ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ 8 ನೇ ತರಗತಿ ಬಾಲಕಿ

ವೆಲ್ಲೂರ್‌ : ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ 44 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧಿಸಿದ್ದಾರೆ. ಕಳೆದ ಹತ್ತು ತಿಂಗಳಿನಿಂದ ಪದೇ ಪದೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಧರಿಸುವಂತೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿ … Continued

ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳ ವಿರೋಧಿಸಿ ಸಂಸತ್ತಿನ ಹೊರಗೆ ಕಾಂಗ್ರೆಸ್‌ ಧರಣಿ: ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ಬಂಧನ

ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆಯ ನಡುವೆಯೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆಯಲಾಯಿತು. ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ ಪಕ್ಷದ ಮುಖಂಡರನ್ನು ದೆಹಲಿ ಪೊಲೀಸರು ತಡೆದರು. ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ … Continued

ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ಸೌದಿ ಅರೇಬಿಯಾ ಹಿಂದಿಕ್ಕಿದ ರಷ್ಯಾ

ನವದೆಹಲಿ: ರಷ್ಯಾ ತನ್ನ ಒಪೆಕ್ ಮಿತ್ರ ಸೌದಿ ಅರೇಬಿಯಾಕ್ಕಿಂತ ತೈಲ ಬೆಲೆಯನ್ನು ಕಡಿಮೆಗೊಳಿಸಿದ್ದು, ಇದು ಅತಿದೊಡ್ಡ ಕಚ್ಚಾ ಆಮದುದಾರರಲ್ಲಿ ಒಬ್ಬರಾದ ಭಾರತದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಮಾಸ್ಕೋಗೆ ದಾರಿ ಮಾಡಿಕೊಟ್ಟಿದೆ. ಭಾರತೀಯ ಸರ್ಕಾರದ ಅಂಕಿಅಂಶಗಳ ಆಧಾರದ ಮೇಲೆ ಬ್ಲೂಮ್‌ಬರ್ಗ್ ಲೆಕ್ಕಾಚಾರಗಳ ಪ್ರಕಾರ, ರಷ್ಯಾದ ಬ್ಯಾರೆಲ್‌ಗಳು ಸೌದಿಯ ಕಚ್ಚಾ ತೈಲಕ್ಕಿಂತ ಏಪ್ರಿಲ್‌ನಿಂದ ಜೂನ್‌ವರೆಗೆ ಅಗ್ಗವಾಗಿದ್ದು, ಮೇ … Continued

ಮತ್ತೆ ರೆಪೊ ದರ ಹೆಚ್ಚಿಸಿದ ಆರ್​ಬಿಐ, ಹೆಚ್ಚಾಗಲಿದೆ ಬ್ಯಾಂಕ್‌ಗಳ ಬಡ್ಡಿ ದರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ಪ್ರಮುಖ ಸಾಲದ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ 5.40 ಶೇಕಡಾಕ್ಕೆ ಹೆಚ್ಚಿಸಿದೆ. ಆರ್‌ಬಿಐ ಏರುತ್ತಿರುವ ಹಣದುಬ್ಬರ ನಿಯಂತ್ರಿಸಲು ಈ ವರ್ಷ ಸತತ ಮೂರನೇ ಸಲ ಹೆಚ್ಚಳ ಮಾಡಿದೆ. ಪ್ರಸ್ತುತ ರೆಪೊ ದರಗಳು ಶೇ 5.4ರಷ್ಟು ಇರುತ್ತವೆ. ಈ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ … Continued

ಕೆಳಗೆ ಬಿದ್ದ ಟ್ರಕ್ ಮೇಲೆತ್ತುವ ವೇಳೆ ಕೇಬಲ್ ತುಂಡಾಗಿ ಸೇತುವೆಯಿಂದ ಕೆಳಗೆ ಬಿದ್ದ ಕ್ರೇನ್‌ | ವೀಕ್ಷಿಸಿ

ಮೈ ಜುಂ ಎನ್ನುವ ಘಟನೆಯಲ್ಲಿ, ಸೇತುವೆಯಿಂದ ಕೆಳಗೆ ಬಿದ್ದಿದ್ದ ಟ್ರಕ್ ಅನ್ನು ಎತ್ತುವ ಸಂದರ್ಭದಲ್ಲಿ ಟೋಯಿಂಗ್ ಕ್ರೇನ್ ಸಹ ಸೇತುವೆಯಿಂದ ಬಿದ್ದ ಘಟನೆ ನಡೆದಿದೆ. ಒಡಿಶಾದ ತಲ್ಚೆರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಭಾನುವಾರ ಟ್ರಕ್ ಅನ್ನು ಎತ್ತಲು ಎರಡು ಕ್ರೇನ್‌ಗಳು … Continued

ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಓರ್ವ ವಲಸೆ ಕಾರ್ಮಿಕನ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯ ವೇಳೆ ವಲಸೆ ಕಾರ್ಮಿಕರೊಬ್ಬರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 370 ನೇ ವಿಧಿಯನ್ನು ಹಿಂತೆಗೆದುಕೊಂಡ ಮೂರನೇ ವಾರ್ಷಿಕೋತ್ಸವದ ಮುನ್ನಾದಿನದಂದು ಭದ್ರತಾ ಕಟ್ಟೆಚ್ಚರದ ಮಧ್ಯೆ ಈ ದಾಳಿ ನಡೆದಿದೆ. ಪೊಲೀಸರ ಪ್ರಕಾರ, ಪುಲ್ವಾಮಾ ಜಿಲ್ಲೆಯ ಗಡೂರ ಗ್ರಾಮದಲ್ಲಿ ಭಯೋತ್ಪಾದಕರು ಸ್ಥಳೀಯರಲ್ಲದ ಕಾರ್ಮಿಕರ … Continued

ಮಳೆಯಿಂದಾಗಿ ಎರಡು ತಿಂಗಳಲ್ಲಿ 64 ಜನರು ಸಾವು : ಸಚಿವ ಅಶೋಕ್ ಮಾಹಿತಿ

ಮಂಡ್ಯ: ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ 64 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 14 ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಂದಾಯ ಸಚಿವ ಆರ್‍. ಅಶೋಕ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮಳೆ ಅವಾಂತರ ಹಿನ್ನೆಲೆಯಲ್ಲಿ ಕೆ.ಆರ್‍. ಪೇಟೆಗೆ ಭೇಟಿ ನೀಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜೂನ್ 1ರಿಂದ ಆಗಸ್ಟ್ 4ರ … Continued

ಮಗುವನ್ನು ಜೀವಂತವಾಗಿ ಹೂತರು…ಆದ್ರೆ ರೈತನಿಂದ ಪವಾಡ ಸದೃಶವಾಗಿ ಬದಕಿದ ಎಳೆಯ ಕಂದಮ್ಮ…!

ಸಬರಕಾಂತ (ಗುಜರಾತ್): ಗುಜರಾತಿನ ಸಬರಕಾಂತ ಜಿಲ್ಲೆಯಿಂದ ಮಾನವೀಯತೆಯೇ ತಲೆತಗ್ಗಿಸುವ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಯಾರೋ ಒಬ್ಬ ರೈತನ ಹೊಲದಲ್ಲಿ ನವಜಾತ ಶಿಶುವನ್ನು ಜೀವಂತ ಸಮಾಧಿ ಮಾಡಿದ್ದರು. ಹೊಲವನ್ನು ತಲುಪಿದ ರೈತನು ಮಗುವಿನ ಕೈಯನ್ನು ನೋಡಿದ ನಂತರ ಆತ ಆ ಜಾಗವನ್ನು ಅಗೆದು ನೋಡಿದಾಗ ಅಲ್ಲಿದ್ದ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದಾನೆ. ಗುರುವಾರ ಬೆಳಿಗ್ಗೆ ಜಿಲ್ಲೆಯ ಗಂಭೋಯಿ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಂಜಯ್ ರಾವತ್ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಇ.ಡಿ

ಮುಂಬೈ: ಬಂಧಿತ ಶಿವಸೇನೆ ಸಂಸದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ಸ್ಥಳೀಯ ‘ಚಾಳ’ ವಸತಿ ಪುನರಾಭಿವೃದ್ಧಿ ಮತ್ತು ಸಂಬಂಧಿತ ವಹಿವಾಟುಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ವಿಚಾರಣೆಗೆ ಕರೆದಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. . ಈ ವಾರದ ಕೊನೆಯಲ್ಲಿ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಕೇಂದ್ರೀಯ … Continued

ಹಾವು ಕಚ್ಚಿ ಮೃತಪಟ್ಟ ಸಹೋದರನ ಅಂತ್ಯಕ್ರಿಯೆಗೆ ಬಂದ ತಮ್ಮನೂ ಹಾವು ಕಡಿತದಿಂದ ಸಾವಿಗೀಡಾದ…!

ಬಲರಾಂಪುರ: ಉತ್ತರಪ್ರದೇಶ ಹಾವು ಕಡಿತದಿಂದ ಮೃತಪಟ್ಟ ತನ್ನ ಸಹೋದರನ  ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ವ್ಯಕ್ತಿಯೊಬ್ಬರು ನಿದ್ದೆಯಲ್ಲಿದ್ದಾಗ ಹಾವು ಕಚ್ಚಿ ಸಾವಿಗೀಡಾದ ಘಟನೆ ನಡೆದಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ. ಗೋವಿಂದ್ ಮಿಶ್ರಾ (22) ಉತ್ತರ ಪ್ರದೇಶದ ಭವಾನಿಪುರ ಗ್ರಾಮದಲ್ಲಿ ಬುಧವಾರ ನಡೆದ ತನ್ನ ಸಹೋದರ ಅರವಿಂದ್ ಮಿಶ್ರಾ (38) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು … Continued