ಪ್ರವೀಣ ಹತ್ಯೆ ಪ್ರಕರಣ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು

ಪುತ್ತೂರು: ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ನೆಟ್ಟಾರ ಅವರ ಅಂತಿಮ ದರ್ಶನದ ಮೇಳೆ ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸದ್ಯ ಬೆಳ್ಳಾರೆ ಪರಿಸರದಲ್ಲಿ ಸ್ಥಿತಿ ಬಿಗುವಿನಿಂದ ಕೂಡಿದೆ. ಪ್ರವೀಣ್ ನೆಟ್ಟಾರು ಅವರ ಮನೆಗೆ … Continued

ಆಪ್ಟಿಕಲ್ ಇಲ್ಯೂಷನ್: ಈ ಮರದ ದಿಮ್ಮಿಗಳ ರಾಶಿಯಲ್ಲಿ ಮಲಗಿರುವ ಬೆಕ್ಕನ್ನು ಗುರುತಿಸುವಿರಾ..?

ನಾವೆಲ್ಲರೂ ಒಗಟು ಬಿಡಿಸುವುದನ್ನು ಇಷ್ಟಪಡುತ್ತೇವೆ. ಆಪ್ಟಿಕಲ್ ಭ್ರಮೆಗಳು ಮತ್ತು ಚಿತ್ರದ ಒಗಟುಗಳು ಸಾಮಾನ್ಯವಾಗಿ ವೈರಲ್ ಆಗುತ್ತವೆ ಮತ್ತು ತಕ್ಷಣವೇ ಎಲ್ಲರ ಗಮನವನ್ನು ಸೆಳೆಯುತ್ತವೆ ಏಕೆಂದರೆ ಅವುಗಳನ್ನು ಕಂಡುಹಿಡಿಯಲು ವಿನೋದಮಯ ಆಗಿರುತ್ತವೆ. ಕೆಲವು ವಿಷಯಗಳು ನಮ್ಮ ಮುಂದೆ ಹೇಗೆ ಇವೆ ಎಂಬುದನ್ನು ಗಮನಿಸುವುದು ಆಸಕ್ತಿದಾಯಕವಾಗುತ್ತದೆ. ಆದರೂ ಅವುಗಳನ್ನು ಗುರುತಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈಗ, ಸಾಮಾಜಿಕ ಮಾಧ್ಯಮದಲ್ಲಿ … Continued

ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ 12ನೇ ತರಗತಿ ಪರೀಕ್ಷೆಯಲ್ಲಿ 97.75% ಅಂಕ ಪಡೆದ ಈ ವಿದ್ಯಾರ್ಥಿನಿ…!

ಲಕ್ನೋ: ಕ್ಯಾನ್ಸರ್‌ನಿಂದ ಬಳಲುತ್ತಿರುವ 17 ವರ್ಷದ ಬಾಲಕಿ ಈ ವರ್ಷ ಐಎಸ್‌ಸಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ.97.75 ಅಂಕ ಗಳಿಸಿದ್ದಾಳೆ. ಉತ್ತರ ಪ್ರದೇಶದ ಲಕ್ನೋ ಮೂಲದ ಪ್ರಮಿತಾ ತಿವಾರಿಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಕ್ಯೂಟ್ ಮೈನರ್ ಲ್ಯುಕೇಮಿಯಾ ಇರುವುದು ಪತ್ತೆಯಾಗಿತ್ತು. ಬಹುತೇಕರು ಅವಳ ಭವಿಷ್ಯವು ಕತ್ತಲೆಯಾಗುತ್ತದೆ ಎಂದು ಭಾವಿಸಿದ್ದರು. ಆದರೆ ಈ ಹುಡುಗಿ ಕೆಚ್ಚೆದೆಯ ಹೋರಾಟ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವ ಇ.ಡಿ ಅಧಿಕಾರ ಎತ್ತಿಹಿಡಿದ ಸುಪ್ರೀಂಕೋರ್ಟ್​

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​ಎ) ಅಡಿಯಲ್ಲಿ ಆರೋಪಿಯನ್ನು ಬಂಧಿಸುವ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರವನ್ನು ಸುಪ್ರೀಂಕೋರ್ಟ್​ ಬುಧವಾರ ಎತ್ತಿ ಹಿಡಿದಿದೆ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದ ಪ್ರಕ್ರಿಯೆಯು ನಿರಂಕುಶವಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್​, ಪಿಎಂಎಲ್​ಎ ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆಯು ಒಂದು ಪ್ರತ್ಯೇಕ ಅಪರಾಧ ಎಂದು ಹೇಳಿದೆ. ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ … Continued

ಮಧ್ಯಪ್ರದೇಶದ ವ್ಯಕ್ತಿಯೊಬ್ಬರಿಗೆ ಬಂತು ₹ 3,419 ಕೋಟಿ ವಿದ್ಯುತ್ ಬಿಲ್.. ನೋಡಿ ಹೌಹಾರಿ ಆಸ್ಪತ್ರೆಗೆ ದಾಖಲು

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್‌ ನಿವಾಸಿ ಪ್ರಿಯಾಂಕಾ ಗುಪ್ತಾ ಅವರು ₹ 3,419 ಕೋಟಿಯಷ್ಟು ವಿದ್ಯುತ್‌ ಬಿಲ್‌ ಪಡೆದಿದ್ದು, ಬಿಲ್‌ ನೋಡಿ ಒತ್ತಡಕ್ಕೆ ಒಳಗಾಗಿ ಅವರ ಮಾವ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಪ್ರಿಯಾಂಕಾ ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ಅವರು ಜುಲೈ ತಿಂಗಳ ಮನೆಯ ಬಳಕೆಗಾಗಿ ವಿದ್ಯುತ್ ಬಿಲ್‌ನಲ್ಲಿನ ಇಷ್ಟು ದೊಡ್ಡ ಅಂಕಿಅಂಶವನ್ನು ನೋಡಿದ ನಂತರ … Continued

28,732 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವನೆಗಳಿಗೆ ರಕ್ಷಣಾ ಸಚಿವಾಲಯ ಅನುಮೋದನೆ

ನವದೆಹಲಿ: ಡ್ರೋನ್‌ಗಳು, ಬುಲೆಟ್ ಪ್ರೂಫ್ ಜಾಕೆಟ್‌ಗಳು ಸೇರಿದಂತೆ ಸಶಸ್ತ್ರ ಪಡೆಗಳಿಗೆ 28,732 ಕೋಟಿ ರೂ.ಗಳ ಶಸ್ತ್ರಾಸ್ತ್ರ ಖರೀದಿಖರೀದಿ ಪ್ರಸ್ತಾವನೆಗಳಿಗೆ ರಕ್ಷಣಾ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ. ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಲಾದ ಭಾರತೀಯ ಪಡೆಗಳಿಗೆ ಶತ್ರು ಸ್ನೈಪರ್‌ಗಳ ಬೆದರಿಕೆಯ ವಿರುದ್ಧ ರಕ್ಷಣೆ ಪಡೆಯಲು ಮತ್ತು ಭಯೋತ್ಪಾದನಾ ನಿಗ್ರಹ ಸನ್ನಿವೇಶಗಳಲ್ಲಿ ನಿಕಟ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಲು … Continued

ಶಿಕ್ಷಕರ ನೇಮಕಾತಿ ಹಗರಣ: ಸಚಿವ ಪಾರ್ಥ ಚಟರ್ಜಿ ಸಹಾಯಕಿ ಮನೆಯಲ್ಲಿ ಸ್ಫೋಟಕ ವಿವರಗಳ ಕಪ್ಪು ಡೈರಿ ಪತ್ತೆ ಮಾಡಿದ ಇ.ಡಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲಿನ ದಾಳಿಯ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಕಪ್ಪು ಡೈರಿಯನ್ನು ಪತ್ತೆ ಮಾಡಿದೆ. ಡೈರಿಯು ಬಂಗಾಳ ಸರ್ಕಾರದ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಸೇರಿದೆ ಎಂದು ಹೇಳಲಾಗಿದೆ. ಇ.ಡಿ ಮೂಲಗಳ … Continued

ಛತ್ತೀಸ್‌ಗಡ : 19 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಕ್ಸಲನ ಹತ್ಯೆ ಮಾಡಿದ ಪೊಲೀಸರು

ದಾಂತೇವಾಡ: ಛತ್ತೀಸ್‍ಘಢದ ದಾಂತೇವಾಡ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 19 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲೀಯ ಹತ್ಯೆಯಾಗಿದ್ದಾನೆ. ಕಾನೂನುಬಾಹಿರ ಚಳವಳಿಯ ಕಟೆಕಲ್ಯಾಣ ಪ್ರದೇಶ ಸಮಿತಿಯ ಸದಸ್ಯ ಬುಧ್ರಾಮ್ ಮರ್ಕಮ್ ಹತ್ಯೆಯಾಗಿದ್ದು, ಈತನ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಕಾಡಿನಲ್ಲಿ ಸೋಮವಾರ ಮಧ್ಯರಾತ್ರಿ ಬಂಡುಕೋರರು ಮತ್ತು ಜಿಲ್ಲಾ ಮೀಸಲು ಪಡೆ ಮುಖಾಮುಖಿಯಾಗಿದೆ. ಅರಣ್ಯ … Continued

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಹೊತ್ತ ಮೇಘಾಲಯ ಬಿಜೆಪಿ ನಾಯಕ  ಮರಾಕ್‌ ಉತ್ತರ ಪ್ರದೇಶದಲ್ಲಿ ಬಂಧನ

ನವದೆಹಲಿ: ಬಿಜೆಪಿಯ ಮೇಘಾಲಯದ ಉಪಾಧ್ಯಕ್ಷ ಬರ್ನಾಡ್‌ ಎನ್‌ ಮರಾಕ್‌ ಅವರನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ. ಅವರನ್ನು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಮೇಘಾಲಯ ಬಿಜೆಪಿ ಉಪಾಧ್ಯಕ್ಷ ಬರ್ನಾರ್ಡ್ ಎನ್ ಮರಾಕ್, ರಾಜ್ಯದ ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ತುರಾದಲ್ಲಿರುವ ತನ್ನ ಫಾರ್ಮ್‌ಹೌಸ್‌ನಲ್ಲಿ ಲೈಂಗಿಕ ದಂಧೆ ನಡೆಸುತ್ತಿದ್ದ ಆರೋಪ ಹೊತ್ತಿದ್ದು, ಅವರನ್ನು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ … Continued

5G ಸ್ಪೆಕ್ಟ್ರಮ್ ಹರಾಜು: ₹ 1.45 ಲಕ್ಷ ಕೋಟಿ ಮೀರಿದ ಮೊದಲನೇ ದಿನದ ಬಿಡ್ ಮೊತ್ತ

ನವದೆಹಲಿ: 4.3 ಲಕ್ಷ ಕೋಟಿ ಮೌಲ್ಯದ 72 GHz (gigahertz) 5G ಏರ್‌ವೇವ್‌ಗಳ ಭಾರತದ ಅತಿದೊಡ್ಡ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನ ನಾಲ್ಕು ಸುತ್ತಿನ ಹರಾಜಿನಲ್ಲಿ ಕೊನೆಗೊಂಡಿತು. ಹರಾಜು ಪ್ರಕ್ರಿಯೆಯ ಮೊದಲ ದಿನವೇ ₹ 1.45 ಲಕ್ಷ ಕೋಟಿಗೂ ಅಧಿಕ ಮೊತ್ತದ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 700 ಮೆಗಾಹರ್ಟ್ಸ್ ಬ್ಯಾಂಡ್ ತರಂಗಾಂತರಗಳಿಗೆ ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು … Continued