137 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ…ಅಡುಗೆ ಅನಿಲ ಸಿಲಿಂಡರ್ ದರದಲ್ಲಿಯೂ ಏರಿಕೆ

ನವದೆಹಲಿ: ನಾಲ್ಕೂವರೆ ತಿಂಗಳ ಬಳಿಕ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿಲೀಟರಿಗೆ 80 ಪೈಸೆ ಹೆಚ್ಚಳ ಮಾಡಲಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 96.21 ರೂ., ಡೀಸೆಲ್ ಲೀಟರ್​ಗೆ 87.47 ರೂ., ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ … Continued

ದಕ್ಷಿಣ ದೆಹಲಿಯಲ್ಲಿ ಮೈಕ್ರೋವೇವ್ ಓವನ್‌ನಲ್ಲಿ ಎರಡು ತಿಂಗಳ ಹಸುಳೆ ಶವವಾಗಿ ಪತ್ತೆ…!

ನವದೆಹಲಿ: ಸೋಮವಾರ ಮಧ್ಯಾಹ್ನ ದಕ್ಷಿಣ ದೆಹಲಿಯ ಚಿರಾಗ್ ನಲ್ಲಿರುವ ತನ್ನ ಮನೆಯಲ್ಲಿ ಮೈಕ್ರೋವೇವ್ ಓವನ್‌ನಲ್ಲಿ ಎರಡು ತಿಂಗಳ ಹಸುಳೆ ಶವವಾಗಿ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಮಗುವಿನ ತಾಯಿಯೇ ಅವಳನ್ನು ಕೊಂದಿರಬಹುದು ಎಂದು ಕುಟುಂಬದವರು ಆರೋಪಿಸಿದ ನಂತರ ವಿಚಾರಣೆಗಾಗಿ ಕರೆತರಲಾಗಿದೆ. ಘಟನೆ ಕುರಿತು ಸೋಮವಾರ ಸಂಜೆ 4:30ರ ಸುಮಾರಿಗೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಟ್ಟೆಯಲ್ಲಿ … Continued

ಪುಣೆಯ ಮರ್ಸಿಡಿಸ್-ಬೆನ್ಜ್ ಕಾರ್ಖಾನೆಯೊಳಗೆ ನುಗ್ಗಿದ ಚಿರತೆ.. ಕಾರ್ಯಾಚರಣೆ 6 ಗಂಟೆಗಳ ಕಾಲ ಸ್ಥಗಿತ..ವೀಕ್ಷಿಸಿ

ಪುಣೆ: ಅಸಾಧಾರಣ ಘಟನೆಯೊಂದರಲ್ಲಿ, ಪುಣೆಯ ವಿಸ್ತಾರವಾದ ಮರ್ಸಿಡಿಸ್ ಬೆಂಜ್ ಕಾರ್ಖಾನೆಯೊಳಗೆ ಚಿರತೆಯೊಂದು ನುಗ್ಗಿದ ಪರಿಣಾಮ ಘಟಕವನ್ನು ಭಾಗಶಃ ಸ್ಥಳಾಂತರಿಸಲಾಯಿತು ಮತ್ತು ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಸೋಮವಾರ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ವನ್ಯಜೀವಿ SOS ತಂಡದ ದೀರ್ಘ ಮತ್ತು ಕಠಿಣ ಪ್ರಯತ್ನದ ನಂತರ ಚಿರತೆಯನ್ನು ಹಿಡಿದು ರಕ್ಷಿಸಲಾಗಿದೆ. ಸೋಮವಾರ ಬೆಳಗಿನ … Continued

ಪದ್ಮಶ್ರೀ’ ಪಡೆಯುವಾಗ ರಾಷ್ಟ್ರಪತಿ, ಪ್ರಧಾನಿಗೆ ನೆಲಕ್ಕೆ ಬಗ್ಗಿ ವಂದಿಸಿದ ಯೋಗ ದಂತಕಥೆ 125 ವರ್ಷದ ಸ್ವಾಮಿ ಶಿವಾನಂದರು..!: ಹೃದಯಸ್ಪರ್ಶಿ ವೀಡಿಯೊ ವೀಕ್ಷಿಸಿ

ನವದೆಹಲಿ: 2022ನೇ ಸಾಲಿನ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಈ ವೇಳೆ ಪ್ರಶಸ್ತಿ ಸ್ವೀಕಾರ ಮಾಡಿರುವ 125 ವರ್ಷದ ಸ್ವಾಮಿ ಶಿವಾನಂದರ ಹೃದಯಸ್ಪರ್ಶಿ ವಿಡಿಯೋ ಎಲ್ಲರ ಮನಗೆದ್ದಿದೆ. ಯೋಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 125 ವರ್ಷದ ಯೋಗ ಪಟು ಸ್ವಾಮಿ ಶಿವಾನಂದ ಅವರಿಗೆ ಸೋಮವಾರ … Continued

ಸಲ್ಮಾನ್ ಖಾನ್ 1998ರ ಕೃಷ್ಣಮೃಗ ಬೇಟೆ ಪ್ರಕರಣ ರಾಜಸ್ಥಾನ ಹೈಕೋರ್ಟ್‌ಗೆ ವರ್ಗಾವಣೆ

ಜೋಧಪುರ (ರಾಜಸ್ಥಾನ): 1998ರ ಕೃಷ್ಣಮೃಗ ಬೇಟೆ ಪ್ರಕರಣದ ವರ್ಗಾವಣೆ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟು ಅಂಗೀಕರಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಈಗ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಈ ನಿರ್ಧಾರದಿಂದ ನಟ ಸಲ್ಮಾನ್‌ ಖಾನ್‌ ಕೃಷ್ಣ ಮೃಗದ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳು ಈಗ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ. ಸಲ್ಮಾನ್ ಖಾನ್ ಅವರು ರಾಜಸ್ಥಾನದ ಕಂಕಣಿಯಲ್ಲಿ … Continued

ಗೋವಾದ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಹೆಸರು ಘೋಷಿಸಿದ ಬಿಜೆಪಿ

ಪಣಜಿ: ಪ್ರಮೋದ್ ಸಾವಂತ್ ಅವರು ಸತತ ಎರಡನೇ ಅವಧಿಗೆ ಗೋವಾದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕರಾವಳಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಸಸ್ಪೆನ್ಸ್‌ಗೆ ಬಿಜೆಪಿ ಇಂದು, ಸೋಮವಾರ ಅಂತ್ಯ ಹಾಡಿದ್ದು, ಪ್ರಮೋದ ಸಾವಂತ್‌ ಹೆಸರನ್ನು ಘೋಷಿಸಿದೆ. ಗೋವಾದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದೆ. ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದಿಂದ ಕೇಂದ್ರ ವೀಕ್ಷಕರಾಗಿ … Continued

ಪಂಜಾಬ್ ಕ್ಯಾಬಿನೆಟ್: 11 ಮಂತ್ರಿಗಳಲ್ಲಿ ಏಳು ಮಂದಿ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ

ನವದೆಹಲಿ: ಪಂಜಾಬ್‌ನಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ 11 ಸಚಿವರಲ್ಲಿ ಏಳು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದು, ಅವರಲ್ಲಿ ನಾಲ್ವರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಚುನಾವಣಾ ಹಕ್ಕುಗಳ ಗುಂಪು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸೋಮವಾರ ತಿಳಿಸಿದೆ. 11 ಸಚಿವರಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದ್ದಾರೆ. ಪಂಜಾಬ್ ಎಲೆಕ್ಷನ್ ವಾಚ್ ಮತ್ತು … Continued

ತಾನು ಹೇಳಿದ ಅಭ್ಯರ್ಥಿಗೆ ಮತ ಹಾಕಲಿಲ್ಲವೆಂದು ಹೆಂಡತಿಗೆ ಹೊಡೆದು, ಮನೆಯಿಂದ ಹೊರಹಾಕಿದ ಪತಿ ಮಹಾಶಯ..!

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರು ಸೋಮವಾರ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದು, ತಾನು ಸೂಚಿಸಿದ ಪಕ್ಷದ ಅಭ್ಯರ್ಥಿಗೆ ಮತ ಹಾಕದ ಕಾರಣಕ್ಕೆ ಪತ್ನಿಗೆ ಹೊಡೆದು ಮನೆಯಿಂದ ಹೊರಹಾಕಿದ ಮಹಿಳೆಯ ಪತಿ ಮತ್ತು ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ … Continued

ಚುನಾವಣೆಯಲ್ಲಿ ಸೋಲಿನ ಹೊರತಾಗಿಯೂ ಉತ್ತರಾಖಂಡ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಹೆಸರು ಘೋಷಿಸಿದ ಬಿಜೆಪಿ..!

ನವದೆಹಲಿ: 11 ದಿನಗಳ ಸಸ್ಪೆನ್ಸ್‌ಗೆ ತೆರೆ ಎಳೆದಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಉತ್ತರಾಖಂಡದ ಮುಂದಿನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅವರ ಹೆಸರನ್ನು ಸೋಮವಾರ ಘೋಷಿಸಿದೆ. ಉತ್ತರಾಖಂಡದ ಬಿಜೆಪಿಯ ಕೇಂದ್ರ ವೀಕ್ಷಕರಾದ ರಾಜನಾಥ್ ಸಿಂಗ್ ಮತ್ತು ಮೀನಾಕ್ಷಿ ಲೇಖಿ ಮತ್ತು ರಾಜ್ಯ ಚುನಾವಣಾ ವ್ಯವಹಾರಗಳ ಉಸ್ತುವಾರಿ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ … Continued

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್‌ಗೆ ಏ.4ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಎನ್‌ಸಿಪಿ ನಾಯಕ, ಸಚಿವ ನವಾಬ್ ಮಲಿಕ್ ಗೆ ನ್ಯಾಯಾಂಗ ಬಂಧನವನ್ನು ಏಪ್ರಿಲ್ 4ರ ವರೆಗೆ ವಿಸ್ತರಿಸಿ ಕೋರ್ಟ್‌ ಆದೇಶ ನೀಡಿದೆ. ನವಾಬ್ ಮಲಿಕ್ ಅವರಿಗೆ ಬೆನ್ನುನೋವಿನ ಕಾರಣ ಮನವಿ ಮೇರೆಗೆ ಹಾಸಿಗೆ, ಕುರ್ಚಿ ಮತ್ತು ಚಾಪೆಗಳ ಬಳಕೆಗೆ ಅನುಮತಿ ನೀಡಿದೆ. ಮನೆ ಆಹಾರಕ್ಕಾಗಿ ಅವರ ಅರ್ಜಿಯನ್ನು … Continued