ಭಾನುವಾರ ತೈಲಬೆಲೆ ಏರಿಕೆ ಶಾಕ್: ಡೀಸೆಲ್ ದರ ಹೆಚ್ಚಳ- ಪೆಟ್ರೋಲ್ ದರ ಯಥಾಸ್ಥಿತಿ

ನವದೆಹಲಿ: ಸರ್ಕಾರಿ ತೈಲ ಮಾರಾಟ ಕಂಪನಿಗಳು ಡೀಸೆಲ್ ಬೆಲೆಯನ್ನು ಪರಿಷ್ಕರಿಸಿದ್ದು, ಒಂದು ಲೀಟರಿಗೆ 13 ರಿಂದ 18 ಪೈಸೆಯಷ್ಟು ಹೆಚ್ಚಳ ಮಾಡಿವೆ. ಆದರೆ, ಪೆಟ್ರೋಲ್ ದರ ಬದಲಾಗದೇ ಯಥಾಸ್ಥಿತಿಯಲ್ಲಿ ಉಳಿದಿದೆ. ಮೇ 4 ರಿಂದ ಇಂದಿನವರೆಗೆ 40 ಬಾರಿ ಇಂಧನ ದರ ಪರಿಷ್ಕರಣೆಯಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 11.14 ರೂ., … Continued

ಕೊರೊನಾ ೩ನೇ ಅಲೆಯಲ್ಲಿ ಮಕ್ಕಳಿಗೆ ಬ್ಲ್ಯಾಕ್ ಫಂಗಸ್ : ತಜ್ಞರ ಆತಂಕ

ಬೆಂಗಳೂರು: ಕೊರೋನಾ ಎರಡನೇ ಅಲೆಯ ಕೊನೆಯಲ್ಲಿ ಕಾಡಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಈಗಲೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೂರನೇ ಅಲೆಯಲ್ಲಿ ಕೊರೋನಾಗೆ ಹೆಚ್ಚು ಬಾಧಿತರಾಗಲಿರುವ ಮಕ್ಕಳಿಗೂ ಈ ಬ್ಲ್ಯಾಕ್ ಫಂಗಸ್ ಕಾಟ ತಪ್ಪಿದ್ದಲ್ಲ ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ಬಾಧಿತರಾಗುವ ಸಾಧ್ಯತೆ ಇದೆ ಎಂಬ … Continued

ಕರ್ನಾಟಕದಲ್ಲಿ ಮಳೆ ಮುಂದುವರಿಕೆ :ಜುಲೈ 21ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಜೋರು

ಬೆಂಗಳೂರು: ಕೇರಳದಿಂದ ಮಹಾರಾಷ್ಟ್ರದೆಡೆಗೆ ವೇಗವಾದ ಸುಳಿಗಾಳಿ ಬೀಸುತ್ತಿದ್ದು, ಇದರ ಪ್ರಭಾವದಿಂದಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಭಾನುವಾರ ಧಾರಾಕಾರ ಮಳೆ ಸುರಿಯಲಿದೆ. ಜೊತೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಸಾಕಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ರಾಜ್ಯದೆಲ್ಲೆಡೆ ಈಗಾಗಲೇ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜುಲೈ 21 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ … Continued

ಮುಂಬೈನಲ್ಲಿ ಭಾರೀ ಮಳೆ: ಎರಡು ಮನೆ ಕುಸಿತ, ಸಾವಿನ ಸಂಖ್ಯೆ 23ಕ್ಕೆ ಏರಿಕೆ

ಮುಂಬೈ: ಮುಂಬೈನ ಚೆಂಬೂರು ಮತ್ತು ವಿಖ್ರೋಲಿ ಪ್ರದೇಶಗಳಲ್ಲಿ ಗೋಡೆ ಕುಸಿದ ಎರಡು ವಿಭಿನ್ನ ಘಟನೆಗಳಲ್ಲಿ ಭಾನುವಾರ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ. ಚೆಂಬೂರಿನಲ್ಲಿ 17 ಜನರು ಮತ್ತು ವಿಖ್ರೋಲಿಯಲ್ಲಿ ಆರು ಜನರು ಮೃತಪಟ್ಟಿದ್ದಾರೆ. ಜುಲೈ 17 ಮತ್ತು ಜುಲೈ 18 ರ ಮಧ್ಯರಾತ್ರಿ ಮುಂಜಾನೆ 1 ಗಂಟೆ ಸುಮಾರಿಗೆ ಮುಂಬೈನ ಚೆಂಬೂರಿನ ವಾಶಿ ನಾಕಾ ಪ್ರದೇಶದಲ್ಲಿ ಮನೆಯ … Continued

ಕೇರಳದಲ್ಲಿ ವರದಕ್ಷಿಣೆ ನಿಷೇಧ ನಿಯಮಗಳಿಗೆ ತಿದ್ದುಪಡಿ: ತಡೆಗೆ ಜಿಲ್ಲಾ ಅಧಿಕಾರಿಗಳ ನೇಮಕ

ತಿರುವನಂತಪುರಂ: ಕೇರಳದಲ್ಲಿ ವರದಕ್ಷಿಣೆ ಕಿರುಕುಳದ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಭಾಗವಾಗಿ ಕೇರಳ ಸರ್ಕಾರ ಎಲ್ಲಾ 14 ಜಿಲ್ಲೆಗಳಲ್ಲಿ ‘ವರದಕ್ಷಿಣೆ ನಿಷೇಧ ಅಧಿಕಾರಿಗಳನ್ನು’ ನೇಮಿಸಲು ವರದಕ್ಷಿಣೆ ನಿಷೇಧ ನಿಯಮಗಳನ್ನು ತಿದ್ದುಪಡಿ ಮಾಡಿದೆ. ತಿರುವನಂತಪುರಂ, ಎರ್ನಾಕುಲಂ ಮತ್ತು ಕೋಝಿಕೋಡ ಎಂಬ ಮೂರು ಜಿಲ್ಲೆಗಳಲ್ಲಿ ಪ್ರಾದೇಶಿಕ ಆಧಾರದ ಮೇಲೆ ವರದಕ್ಷಿಣೆ ನಿಷೇಧ ಅಧಿಕಾರಿಗಳ … Continued

ಕೋವಿಡ್‌-19 ಗಮನದಲ್ಲಿಟ್ಟು ಕನ್ವರ್ ಯಾತ್ರೆ ರದ್ದುಗೊಳಿಸಿದ ಉತ್ತರ ಪ್ರದೇಶ ಸರ್ಕಾರ

ಲಕ್ನೋ:ಕೋವಿಡ್‌-19 ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕನ್ವರ್ ಯಾತ್ರೆಯನ್ನು ರದ್ದುಪಡಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಶನಿವಾರ ಪ್ರಕಟಿಸಿದೆ. ಯಾತ್ರೆ ನಡೆಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಿದ ಒಂದು ದಿನದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಶನಿವಾರ ುತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರವು ಯಾತ್ರಿಗಳ ಸಂಘಗಳೊಂದಿಗೆ ಚರ್ಚೆ ನಡೆಸಿ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಯಾತ್ರೆಯನ್ನು ಕೈಗೊಳ್ಳದಂತೆ … Continued

ಟೋಕಿಯೋ ಒಲಿಂಪಿಕ್ಸ್ ಗೆ ತೆರಳಿದ ಪಿವಿ ಸಿಂಧು, ಮೋನಿಕಾ ಬಾತ್ರಾ, ಇತರ ಕ್ರೀಡಾಪಟುಗಳು

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ 2020 ರ ಆರಂಭಕ್ಕೆ ಒಂದು ವಾರಕ್ಕಿಂತಲೂ ಕಡಿಮೆ ಸಮಯ ಇರುವಾಗ, ಭಾರತೀಯ ಕ್ರೀಡಾಪಟುಗಳು ಜಪಾನ್‌ಗೆ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಲು ಪ್ರಾರಂಭಿಸಿದ್ದಾರೆ. ಭಾರತದ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಇತರ ತಂಡದ ಸದಸ್ಯರು ಶನಿವಾರ (ಜುಲೈ 17) ಸಂಜೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟರು. ದೆಹಲಿ ವಿಮಾನ ನಿಲ್ದಾಣದಲ್ಲಿ ಕ್ಲಿಕ್ ಮಾಡಿದವರಲ್ಲಿ ಶಟ್ಲರ್ … Continued

ಟಾಟಾ ಪವರ್ – ಎಚ್​ಪಿಸಿಎಲ್​ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್

ದೇಶದ ಪ್ರಮುಖ ನಗರಗಳು ಹಾಗೂ ಮುಖ್ಯ ಹೆದ್ದಾರಿಗಳಲ್ಲಿ ಇರುವ ಸಾರ್ವಜನಿಕ ಸ್ವಾಮ್ಯದ ರೀಟೇಲ್ ಔಟ್​ಲೆಟ್​ಗಳಲ್ಲಿ ಎಂಡ್-ಟು-ಎಂಡ್ ಎಲೆಕ್ಟ್ರಿಕ್ ವಾಹನಗಳ (ಇವಿ) ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಟಾಟಾ ಪವರ್ ಕಂಪೆನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್​ಪಿಸಿಎಲ್​) ಜೊತೆಗೆ ಸಹಯೋಗ ನೀಡಲಿದೆ. ಎಲೆಕ್ಟ್ರಿಕ್ ಯುಟಿಲಿಟಿ ಕಂಪೆನಿಗಳ “ಇ ಝೆಡ್ ಚಾರ್ಜ್ ಮೊಬೈಲ್” ಪ್ಲಾಟ್​ಫಾರ್ಮ್​ ಮೂಲಕ ಚಾರ್ಜಿಂಗ್ ಮಾಡಲಾಗುತ್ತದೆ. … Continued

ತುಟ್ಟಿ ಭತ್ಯೆ ಹೆಚ್ಚಳದ ನಂತರ, ಕೇಂದ್ರ ಸರ್ಕಾರಿ ನೌಕರರಿಗೆ ಈಗ ಎಚ್‌ಆರ್‌ಎ ಕೂಡ ಹೆಚ್ಚಳ..!

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ತಮ್ಮ ತುಟ್ಟಿ ಭತ್ಯೆ ಹೆಚ್ಚಳ ಪಡೆದ ಕೆಲವು ದಿನಗಳ ನಂತರ, ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ನೌಕರರ ಆರ್ಥಿಕ ನೆಲೆಗಳನ್ನು ಹೆಚ್ಚು ಬಲಪಡಿಸುವ ಸಲುವಾಗಿ ಮತ್ತೊಂದು ಭತ್ಯೆ ಕೊಡುಗೆ ನಿಗದಿಪಡಿಸಲಾಗಿದೆ. ತುಟ್ಟಿ ಭತ್ಯೆಯ ಜೊತೆಗೆ, ಕೇಂದ್ರ ಸರ್ಕಾರಿ ನೌಕರರಿಗಾಗಿ ಮನೆ ಬಾಡಿಗೆ ಭತ್ಯೆಯನ್ನು (ಎಚ್‌ಆರ್‌ಎ) ಕೇಂದ್ರವು ಪರಿಷ್ಕರಿಸಿದೆ. ಇದನ್ನು ಅನುಸರಿಸಿ, ಆಗಸ್ಟ್ … Continued

ಟೈಮ್ಸ್ ನೌ-ಸಿ ವೊಟರ್ ಉತ್ತರ ಪ್ರದೇಶ ಪೋಲ್ ಟ್ರ್ಯಾಕರ್: 43.1% ಜನರು ಬಿಜೆಪಿಯತ್ತ ಒಲವು, ಎಸ್‌ಪಿ ಕಡೆಗೆ29.6% ಜನರು.. ಯೋಗಿ ಸರ್ಕಾರದ ವಿರುದ್ಧ ಕೋಪವೂ ಜಾಸ್ತಿ

ಟೈಮ್ಸ್ ನೌ-ಸಿವೊಟರ್ ಉತ್ತರ ಪ್ರದೇಶ ಪೋಲ್ ಟ್ರ್ಯಾಕರ್ ಎ ಉತ್ತರ ಪ್ರದೇಶದ ಅಂಕಗಣಿತವು ಸದ್ಯಕ್ಕೆ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪರವಾಗಿದ್ದಂತೆ ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ ಬಹುತೇಕರು ಸಮೀಕ್ಷೆಯಲ್ಲಿ ಯೋಗ ಆದಿತ್ಯನಾಥ ಸರ್ಕಾರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. *ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ಷಮತೆಯಿಂದ 39.5% ರಷ್ಟು ತೃಪ್ತಿ ಹೊಂದಿಲ್ಲ … Continued