಯ ವೈದ್ಯಕೀಯ ಅಧಿಕಾರಿ (CMO) ತಿಳಿಸಿದ್ದಾರೆ. ಆಕೆಯ ದೇಹದಲ್ಲಿ ತುರಿಕೆ ಮತ್ತು ದದ್ದುಗಳ ಕಂಡುಬಂದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಆಕೆಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಮತ್ತು ಕಳೆದ 1 ತಿಂಗಳಲ್ಲಿ ಅವಳು ಅಥವಾ ಅವಳ … Continued