ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಎಫ್‌ಐಆರ್ ದಾಖಲು

‘ಬಾರಾಬಂಕಿ: ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದ್-ಉಲ್-ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ‘ಬಾರಾಬಂಕಿ ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣದ ಮೂಲಕ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆಡಳಿತವು ಈ ವರ್ಷದ ಆರಂಭದಲ್ಲಿ ಶತಮಾನದಷ್ಟು ಹಳೆಯ ಮಸೀದಿಯನ್ನು “ಹುತಾತ್ಮ”(“martyred”) ಮಾಡಿತು ಎಂದು ಓವೈಸಿ ತಮ್ಮ ಭಾಷಣದಲ್ಲಿ ಆರೋಪಿಸಿದ್ದರು. ಅವರು ಪ್ರಧಾನಿ ನರೇಂದ್ರ … Continued

ಶಿಕ್ಷಕಿಯರಿಗೆ ಜೀನ್ಸ್, ಬಿಗಿಯುಡುಗೆ, ಶಿಕ್ಷಕರಿಗೆ ಟೀ ಶರ್ಟ್ ನಿಷೇಧಿಸಿದ ಪಾಕ್

ಇಸ್ಲಾಮಾಬಾದ್: ಮಹಿಳಾ ಶಿಕ್ಷಕರು ಜೀನ್ಸ್ ಮತ್ತು ಬಿಗಿಯುಡುಗೆ ಧರಿಸಬಾರದು ಎಂದು ಪಾಕಿಸ್ತಾನದ ಫೆಡರಲ್ ಡೈರೆಕ್ಟರೇಟ್ ಆಫ್ ಎಜುಕೇಷನ್(ಎಫ್‌ಡಿಇ) ಸೂಚಿಸಿದೆ. ಬೋಧನಾ ವರ್ಗದವರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿರುವ ಎಫ್‌ಡಿಇ, ಪುರುಷ ಶಿಕ್ಷಕರೂ ಜೀನ್ಸ್ ಮತ್ತು ಟಿ-ಶರ್ಟ್ಸ್ ಧರಿಸಬಾರದು ಎಂದು ಎಫ್‌ಡಿಇ ಸೂಚಿಸಿದೆ. ಶಿಕ್ಷಕಿಯರು ಸರಳ ಮತ್ತು ಸಭ್ಯ ರೀತಿಯ ಸಲ್ವಾರ್ ಕಮೀಝ್, ಷರಾಯಿ(ಟ್ರೌಸರ್), ದುಪಟ್ಟಾ/ಶಾಲು ಸಹಿತ ಶರ್ಟ್ಸ್ ಧರಿಸಬೇಕು. … Continued

5ನೇ ಶತಮಾನದ ಕುಮಾರ ಗುಪ್ತನ ಕಾಲದ ಶಂಖಲಿಪಿ ಶಾಸನ ಉತ್ತರ ಪ್ರದೇಶದಲ್ಲಿ ಪತ್ತೆ

ಆಗ್ರಾ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಇಟಾಹ್ ಜಿಲ್ಲೆಯಲ್ಲಿ ಗುಪ್ತರ ಕಾಲದ ದೇವಾಲಯದ ಮೆಟ್ಟಿಲುಗಳ ಮೇಲೆ ‘ಶಂಖಲಿಪಿ’ ಶಾಸನವನ್ನು ಪತತೆ ಮಾಡಿದ್ದು, ಇದು ಚಕ್ರವರ್ತಿ ಕುಮಾರಗುಪ್ತನ ಕಾಲದ್ದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಎಎಸ್‌ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ (ಆಗ್ರಾ ವೃತ್ತ) ವಸಂತ ಕುಮಾರ್, ಈ ಶಾಸನದಲ್ಲಿ ‘ಶ್ರೀ ಮಹೇಂದ್ರಾದಿತ್ಯ’ ಎಂದು ಬರೆಯಲಾಗಿದೆ, ಇದು ಗುಪ್ತ ವಂಶದ … Continued

ತಮಿಳುನಾಡು ಸೇರಿ 4 ರಾಜ್ಯಕ್ಕೆ ರಾಜ್ಯಪಾಲರ ನೇಮಕ, ಲೆ.ಜ. ಗುರ್ಮಿತ್ ಸಿಂಗ್ ಉತ್ತರಾಖಂಡ ರಾಜ್ಯಪಾಲ

ನವದೆಹಲಿ: ಉತ್ತರಾಖಂಡ, ತಮಿಳುನಾಡು, ನಾಗಾಲ್ಯಾಂಡ್, ಪಂಜಾಬ್ ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದೆ. ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾದ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ಗುರುವಾರ ನೇಮಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಸಿಂಗ್ ಅವರು ಸುಮಾರು ನಾಲ್ಕು ದಶಕಗಳ ಸೇವೆಯ ನಂತರ 2016 ರ ಫೆಬ್ರವರಿಯಲ್ಲಿ ಸೇನೆಯಿಂದ ನಿವೃತ್ತರಾಗಿದ್ದರು.ಉತ್ತರಾಖಂಡ್ ರಾಜ್ಯಪಾಲರಾಗಿದ್ದ ಬೇಬಿ … Continued

ಆಗಸ್ಟ್‌ ನಲ್ಲಿ ನಿರುದ್ಯೋಗ ದರವು 8.3%ಕ್ಕೆ ಏರಿಕೆ, 19 ಲಕ್ಷ ಭಾರತೀಯರಿಗೆ ಉದ್ಯೋಗ ನಷ್ಟ: ಸಿಎಂಐಇ

ನವದೆಹಲಿ: ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ 19 ಲಕ್ಷಕ್ಕೂ ಹೆಚ್ಚು ಜನರು ಆಗಸ್ಟ್‌ನಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡುದ್ದಾರೆ. ಜುಲೈನಲ್ಲಿ ಗಳಿಸಿದ ಕೆಲವು ಲಾಭಗಳನ್ನು ಇದು ಹಿಮ್ಮೆಟ್ಟಿಸಿದೆ. ಏಕೆಂದರೆ ಗ್ರಾಮೀಣ ಮತ್ತು ನಗರ ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಾಗಿದೆ. ಭಾರತದಲ್ಲಿ ಮುಖ್ಯವಾಗಿ ಕೃಷಿ ವಲಯದಲ್ಲಿ ನಿರುದ್ಯೋಗ ದರವು ಆಗಸ್ಟ್‌ನಲ್ಲಿ ಮತ್ತೆ ಹೆಚ್ಚಾಯಿತು ಮತ್ತು ಜುಲೈನಲ್ಲಿ 7% ಕ್ಕೆ … Continued

ಅಫ್ಘಾನ್ ಬಿಕ್ಕಟ್ಟಿನ ನಡುವೆ ಬ್ರಿಕ್ಸ್‌ 13ನೇ ಶೃಂಗಸಭೆ : ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಯೋಜನೆ ಅಳವಡಿಸಿಕೊಳ್ಳಲಿದೆ ಎಂದ ಮೋದಿ

ನವದೆಹಲಿ: ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕ್ರಿಯಾ ಯೋಜನೆ ಅಳವಡಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಐದು ರಾಷ್ಟ್ರಗಳ ಗುಂಪಿನ ವಾಸ್ತವ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಹೇಳಿದರು. ಭಾರತ ಆಯೋಜಿಸಿದ್ದ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಬ್ರೆಜಿಲ್ ನ … Continued

ಟಿ- 20 ವಿಶ್ವಕಪ್ ಮಾರ್ಗದರ್ಶಕರಾಗಿ ನೇಮಕಗೊಂಡ ಬೆನ್ನಲ್ಲೇ ಧೋನಿ ವಿರುದ್ಧ ಹಿತಾಸಕ್ತಿ ಸಂಘರ್ಷದ ದೂರು

ನವದೆಹಲಿ: ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗುರುವಾರ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಟಿ -20 ವಿಶ್ವಕಪ್‌ಗೆ ಭಾರತೀಯ ತಂಡದ ಮಾರ್ಗದರ್ಶಕರಾಗಿ ನೇಮಿಸಿರುವುದರ ವಿರುದ್ಧ ದೂರು ಸ್ವೀಕರಿಸಿದ್ದು, ಲೋಧಾ ಸಮಿತಿಯ ಸುಧಾರಣೆಯಲ್ಲಿನ ಹಿತಾಸಕ್ತಿ ಸಂಘರ್ಷವನ್ನು ಉಲ್ಲೇಖಿಸಿ ದೂರು ನೀಡಲಾಗಿದೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಮಾಜಿ ಸದಸ್ಯ ಸಂಜೀವ್ ಗುಪ್ತಾ, ಈ ಹಿಂದೆ ಆಟಗಾರರು ಮತ್ತು … Continued

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31ರ ವರೆಗೆ ವಿಸ್ತರಣೆ

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ. ಸಾಮಾನ್ಯವಾಗಿ ಇದು ಜುಲೈ 31ಕ್ಕೆ ಕೊನೆಯಾಗುತ್ತದೆ. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸೆಪ್ಟೆಂಬರ್ 30 ರವರೆಗೆ ದಿನಾಂಕವನ್ನು ವಿಸ್ತರಿಸಲಾಗಿತ್ತು. “ತೆರಿಗೆದಾರರು ಮತ್ತು ಇತರ ಮಧ್ಯಸ್ಥಗಾರರು ಆದಾಯ ತೆರಿಗೆ ರಿಟರ್ನ್ಸ್ ಮತ್ತು 2021-22 ಮೌಲ್ಯಮಾಪನ ವರ್ಷಕ್ಕೆ … Continued

ಸಾವು ತಡೆಗಟ್ಟುವಲ್ಲಿ ಕೋವಿಡ್ ಲಸಿಕೆ ಒಂದು ಡೋಸ್ 96.6%, ಎರಡು ಡೋಸ್ 97.5 % ರಷ್ಟು ಪರಿಣಾಮಕಾರಿ:ಐಸಿಎಂಆರ್‌

ನವದೆಹಲಿ: ಕೋವಿಡ್ -19 ಲಸಿಕೆಯ ಒಂದು ಡೋಸ್ ಸಾವನ್ನು ತಡೆಗಟ್ಟುವಲ್ಲಿ ಶೇಕಡಾ 96.6 ರಷ್ಟು ಪರಿಣಾಮಕಾರಿಯಾಗಿದ್ದು, ಎರಡು ಪ್ರಮಾಣಗಳು ಸಾವನ್ನು 97.5 ರಷ್ಟು ತಡೆಯುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಡಿಜಿ ಡಾ. ಬಲರಾಮ್ ಭಾರ್ಗವ ಗುರುವಾರ ಹೇಳಿದ್ದಾರೆ. ಕೋವಿಡ್ -19 ಲಸಿಕೆಯ ಒಂದು ಡೋಸ್ ಸಾವನ್ನು ತಡೆಗಟ್ಟುವಲ್ಲಿ ಶೇಕಡಾ 96.6 ರಷ್ಟು … Continued

ಗ್ಯಾನವಪಿ ಮಸೀದಿ ಹಕ್ಕು ವಿವಾದ: ಎಎಸ್‌ಐ ಸರ್ವೆ, ಸ್ಥಳೀಯ ನ್ಯಾಯಾಲಯದ ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್‌ ತಡೆ

ವಾರಾಣಸಿಯ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ಗ್ಯಾನವಪಿ-ಕಾಶಿ ಭೂ ವಿವಾದ ಪ್ರಕರಣದ ವಿಚಾರಣೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೆಗೆ ಅನುಮತಿಸಿದ್ದಕ್ಕೆ ಅಲಹಾಬಾದ್‌ ಹೈಕೋರ್ಟ್‌ ತಡೆ ನೀಡಿದೆ. ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಪ್ರಕರಣವನ್ನು ಕೈಗೆತ್ತಿಕೊಂಡು ನಿರ್ವಹಿಸಿದ್ದು ತೀರ್ಪನ್ನು ಕಾಯ್ದಿರಿಸಿರುವಾಗ ಕೆಳ ನ್ಯಾಯಾಲಯದಲ್ಲಿನ ವಿಚಾರಣೆ ಕಾನೂನಿಗೆ ವಿರುದ್ಧವಾದ ತಪ್ಪು ನಡೆಯಾಗಿದೆ ಎಂದು ನ್ಯಾಯಮೂರ್ತಿ ಪ್ರಕಾಶ್‌ ಪಾಡಿಯಾ ನೇತೃತ್ವದ … Continued